• Home
  • »
  • News
  • »
  • lifestyle
  • »
  • Baby Name: ಮಗುವಿನ ಜೀವನ ಸಿಹಿಯಾಗಿರಲು ಯಾವ ಹೆಸರು ಇಡಬೇಕು?

Baby Name: ಮಗುವಿನ ಜೀವನ ಸಿಹಿಯಾಗಿರಲು ಯಾವ ಹೆಸರು ಇಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವಾಗಲೂ ಸಿಹಿಯ ಕ್ಷಣಗಳು ಇರಬೇಕೆಂದು ಬಯಸುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಅವರ ಜೀವನದಲ್ಲಿ ಯಾವಾಗಲೂ ಸಿಹಿ ಇರಬೇಕು ಎಂದು ಬಯಸಿ ಜೇನುತುಪ್ಪದ ಅರ್ಥ ಬರುವ ವಿವಿಧ ಭಾಷೆಯ ಹೆಸರು ಆಯ್ದು ಇಡಬಹುದು. ಹನಿ ಅಂದ್ರೆ ಜೇನುತುಪ್ಪ ಎಂದರ್ಥ.

  • Share this:

    ತಾಯಿಯಾಗುವುದು (Motherhood) ಅಂದ್ರೆ ಅದೊಂದು ವಿಶೇಷ ಅನುಭವ (Special Feel) ತನ್ನ ಕರುಳ ಕುಡಿಯನ್ನು ಹೆತ್ತು, ಹೊತ್ತು ಸಾಕುವುದು ಎಲ್ಲಿಲ್ಲದ ಸಂಭ್ರಮ. ಹೆರಿಗೆಗೂ ಮೊದಲೇ ಮಗು (Baby) ಗಂಡಾದರೆ ಈ ಹೆಸರು ಇಡಬೇಕು. ಹೆಣ್ಣು ಮಗು (Baby Girl) ಹುಟ್ಟಿದರೆ ಈ ಹೆಸರು ಇಡಬೇಕು. ಹೀಗೆ ಏನೇನೋ ಪ್ಲಾನ್ ಮಾಡಲಾಗುತ್ತದೆ. ಹೆರಿಗೆಯ ನಂತರ ಮಗು, ಹೆಣ್ಣಾಗಲಿ ಅಥವಾ ಗಂಡಾಗಲಿ, ಹುಟ್ಟಿದ ಗಳಿಗೆ, ರಾಶಿ, ನಕ್ಷತ್ರ ಎಲ್ಲವನ್ನೂ ನೋಡಿ ಮಗುವಿಗೆ ಮುದ್ದಾದ ಅಕ್ಷರ (Name) ಸಿಗುತ್ತದೆ. ಅದೇ ಅಕ್ಷರದಲ್ಲಿ ಮಗುವಿಗೆ ನಾಮಕರಣ ಮಾಡಲು ತುಂಬಾ ಜನರು ವಿಶೇಷ ಹೆಸರುಗಳನ್ನು ಹುಡುಕುತ್ತಾರೆ. ಆ ಅಕ್ಷರದ ಎಲ್ಲಾ ಹೆಸರು ಮತ್ತು ಅರ್ಥ ಹುಡುಕಿ, ತಮಗಿಷ್ಟದ ಹೆಸರನ್ನು ಇಡುತ್ತಾರೆ.  


    ಮಗುವಿಗೆ ಯಾವ ಹೆಸರು ಬೆಸ್ಟ್ ?


    ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಾವಾಗಲೂ ಸಿಹಿಯ ಕ್ಷಣಗಳು ಇರಬೇಕೆಂದು ಬಯಸುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಅವರ ಜೀವನದಲ್ಲಿ ಯಾವಾಗಲೂ ಸಿಹಿ ಇರಬೇಕು ಎಂದು ಬಯಸಿ, ಜೇನುತುಪ್ಪದ ಅರ್ಥ ಬರುವ ವಿವಧ ಭಾಷೆಯ ಹೆಸರು ಆಯ್ದು ಇಡಬಹುದು.


    ಹನಿ ಅಂದ್ರೆ ಜೇನುತುಪ್ಪ ಎಂದರ್ಥ. ಹನಿ ಹೆಸರು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿಮ್ಮ ಮಗುವಿಗೆ ಹನಿ ಅಂದ್ರೆ ಜೇನು ಎಂದು ಹೆಸರಿಡುವುದು ಅವರ ಜೀವನದಲ್ಲಿ ಯಾವಾವಗಲೂ ಜೇನಿನಂತೆ ಸಿಹಿ ನೀಡುತ್ತದೆ.




    ಮಗುವಿಗೆ ನಾಮಕರಣ ಮಾಡಲು ಈ ಹೆಸರುಗಳು ಸೂಕ್ತ


    ಶಿಹಾದ್, ಶಾಹೀದ್, ಸುಹೇಲ್, ಸುಹಾನಾ, ಸುಮನಾ ಹೀಗೆ ಹಲವು ಹೆಸರುಗಳನ್ನು ನೀವು ಆಯ್ಕೆ ಮಾಡಬಹದು. ಆಂಗ್ಬಿನ್ ಎನ್ನುವ ಹೆಸರು ಇಡಬಹುದು. ಅಂದ ಹಾಗೇ ಆಂಗ್ಬಿನ್ ಎನ್ನುವುದು  ಹೆಣ್ಣು ಮಗುವಿಗೆ ಇಡುವ ಅರೇಬಿಕ್ ಹೆಸರು. ಆಂಗ್ಬಿನ್ ಎಂದರೆ ಜೇನು ಎಂದರ್ಥ. ಹೆಣ್ಣು ಮಗುವಿಗೆ ವಿಶಿಷ್ಟವಾದ ಹೆಸರಿಡಲು ಬಯಸಿದರೆ ಆಂಗ್ಬಿನ್ ಎಂದು ಹಸರಿಡಿ.


    ಅಸಲ್ ಎಂಬ ಹೆಸರು ಅಫ್ಘಾನ್, ಅರೇಬಿಕ್ ಮತ್ತು ಇರಾನ್ ಭಾಷೆಗಳಲ್ಲಿ ಬಹಳ ಜನಪ್ರಿಯ ಹೆಸರು ಆಗಿದೆ. ಪರ್ಷಿಯನ್ ಭಾಷೆಯಲ್ಲೂ ಈ ಹೆಸರು ಚಾಲ್ತಿಯಲ್ಲಿದೆ. ಗೌಬಿನಾ ನಿಮ್ಮ ಮಗುವಿಗೆ ಈ ಹೆಸರಿಡಬಹುದು. ನಿಮ್ಮ ಮನೆಯಲ್ಲಿ ಹೆಣ್ಣುಮಗುವಿಗೆ ಗೌಬಿನಾ ಎಂದು ಹೆಸರಿಟ್ಟರೆ ಅರೇಬಿಕ್ ಭಾಷೆಯಲ್ಲಿ ಅದರ್ಥ ‘ಜೇನುತುಪ್ಪ’ ಆಗಿದೆ.


    ಪಾವನಿ ಎಂಬ ಹೆಸರು


    ಹಿಂದೂ ಧರ್ಮದಲ್ಲಿ ಗಂಗಾ ಮಾತೆಯನ್ನು ಪಾವನಿ ಎಂದು ಕರೆಯುತ್ತಾರೆ. ಪಾವನಾ, ಪಾವನಿ ಹಿಂದೂ ಮತ್ತು ಭಾರತೀಯ ಮೂಲದ ಒಂದು ಹೆಸರಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಸ್ತ್ರೀಯರಿಗೆ ಬಳ ಮಾಡಲಾಗುತ್ತದೆ. ಪಾವನಿ, ಪಾವನಾ ಅಂದ್ರೆ ಸತ್ಯ ಮತ್ತು ಪಾವಿತ್ರ್ಯತೆ ಎಂದರ್ಥ.


    ಶರಣ್


    ಶರಣ್ ಎಂಬ ಹೆಸರು ಹೀಬ್ರೂ ಭಾಷೆ ಮೂಲ ಹೊಂದಿದೆ ಮತ್ತು ಇದನ್ನು ಇಂಗ್ಲಿಷ್‌ನಲ್ಲಿ ವ್ಯಾಪಕವಾಗಿ ಬಳಸುತ್ತಾರೆ. ಶರುನ್ ಎಂಬ ಹೆಸರು ಇಂಗ್ಲಿಷ್ ಹೆಸರಿನ ಶರೋನ್ ನಿಂದ ಬಂದಿದೆ. ಶರುನ್ ಹೆಸರಿನ ಅರ್ಥ ಸಿಹಿ, ಸುಗಂಧ ಎಂದರ್ಥವಾಗುತ್ತದೆ.


    ಮಧುಲಿಕಾ ಹೆಸರು


    ಮಧುಲಿಕಾ ಹೆಸರಿನ ಅರ್ಥ ಜೇನುತುಪ್ಪ ಅಥವಾ ಮಕರಂದ ಎಂದಾಗಿದೆ. ಇದು ಭಾರತೀಯ ಮೂಲದ ಹೆಸರಾಗಿದ್ದು, ಹೆಚ್ಚಾಗಿ ಈ ಹೆಸರನ್ನು ಹಿಂದೂ ಧರ್ಮದಲ್ಲಿ ಬಳಸಲಾಗುತ್ತದೆ. ಮಧುಲಿಕಾ ಅಂದ್ರೆ ಜೇನುತುಪ್ಪ ಎಂದರ್ಥ.


    ಮಗಳಿಗೆ ಎಂ ಅಕ್ಷರದಲ್ಲಿ ಮಕ್ಷಿಕಾ ಎಂದು ಹೆಸರಿಸಬಹುದು. ಈ ಹೆಸರು ಬಹಳ ವಿಶಿಷ್ಟ. ಮಕ್ಷಿಕಾ ಹೆಸರಿನ ಅರ್ಥ ಜೇನುನೊಣ ಎಂದರ್ಥ.


    ಇದನ್ನೂ ಓದಿ: ಕನಸಿನಲ್ಲಿ ಮಕ್ಕಳು ಕಾಣಿಸಿಕೊಂಡ್ರೆ ಏನು ಅರ್ಥ?


    ಮೋಕ್ಷಿತಾ ಹೆಸರು


    ನಿಮ್ಮ ಹೆಣ್ಣು ಮಗುವಿಗೆ ಮೋಕ್ಷಿತಾ ಹೆಸರಿಡಬಹುದು. ಹೆಸರಿನ ಅರ್ಥ ಸಾಮಾನ್ಯವಾಗಿ ಜೇನು ಆಗಿದೆ.

    Published by:renukadariyannavar
    First published: