ಕೋಳಿ ಮೊಟ್ಟೆ(Egg) ಒಂದು ಆರೋಗ್ಯದಾಯಕ ಪೌಷ್ಟಿಕ ಆಹಾರ.(Healthy Food) ಪ್ರೋಟೀನ್ನಿಂದ (protein) ಸಮೃದ್ಧವಾಗಿರುವ ಕೋಳಿ ಮೊಟ್ಟೆಗಳು ವ್ಯಕ್ತಿಯ ದೇಹಕ್ಕೆ(Body) ಶಕ್ತಿ (strength) ನೀಡುತ್ತವೆ. ಅದರಲ್ಲೂ ಮಕ್ಕಳಿಗೆ ಮತ್ತು ನಿಶ್ಯಕ್ತಿ ಸಮ್ಯಸೆ ಹೊಂದಿರುವ ವಯಸ್ಕರಿಗೆ ಈ ಮೊಟ್ಟೆಗಳು ಅತುತ್ತಮ ಚೈತನ್ಯದಾಯಕ ಆಹಾರಗಳೆನಿಸಿವೆ. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳೂ ಇವೆ. ಹೀಗಾಗಿಯೇ ದಿನಕ್ಕೊಂದು ಮೊಟ್ಟೆ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ...ಅಲ್ಲದೇ ಮೊಟ್ಟೆಯ ಮಹತ್ವವನ್ನು ಅರಿತ ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಕೂಡ ಆರಂಭಿಸಿದೆ. ಇಷ್ಟೆಲ್ಲಾ ಪ್ರಾಮುಖ್ಯತೆ ನೀಡುತ್ತಿರುವ ಮೊಟ್ಟೆಯ ವಿವಿಧ ಆಹಾರ ಪದಾರ್ಥಗಳನ್ನು ನಾವು ಮನೆಯಲ್ಲಿ ವಿಭಿನ್ನವಾದ ರೀತಿಯಲ್ಲಿ ಮಾಡಿಕೊಂಡು ಸೇವನೆ ಮಾಡಬಹುದು.. ಹಾಗಿದ್ರೆ ಯಾವೆಲ್ಲಾ ರೀತಿಯ ಮೊಟ್ಟೆಯ ಆಹಾರಗಳನ್ನು ಚಳಿಗಾಲದಲ್ಲಿ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ ..
ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಸದೃಢ ದೇಹ
ದಿನದಲ್ಲಿ ಕೇವಲ ಒಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯವಾಗಿ ಮತ್ತು ಸದೃಢವಾಗಿಡಲುದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ12, ವಿಟಮಿನ್ ಡಿ ಮತ್ತು ಇತರ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಒದಗಿಸಬಹುದು.ಹೀಗಾಗಿ ಚಳಿಗಾಲದ ಸಮಯದಲ್ಲಿ ಮನೆಯಲ್ಲಿ ಎಗ್ ಆಮ್ಲೆಟ್, ಎಗ್ ಬುರ್ಜಿ, ಎಗ್ ಮಸಾಲ, ಬೇಯಿಸಿದ ಮೊಟ್ಟೆ, ಹಸಿ ಮೊಟ್ಟೆ ಸೇರಿ ನಾನಾ ರೀತಿಯ ಮೊಟ್ಟೆಗಳ ರುಚಿಯಾದ ಆಹಾರವನ್ನು ಮಾಡಿಕೊಂಡು ತಿನ್ನಬಹುದು
ಇದನ್ನೂ ಓದಿ :ಮೊಟ್ಟೆ ಗಂಟಲಲ್ಲಿ ಸಿಲುಕಿ ಮಹಿಳೆ ಸಾವು
1) ಮೊಟ್ಟೆ ಬಿರಿಯಾನಿ : ಮಾಂಸಾಹಾರ ಪ್ರಿಯರ ಮೆಚ್ಚಿನ ಆಹಾರ ಪದಾರ್ಥಗಳಲ್ಲಿ ಮತ್ತು ಮೊಟ್ಟೆ ಬಿರಿಯಾನಿ ಕೂಡ ಒಂದು. ನಾನ್ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ.ಹೀಗಾಗಿ ಚಳಿಗಾಲದಲ್ಲಿ ಅತ್ಯಂತ ಸರಳವಾಗಿ ಮಾಡಿಕೊಂಡು ಮನೆಯಲ್ಲಿಯೇ ಸೇವಿಸಬಹುದು.
2) ಎಗ್ ಫ್ರೈ : ಈರುಳ್ಳಿ,ಕೊತ್ತಂಬರಿ ಸೊಪ್ಪು, ಕರಿಬೇವು, ಸಾಸಿವೆ, ಕಡಲೆಪಪ್ಪು ಅಚ್ಚ ಖಾರದ ಪುಡಿ, ಉಪ್ಪು,ದನಿಯಾ ಪುಡಿ,ಬೆಳ್ಳುಳ್ಳಿ - 5-7 ಎಸಳು,ಎಣ್ಣೆ ಬಳಸಿಕೊಂಡು ಮನೆಯಲ್ಲಿ ಚಳಿಗಾಲದ ಸಮಯದಲ್ಲಿ ರುಚಿಯಾದ ಖಾರವಾದ ಎಗ್ ಫ್ರೈ ಮಾಡಿಕೊಂಡು ತಿನ್ನಬಹುದು
3)ಆಕುರಿ : ನೋಡೋಕೆ ಮೊಟ್ಟೆ ಬುರ್ಜಿ ಅಂತೆಯೇ ಕಾಣುವ ಆಕುರಿ ಕ್ಲಾಸಿಕ್ ಸ್ಕ್ರಾಂಬಲ್ಡ್ ನ ಪಾರ್ಸಿ ಶೈಲಿಯ ಪಾಕ ವಿಧಾನವಾಗಿದೆ.. ಬ್ರೆಡ್ ಟೋಸ್ಟ್ ಹಾಗೂ ಬಟರ್ ಟೋಸ್ಟ್ ಜೊತೆಗೆ ಆಕುರಿ ಸವಿಯಲು ಉತ್ತಮವಾಗಿರುತ್ತದೆ.
4)ಮೊಟ್ಟೆ ಪಡ್ದು : ನಮಗೆ ದಿಡೀರನೆ ಪಡ್ಡನ್ನು ತಯಾರಿಸಿ ಕೊಳ್ಳಬೇಕೆಂದರೆ ನಾವು ಮೊಟ್ಟೆಯಿಂದ ಮಾಡಿಕೊಳ್ಳಬಹುದು. ಇದರಲ್ಲಿ ತರಕಾರಿಗಳನ್ನೆಲ್ಲಾ ಸೇರಿಸಿ ಮಾಡುವುದರಿಂದ ಮೊಟ್ಟೆ ಪಡ್ಡು ಎಲ್ಲಾ ವಯಸ್ಸಿನವರ ಆರೋಗ್ಯಕ್ಕೆ ಉತ್ತಮವಾಗಿದೆ.
ಇದನ್ನೂ ಓದಿ :ಹೆಚ್ಚು Boiled Egg ತಿನ್ನೋದು ಭಾರೀ ಡೇಂಜರ್ ! ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ಅಂತ ವಿವರಿಸಿದ್ದಾರೆ ವೈದ್ಯರು
5)ಎಗ್ ಪರಾಟ : ಮೊಟ್ಟೆ ಮೊದಲೇ ಪ್ರೊಟೀನ್-ಪ್ಯಾಕ್ಡ್ ಫುಡ್.. ನಿಂಗೆ ಪರಾಟ ತಿನ್ಬೇಕು ಅಂತ ಅನ್ಸಿದ್ರೆ ಆನಿಯನ್ ಅಥವಾ ಆಲೂಗಡ್ಡೆ ಬದಲು ಮೊಟ್ಟೆಯಿಂದ ರುಚಿಯಾದ ಪರಾಟ ಮಾಡಿಕೊಂಡು ಸೇವನೆ ಮಾಡಬಹುದು..
6)ಮಸಾಲಾ ಆಮ್ಲೆಟ್ : ಮಸಾಲಾ ಆಮ್ಲೆಟ್ ಕ್ಲಾಸಿಕ್ ಇಂಡಿಯನ್ ಬ್ರೇಕ್ಫಾಸ್ಟ್ ರೆಸಿಪಿಯಾಗಿದ್ದು, ಬೆಳಗ್ಗೆ ಕಚೇರಿ ಅಥವಾ ಇನ್ಯಾವುದೇ ತ್ವರಿತ ಕೆಲಸಗಳಲ್ಲಿ ಬ್ಯುಸಿ ಆಗಿರುವವರು, ಮಸಾಲಾ ಆಮ್ಲೇಟ್ ನ್ನ ಕೇವಲ ಐದು ನಿಮಿಷಗಳಲ್ಲಿ ಮನೆಯಲ್ಲಿ ಮಾಡಬಹುದು..
7)ಎಗ್ ಗಾರ್ಲಿಕ್ ಫ್ರೈಡ್ ರೈಸ್ : ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಅಚ್ಚು ಮೆಚ್ಚಿನ ಆಹಾರ ಅಂದರೆ ಅದು ಎಗ್ ಫ್ರೈಡ್ ರೈಸ್.. ಅದರಲ್ಲೂ ರಸ್ತೆಬದಿಗಳಲ್ಲಿ ಸಿಗುವ ಎಗ್ ಫ್ರೈಡ್ ರೈಸ್ ಸವಿಯುವುದಕ್ಕೆ ಜನರು ಕಾಯ್ತ ಇರುತ್ತಾರೆ.. ಇಂತಹ ರುಚಿಯಾದ ಎಗ್ ಗಾರ್ಲಿಕ್ ಫ್ರೈಡ್ ರೈಸ್ ಅನ್ನು ಚಳಿಗಾಲದ ಸಮಯದಲ್ಲಿ ಮನೆಯಲ್ಲಿಯೇ ಮಾಡಿಕೊಂಡು ಬಿಸಿಬಿಸಿಯಾಗಿ ಸೇವನೆ ಮಾಡಬಹುದು..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ