ಬಾಳೆ ಹಣ್ಣಿನ ಸಿಪ್ಪೆಯಿಂದ ಸುಕ್ಕಿಲ್ಲದ ಕಾಂತಿಯುತ ತ್ವಚೆ ಪಡೆಯುವ ವಿಧಾನ ಗೊತ್ತಾ?

news18
Updated:March 14, 2018, 2:45 PM IST
ಬಾಳೆ ಹಣ್ಣಿನ ಸಿಪ್ಪೆಯಿಂದ ಸುಕ್ಕಿಲ್ಲದ ಕಾಂತಿಯುತ ತ್ವಚೆ ಪಡೆಯುವ ವಿಧಾನ ಗೊತ್ತಾ?
news18
Updated: March 14, 2018, 2:45 PM IST
ನ್ಯೂಸ್ 18 ಕನ್ನಡ

ನಾವೆಲ್ಲ ಬಾಳೆಹಣ್ಣನ್ನು ತಿಂದು ಸಿಪ್ಪೆ ಬಿಸಾಡುತ್ತೇವೆ. ಆದರೆ ಯಾವ ಹಣ್ಣಿನ ಸಿಪ್ಪೆಯೂ ಕಸಕ್ಕೆ ಸೇರುವ ಪದಾರ್ಥವಲ್ಲ ಅನ್ನೋದನ್ನು ಮರೆಯುತ್ತೇವೆ. ಇದರಿಂದಾಗಿಯೇ ನಿತ್ಯ ಬಳಸುವ ಬಾಳೆ ಹಣ್ಣಿನ ಸಿಪ್ಪೆಯ ಬಗ್ಗೆ ನಮಗೆ ಮಾಹಿತಿಯೇ ಇಲ್ಲದಂತಾಗಿದೆ.

ಆದರೆ ಬಾಳೆ ಹಣ್ಣಿನ ಸಿಪ್ಪೆಯೂ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಅದರಿಂದ ಸಾಕಷ್ಟು  ಉಪಯೋಗಗಳಿವೆ. ಬಾಳೆ ಹಣ್ಣಿನಂತೆ ಇದರ ಸಿಪ್ಪೆಯಲ್ಲೂ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿದ್ದು, ನಾರಿನಂಶ, ಮೆಗ್ನೀಷಿಯಂ, ಪೊಟಾಷಿಯಂ ಅನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಇಂತಹ ಹಲವು ಪ್ರಯೋಗಳು ನಿತ್ಯ ಬಾಳೆಹಣ್ಣಿನ ಸಿಪ್ಪೆಯಿಂದ ಪಡೆಬಹುದಾಗಿದೆ. ಇಂತಹ ಕೆಲವು ಪ್ರಯೋಜನಗಳ ಬಗ್ಗೆ ಮಾಹಿತಿ ನಿಮಗಾಗಿ ನೀಡಲಾಗಿದೆ.

ಬಿಳಿ ಹಲ್ಲುಗಳಿಗಾಗಿ : ನಿಮ್ಮ ಹಲ್ಲುಗಳು ಪಳಪಳ ಹೊಳೆಯಬೇಕಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯಿಂದ  ಒಂದು ನಿಮಿಷ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಒಂದು ವಾರ ಈ ರೀತಿ ಮಾಡಿದರೆ ಸಾಕು ಹಳದಿಗಟ್ಟಿದ ನಿಮ್ಮ ಹಲ್ಲುಗಳು ಶುಭ್ರವಾಗಿ ಬಿಡುತ್ತವೆ.

ಸುಕ್ಕು ನಿವಾರಣೆಗೆ : ನಿಮ್ಮ ಚರ್ಮ ಸುಕ್ಕುಗಟ್ಟಿದ್ದರೆ ಬಾಳೆ ಹಣ್ಣಿನ ಸಿಪ್ಪೆಯನ್ನು ಆ ಪ್ರದೇಶದಲ್ಲಿ ಉಜ್ಜಿ. ಇದು ಹೆಚ್ಚಿನ ದ್ರವಾಂಶ ನೀಡಿ, ಸುಕ್ಕು ಮರುಕಳಿಸದಂತೆ ನೋಡುತ್ತದೆ.

ನೋವು ನಿವಾರಣೆ : ಬಾಳೆ ಹಣ್ಣಿನ ಸಿಪ್ಪೆಯನ್ನು ರಾತ್ರಿ ಮಲಗುವ ವೇಳೆ ಗಾಯಗಳಿರುವ ಜಾಗಕ್ಕೆ ಬಟ್ಟೆಯ ಸಹಾಯದಿಂದ ಕಟ್ಟಿರಿ. ಈ ರೀತಿ ಮಾಡುವುದರಿಂದ ಬೇಗನೆ ನೋವು ಕಡಿಮೆಯಾಗುತ್ತದೆ. ಅಲ್ಲದೆ ಕ್ರಿಮಿಕೀಟಗಳು ಕಚ್ಚಿದ ಜಾಗಕ್ಕೆ ಇದರಿಂದ ಮಸಾಜ್ ಮಾಡಿದರೆ ತುರಿಕೆ ಹಾಗೂ ನೋವು ನಿವಾರಣೆಯಾಗುತ್ತದೆ.

ಕಲೆಗಳ ನಿವಾರಣೆಗೆ : ಮುಖದಲ್ಲಿ ಕಪ್ಪು ಕಲೆ ಅಥವಾ ಮೊಡವೆಗಳಿದ್ದಲ್ಲಿ ಬಾಳೆ ಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡಿ. ಸುಮಾರು 10-15 ನಿಮಿಷಗಳ ಕಾಲ ಬಿಟ್ಟು ಮುಖವನ್ನು ತೊಳೆಯಿರಿ. ದಿನದಲ್ಲಿ ಎರಡು ಅಥವಾ ಮೂರು ಭಾರಿ ಈ ರೀತಿ ಮಾಡುವುದರಿಂದ ಒಂದು ವಾರದೊಳಗೆ ಕಲೆಗಳು ಮಾಯವಾಗುತ್ತವೆ.
Loading...

ಉತ್ತಮ ತ್ವಚೆಗಾಗಿ : ಉತ್ತಮ ತ್ವಚೆಗಾಗಿ ಎರಡು ದಿನಕ್ಕೊಮ್ಮೆ ಬಾಳೆ ಹಣ್ಣಿನ ಸಿಪ್ಪೆಯಿಂದ ಮುಖದ ಪೂರ್ತಿ ಮಸಾಜ್ ಮಾಡಿಕೊಳ್ಳಿ. ಇದರಲ್ಲಿರುವ ಔಷಧೀಯ ಗುಣ ನಿಮ್ಮ ತ್ವಚೆಯನ್ನು ಮೃದುಗೊಳಿಸಿ ಸುಂದರವಾಗಿಸುತ್ತದೆ.

ಸಿಪ್ಪೆ ತಿನ್ನಿ : ಬಾಳೆ ಹಣ್ಣಿನ ಸಿಪ್ಪೆಗಳ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಲ್ಲದೆ ಸಿಪ್ಪೆಯನ್ನು ಬಳಸಿ ಅನೇಕ ಕಡೆಗಳಲ್ಲಿ ಬೇರೆಬೇರೆ ರೀತಿಯ ಆಹಾರಗಳನ್ನು ತಯಾರು ಮಾಡುತ್ತಾರೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ