ಕಣ್ಣನ್ನು ಕುರುಡಾಗಿಸಬಲ್ಲ ಗ್ಲುಕೋಮಾ ಸಮಸ್ಯೆ ಬಗ್ಗೆ ನಿಮಗೆಷ್ಟು ಗೊತ್ತು?

ಕಣ್ಣಿನೊಳಗೆ aqueous humor ಎಂಬ ದ್ರವವಿದೆ. ಈ ದ್ರವವು ಕಣ್ಣಿನಲ್ಲಿರುವ ಜಾಲರಿಯಂತಹ ರಚನೆಯ ಮೂಲಕ ಹೊರಬರುತ್ತದೆ. ಆದರೆ ಕೆಲವೊಮ್ಮೆ ಈ ದ್ರವವು ಹೊರಬರುವ ವಿಧಾನವು ನಿರ್ಬಂಧಿಸಲ್ಪಡುತ್ತದೆ. ಅಲ್ಲದೆ ಆ ದ್ರವವು ಕಣ್ಣುಗಳಲ್ಲಿ ಉಳಿಯುತ್ತದೆ.

Eyes

Eyes

 • Share this:
  ಗ್ಲುಕೋಮಾ (ಕಣ್ಣಿನ ಪೊರೆ) ಇದುವೇ ಅಂಧತ್ವಕ್ಕೆ ಪ್ರಮುಖ ಕಾರಣ. ಭಾರತದಲ್ಲೇ ಗ್ಲುಕೋಮಾದಿಂದ ಸುಮಾರು 12 ದಶಲಕ್ಷ ಬಳಲುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ವಿಶ್ವದ ಕರುಡು ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿರುವ ಗ್ಲುಕೋಮಾ ಚಿಕಿತ್ಸೆ ಇದೀಗ ಮತ್ತಷ್ಟು ಸುಲಭವಾಗಿಸುವಲ್ಲಿ ಆಸ್ಟ್ರೇಲಿಯಾ ಸಂಶೋಧಕರು ಯಶಸ್ವಿಯಾಗಿದ್ದಾರೆ.

  ಆಸೀಸ್​ನ ಸಂಶೋಧಕರು ಅನುವಂಶಿಕ ಪರೀಕ್ಷೆಯನ್ನು (ಜೆನೆಟಿಕ್ಸ್ ಟೆಸ್ಟ್) ಕಂಡು ಹಿಡಿದಿದ್ದು, ಇದು ಗ್ಲುಕೋಮಾ (ಕಣ್ಣಿನ ಪೊರೆ) ಬೆಳವಣಿಗೆಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಮಾಡುತ್ತದೆ. ಇದರಿಂದ ಕಣ್ಣಿನ ಪೊರೆ ಚಿಕಿತ್ಸೆಯನ್ನು ಪಡೆಯಬಹುದು ಎಂದು ಇಂಟರ್ನ್ಯಾಷನಲ್ ನೇಚರ್ ಜೆನೆಟಿಕ್ಸ್ ಜನರಲ್​ನಲ್ಲಿ ಪ್ರಕಟವಾದ ಅಧ್ಯಯದಿಂದ ತಿಳಿದುಬಂದಿದೆ.

  ಕಣ್ಣಿನ ಪೊರೆಗಳ ಬೆಳವಣಿಗೆಗೆ ಕಾರಣವಾದ 107 ಜೀನ್‌ ಫಿಲ್ಲರ್‌ಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಇದರೊಂದಿಗೆ, ಈ ರೋಗದ ಆರಂಭಿಕ ಅಪಾಯವನ್ನು ಕಂಡುಹಿಡಿಯಲು ಹೊಸ ಅನುವಂಶಿಕ ಪರೀಕ್ಷೆಯನ್ನು ಸಿದ್ಧಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ರಕ್ತ ಅಥವಾ ಲಾಲಾರಸದ ಮಾದರಿಗಳ ಮೂಲಕ ರೋಗವನ್ನು ಹೆಚ್ಚು ನಿಖರವಾಗಿ ಕಂಡುಹಿಡಿಯಬಹುದು.

  ಸಂಶೋಧಕರು, ಈ ಪರೀಕ್ಷೆಯನ್ನು ಗುರುತಿಸಿದ ನಂತರ, ವೈದ್ಯರಿಗೆ ಕಣ್ಣಿನ ಪೊರೆಯ ಸಮಸ್ಯೆಯನ್ನು ಕಂಡುಹಿಡಿಯುವುದು ಸುಲಭವಾಗುತ್ತದೆ. ಅಲ್ಲದೆ, ಈ ರೋಗವು ಕಣ್ಣುಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ. ಅದರ ಅಭಿವೃದ್ಧಿಗಾಗಿ ಸಂತ್ರಸ್ತರ ವೈಯಕ್ತಿಕ ಮತ್ತು ಕುಟುಂಬದ ಇತಿಹಾಸದ ಬಗ್ಗೆ ತಿಳಿಯಲು ಸಂಶೋಧಕರು ಮತ್ತಷ್ಟು ಅಧ್ಯಯನ ಮಾಡುತ್ತಿದ್ದಾರೆ. ಅಧ್ಯಯನದೊಂದಿಗೆ, ಅವರು ಈ ರೋಗವನ್ನು ಉತ್ತೇಜಿಸುವ ಇತರೆ ಜೀನ್‌ಗಳನ್ನು ಗುರುತಿಸಬಹುದು.

  ಗ್ಲುಕೋಮಾಗೆ ಕಾರಣವೇನು?

  ಕಣ್ಣಿನೊಳಗೆ aqueous humor ಎಂಬ ದ್ರವವಿದೆ. ಈ ದ್ರವವು ಕಣ್ಣಿನಲ್ಲಿರುವ ಜಾಲರಿಯಂತಹ ರಚನೆಯ ಮೂಲಕ ಹೊರಬರುತ್ತದೆ. ಆದರೆ ಕೆಲವೊಮ್ಮೆ ಈ ದ್ರವವು ಹೊರಬರುವ ವಿಧಾನವು ನಿರ್ಬಂಧಿಸಲ್ಪಡುತ್ತದೆ. ಅಲ್ಲದೆ ಆ ದ್ರವವು ಕಣ್ಣುಗಳಲ್ಲಿ ಉಳಿಯುತ್ತದೆ. ಕೆಲವೊಮ್ಮೆ ತಜ್ಞರು ಈ ನಿರ್ಬಂಧದ ಕಾರಣವನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಆದರೆ, ಇದು ಅನುವಂಶಿಕವಾಗಿರಬಹುದು. ಇದರರ್ಥ ಇದು ಪೋಷಕರ ವಂಶವಾಹಿಗಳ ಮೂಲಕ ಮಕ್ಕಳಲ್ಲಿ ಉಂಟಾಗುವ ರೋಗವಾಗಿದೆ.
  Published by:HR Ramesh
  First published: