Good Morning: ಬೆಳಗ್ಗೆ ಎದ್ದೇಳೋಕೆ ಬೇಜಾರಾಗುತ್ತಿದೆಯಾ? ನಿಮ್ಮ ದಿನ ಚೆನ್ನಾಗಿರಬೇಕು ಅಂದ್ರೆ ಈ ರೀತಿ ಮಾಡಿ

ನಿದ್ದೆ ಮಾಡಿ ಬೆಳಗ್ಗೆ ಎದ್ದೇಳೋಕೆ ಕೆಲವರಿಗೆ ತುಂಬಾ ಬೇಜಾರಾಗುತ್ತೆ. ಯಾಕಾದ್ರೂ ಬೆಳಗಾಯ್ತಪ್ಪ ಅಂದುಕೊಳ್ತಾರೆ? ಎದ್ರೆ, ಇನ್ನ ನಮ್ಮ ದಿನ ಚೆನ್ನಾಗಿರುತ್ತೋ ಇಲ್ವೋ ಅಂದುಕೊಳ್ಳುವವರು ಹೆಚ್ಚು. ಹಾಗಾದ್ರೆ ಏನ್ ಮಾಡಿದ್ರೆ, ಬೆಳಗ್ಗೆ ಎದ್ದ ಮೇಲೆ ಉತ್ಸಾಹದಿಂದ ಇರಬಹುದು? ನೀವೇ ಓದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನುಷ್ಯನಿಗೆ ನಿದ್ದೆ (Sleep) ತುಂಬಾ ಮುಖ್ಯ. ಒಬ್ಬ ಮನುಷ್ಯ 6 ತಾಸುಗಳ (6 hours) ಕಾಲ ಆದ್ರೂ ಮಲಗಿ ವಿಶ್ರಾಂತಿ ಮಾಡಬೇಕು. ನಮ್ಮ ದೇಹ (Body)ವು ಒಂದು ಯಂತ್ರವಿದ್ದಂತೆ, ದಿನ ಪೂರ್ತಿ ನಮ್ಮ ಕಣ್ಣು, ಕಾಲು, ಕೈ, ಕಿವಿ, ನಾಲಿಗೆ, ಮೆದುಳು, ಹೃದಯ ಬಡಿತ, ತೀವ್ರ ರಕ್ತ ಸಂಚಲನೆ, ಹೆಚ್ಚು ಉಸಿರಾಡುವ ಶ್ವಾಸಕೋಶ, ಹೀಗೆ ಇತರ ಪ್ರಮುಖ ದೇಹದ ಭಾಗಗಳಿಗೆ ವಿಶ್ರಾಂತಿ (Rest) ಬಹುಮುಖ್ಯವಾಗಿ ಅವಶ್ಯಕತೆ ಇರುತ್ತದೆ. ಅದಕ್ಕೆ ನಿದ್ದೆ ಮಾಡಬೇಕಾಗುತ್ತೆ. ಆದ್ರೆ ನಿದ್ದೆ ಮಾಡಿ ಬೆಳಗ್ಗೆ (Morning) ಎದ್ದೇಳೋಕೆ ಕೆಲವರಿಗೆ ತುಂಬಾ ಬೇಜಾರಾಗುತ್ತೆ. ಯಾಕಾದ್ರೂ ಬೆಳಗಾಯ್ತಪ್ಪ ಅಂದುಕೊಳ್ತಾರೆ? ಎದ್ರೆ, ಇನ್ನ ನಮ್ಮ ದಿನ (Day) ಚೆನ್ನಾಗಿರುತ್ತೋ ಇಲ್ವೋ ಅಂದುಕೊಳ್ಳುವವರು ಹೆಚ್ಚು. ಅಲ್ಲದೇ ಕೆಲವರಿಗೆ ದಣಿವೂ, ಸುಸ್ತು ಹೋಗಿಯೇ ಇರಲ್ಲ. ಮಲಗಿದಲ್ಲೇ ಮಲಗಿ ಒದ್ದಾಡಿ ಬೇಜಾರು ಮಾಡಿಕೊಳ್ಳುತ್ತಾರೆ. ಹಾಗಾದ್ರೆ ಏನ್ ಮಾಡಿದ್ರೆ, ಬೆಳಗ್ಗೆ ಎದ್ದ ಮೇಲೆ ಉತ್ಸಾಹದಿಂದ ಇರಬಹುದು? ನೀವೇ ಓದಿ

ಬೆಳಗ್ಗೆ ಎದ್ದ ತಕ್ಷಣ ನೆಚ್ಚಿನ ದೇವರನ್ನು ನನೆಸಿಕೊಳ್ಳಿ

ನಮಗೆ ಎಷ್ಟೇ ಅಲಸ್ಯ ಇದ್ರೂ, ಬೇಜಾರಾದ್ರೂ ನಾವು ದಿನ ಬೆಳಗ್ಗೆ ಏಳಲೇ ಬೇಕು. ನಮ್ಮ ಕೆಲಸಗಳಿಗೆ ಹೋಗಲೇ ಬೇಕು. ಆದ ಕಾರಣ ನೀವು ಎದ್ದ ತಕ್ಷಣ ನಿಮ್ಮ ದೇವರನ್ನು ನೆನೆಸಿಕೊಳ್ಳಿ. ನಮ್ಮ ಹಿಂದೆ ದೇವರು ಇದ್ದಾನೆ ಎಂಬ ನಂಬಿಕೆಯು ನಮ್ಮ ಕೆಲಸಗಳಿಗೆ ಧೈರ್ಯ ತುಂಬುತ್ತದೆ. ಆದ ಕಾರಣ ಎದ್ದ ತಕ್ಷಣ ದೇವರ ಫೋಟೋ ನೋಡಿದ್ರೂ ಒಳ್ಳೆಯದು.

ಒಂದು ಲೋಟ ಬಿಸಿ ಅಥವಾ ಕಾದು ತಣ್ಣಗಾದ ನೀರು ಕುಡಿಯಿರಿ

ನೀವು ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದ್ರೆ ಆರೋಗ್ಯ ಒಳ್ಳೆಯದು. ಇಲ್ಲವೇ ತಣ್ಣನೆಯ ನೀರಾದ್ರೂ ಮರೆಯದೇ ಕುಡಿಯಿರಿ. ಆಗ ನಿಮ್ಮ ಆರೋಗ್ಯ ಚೆನ್ನಾಗಿರುತ್ತೆ. ಆರೋಗ್ಯ ಚೆನ್ನಾಗಿದ್ರೆ ದಿನವೂ ಚೆನ್ನಾಗಿಯೇ ಇರುತ್ತದೆ.

ಕಾಫಿ ಅಥವಾ ಟೀ ಕುಡಿಯುವ ಮೊದಲು ಯಾವಾಗಲೂ ನೀರು ಕುಡಿಯಿರಿ

ಕೆಲವರಿಗೆ ಬೆಡ್ ಕಾಫಿ ಕುಡಿಯೋ ಅಭ್ಯಾಸ ಇರುತ್ತೆ. ಆ ರೀತಿ ಇದ್ರೆ ಅದನ್ನೂ ಇಂದೇ ಬಿಡಿ. ಯಾಕಂದ್ರೆ ಬಹಳಷ್ಟು ಸಂಶೋಧನೆಗಳು ಬೆಳಿಗ್ಗೆ ನೀರಿನ ಮೊದಲು ಕಾಫಿ ಅಥವಾ ಚಹಾವನ್ನು ಕುಡಿಯುವುದು ಹಾನಿಕಾರಕ ಎಂದು ಹೇಳಿವೆ. ಆರೋಗ್ಯವನ್ನು ಸಮತೋಲನದಲ್ಲಿ ಇಡುಲು ನೀರು ಕುಡಿದ್ರೆ ಒಳ್ಳೆಯದು.

ಇದನ್ನೂ ಓದಿ: Sleeping Tips: ನಿಮಗೆ ನಿದ್ದೆ ಬರ್ತಿಲ್ವಾ? ಈ ರೀತಿ ಮಾಡಿ, ಆಯಾಗಿ ಮಲಗಿಕೊಳ್ಳಿ

ವಿಟಮಿನ್ ಡಿ ಅನ್ನು ತಪ್ಪಿಸಬೇಡಿ

ನೀವು ಎದ್ದ ತಕ್ಷಣ ಬಿಸಿಲಿಗೆ ಮೈಯೊಡ್ಡಿ. ಯಾಕಂದ್ರೆ ದೇಹಕ್ಕೆ ಅಗತ್ಯವಾಗಿ ವಿಟಮಿನ್ ಡಿ ಬೇಕಾಗುತ್ತದೆ. ಅದು ಬೆಳಗಿನ ಬಿಸಿಲಿನಲ್ಲಿ ದೊರೆಯುತ್ತದೆ. ಆದ ಕಾರಣ ಯಾವದೂ ನೆಪ ಹೇಳಿ ತಪ್ಪಿಸಿಕೊಳ್ಳಬೇಡಿ. ಬಿಸಿಲಿನಲ್ಲಿ ಒಂದೊಳ್ಳೆ ವಾಕ್ ಮಾಡಿ.

ಬೆಳಗ್ಗೆ ವ್ಯಾಯಾಮ ಮಾಡಲು ಪ್ರಯತ್ನಿಸಿ

ಬೆಳಗ್ಗೆ ಎದ್ದಾಗ ನೀವು ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಂಡಿದ್ರೆ ಒಳ್ಳೆಯದು. ವ್ಯಾಯಾಮ ಮಾಡಿದ್ರೆ ದೇಹವು ಹಗುರವಾದಂತೆ ಭಾಸವಾಗುತ್ತದೆ. ಆಗ ನಿಮ್ಮ ದಿನವು ಉತ್ತಮವಾಗಿರುತ್ತೆ.

ಬೆಳಗ್ಗೆ ಧ್ಯಾನ ಮಾಡಿದ್ರೆ ಒಳ್ಳೆಯದು

ಬೆಳಗ್ಗೆ ಮರೆಯದೇ ಧ್ಯಾನ ಮಾಡಿ. ಅದು ನಿಮ್ಮ ಮೆದುಳುಗೆ ತುಂಬಾ ಒಳ್ಳೆಯದು. ನೀವು ತಾಳ್ಮೆಯಿಂದ ಇರುತ್ತೀರಿ. ನಿಮ್ಮದಿನವೂ ಚೆನನಾಗಿ ಇರುತ್ತದೆ. ಕೆಲಸದ ಮೇಲೆ ಇನ್ನಷ್ಟು ಗಮನ ಹರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: AC Effect: ಈ ನಾಯಿಗೆ ಎಸಿ ಇಲ್ಲದೆ ನಿದ್ದೆ ಬರಲ್ಲ! AC ಆಫ್ ಮಾಡಿದ್ರೆ ಏನ್ಮಾಡುತ್ತೆ ನೋಡಿ

ನಿಮ್ಮ ದಿನವು ಹೇಗಿರುತ್ತದೆ ಎಂಬುದನ್ನು ಮುಂಚಿತವಾಗಿ ನಿರೀಕ್ಷಿಸಲು ಆಗಲ್ಲ. ನಿಮ್ಮ ದಾರಿಯಲ್ಲಿ ಬಂದದ್ದನ್ನು ಎದುರಿಸಲು ನೀವು ಸಿದ್ಧವಾಗಿರಬೇಕು. ಅದಕ್ಕೆ ಯಾವಾಗಲು ನಿಮ್ಮ ದಿನ ಚೆನ್ನಾಗಿರಬೇಕು. ಮೇಲೆ ಹೇಳಿದಂತೆ ಮಾಡಿ. ನಿಮ್ಮ ದಿನವನ್ನು ಚೆನ್ನಾಗಿರಿಸಿಕೊಳ್ಳಿ
Published by:Savitha Savitha
First published: