• Home
 • »
 • News
 • »
 • lifestyle
 • »
 • Sleeping Tips: ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ಈ ವಿಧಾನವನ್ನು ಫಾಲೋ ಮಾಡಿ

Sleeping Tips: ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ? ಹಾಗಾದ್ರೆ ಈ ವಿಧಾನವನ್ನು ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಬ್ಬ ವ್ಯಕ್ತಿಯು ದಿನವಿಡೀ ಎಷ್ಟೇ ದಣಿದಿದ್ದರೂ ರಾತ್ರಿಯಲ್ಲಿ ಆಳವಾದ ನಿದ್ರೆ ಹೊಂದುವುದು ತುಂಬಾ ಮುಖ್ಯ ಆಗಿದೆ. ಅಂದಾಗ ಮಾತ್ರ ಬೆಳಗ್ಗೆ ತುಂಬಾ ಫ್ರೆಶ್ ಆಗಿ ಮರುದಿನವನ್ನು ಆರಂಭಿಸಲು ಸಹಾಯ ಆಗುತ್ತದೆ. ಇದು ವ್ಯಕ್ತಿಯ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ. ಆಳವಾದ ನಿದ್ರೆ ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ.

ಮುಂದೆ ಓದಿ ...
 • Share this:

  ದಿನವಿಡೀ (Daily) ಕೆಲಸ (Work) ಜಂಜಾಟದಲ್ಲಿ ಹೈರಾಣಾಗುವ ಮನುಷ್ಯ (Human) ರಾತ್ರಿ (Night) ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾನೆ. ಕೆಲವೊಮ್ಮೆ ದಿನದ ಓಡಾಟ, ಸ್ಟ್ರೆಸ್ (Stress) ಹೆಚ್ಚಾಗಿದ್ದರೆ, ರಾತ್ರಿ ಅತ್ಯಂತ ಬೇಗ ನಿದ್ದೆ ಬಂದು ಬಿಡುತ್ತದೆ. ಯಾರೆಲ್ಲಾ ಮನೆಯಲ್ಲೇ (Home) ಇರುತ್ತಾರೆ. ಹೆಚ್ಚು ಓಡಾಟ ಮಾಡಲ್ಲ. ಮಧ್ಯಾಹ್ನ ಮಲಗುತ್ತಾರೆಯೋ ಅವರೆಲ್ಲಾ ರಾತ್ರಿ ಬೇಗ ನಿದ್ದೆ ಮಾಡಲು ಸಾಧ್ಯವಾಗಲ್ಲ. ಇನ್ನು ಕೆಲವರು ತಡರಾತ್ರಿಯವರೆಗೆ ಮೊಬೈಲ್, ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಾರೆ. ಹೀಗಾಗಿ ಅವರು ನಿದ್ದೆಯ ಸಮಸ್ಯೆ ಎದುರಿಸುತ್ತಾರೆ. ಮುಖ್ಯವಾಗಿ ವ್ಯಕ್ತಿಯು ಆರೋಗ್ಯವಾಗಿರಲು ಎಂಟು ಗಂಟೆ ಚೆನ್ನಾಗಿ ನಿದ್ದೆ ಮಾಡುವುದು ಮುಖ್ಯವಾಗಿದೆ.


  ರಾತ್ರಿಯಲ್ಲಿ ಆಳವಾದ ನಿದ್ರೆ ಹೊಂದುವುದು


  ಒಬ್ಬ ವ್ಯಕ್ತಿಯು ದಿನವಿಡೀ ಎಷ್ಟೇ ದಣಿದಿದ್ದರೂ ರಾತ್ರಿಯಲ್ಲಿ ಆಳವಾದ ನಿದ್ರೆ ಹೊಂದುವುದು ತುಂಬಾ ಮುಖ್ಯ ಆಗಿದೆ. ಅಂದಾಗ ಮಾತ್ರ ಬೆಳಗ್ಗೆ ತುಂಬಾ ಫ್ರೆಶ್ ಆಗಿ ಮರುದಿನವನ್ನು ಆರಂಭಿಸಲು ಸಹಾಯ ಆಗುತ್ತದೆ. ಇದು ವ್ಯಕ್ತಿಯ ಆರೋಗ್ಯ ಕಾಪಾಡಲು ಸಹಕಾರಿ ಆಗಿದೆ.


  ಆಳವಾದ ನಿದ್ರೆ ದೇಹಕ್ಕೆ ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾಗಿ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯರು ನಿಮಗೆ ಗಾಢವಾದ ನಿದ್ರೆ ಮಾಡಲು ಸಹಕಾರಿ ಆಗುವ ಔಷಧ ನೀಡುತ್ತಾರೆ. ಆಯುರ್ವೇದದಲ್ಲಿ ಅಂತಹ ಒಂದು ಚಿಕಿತ್ಸೆ ಹೊಕ್ಕುಳ ಬಸ್ತಿ ಆಗಿದೆ.


  ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


  ಇದನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಆಯುರ್ವೇದ ತಜ್ಞ ಡಾ.ಶರದ್ ಕುಲಕರ್ಣಿ ಪ್ರಕಾರ, ಪ್ರತಿನಿತ್ಯ ನಿದ್ದೆ ಮಾಡುವಾಗ ಸಾಸಿವೆ ಅಥವಾ ಎಳ್ಳಿನ ಎಣ್ಣೆಯನ್ನು ಹೊಕ್ಕಳ ಮೇಲೆ ಲಘುವಾಗಿ ಹಾಕುವುದು ಗಾಢ ನಿದ್ರೆ ಸೇರಿದಂತೆ ಹಲವು ಪ್ರಯೋಜನ ನೀಡುತ್ತದೆ. ಇವು 2 ರಿಂದ 4 ವಾರಗಳಲ್ಲಿ ಮಾತ್ರ ಗೋಚರಿಸುತ್ತದೆ.


  ಜೀರ್ಣಕ್ರಿಯೆ ಸುಧಾರಿಸುತ್ತದೆ


  ಆರೋಗ್ಯಕರವಾಗಿ ಉಳಿಯಲು ಮತ್ತು ಬೆಳೆಯಲು ಪೋಷಕಾಂಶ ಬೇಕಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ನೀವು ತಿನ್ನುವ ಆಹಾರ ಜೀರ್ಣಿಸಿಕೊಳ್ಳಲು ಸಹಕಾರಿ. ಮತ್ತು ದೇಹದ ಇತರೆ ಭಾಗಗಳಿಗೆ ಕೊಂಡೊಯ್ಯುತ್ತದೆ.


  ಅಂತಹ ವೇಳೆ ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಂಡರೆ ಅಥವಾ ಸರಿಯಾಗಿ ಕೆಲಸ ಮಾಡದೇ ಇದ್ದರೆ ನಂತರ ಸಮಸ್ಯೆ ಇದೆ. ಜೀರ್ಣಕ್ರಿಯೆ ಆರೋಗ್ಯವಾಗಿಡಲು ಮಲಗುವ ಮೊದಲು ಹೊಕ್ಕುಳಕ್ಕೆ ಎಣ್ಣೆ ಹಾಕುವುದು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.


  ಕರುಳಿನ ಆರೋಗ್ಯಕ್ಕೆ ಪ್ರ ಯೋಜನಕಾರಿ


  ಹೊಕ್ಕುಳ ಬಸ್ತಿಯಿಂದ ಕರುಳಿನ ಆರೋಗ್ಯ ಉತ್ತಮ ಆಗಿರುತ್ತದೆ ಎಂದು ತಜ್ಞರು ಹೇಳ್ತಾರೆ. ಒಟ್ಟಾರೆ ಆರೋಗ್ಯಕ್ಕೆ ಕರುಳಿನ ಆರೋಗ್ಯ ಮುಖ್ಯ ಆಗಿದೆ. ಅಂತಹ ವೇಳೆ ಕರುಳಿನ ಅಭ್ಯಾಸದಲ್ಲಿ ಬದಲಾವಣೆ ಕಂಡು ಬಂದರೆ ಅಥವಾ ಕರುಳಿನಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೆ ಅದನ್ನು ಶೀಘ್ರದಲ್ಲೇ ಪರಿಹರಿಸುವ ಅವಶ್ಯಕತೆ ಇದೆ.


  ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ


  7 ರಿಂದ 8 ಗಂಟೆ ನಿದ್ದೆ ಜೊತೆಗೆ ಆಳವಾದ ನಿದ್ರೆ ಆರೋಗ್ಯಕ್ಕೆ ಅತ್ಯಗತ್ಯ. ನಿಮಗೆ ಉತ್ತಮ ನಿದ್ರೆ ಬಾರದೇ ಹೋದರೆ ಪ್ರತಿದಿನ ಹೊಕ್ಕುಳಕ್ಕೆ ಎಣ್ಣೆ ಸುರಿಯುವುದು ನಿಮಗೆ ಸಹಾಯಕ.


  ದೇಹಕ್ಕೆ ವಿಶ್ರಾಂತಿ ನೀಡುತ್ತದೆ


  ಒಂದು ದಿನದ ಚಟುವಟಿಕೆ ನಂತರ ದೇಹವು ಸುಸ್ತಾಗುತ್ತದೆ. ದೇಹದಲ್ಲಿ ಬಿಗಿತ ಮತ್ತು ಬಿಗಿತದ ಸಮಸ್ಯೆಗಳು ಸಹ ತುಂಬಾ ಸಾಮಾನ್ಯ. ಆದರೆ ರಾತ್ರಿ ಮಲಗಿದರೂ ಈ ಸುಸ್ತು ಹೋಗದಿದ್ದರೆ ಮರುದಿನ ಬೆಳಗ್ಗೆಯೂ ಸುಸ್ತು ಆಗುತ್ತದೆ. ರಾತ್ರಿ ಮಲಗುವಾಗ ಹೊಕ್ಕುಳದಲ್ಲಿ ಎಣ್ಣೆ ಹಾಕಲು ತಜ್ಞರು ಶಿಫಾರಸು ಮಾಡುತ್ತಾರೆ.


  ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


  ಚರ್ಮವು ದೀರ್ಘಕಾಲ ಯೌವ್ವನ ನೀಡುತ್ತದೆ


  ಸುಕ್ಕುಗಟ್ಟಿದ ಚರ್ಮ ಯಾರಿಗೂ ಇಷ್ಟವಾಗಲ್ಲ. ಕೆಲವು ಕ್ರಮಗಳಿಂದ ಸ್ವಲ್ಪ ಸಮಯದವರೆಗೆ ಇದನ್ನು ಖಂಡಿತವಾಗಿ ತಪ್ಪಿಸಬಹುದು. ಹೊಕ್ಕುಳ ಬಸ್ತಿ ಅಂತಹ ಒಂದು ಪರಿಹಾರ ಆಗಿದೆ.

  Published by:renukadariyannavar
  First published: