Winter Health: ಚಳಿಗಾಲದಲ್ಲಿ ಸ್ನಾನ ಮಾಡುವಾಗ ಜೋಪಾನ... ಶೀತ ನೆಗಡಿ ಮಾತ್ರವಲ್ಲ ಬ್ರೈನ್ ಸ್ಟ್ರೋಕ್ ಕೂಡಾ ಉಂಟಾಗಬಹುದು, ಎಚ್ಚರ!

Brain Stroke: ಮುಂಚೆ ಸ್ಟ್ರೋಕ್ ಅಂದರೆ 50ರ ನಂತರ ಅನ್ನುವ ಮಾತಿತ್ತು. ಆದರೆ ಇವತ್ತು 25ನೇ ವಯಸ್ಸಲ್ಲೇ ಸ್ಟ್ರೋಕ್ ಅಟ್ಯಾಕ್ ಆದವರು ಬಹಳಷ್ಟಿದ್ದಾರೆ. ಮುಂಚೆ ಮಕ್ಕಳು ಸ್ಟ್ರೋಕ್ ಗೊಳಗಾದ ತಂದೆ ತಾಯಿಯರನ್ನು ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಯೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ನಿರ್ಮಾಣವಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಳಿಗಾಲ(Winter) ಅಂದರೆ ಕೇವಲ ಶೀತ(Cold) ನೆಗಡಿ (Cough)ಸಮಸ್ಯೆ ಹೊತ್ತು ತರುವ ಕಾಲವಲ್ಲ.. ಚಳಿಗಾಲದಲ್ಲಿ ಹೃದಯಾಘಾತ (Heart Attack) ಬ್ರೈನ್ ಸ್ಟ್ರೋಕ್(Brain Stroke) ನಂತಹ ಅಪಾಯಕಾರಿ ಕಾಯಿಲೆಗಳು ಉಂಟಾಗಬಹುದು.. ಚಳಿಗಾಲದಲ್ಲಿ ನಾವು ಇರುವ ರೀತಿಯಿಂದ ಈ ಸಮಸ್ಯೆಗಳು (Problems)ಕಾಣಿಸಿಕೊಳ್ಳುತ್ತವೆ.ಅದರಲ್ಲೂ ಬಹುಮುಖ್ಯವಾಗಿ ಚಳಿಗಾಲದಲ್ಲಿ ವಾತಾವರಣ(weather) ತೀವ್ರ ತಂಪಾಗಿದ್ದು ಎಷ್ಟು ಸಾಧ್ಯವೋ ಅಷ್ಟು ಬೆಚ್ಚಗಿರಬೇಕು.. ಆದರೆ ಚಳಿಗಾಲದಲ್ಲಿ ಕೆಲವರು ತಣ್ಣೀರು ಸ್ನಾನ ಮಾಡುವ ಹವ್ಯಾಸ ಇಟ್ಟುಕೊಂಡಿರುತ್ತಾರೆ..ಈ ಹವ್ಯಾಸವೇ ಕೆಲವರಲ್ಲಿ ನೈನ್ ಸ್ಟ್ರೋಕ್ ನಂತಹ ಅಪಾಯಕಾರಿ ರೋಗವನ್ನು ತಂದೊಡ್ಡಲಿದೆ. ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದರೆ ಸ್ಟ್ರೋಕ್​ ಹೆಚ್ಚಾಗುತ್ತದೆ. ತಣ್ಣೀರು ತಲೆಯ ಮೇಲೆ ಬಿದ್ದ ತಕ್ಷಣ, ಅದು ಅಡ್ರಿನಾಲಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮೆದುಳಿನ ತಾಪಮಾನವನ್ನು ತ್ವರಿತವಾಗಿ ನಿಯಂತ್ರಿಸುತ್ತದೆ. ಈ ಕಾರಣದಿಂದಾಗಿ ರಕ್ತದೊತ್ತಡವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಪಾರ್ಶ್ವವಾಯು ಬರುತ್ತದೆ.

  ಬ್ರೈನ್ ಸ್ಟ್ರೋಕ್ ಎಂದರೇನು..?

  ಮೆದುಳಿಗೆ ರಕ್ತ ಸಂಚಾರವಾಗುವುದು ಇದ್ದಕ್ಕಿದ್ದಂತೆ ಕಡಿಮೆಯಾದಾಗ ಅಥವಾ ನಿಂತು ಹೋದಾಗ ಮೆದುಳಿನ ನರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಹಾಗೂ ಪೋಷಕಾಂಶಗಳು ದೊರೆಯುವುದಿಲ್ಲ, ಇದರಿಂದಾಗಿ ನರಗಳು ನಿಮಿಷದಲ್ಲಿ ಸಾಯುತ್ತವೆ. ಹೀಗೆ ಉಂಟಾದಾಗ ಬ್ರೈನ್ ಸ್ಟ್ರೋಕ್ ಉಂಟಾಗುತ್ತದೆ. ಈ ರೀತಿ ಬ್ರೈನ್‌ ಸ್ಟ್ರೋಕ್ ಉಂಟಾದಾಗ ಸ್ಟ್ರೋಕ್‌ ಆದ ಬಳಿಕ 1 ರಿಂದ 4 ತಾಸುಗಳ ಒಳಗಾಗಿ ಚಿಕಿತ್ಸೆ ಪಡೆಯಬೇಕು. ಇದನ್ನು ಗೋಲ್ಡನ್‌ ಅವಧಿ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಮೀರಿದರೆ ರೋಗ ಲಕ್ಷಣವನ್ನು ಕಡಿಮೆ ಮಾಡುವುದು ಕಷ್ಟ. ಮಿದುಳಿಗೆ ಪೂರ್ಣಪ್ರಮಾಣದಲ್ಲಿ ಹಾನಿಯಾದರೆ ತೊಂದರೆ ಕಟ್ಟಿಟ್ಟಬುತ್ತಿ.

  ಇದನ್ನೂ ಓದಿ: ಆಹಾರದಿಂದ ಮಾತ್ರವಲ್ಲ ಈ ಕೆಳಗಿನ ವಸ್ತುಗಳಿಂದಲೂ ಕಾಣಿಸಿಕೊಳ್ಳುತ್ತೆ ಥೈರಾಯ್ಡ್..!

  ಬ್ರೈನ್ ಸ್ಟ್ರೋಕ್ ಹೇಗೆ ಕಾಣಿಸಿಕೊಳ್ಳಲಿದೆ..?

  ಮುಂಚೆ ಸ್ಟ್ರೋಕ್ ಅಂದರೆ 50ರ ನಂತರ ಅನ್ನುವ ಮಾತಿತ್ತು. ಆದರೆ ಇವತ್ತು ೨೫ನೇ ವಯಸ್ಸಲ್ಲೇ ಸ್ಟ್ರೋಕ್ ಅಟ್ಯಾಕ್ ಆದವರು ಬಹಳಷ್ಟಿದ್ದಾರೆ. ಮುಂಚೆ ಮಕ್ಕಳು ಸ್ಟ್ರೋಕ್ ಗೊಳಗಾದ ತಂದೆ ತಾಯಿಯರನ್ನು ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಯೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ನಿರ್ಮಾಣವಾಗಿದೆ.ಮೆದುಳಿಗೆ ರಕ್ತ ಸಂಚಾರವಾಗುವುದು ಇದ್ದಕ್ಕಿದ್ದಂತೆ ಕಡಿಮೆಯಾದಾಗ ಅಥವಾ ನಿಂತು ಹೋದಾಗ ಮೆದುಳಿನ ನರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಹಾಗೂ ಪೋಷಕಾಂಶಗಳು ದೊರೆಯುವುದಿಲ್ಲ, ಇದರಿಂದಾಗಿ ನರಗಳು ನಿಮಿಷದಲ್ಲಿ ಸಾಯುತ್ತವೆ. ಹೀಗೆ ಉಂಟಾದಾಗ ಬ್ರೈನ್ ಸ್ಟ್ರೋಕ್ ಉಂಟಾಗುತ್ತದೆ

  ಯಾರಿಗೆ ಅಪಾಯ ಹೆಚ್ಚು..?

  ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ವ್ಯಸನಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಕಾಯಿಲೆ ಇರುವವರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

  ಬ್ರೈನ್ ಸ್ಟ್ರೋಕ್ ನಲ್ಲಿ 2 ವಿಧ..

  ಸ್ಟ್ರೋಕ್‌ನಲ್ಲಿ ಎರಡು ವಿಧಗಳಿವೆ. ಒಂದು ಇಸ್ಕೆಮಿಕ್‌, ಇನ್ನೊಂದು ಹೆಮರಾಜಿಕ್‌ ಆಘಾತ. ಮೊದಲನೆಯದರಲ್ಲಿ ರಕ್ತದ ಹರಿವು ಕಡಿಮೆಯಾಗುವುದರಿಂದ ಅಥವಾ ಬ್ಲಾಕ್‌ ಆಗುವುದರಿಂದ ಆಘಾತ ಸಂಭವಿಸುತ್ತದೆ. ಸುಮಾರು 80%ಜನರಿಗೆ ಈ ಸ್ಟ್ರೋಕ್‌ ಕಂಡುಬರುತ್ತದೆ. ಹೆಮರಾಜಿಕ್ ಆಘಾತ, ರಕ್ತನಾಳಗಳು ಒಡೆಯುವುದರಿಂದ ಆಗುತ್ತದೆ. ಇದು ವಿರಳ ಪ್ರಕರಣಗಳಲ್ಲಿ ಮಾತ್ರ ಕಂಡುಬರುತ್ತದೆ.

  ಬ್ರೈನ್ ಸ್ಟ್ರೋಕ್ ಲಕ್ಷಣಗಳು

  1)ದೃಷ್ಟಿ ದೋಷ: ವ್ಯಕ್ತಿಯ ದೃಷ್ಟಿ ಮಸುಕಾಗುತ್ತಿದೆ ಎಂದು ದೂರಬಹುದು. ಈ ಹಂತದಲ್ಲಿ ಅವರು ಅದನ್ನು ಬಿಸಿಲಿನಲ್ಲಿ ಹೆಚ್ಚು ಅಡ್ಡಾಡುವುದರಿಂದ ಅಥವಾ ದಿನದಲ್ಲಿ ಸಾಕಷ್ಟು ನೀರು ಇಲ್ಲದಿರುವುದು ಯಾವುದಾದರೂ ಕಾರಣದಿಂದ ಆಗಿರಬಹುದು ಎಂದು ಹೇಳುತ್ತಾರೆ. ನಿಮಗೆ ಹೀಗಾದಾಗ ತುಂಬಾ ಎಚ್ಚರಿಕೆಯಿಂದ ಗಮನಿಸುವ ಸಮಯ ಇದು.

  2)ಕೈಗಳಲ್ಲಿ ನಿಶಕ್ತಿ: ಪಾರ್ಶ್ವವಾಯುವಿಗೆ ಒಳಗಾದ ರೋಗಿಗಳಲ್ಲಿ ಒಂದು ಕೈ ಮರಗಟ್ಟುವುದು ಅಥವಾ ನಿಶ್ಶಕ್ತಿಗೆ ಒಳಗಾಗುವುದು. ರೋಗಿಗಳಿಗೆ ಕೈಯನ್ನು ಮೇಲಕ್ಕೆ ಎತ್ತಲು ಹೇಳಬೇಕು. ಪಾರ್ಶ್ವವಾಯುಗೆ ಒಳಗಾದ ರೋಗಿಗಳ ಕೈಯು ಕೆಳಕ್ಕೆ ಬೀಳುತ್ತದೆ.

  3)ಕಾರಣವಿಲ್ಲದೆ ತಲೆನೋವು ಉಂಟಾಗುವುದು: ಇದು ಸಾಮಾನ್ಯವಾಗಿ ಹೆಮರೇಜ್ ಸ್ಟ್ರೋಕ್‌ನ ಲಕ್ಷಣಗಳು.ಇನ್ನಿತರ ಲಕ್ಷಣಗಳೆಂದರೆ ಅಲ್ಪಾವಧಿಯ ಮರೆಗುಳಿತನ, ದೃಷ್ಟಿಯ ದುರ್ಬಲತೆ, ತಲೆ ಸತ್ತುವುದು.

  4)ಮಾತನಾಡಲು ಕಷ್ಟ ಪಡುವುದು: ಮಾತನಾಡಲು ಕಷ್ಟವಾಗುವುದು. ವ್ಯಕ್ತಿ ಮಾತ
  ನಾಡುವಾಗ ತೊದಲುವುದು, ಗೊಂದಲ, ಮಾತುಗಳು ತಡವರಿಸುವುದು

  ಬಾತ್ರೂಮ್ ಸ್ಟ್ರೋಕ್ ಬಗ್ಗೆ ಎಚ್ಚರ ಇರಲಿ

  ಬಾತ್ರೂಮ್ ಸ್ಟ್ರೋಕ್​ಗೆ ಯಾರಾದರೂ ಬಲಿಯಾಗಬಹುದು. ಆದರೆ ವಯಸ್ಸಾದವರು ಇದಕ್ಕೆ ಹೆಚ್ಚು ಒಳಗಾಗುತ್ತಾರೆ. ವಯಸ್ಸಿನೊಂದಿಗೆ ಮೆದುಳಿನ ಕೋಶಗಳು ಸಹ ದುರ್ಬಲಗೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದೊತ್ತಡದ ಹೆಚ್ಚಳದಿಂದಾಗಿ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬರುತ್ತದೆ. ಕೆಲವೊಮ್ಮೆ ರಕ್ತಸ್ರಾವದ ಸ್ಥಿತಿಯೂ ಉಂಟಾಗುತ್ತದೆ. ಮೆದುಳಿನ ಅಭಿಧಮನಿ ಸಿಡಿಯುತ್ತದೆ. ಇದು ಬಹಳ ಗಂಭೀರವಾದ ಪರಿಸ್ಥಿತಿ. ಈ ಹಂತದಲ್ಲಿ ರೋಗಿಯು ಕೋಮಾಗೆ ಹೋಗಬಹುದು. ತಡವಾದರೆ ಪ್ರಾಣವೂ ಹೋಗಬಹುದು.

  ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ: ಏಕೆ ಎಂದು ವಿವರಿಸಿದ್ದಾರೆ ವೈದ್ಯರು

  ಸ್ಟ್ರೋಕ್‌ಗೆ ಚಿಕಿತ್ಸೆ

  ಪಾರ್ಶ್ವವಾಯು ಸಂಭವಿಸಿದ ಮೂರು ಗಂಟೆಗಳ ಒಳಗೆ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದರೆ, ನಂತರ ತಜ್ಞರು ಅವರಿಗೆ ಟಿಪಿಎ ಇಂಜೆಕ್ಷನ್ ನೀಡುತ್ತಾರೆ. ಈ ಕಾರಣದಿಂದಾಗಿ, ತಲೆಯಲ್ಲಿ ಹರಿಯುವ ರಕ್ತವು ತೆಳುವಾಗುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಕ್ರಮೇಣ ಕೊನೆಗೊಳ್ಳುತ್ತದೆ. ಇದಲ್ಲದೆ, ತಜ್ಞರು ಔಷಧಿಗಳು ಮತ್ತು ಚುಚ್ಚುಮದ್ದಿನ ಮೂಲಕ ಹೆಪ್ಪುಗಟ್ಟುವಿಕೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಾರೆ.
  Published by:ranjumbkgowda1 ranjumbkgowda1
  First published: