EPFO: ಪಿಎಫ್ ನಿಯಮ ಬದಲಾಗಿದೆ, ಈ ಲಿಂಕ್ ಮಾಡದಿದ್ರೆ ಮುಂದಿನ ತಿಂಗಳಿಂದ ಪಿಎಫ್ ಹಣ ಸಿಗಲ್ಲ!

EPFO New Rule: ಈ ಹೊಸ ನಿಯಮವನ್ನು ಜಾರಿಗೆ ತರುವ ಸಲುವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಾಮಾಜಿಕ ಭದ್ರತಾ ಕೋಡ್ 2020 ರ ಸೆಕ್ಷನ್ 142 ಕ್ಕೆ ತಿದ್ದುಪಡಿ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

PF Money: ನಿಮ್ಮ ಆಧಾರ್ ಸಂಖ್ಯೆಯನ್ನು ನೀವು UAN ಖಾತೆಯೊಂದಿಗೆ ಜೋಡಿಸದೇ ಇದ್ದಲ್ಲಿ ನಿಮ್ಮ ಭವಿಷ್ಯ ನಿಧಿಯ ಮೇಲೆ ಇದು ಪರಿಣಾಮ ಬೀರಬಹುದು. ಮುಂದಿನ ತಿಂಗಳಿನಿಂದ UAN (ಸಾರ್ವತ್ರಿಕ ಖಾತೆ ಸಂಖ್ಯೆ) ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ ಮಾತ್ರವೇ ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ ಹಣವನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುತ್ತದೆ. ಆಧಾರ್ ಹಾಗೂ ಯುಎಎನ್ ಅನ್ನು ಲಿಂಕ್ ಮಾಡದೇ ಇದ್ದರೆ, ಉದ್ಯೋಗಿಗೆ ಉದ್ಯೋಗಿಯ ಹಾಗೂ ಉದ್ಯೋಗದಾತರ ಕೊಡುಗೆಯನ್ನು ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅನಂತ್ ಲಾ ಪಾಲುದಾರ, ಸುಬೋಧ ಸದನ ತಿಳಿಸಿದ್ದಾರೆ. ಈ ಹೊಸ ನಿಯಮವನ್ನು ಜಾರಿಗೆ ತರುವ ಸಲುವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಾಮಾಜಿಕ ಭದ್ರತಾ ಕೋಡ್ 2020 ರ ಸೆಕ್ಷನ್ 142 ಕ್ಕೆ ತಿದ್ದುಪಡಿ ಮಾಡಲಾಗಿದೆ.


ಇಂಡಸ್‌ಲಾ ಪಾಲುದಾರರಾದ ವೈಭವ್ ಭಾರದ್ವಾಜ್ ಹೊಸ ನಿಯಮವನ್ನು ವಿವರಿಸುತ್ತಾ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಭಾರತ ಸರಕಾರವು ಸಾಮಾಜಿಕ ಭದ್ರತೆ, 2020 ರ 142 ನೇ ವಿಭಾಗವು ಮೇ 03, 2021 ರಿಂದ ಜಾರಿಗೆ ಬಂದಿತು. ಈ ನಿಯಮದ ಅನುಸಾರವಾಗಿ ಉದ್ಯೋಗಿ ಅಥವಾ ಯಾವುದೇ ಫಲಾನುಭವಿಗಳು ಆಧಾರ್ ಸಂಖ್ಯೆಯ ಮೂಲಕ ತಮ್ಮ ಗುರುತಿನ ಖಾತ್ರಿಯನ್ನು ನೀಡಬೇಕಾಗುತ್ತದೆ.


ಉದ್ಯೋಗದಾತರು ಮಾಸಿಕ EPF ಕೊಡುಗೆಗಳನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಪಿಎಫ್ ಖಾತೆ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಇದು ಹಲವಾರು ಇಪಿಎಫ್‌ಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಆಧಾರ್ ಲಿಂಕ್ ಮಾಡದೇ ಇದ್ದರೆ ಪಿಂಚಣಿ ನಿಧಿಯ ಮೇಲೂ ನಿಯಮಗಳು ಅನ್ವಯವಾಗಲಿದ್ದು ಕೊಡುಗೆಗಳ ಮೇಲೆ ಪರಿಣಾಮ ಬೀರಲಿದೆ. ಕೊಡುಗೆಗಳನ್ನು ಡಿಪಾಸಿಟ್ ಮಾಡದೇ ಇರುವ ಉದ್ಯೋಗದಾತರು ಶಾಸನಬದ್ಧ ಡೀಫಾಲ್ಟ್ ಆಗಿರುತ್ತಾರೆ ಹಾಗೂ ಕಾನೂನಿನ ಅಡಿಯಲ್ಲಿ ದಂಡವನ್ನು ಎದುರಿಸಬೇಕಾಗಬಹುದು ಎಂದು ಸದನಾ ತಿಳಿಸಿದ್ದಾರೆ. ಉದ್ಯೋಗಿಗಳು ಆಧಾರ್ ಕಾರ್ಡ್ ಅನ್ನು ಭವಿಷ್ಯ ನಿಧಿ ಖಾತೆಗೆ ಲಿಂಕ್ ಮಾಡುವವರೆಗೆ ಕೊಡುಗೆಯನ್ನು ಖಾತೆಗೆ ಜಮಾ ಮಾಡಲಾಗುವುದಿಲ್ಲ. ಅದೇ ರೀತಿ ಮೊತ್ತದ ಮೇಲಿನ ಬಡ್ಡಿ ಮೊತ್ತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದವರ ಎಚ್ಚರಿಸಿದ್ದಾರೆ.


ಇದನ್ನೂ ಮಾಡಿ: LIC Policy Revival: ನಿಮ್ಮ ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ಮತ್ತೆ ಬಳಸುವಂತೆ ಮಾಡಬಹುದು, ಹೀಗೆ ಮಾಡಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ECR) ಸಲ್ಲಿಸುವ ನಿಯಮಗಳನ್ನು ನವೀಕರಿಸಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡಿದ ಯುಎಎನ್‌ಗೆ ಮಾತ್ರ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ಸ್ ಸಲ್ಲಿಸಲು ಉದ್ಯೋಗದಾತರಿಗೆ ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.


ಜೂನ್ 15, 2021 ರಂದು EPFO ಆಧಾರ್‌ಗೆ ಯುಎಎನ್ ಅನ್ನು ಜೋಡಿಸುವ ಅವಧಿಯನ್ನು ವಿಸ್ತರಿಸಿದ್ದು ಇದರ ಪ್ರಕಾರ ECR ಫೈಲ್ ಮಾಡಲು ಜೂನ್ 1, 2021 ರಿಂದ ಸಪ್ಟೆಂಬರ್ 1, 2021 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಉದ್ಯೋಗದಾತರು ಈಗಿನ ವಿಸ್ತರಣೆಯಾದ ಸಮಯವನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಮಾಹಿತಿ ರವಾನಿಸಬೇಕು. ಒಂದು ವೇಳೆ ಜೋಡಣೆ ಆಗದಿದ್ದಲ್ಲಿ ಅದರ ಪರಿಣಾಮ ಏನು ಹಾಗೂ ಜೋಡಿಸುವುದು ಹೇಗೆ ಎಂಬುದನ್ನು ಮಾರ್ದರ್ಶನ ನೀಡಿ, ಅದನ್ನು ಪೂರ್ಣಗೊಳಿಸಲು ಸಹಕರಿಸಬೇಕು.


Published by:Soumya KN
First published: