• Home
  • »
  • News
  • »
  • lifestyle
  • »
  • ಮೂಳೆಗಳ ಆರೋಗ್ಯಕ್ಕಾಗಿ ಈ ನಿಯಮಗಳನ್ನು ತಪ್ಪದೆ ಪಾಲಿಸಿ..!

ಮೂಳೆಗಳ ಆರೋಗ್ಯಕ್ಕಾಗಿ ಈ ನಿಯಮಗಳನ್ನು ತಪ್ಪದೆ ಪಾಲಿಸಿ..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರ ಬೇಕಾಗುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಾಸ್ತವವಾಗಿ ನೀವು ನಿಯಮಿತವಾಗಿ ಸೇವಿಸಬೇಕಾದ ಹಲವಾರು ಇತರ ಪೋಷಕಾಂಶಗಳಿವೆ.

  • Share this:

ಮಾನವ ಮೂಳೆ ಮಾಂಸದ ತಡಿಕೆ ಎಂದು ನಾವೆಲ್ಲರೂ ಕೇಳಿದ್ದೇವೆ. ದೇಹಕ್ಕೆ ಮಾಂಸ ಹೇಗೆ ಬಲವನ್ನು ನೀಡುತ್ತದೋ ಅದೇ ರೀತಿಯಲ್ಲಿ ಮೂಳೆಗಳು ಸಹ ರಕ್ಷಣೆ ಮತ್ತು ಆಧಾರ ನೀಡುತ್ತವೆ. ಇವೆರಡೂ ದೇಹಕ್ಕೆ ಆಧಾರ ಸ್ತಂಭಗಳು. ಮಾನವನ ದೇಹದಲ್ಲಿ ಹುಟ್ಟುವಾಗ ಸುಮಾರು 270 ಎಲುಬುಗಳಿರುತ್ತವೆ. ಇದು ಬೆಳೆದಂತೆಲ್ಲ 206 ಪ್ರತ್ಯೇಕ ಎಲುಬುಗಳಿರುತ್ತವೆ. ದೇಹ ಸದೃಢವಾಗಿರಲು ಕಾರಣವಾಗುವ ಮೂಳೆಗಳ ಆರೋಗ್ಯವನ್ನು ಮನುಷ್ಯ ಕಾಪಾಡಿಕೊಳ್ಳಬೇಕಾಗುತ್ತದೆ. ಇದು ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕಾಗುತ್ತದೆ. ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮ ಆಹಾರ ಮುಖ್ಯ ಪಾತ್ರ ವಹಿಸುತ್ತದೆ.


ಆರೋಗ್ಯಕರ ಮೂಳೆಗಳಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರ ಬೇಕಾಗುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ವಾಸ್ತವವಾಗಿ ನೀವು ನಿಯಮಿತವಾಗಿ ಸೇವಿಸಬೇಕಾದ ಹಲವಾರು ಇತರ ಪೋಷಕಾಂಶಗಳಿವೆ. ಈ ಬಗ್ಗೆ ಪೌಷ್ಟಿಕತಜ್ಞ ಲೊವ್ನೀತ್ ಬಾತ್ರಾ ಅವರು ಇನ್​ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಪೋಷಕಾಂಶಗಳು ಮತ್ತು ಆರೋಗ್ಯಕರ ಅಭ್ಯಾಸಗಳ ಪಟ್ಟಿಯನ್ನು ಅವರು ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.


ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಉತ್ತಮ ಪೋಷಕಾಂಶಗಳ ಪಾತ್ರ
ಮೂಳೆಗಳ ಆರೋಗ್ಯ ಎಂದಾಕ್ಷಣ ಮೊದಲು ನಮ್ಮ ಮನಸ್ಸಿನಲ್ಲಿ ಬರುವುದು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಭರಿತ ಆಹಾರಗಳು. ಇದರ ಜೊತೆಗೆ ಇನ್ನಷ್ಟು ವಿಟಮಿನ್‍ಗಳು ಹಾಗೂ ಪೋಷಕಾಂಶಗಳ ಅಗತ್ಯವಿದೆ. ಅಂದರೆ ವಿಟಮಿನ್ ಕೆ, ಮೆಗ್ನೀಷಿಯಂ, ಸತು, ಒಮೆಗಾ-3, ಉತ್ತಮ ಪ್ರೋಟೀನ್‍ಗಳು, ವಿಟಮಿನ್ ಎ ಮತ್ತು ಸಿ ಕೂಡ ಬೇಕು ಎಂದು ಬಾತ್ರಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Kriti Sanon: 15 ಕೆಜಿ ತೂಕ ಹೆಚ್ಚಿಸಿಕೊಳ್ಳಲು ನಟಿ ಕೃತಿ ಸನೋನ್​ ಏನೆಲ್ಲ ಸರ್ಕಸ್​ ಮಾಡಿದ್ದಾರೆ ಗೊತ್ತಾ..?


ಹಾಲಿನ ಉತ್ಪನ್ನಗಳು ನಮ್ಮ ಮೂಳೆಯು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ತಮ ಅಂಶಗಳು ಹಾಗೂ ಕ್ಯಾಲ್ಸಿಯಂ ಪ್ರಮಾಣ ಮೂಳೆಗಳ ಬೆಳವಣಿಗೆಗೆ ಸಹಕಾರ ನೀಡುತ್ತದೆ. ಇದರ ಜೊತೆಗೆ ಇತರೆ ಆಹಾರಗಳ ಕಡೆಗೂ ಗಮನಹರಿಸಬೇಕಾಗುತ್ತದೆ.


ಮುಖ್ಯವಾಗಿ ನಿಮ್ಮ ಡಯೆಟ್‍ನಲ್ಲಿ ವಿಟಮಿನ್ ಎ ಮತ್ತು ಸಿ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳಿಗೆ ಸ್ಥಾನ ನೀಡಬೇಕಾಗುತ್ತದೆ. ಮೂಳೆ ಖನಿಜೀಕರಣವನ್ನು ಹೆಚ್ಚಿಸುವ ಕಾಲಜನ್ ರಚನೆಗೆ ವಿಟಮಿನ್ ಸಿ ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ತರಕಾರಿಗಳನ್ನು ಸೇರಿಸಬೇಕೆಂದು ಬಾತ್ರಾ ಶಿಫಾರಸ್ಸು ಮಾಡುತ್ತಾರೆ.


ಇನ್ನಿತರೆ ಸಲಹೆಗಳು


1. ಶಕ್ತಿ ತುಂಬುವ ವ್ಯಾಯಾಮ ಮಾಡಿ
ಈ ವ್ಯಾಯಾಮಗಳು ಮೂಳೆಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಸ್ನಾಯುವಿನ ಸಾಂದ್ರತೆಗೆ ಸಹಾಯ ಮಾಡುತ್ತದೆ. ವಾರದಲ್ಲಿ 3-4 ಬಾರಿ ಮೂಳೆಗಳಿಗೆ ಶಕ್ತಿ ನೀಡುವ ವ್ಯಾಯಾಮದ ತರಬೇತಿ ಪಡೆಯಿರಿ. ಆರಂಭದಲ್ಲಿ 15-20 ನಿಮಿಷಗಳ ಮಾಡಬಹುದು. ಭಾರವಾದುದನ್ನು ಎತ್ತುವ ಅಗತ್ಯವಿಲ್ಲ ಆದರೆ ಶಕ್ತ ಸಾಮಥ್ರ್ಯ ಕಂಡುಕೊಳ್ಳಿ ಎಂದು ಬಾತ್ರಾ ಹೇಳುತ್ತಾರೆ.


ಇದನ್ನೂ ಓದಿ: Sameera Reddy: ಗರ್ಭಿಣಿಯಾಗಿದ್ದ ದಿನಗಳನ್ನು ನೆನಪಿಕೊಂಡ ನಟಿ ಸಮೀರಾ ರೆಡ್ಡಿ..!


2. ಹೆಚ್ಚಿನ ಪ್ರೋಟೀನ್ ಆಹಾರವನ್ನು ತಪ್ಪಿಸಿ
ಹೆಚ್ಚಿನ ಪ್ರೋಟೀನ್ ಆಹಾರವು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ಹೊರ ಹಾಕಬಹುದು. ನೀವು 100 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ತೆಗೆದುಕೊಳ್ಳುತ್ತಿದ್ದರೆ ನಷ್ಟವನ್ನು ಸರಿದೂಗಿಸಲು ನಿಮಗೆ ಹೆಚ್ಚುವರಿ ಕ್ಯಾಲ್ಸಿಯಂ ಬೇಕಾಗಬಹುದು. ಅಲ್ಲದೆ, ಹೆಚ್ಚಿನ ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳುವುದನ್ನು ಮರುಪರಿಶೀಲಿಸಿ. ನಿಮ್ಮ ವ್ಯಾಯಾಮದ ಪ್ರಕಾರ ಅಗತ್ಯವಿಲ್ಲದಿದ್ದರೆ, ಅದನ್ನು ತ್ಯಜಿಸಿ  ಎಂದು ಸಲಹೆ ನೀಡುತ್ತಾರೆ.


3. ದೇಹ ತೂಕ ಕಾಯ್ದುಕೊಳ್ಳಿ
ಆರೋಗ್ಯಕರ ದೇಹದ ತೂಕವು ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಆದರೆ ದೇಹದ ತೂಕ ಇಳಿಸಲು ಕ್ರಾಶ್ ಡಯೆಟ್, ಕ್ಯಾಲೋರಿ ಕೊರತೆಯ ಡಯೆಟ್‍ಗಳ ಮೊರೆ ಹೋಗಬೇಡಿ. ಏಕೆಂದರೆ ಇವು ನಿಮ್ಮ ದೇಹದ ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

Published by:Anitha E
First published: