Skin Care: ಸುಂದರವಾಗಿ ಕಾಣಿಸ್ಬೇಕು ಅಂದ್ರೆ ಪಾರ್ಲರ್‌ಗೆ ಹೋಗ್ಲೇಬೇಕು ಅಂತೇನಿಲ್ಲ! ಮನೆಯಲ್ಲೇ ಮಾಡಿ ಹಣ್ಣುಗಳ ಫೇಸ್ ಪ್ಯಾಕ್

ತ್ವಚೆಯ ಆರೈಕೆ ಮಾಡಲು ನೀವು ಪಾರ್ಲರ್‌ಗೆ ಹೋಗಿ ಸಾಕಷ್ಟು ದುಡ್ಡು ಸುರಿಯುವ ಅಗತ್ಯವಿಲ್ಲ. ಬದಲಿಗೆ ನೀವು ನಿಮ್ಮ ನಿಮ್ಮ ಮನೆಯಲ್ಲಿಯೇ ಕೆಲವು ಹಣ್ಣುಗಳಿಂದ ಸುಲಭವಾಗಿ ಹಣ್ಣಿನ ಫೇಶಿಯಲ್ ಮಾಡಬಹುದು. ವಿಶೇಷವೆಂದರೆ ಫ್ರೂಟ್ ಫೇಶಿಯಲ್ ಮಾಡುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತೀ ಸೀಸನ್ ನಲ್ಲೂ (Every Season) ಸಿಗುವ ವಿವಿಧ ರೀತಿಯ ಹಣ್ಣುಗಳು (Variety Fruits) ಹಲವು ರೀತಿಯಲ್ಲಿ ಆರೋಗ್ಯಕ್ಕೆ (Health) ಸಾಕಷ್ಟು ಪ್ರಯೋಜನ (Benefits) ತಂದು ಕೊಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಆಗಿದೆ. ಆರೋಗ್ಯದ ಜೊತೆಗೆ ಹಣ್ಣುಗಳು (Fruits) ಚರ್ಮದ ಆರೋಗ್ಯಕ್ಕೂ ಸಾಕಷ್ಟು ಸಹಕಾರಿ ಆಗಿದೆ. ವಿವಿಧ ರೀತಿಯ ಆರೋಗ್ಯ ಹೆಚ್ಚಿಸುವ ಹಣ್ಣುಗಳು ತ್ವಚೆಯ ಸೌಂದರ್ಯ ಮತ್ತು ಅಂದವನ್ನು ಕಾಪಾಡಲು ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿರಲಿಕ್ಕಿಲ್ಲ. ಹಣ್ಣುಗಳು ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿದೆ. ಇವುಗಳು ಚರ್ಮವನ್ನು ಯುವ ಮತ್ತು ಸುಂದರವಾಗಿ ದೀರ್ಘಕಾಲದವರೆಗೆ ಪರಿಣಾಮ ಬೀರುತ್ತವೆ.

    ಕೆಲವು ಹಣ್ಣುಗಳಿಂದ ಮನೆಯಲ್ಲಿಯೇ ಮಾಡಿ ಫೇಶೀಯಲ್

    ತ್ವಚೆಯ ಆರೈಕೆ ಮಾಡಲು ನೀವು ಪಾರ್ಲರ್ ಗೆ ಹೋಗಿ ಸಾಕಷ್ಟು ದುಡ್ಡು ಸುರಿಯುವ ಅಗತ್ಯವಿಲ್ಲ. ಬದಲಿಗೆ ನೀವು ನಿಮ್ಮ ನಿಮ್ಮ ಮನೆಯಲ್ಲಿಯೇ ಕೆಲವು ಹಣ್ಣುಗಳಿಂದ ಸುಲಭವಾಗಿ ಹಣ್ಣಿನ ಫೇಶಿಯಲ್ ಮಾಡಬಹುದು. ವಿಶೇಷವೆಂದರೆ ಫ್ರೂಟ್ ಫೇಶಿಯಲ್ ಮಾಡುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ. ಇದು ನಿಮ್ಮ ಚರ್ಮಕ್ಕೆ ಅಗತ್ಯವಾದ ಜೀವಸತ್ವ ಮತ್ತು ಖನಿಜ ನೀಡಿ, ತ್ವಚೆಯ ರಕ್ಷಣೆ ಮಾಡುತ್ತದೆ.

    ಹಣ್ಣುಗಳಿಂದ ಮಾಡುವ ಫೇಶಿಯಲ್ ನಿಮ್ಮ ಚರ್ಮವನ್ನು ಹೆಚ್ಚು ಹೊಳೆಯುವಂತೆ ಮಾಡುತ್ತದೆ. ಇದು ಯಾವುದೇ ಅಡ್ಡ ಪರಿಣಾಮ ಸಹ ಹೊಂದಿಲ್ಲ. ಮನೆಯಲ್ಲಿ ಯಾವ ಯಾವ ಹಣ್ಣುಗಳಿಂದ ಫ್ರೂಟ್ ಫೇಶಿಯಲ್ ಮಾಡಬಹುದು ಎಂಬುದನ್ನು ನಾವು ಇಲ್ಲಿ ನೋಡೋಣ.

    ಇದನ್ನೂ ಓದಿ: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

    ಬಾಳೆಹಣ್ಣು ಫೇಸ್ ಪ್ಯಾಕ್

    ಫೇಶಿಯಲ್ ಮಾಡೋಕೆ ಅಗ್ಗದ ಮತ್ತು ಉತ್ತಮ ಹಣ್ಣು ಅಂದ್ರೆ ಅದು ಬಾಳೆಹಣ್ಣು. ಬಾಳೆಹಣ್ಣಿನಿಂದ ಮುಖಕ್ಕೆ ಹೊಳಪು ಬರುತ್ತದೆ. ಬಾಳೆಹಣ್ಣು ಚರ್ಮವನ್ನು ಒಳ ಮತ್ತು ಹೊರಭಾಗದಿಂದ ಸ್ವಚ್ಛಗೊಳಿಸುತ್ತದೆ. ಇದು ಚರ್ಮದ ಎಫ್ಫೋಲಿಯೇಟಿಂಗ್ ಗುಣ ಹೊಂದಿದೆ. ಇದು ಸತ್ತ ಚರ್ಮವನ್ನು ತೆಗೆದು ಹಾಕುತ್ತದೆ.

    ಬಾಳೆಹಣ್ಣನ್ನು ಫೇಸ್ ಪ್ಯಾಕ್ ಆಗಿ ಬಳಸಿದರೆ ಟ್ಯಾನಿಂಗ್ ಸಮಸ್ಯೆ ದೂರ ಆಗುತ್ತದೆ. ಬಾಳೆಹಣ್ಣಿನಲ್ಲಿ ಮೊಡವೆ ಮತ್ತು ಸುಕ್ಕು ಕಡಿಮೆ ಮಾಡುವ ಆಂಟಿ-ಏಜಿಂಗ್ ಗುಣಲಕ್ಷಣಗಳಿವೆ.

    ಕಿತ್ತಳೆ ಹಣ್ಣಿನ ಫೇಶಿಯಲ್

    ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಕಿತ್ತಳೆಯಲ್ಲಿ ಅನೇಕ ರೀತಿಯ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಕಂಡು ಬರುತ್ತವೆ. ಇದು ಚರ್ಮವನ್ನು ಹಾನಿಕಾರಕ ಬ್ಯಾಕ್ಟೀರಿಯಾದಿಂದ ರಕ್ಷಣೆ ಮಾಡುತ್ತದೆ.

    ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್ ಅಂಶಗಳು ಚರ್ಮವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಣೆ ಮಾಡುತ್ತವೆ. ಕಿತ್ತಳೆ ಹಣ್ಣು ಇದು ನೈಸರ್ಗಿಕ ಬ್ಲೀಚ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಮತ್ತು ಇದು ಚರ್ಮವನ್ನು ಕ್ಲೀನ್ ಮಾಡುತ್ತದೆ. ಕಿತ್ತಳೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.

    ಪಪ್ಪಾಯಿ ಫೇಶಿಯಲ್

    ಪಪ್ಪಾಯಿ ಕೂಡ ಫೇಶಿಯಲ್ ಮತ್ತು ತ್ವಚೆಯ ಸಮಸ್ಯೆ ದೂರ ಮಾಡುವ ಉತ್ತಮ ಹಣ್ಣು. ಪಪ್ಪಾಯಿ ಮುಖಕ್ಕೆ ತುಂಬಾ ಪ್ರಯೋಜನಕಾರಿ. ಇದು ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ ಆಗಿದೆ. ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಮತ್ತು ಹೊಸ ಕೋಶಗಳ ರಚನೆಗೆ ಸಹಾಯ ಮಾಡುತ್ತದೆ.

    ಇದು ಚರ್ಮದ ಬಣ್ಣ ಸುಧಾರಿಸುತ್ತದೆ. ಪಪ್ಪಾಯಿ ಹಚ್ಚುವುದು ಮೊಡವೆಗಳು, ಕಲೆಗಳು ಮತ್ತು ಸುಕ್ಕುಗಳು ಕಡಿಮೆ ಆಗುತ್ತವೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮನ್ನು ರಕ್ಷಿಸುತ್ತವೆ.

    ಸ್ಟ್ರಾಬೆರಿ ಫೇಶಿಯಲ್

    ಸ್ಟ್ರಾಬೆರಿ ತಿನ್ನಲು ಹೆಚ್ಚು ರುಚಿ. ಅದು ಚರ್ಮಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ಸ್ಟ್ರಾಬೆರಿಗಳು ಬಹಳಷ್ಟು ಉತ್ಕರ್ಷಣ ನಿರೋಧಕ ಹೊಂದಿವೆ. ಇದು ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ಮೊಡವೆ ಮತ್ತು ಸುಕ್ಕು ತೆಗೆದು ಹಾಕುತ್ತದೆ. ಚರ್ಮವನ್ನು ಬಿಳಿಯಾಗಿಸಲು ಸ್ಟ್ರಾಬೆರಿ ಬಳಸಬಹುದು.

    ಇದನ್ನೂ ಓದಿ: ವಿಟಮಿನ್ ಬಿ 12 ಕೊರತೆಯಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ?

    ಕಿವಿ ಫೇಶಿಯಲ್

    ಕಿವಿ ಹಣ್ಣನ್ನು ಫೇಶಿಯಲ್‌ಗೆ ಬಳಸಬಹುದು. ಕಿವಿಯಲ್ಲಿ ವಿಟಮಿನ್-ಸಿ, ವಿಟಮಿನ್-ಇ ಮತ್ತು ಖನಿಜಾಂಶಗಳು ಸಮೃದ್ಧವಾಗಿವೆ. ಅವು ದೇಹದಲ್ಲಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಕಿವಿ ಹಣ್ಣು ಚರ್ಮವು ಸ್ವಚ್ಛ, ಮೃದು ಮತ್ತು ತಾರುಣ್ಯದಿಂದಿಡುತ್ತದೆ. ಇದು ಯುವಿ ಕಿರಣಗಳು ಮತ್ತು ಸನ್ ಟ್ಯಾನಿಂಗ್‌ನಿಂದ ರಕ್ಷಿಸುತ್ತದೆ. ಚರ್ಮದ ಮೃದುತ್ವ ಮತ್ತು ಸುಕ್ಕು ತೆಗೆದು ಹಾಕುತ್ತದೆ.
    Published by:renukadariyannavar
    First published: