Brown Rice: ನಿಮಗೆ ಗೊತ್ತಿರ್ಲಿ...ಬ್ರೌನ್ ರೈಸ್‍ನಲ್ಲೂ ಇದೆ ಅಡ್ಡ ಪರಿಣಾಮಗಳು!

ಸಾಕಷ್ಟು ಜನರು ಬಿಳಿ ಅಕ್ಕಿಯ ಕಡೆಯಿಂದ ಬ್ರೌನ್ ರೈಸ್ ಕಡೆಗೆ ವಾಲುತ್ತಿದ್ದಾರೆ. ಏಕೆಂದರೆ ಜನರು ಬಿಳಿ ಅಕ್ಕಿಗಿಂತ ಬ್ರೌನ್ ರೈಸ್ ಆರೋಗ್ಯಕ್ಕೆ ಬಹಳ ಉತ್ತಮ ಎಂಬ ಅರಿವು ಜನರಿಗಿದೆ.

Brown Rice

Brown Rice

  • Share this:

ದಕ್ಷಿಣ ಭಾರತದಲ್ಲಿ ಹೆಚ್ಚು ಬಳಕೆಯಾಗುವ ಧಾನ್ಯ ಅಕ್ಕಿ. ಇದು ಪ್ರಪಂಚದ ಮೂರರಲ್ಲೊಂದು ಪಾಲು ಜನರ ಮುಖ್ಯ ಆಹಾರವಾಗಿದೆ. ಪ್ರಾಚೀನ ಕಾಲದ ಬಡ ಜನರು ಅಕ್ಕಿಯನ್ನು ವರ್ಷಕ್ಕೆ ಒಂದೆರಡು ಬಾರಿ, ಅದೂ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುತ್ತಿದ್ದರು. ಸಂಕ್ರಾಂತಿಯ ಹಬ್ಬದಿಂದಲೇ ಅಕ್ಕಿಯ ಬಳಕೆ ಆರಂಭವಾಗುತ್ತದೆ. ಅಕ್ಕಿಯಲ್ಲಿ ಮುಖ್ಯವಾಗಿ ಬೆಳ್ತಕ್ಕಿ, ಕುಸುಬಲಕ್ಕಿ, ನುಚ್ಚಕ್ಕಿ ಎಂದು ಮೂರು ಪ್ರಧಾನ ವಿಭಾಗಗಳಿವೆ. ದೋಸೆಯಿಂದ ಹಿಡಿದು ಕರಿದ ತಿಂಡಿಗಳವರೆಗೂ ಅಕ್ಕಿ ಬಳಕೆ ಕಂಡು ಬರುತ್ತದೆ.ಆದರೆ ಆಧುನಿಕ ಬದುಕಿನಲ್ಲಿ ಅಕ್ಕಿಯ ಆಯ್ಕೆಯಲ್ಲೂ ಬದಲಾವಣೆಗಳಾಗುತ್ತಿವೆ. ಅಕ್ಕಿಯು ಸುಲಭವಾಗಿ ಕೈಗೆಟುಕುವ ಧಾನ್ಯವಾಗಿದೆ ಮತ್ತು ಇದು ಬಿಳಿ, ಕಂದು, ಕಪ್ಪು, ಬಂಬು ರೈಸ್, ಮತ್ತು ಗುಲಾಬಿ ಅಕ್ಕಿಯಂತಹ ಹಲವು ವಿಧಗಳಲ್ಲಿ ಬರುವುದರಿಂದ, ನಮಗೆ ಯಾವುದು ಆರೋಗ್ಯಕರ ಎಂದು ಆಯ್ಕೆ ಮಾಡುವುದು ಕಷ್ಟ.


ಇವೆರಡರ ಪೈಕಿ ಹೆಚ್ಚಾಗಿ ಬಿಳಿ ಅಥವಾ ಕಂದು ಅಕ್ಕಿಯನ್ನು ಬಳಸಲಾಗುತ್ತದೆ. ಇವೆರಡರ ನಡುವೆ ಯಾವುದು ಸುರಕ್ಷಿತ ಎಂದು ಹೇಳುವುದು ಕಷ್ಟ ಮತ್ತು ಅವುಗಳು ಒಂದಕ್ಕಿಂತ ಒಂದು ಭಿನ್ನವಾಗಿಲ್ಲ. ಆದರೆ ಸಾಕಷ್ಟು ಜನರು ಬಿಳಿ ಅಕ್ಕಿಯ ಕಡೆಯಿಂದ ಬ್ರೌನ್ ರೈಸ್ ಕಡೆಗೆ ವಾಲುತ್ತಿದ್ದಾರೆ. ಏಕೆಂದರೆ ಜನರು ಬಿಳಿ ಅಕ್ಕಿಗಿಂತ ಬ್ರೌನ್ ರೈಸ್ ಆರೋಗ್ಯಕ್ಕೆ ಬಹಳ ಉತ್ತಮ ಎಂಬ ಅರಿವು ಜನರಿಗಿದೆ.


ಕಂದು ಅಕ್ಕಿ ಸಂಪೂರ್ಣ ಧಾನ್ಯ, ಇದರಲ್ಲಿನ ಹೊರ ಭಾಗದ ಪದರವನ್ನು ತೆಗೆದಾಗ ಅದು ಬಿಳಿ ಅಕ್ಕಿಯಾಗುತ್ತದೆ. ಬಿಳಿ ಅಕ್ಕಿ ಮಾಡಲು ತೆಗೆದ ಪದರವು ಅಂದರೆ ಹೊಟ್ಟು ಬಹಳ ಪೋಷಕಾಂಶಗಳನ್ನು ಹೊಂದಿರುತ್ತದೆ, ಅದಕ್ಕಾಗಿಯೇ ಕೆಲವರು ಬಿಳಿ ಅಕ್ಕಿಗೆ ಬದಲಾಗಿ ಕಂದು ಅಕ್ಕಿ ತಿನ್ನಲು ಆಯ್ಕೆ ಮಾಡುತ್ತಾರೆ.


ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಮಧುಮೇಹ ಹಾಗೂ ಕೆಲವು ಕ್ಯಾನ್ಸರ್‌ಗಳ ಅಪಾಯ ಕಡಿಮೆ ಮಾಡುವುದು ಇಂತಹ ಹಲವಾರು ಪ್ರಯೋಜನಗಳು ಕಂದು ಅಕ್ಕಿ ಬಳಕೆಯಿಂದ ಇದ್ದರೂ ಇದರಿಂದ ದುಷ್ಪರಿಣಾಮಗಳು ಸಹ ಇದೆ. ಕಂದು ಅಕ್ಕಿಯನ್ನು ತಿನ್ನುವುದರಿಂದ ಉಂಟಾಗುವ ಒಂದು ಪ್ರಮುಖ ಅಡ್ಡಪರಿಣಾಮವೆಂದರೆ ಇದರಲ್ಲಿ ಫೈಟಿಕ್ ಆಸಿಡ್ ಎಂಬ ಪೌಷ್ಟಿಕಾಂಶ ವಿರೋಧಿ ಅಂಶವಿದೆ.


ಕಂದು ಅಕ್ಕಿ ಹೇಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ?


ದಿ ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಫುಡ್ ಸೈನ್ಸಸ್ ಅಂಡ್ ನ್ಯೂಟ್ರಿಷನ್‍ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆಹಾರದಲ್ಲಿರುವ ಫೈಟಿಕ್ ಆಸಿಡ್ ಖನಿಜಾಂಶಗಳನ್ನು ಮುಖ್ಯವಾಗಿ ಸತು, ಕಬ್ಬಿಣ, ಮೆಗ್ನೀಷಿಯಮ್ ಕ್ಯಾಲ್ಸಿಯಂ ಅಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಮಿತಗೊಳಿಸುತ್ತದೆ. ಅಕಸ್ಮಾತ್ ನೀವು ಈ ಎಲ್ಲಾ ಪೋಷಕಾಂಶಗಳಿರುವ ಆಹಾರ ಸೇವಿಸುತ್ತಿದ್ದರೂ ಫೈಟಿಕ್ ಆಸಿಡ್ ಈ ಎಲ್ಲವನ್ನು ನಾಶಪಡಿಸುತ್ತದೆ.


ಗ್ರಾಹಕರು ಎಷ್ಟು ಪೌಷ್ಟಿಕಾಂಶವನ್ನು ಕಂದು ಅಕ್ಕಿಯಿಂದ ಪಡೆಯುತ್ತಿದ್ದಾರೆ ಎಂಬುದನ್ನು ಜೀರ್ಣಸಾಧ್ಯತೆಯ ಆಧಾರದ ಮೇಲೆ ವಿಜ್ಞಾನಿಗಳು ಲೆಕ್ಕ ಹಾಕಿದರು. ಸೇವಿಸುವ ಪೌಷ್ಟಿಕಾಂಶಗಳ ಮಟ್ಟವನ್ನು ವ್ಯಕ್ತಿಯ ಮಲದಲ್ಲಿ ಕಂಡುಬರುವ ಅದೇ ಪೋಷಕಾಂಶದ ಮಟ್ಟಕ್ಕೆ ಹೋಲಿಸುವ ಮೂಲಕ ಈ ಅಂಶವನ್ನು ಕಂಡುಹಿಡಿಯಲಾಗುತ್ತದೆ.


ಫೈಟಿಕ್ ಆಸಿಡ್ ಪ್ರಮಾಣ ಕಡಿಮೆ ಮಾಡುವುದು ಹೇಗೆ?


ಅಕ್ಕಿಯಲ್ಲಿ ಕಂಡುಬರುವ ಫೈಟೇಟ್‍ಗಳು ನಿಮ್ಮ ಖನಿಜಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಕೆಲವು ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ನಂಬಿದ್ದರೂ, ಕಂದು ಅಕ್ಕಿ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳನ್ನು ಕೆಲವು ವಿಧಾನಗಳ ಮೂಲಕ ಕಡಿಮೆ ಮಾಡಬಹುದು ಎಮು ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ತಿಳಿಸಿದೆ.


ಕಂದು ಅಕ್ಕಿತಿನ್ನುವುದನ್ನು ಮುಂದುವರಿಸಲು ಮತ್ತು ಹೆಚ್ಚಿನ ಮಟ್ಟದ ಫೈಟಿಕ್ ಆಮ್ಲ ತಪ್ಪಿಸಲು, ಕೆಲವು ನೈಸರ್ಗಿಕ ಫೈಟೇಟ್‍ಗಳನ್ನು ತೆಗೆದುಹಾಕಲು ಅಡುಗೆ ಮಾಡುವ ಮೊದಲು ಹೆಚ್ಚಿನ ತಾಪಮಾನದಲ್ಲಿ ಕಂದು ಅಕ್ಕಿಯನ್ನು ಒಣಗಿಸಬೇಕು ಎಂದು ಫುಡ್ಸ್ ಜರ್ನಲ್ ಸೂಚಿಸುತ್ತದೆ.


Read Also→ Chocolate, ಗ್ರೀನ್ ಟೀ ಮನುಷ್ಯನ ಆಯಸ್ಸು ಹೆಚ್ಚಿಸುತ್ತದೆ: ಅಧ್ಯಯನದಿಂದ ದೃಢ

ಕಂದು ಅಕ್ಕಿಯನ್ನು ಒಣಗಿಸಿದರೆ ಅದರಲ್ಲಿ ಫೈಟಿಕ್ ಆಮ್ಲ ಮೊದಲಿದ್ದಷ್ಟೂ ಇರುವುದಿಲ್ಲ. ಕಡಿಮೆಯಾಗಿರುತ್ತದೆ. ಇನ್ನು ಆಹಾರದೊಳಗಿನ ಖನಿಜಾಂಶ ಹೀರಿಕೊಳ್ಳುವಿಕೆಯನ್ನು ಈ ಆಮ್ಲ ತಡೆಯುತ್ತದೆ ಎಂದು ಹಾರ್ವರ್ಡ್ ಸೂಚಿಸುತ್ತದೆ.


ಹಾಗಾಗಿ ನೀವು ಊಟಕ್ಕೆ ಕಬ್ಬಿಣದ ಅಂಶವಿರುವ ಏನನ್ನಾದರೂ ನಿಮ್ಮ ಕಂದು ಅನ್ನದೊಂದಿಗೆ ತಿನ್ನುತ್ತಿದ್ದರೆ, ನಿಮ್ಮ ಕಂದು ಅಕ್ಕಿಯು ಆ ನಿರ್ದಿಷ್ಟ ಊಟದಿಂದ ಖನಿಜಾಂಶಗಳನ್ನು ಹೆಚ್ಚು ಮಿತಿಗೊಳಿಸುತ್ತದೆ.


First published: