ಇತ್ತೀಚಿನ ದಿನಗಳಲ್ಲಿ (Nowadays) ಕೊಲೆಸ್ಟ್ರಾಲ್ (Cholesterol) ಅಥವಾ ಕೊಬ್ಬು (Fat) ಅನ್ನೋದು ಬಹುತೇಕರಲ್ಲಿ ಕಂಡುಬರುವ ಆರೋಗ್ಯ (Health) ಸಮಸ್ಯೆಯಾಗಿದೆ (Problems). ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟವು ಅಪಾಯಕಾರಿಯಾಗಿದೆ. ಹಾಗಾಗಿ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಸರಿಯಾದ ಆಹಾರವನ್ನು (Food) ಸೇವಿಸುವುದು ಅತ್ಯಂತ ಮುಖ್ಯವಾಗಿದೆ. ಅಂದಹಾಗೆ, ನಮ್ಮ ಶರೀರದಲ್ಲಿ (Body) ಎರಡು ಬಗೆಯ ಕೊಲೆಸ್ಟ್ರಾಲ್ ಇರುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನೋದಾಗಿ ಅದನ್ನ ಕರೆಯಲಾಗುತ್ತದೆ. ಎಲ್ಡಿಎಲ್ (ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್) ಕೊಲೆಸ್ಟ್ರಾಲ್ ಅನ್ನು 'ಕೆಟ್ಟ' ಕೊಲೆಸ್ಟ್ರಾಲ್ ಅಂತ ಕರೆಯಲಾಗುತ್ತೆ.
ಈ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದಂತೆ ಹೃದಯ ಸಮಸ್ಯೆಗೆ ಕಾರಣವಾಗುವುದರ ಜೊತೆಗೆ ಪಾರ್ಶ್ವವಾಯು ಅಪಾಯವನ್ನು ಕೂಡ ಹೆಚ್ಚಿಸುತ್ತದೆ.
ಇನ್ನು 'ಉತ್ತಮ' ಕೊಲೆಸ್ಟ್ರಾಲ್ ಅಥವಾ HDL (ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್) ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದು ಅಂತ ಹೇಳಲಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹದಂತೆಯೇ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಟ್ಟಿಕೊಳ್ಳಬೇಕು ಎಂದರೆ ಸರಿಯಾದ ಆಹಾರ ಕ್ರಮವನ್ನು ಪಾಲಿಸೋದು ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಈ 5 ಪಾನೀಯಗಳು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತವೆ. ಅವು ಯಾವವು ಅನ್ನೋದನ್ನು ನೋಡೋದಾದ್ರೆ,
ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವ 5 ಪಾನೀಯಗಳು
ಗ್ರೀನ್ ಟೀ: ಹಲವಾರು ಒಳ್ಳೆಯ ಅಂಶಗಳನ್ನು ಹೊಂದಿರು ಗ್ರೀನ್ ಟೀ ಯಲ್ಲಿ ಆಂಟಿಆಕ್ಸಿಡಂಟ್ಸ್ ಅಥವಾ ಉತ್ಕರ್ಷಣ ನಿರೋಧಕ ಗುಣವು ಹೆಚ್ಚಾಗಿರುತ್ತದೆ. ಅಲ್ಲದೇ ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಕ್ಯಾಟೆಚಿನ್ಸ್ ಮತ್ತು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ಗಳಂತಹ ಪದಾರ್ಥಗಳನ್ನು ಹೊಂದಿರುತ್ತದೆ. ಹೀಗಾಗಿ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇನ್ನು ಬ್ಲ್ಯಾಕ್ ಟೀ ಕೂಡ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿದರೂ ಅದು ಕಡಿಮೆ ಕ್ಯಾಟೆಚಿನ್ಗಳನ್ನು ಗಳನ್ನು ಹೊಂದಿದೆ.
ಬೆರ್ರಿ ಸ್ಮೂಥಿಗಳು: ಆಂಟಿಆಕ್ಸಿಡೆಂಟ್ಸ್ ಮತ್ತು ಫೈಬರ್ ಅಂಶಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸ್ಟ್ರಾಬೆರಿ, ಬ್ಲ್ಯಾಕ್ ಬೆರ್ರಿ, ಬ್ಲ್ಯೂಬೆರ್ರಿ ಇಂತಹ ಬೆರ್ರಿ ಹಣ್ಣುಗಳಲ್ಲಿ ಈ ಎರಡೂ ಅಂಶಗಳು ಸಮೃದ್ಧವಾಗಿರುತ್ತವೆ. ಅವು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಸಹ ಹೊಂದಿರುತ್ತವೆ. ಹಾಗಾಗಿ ಅದರ ಸ್ಮೂಥಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಅಂತ ಹೇಳಲಾಗುತ್ತದೆ. ಕಡಿಮೆ ಕೊಬ್ಬಿರುವಂಥ ಹಾಲಿಗೆ ಸ್ವಲ್ಪ ಬೆರ್ರಿ ಹಣ್ಣುಗಳನ್ನು ಸೇರಿಸಿ ಸ್ಮೂಥಿಯನ್ನು ತಯಾರಿಸಬಹುದು.
ಇದನ್ನೂ ಓದಿ: Immunity Power: ಈ ಆಹಾರಗಳನ್ನು ತಿಂದ್ರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ
ಕೋಕಾ ಪಾನೀಯಗಳು: ಮೆಡಿಕಲ್ ನ್ಯೂಸ್ ಟುಡೇ ಪ್ರಕಾರ, 2015 ರ ನಡೆಸಲಾದ ಅಧ್ಯಯನವು ಕೋಕಾ ಪಾನೀಯವು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಒಳ್ಳೆಯದು ಎಂದಿದೆ. ಅದರ ಪ್ರಕಾರ, ಒಂದು ತಿಂಗಳ ಕಾಲ ದಿನಕ್ಕೆ ಎರಡು ಬಾರಿ ಕೋಕೋ ಫ್ಲೇವರ್ ಗಳನ್ನು ಹೊಂದಿರುವ 450 ಮಿ.ಗ್ರಾಂ ಪಾನೀಯ ಸೇವನೆಯು "ಕೆಟ್ಟ" ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಆದಾಗ್ಯೂ, ಸಕ್ಕರೆ ಸೇರಿಸಿರುವ ಚಾಕೊಲೇಟ್ ಪಾನೀಯಗಳನ್ನು ಸೇವಿಸುತ್ತೀದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅವು ತೂಕ ಹೆಚ್ಚಾಗಲು ಕಾರಣವಾಗಬಹುದು.
ಟೊಮ್ಯಾಟೋ ಜ್ಯೂಸ್: ಟೊಮ್ಯಾಟೋ ರಸ ತೆಗೆದಾಗ ಅದರಲ್ಲಿ ಲೈಕೋಪೀನ್ ಅಂಶವು ಹೆಚ್ಚಾಗುತ್ತದೆ. ಈ ಲೈಕೋಪೀನ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಹೆಚ್ಚು ಸೂಕ್ತವಾಗಿದೆ. ಅಲ್ಲದೇ, ಟೊಮೆಟೊ ರಸದಲ್ಲಿ ನಿಯಾಸಿನ್ ಮತ್ತು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಫೈಬರ್ಗಳ ಹೆಚ್ಚಾಗಿರುತ್ತದೆ.
ಸೋಯಾ ಮಿಲ್ಕ್: ಸೋಯಾ ಹಾಲು ಗಮನಾರ್ಹ ಪರಿಣಾಮವನ್ನು ಹೊಂದಿಲ್ಲದಿರಬಹುದು. ಆದರೆ ಕೆನೆಭರಿತ ಹಾಲಿಗೆ ಬದಲಾಗಿ ಸೋಯಾ ಹಾಲು ಸೇವಿಸಿದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಸಹಾಯ ಮಾಡಬಹುದು ಎನ್ನಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ