ಮನುಷ್ಯನ ದೇಹ(Human Body) ಹಲವಾರು ಜೀವಿಗಳಿಗೆ ಆಶ್ರಯ ತಾಣ(Creatures). ಆದರೆ ನಮ್ಮೊಳಗಿರುವ ಜೀವಿಗಳ ಬಗ್ಗೆ ನಮಗೆ ಮಾಹಿತಿಯೇ ಇರುವುದಿಲ್ಲ. ಕೆಲವು ಹುಳುಗಳು(Worm) ನಮಗೆ ಅರಿವಿಲ್ಲದಂತೆ ನಮ್ಮ ಆಹಾರವನ್ನೇ(Food) ಕಸಿದು ತಿಂದು ನಮ್ಮ ಆರೋಗ್ಯಕ್ಕೆ(Health) ಕುತ್ತು ತಂದು ಬಿಡುತ್ತವೆ.! ಹೊಟ್ಟೆ ಹುಳುಗಳ ಬಗ್ಗೆ ನೀವೆಲ್ಲಾ ಕೇಳಿರ್ತೀರಾ. ಆದರೆ ಮುಖದ ಮೇಲೆ ಇರುವ ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳ(Microorganisms) ಬಗ್ಗೆ ಕೇಳಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದು ಕುತೂಹಲಕಾರಿ ವಿಷಯ.ಮನುಷ್ಯರ ದೇಹದಲ್ಲಿ ಹಲವು ಬಗೆಯ ಕಣ್ಣಿಗೆ ಕಾಣದ ಅತ್ಯಂತ ಸೂಕ್ಷ್ಮ ಜೀವಿಗಳು ವಾಸ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತು. ನಾವು ನೀವು ಇದುವರೆಗೂ ಕಣ್ಣಾರೆ ನೋಡಿರುವ ಹುಳುಗಳು ಎಂದರೆ ಜಂತುಹುಳು ಮತ್ತು ಹುಳುಕು ಹಲ್ಲಿನ ಹುಳು. ಆದರೆ ಇವೆರಡನ್ನು ಬಿಟ್ಟು ನಮ್ಮ ದೇಹದಲ್ಲಿ ಇನ್ನೂ ಕೆಲವು ಬಗೆಯ ಹುಳುಗಳು ಪರಾವಲಂಬಿಯಾಗಿ ನಾವು ಸೇವಿಸುವ ಆಹಾರದಲ್ಲಿನ ಸಾರವನ್ನು ಹೀರಿಕೊಂಡು ಜೀವನ ಸಾಗಿಸುತ್ತವೆ. ಇವು ಹೀಗೆ ಇದ್ದರೆ ಹೋಗಲಿ ಪಾಪ ಎಂದು ಸುಮ್ಮನಾಗಿ ಬಿಡಬಹುದಿತ್ತು. ಆದ್ರೆ ಕೆಲವು ನಮ್ಮ ಆರೋಗ್ಯದ ಸ್ಥಿತಿಯನ್ನೇ ಹದಗೆಡಿಸುತ್ತವೆ.
ಇದನ್ನೂ ಓದಿ: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ
ಸಾಮಾನ್ಯವಾಗಿ ಹಸು, ಎಮ್ಮೆ, ನಾಯಿಗಳ ದೇಹದ ಮೇಲೆ ಸಣ್ಣ ಸಣ್ಣ ಹುಳಗಳು ಇರುವುದನ್ನು ನೋಡಿರುತ್ತೇವೆ. ಅದೇ ರೀತಿ ನಮ್ಮ ದೇಹದ ಮೇಲೂ ಕಣ್ಣಿಗೆ ಕಾಣದಂತ ಲಕ್ಷಾಂತರ ಸೂಕ್ಷ್ಮ ಜೀವಿಗಳು ಇವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನು ನಾವು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ.
ಸೂಕ್ಷ್ಮದರ್ಶಕ ಬಳಸಿಕೊಂಡು ಇವುಗಳನ್ನು ನೋಡಬಹುದು. ಹಾಗೆಯೇ ನಮಗೆ ಪರಿಚಯವಿಲ್ಲದ ಮುಖದ ಹುಳಗಳ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಮುಖದ ಮೇಲೆ ಅನೇಕ ಸಣ್ಣ ಜೀವಿಗಳು ಓಡಾಡುತ್ತಿರುತ್ತವೆ. ಇದನ್ನು ಕೇಳಿ ಭಯ ಪಡುವ ಅವಶ್ಯಕತೆ ಇಲ್ಲ. ವೋಕ್ಸ್ ವೆಬ್ಸೈಟ್ನ ಪ್ರಕಾರ, ಈ ಕೀಟಗಳು ಸ್ಪೈಡರ್ ಮತ್ತು ಟಿಕ್ ಲೈಕ್ ಮೈಟ್ಸ್ನ ಜಾತಿಗಳೆಂದು ಹೇಳಿದೆ.
1) ಕಣ್ಣಿಗೆ ಕಾಣುವುದಿಲ್ಲ ಮುಖದ ಮೇಲಿನ ಜೀವಿಗಳು !
ಸಾಮಾನ್ಯವಾಗಿ ಮುಖದ ಮೇಲೆ 99.9% ಜನರು ಈ ಅತಿ ಸೂಕ್ಷ್ಮ ಜೀವಿಗಳನ್ನು ಹೊಂದಿರುತ್ತಾರೆ ಎಂದು US ಕೃಷಿ ಇಲಾಖೆಯ ಮಿಟೆ ವಿಜ್ಞಾನಿ ರಾನ್ ಒಚೋವಾ ಹೇಳಿದ್ದಾರೆ. ಮುಖ ಸಾಮಾನ್ಯವಾಗಿ ತೇವಭರಿತವಾಗಿದ್ದು, ಮುಖದ ಮೇಲಿನ ಜಿಡ್ಡಿನಂಶ ಮತ್ತು ಮುಖದ ಮೇಲಿನ ಕೂದಲುಗಳು ಈ ಜೀವಿಗಳ ಇರುವಿಕೆಗೆ ಪರೋಕ್ಷವಾಗಿ ಸಹಕರಿಸುತ್ತವೆ.
ಮುಖದ ಕೂದಲಿನ ಬೇರುಗಳಲ್ಲಿ ಈ ಅತಿ ಸೂಕ್ಷ್ಮ ಜೀವಿಗಳು ಕಂಡು ಬರುತ್ತವೆ ಎಂದು ವರದಿ ಬಹಿರಂಗ ಪಡಿಸಿದೆ. ಇವು ನಮ್ಮ ಮುಖದ ಕೂದಲಿನ ಬೇರುಗಳಿಂದ ಜಿಡ್ಡಿನಂಶವನ್ನು ಹಗಲಿನಲ್ಲಿ ಸೇವಿಸುತ್ತವೆ ಮತ್ತು ರಾತ್ರಿ ಸಮಯದಲ್ಲಿ ನಿದ್ದೆ ಮಾಡುವಾಗ ಹೊರಬರುತ್ತದೆ ಎಂದು ವರದಿ ತಿಳಿಸಿದೆ.
2) ಮುಖದ ಹುಳಗಳ ವಿಧಗಳು
ಕೆಲವು ವರದಿಗಳು ಹೇಳುವ ಪ್ರಕಾರ, 1842ರಲ್ಲಿ ಈ ಹುಳಗಳ ಬಗ್ಗೆ ಕಂಡುಕೊಂಡರೂ ಸಹ ವಿಜ್ಞಾನಿಗಳು ಇನ್ನೂ ಈ ಹುಳಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿಲ್ಲ. ಲಕ್ಷಾಂತರ ಜೀವಿಗಳು ಮುಖದ ಮೇಲೆ ಇವೆ.
ಅವುಗಳಲ್ಲಿ ಡೆಮೊಡೆಕ್ಸ್ ಫೋಲಿಕ್ಯುಲೋರಮ್ ಮತ್ತು ಡೆಮೊಡೆಕ್ಸ್ ಬ್ರೆವಿಸ್ ಎಂದು 2 ರೀತಿಯ ಹುಳಗಳನ್ನು ವಿಜ್ಞಾನಿಗಳು ಹೆಸರಿಸಿದ್ದಾರೆ . ಈ ಹುಳಗಳು ರೆಪ್ಪೆಗೂದಲು, ಮೂಗಿನ ಬಳಿ ಹಾಗೂ ಹುಬ್ಬುಗಳು ಮತ್ತು ಇತರ ಕೂದಲಿನ ಮೇಲೆ ವಿವಿಧ ರೀತಿಯಲ್ಲಿ ಕಂಡುಬರುತ್ತವೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ Coffee ಕುಡಿಯುತ್ತೀರಾ..? ಹಾಗಿದ್ದರೆ ನಿಮಗೆ ಈ ಆರೋಗ್ಯ ಸಮಸ್ಯೆ ಕಾಡೋದು ಗ್ಯಾರಂಟಿ!
3) ಮುಖದ ಚರ್ಮಕ್ಕೆ ಏನೆಲ್ಲಾ ತೊಂದರೆ ಆಗುತ್ತದೆ ?
ಮುಖದ ಮೇಲಿನ ಹುಳುಗಳಿಂದಾಗಿ ನಮ್ಮ ಮುಖದ ಚರ್ಮವು ಒಣಗಬಹುದು, ತುರಿಕೆ, ಮೊಡವೆ, ಕಣ್ಣಿನ ರೆಪ್ಪೆಗಳು ಉದುರುವಿಕೆ ಇಂತ ಸಮಸ್ಯೆಗಳನ್ನು ಕಾಣಬಹುದು. ಹಾಗಾಗಿ ನಮ್ಮ ತ್ವಚೆಯನ್ನು ಆದಷ್ಟು ಸ್ವಚ್ಛವಾಗಿಟ್ಟು ಕೊಳ್ಳುವುದು ಉತ್ತಮ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ