• Home
  • »
  • News
  • »
  • lifestyle
  • »
  • Holiday Plan: ಮಳೆಗಾಲ ಮುಗಿಯೋಕು ಮುನ್ನ ಈ ಸ್ಥಳಗಳಿಗೆ ತಪ್ಪದೇ ಟ್ರಕ್ಕಿಂಗ್ ಹೋಗಿ

Holiday Plan: ಮಳೆಗಾಲ ಮುಗಿಯೋಕು ಮುನ್ನ ಈ ಸ್ಥಳಗಳಿಗೆ ತಪ್ಪದೇ ಟ್ರಕ್ಕಿಂಗ್ ಹೋಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Trucking Place For This Season: ಇನ್ನು ಮಳೆಗಾಲ(rainy Season) ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಬಹುತೇಕ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಈ ಮಳೆ ನಿಲ್ಲುವ ಮೊದಲು ಈ ಕೆಲ ಪ್ರದೇಶಗಳಿಗೆ ಟ್ರೆಕ್ಕಿಂಗ್(Trucking) ಹೋಗಿ ಬರುವುದು ನಿಜಕ್ಕೂ ನಿಮಗೆ ಆನಂದವನ್ನು ನೀಡುತ್ತದೆ.

  • Share this:

ಕಳೆದ ವರ್ಷದಲ್ಲಿ ಕೊರೊನಾ(Corona) ಕಾರಣದಿಂದ ಲಾಕ್​ಡೌನ್(Lockdown) ಮಾಡಲಾಗಿತ್ತು. ಅಲ್ಲದೇ ಪ್ರವಾಸಿ ಸ್ಥಳಗಳಿಗೆ(Tourist Place) ನಿರ್ಬಂಧ ವಿಧಿಸಲಾಗಿತ್ತು. ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ, ಟ್ರಿಪ್(Trip) ಹೋಗುವ ಬಗ್ಗೆ ಕನಸು ಕಾಣುವ ಸ್ಥಿತಿ ಬಂದಿತ್ತು. ಆದರೆ ಇದೀಗ ನೀವು ಹಲವಾರು ಸ್ಥಳಗಳಿಗೆ ಭೇಟಿ ನೀಡಬಹುದು. ಇನ್ನು ಮಳೆಗಾಲ(rainy Season) ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಬಹುತೇಕ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಈ ಮಳೆ ನಿಲ್ಲುವ ಮೊದಲು ಈ ಕೆಲ ಪ್ರದೇಶಗಳಿಗೆ ಟ್ರೆಕ್ಕಿಂಗ್(Trucking) ಹೋಗಿ ಬರುವುದು ನಿಜಕ್ಕೂ ನಿಮಗೆ ಆನಂದವನ್ನು ನೀಡುತ್ತದೆ.


ಹಾಗಾದ್ರೆ ಈ ಮಳೆ ನಿಲ್ಲುವ ಮುನ್ನ ಎಲ್ಲೆಲ್ಲಿ ಟ್ರಕ್ಕಿಂಗ್ ಹೋಗಬಹುದು ಇಲ್ಲಿದೆ 


 ಗಂಡಿಕೋಟಾ ಆಂಧ್ರಪ್ರದೇಶ


ಗಂಡಿಕೋಟಾ ಆಂಧ್ರಪ್ರದೇಶದ ಒಂದು ಹಳ್ಳಿಯಾಗಿದ್ದು, ಅಲ್ಲಿ ನೀವು ಭಾರತದ ಸ್ವಂತ ಗ್ರ್ಯಾಂಡ್ ಕ್ಯಾನ್ಯನ್ ಅನ್ನು ನೋಡಬಹುದು. ಮಳೆಗಾಲದಲ್ಲಿ ವಾಸ್ತವವಾಗಿ ಇಲ್ಲಿ ಟ್ರೆಕ್ಕಿಂಗ್‌ಗೆ ಹೋಗಲು ಉತ್ತಮ ಸಮಯವಾಗಿದೆ, ಏಕೆಂದರೆ ಬೇಸಿಗೆಯಲ್ಲಿ ಶಾಖವು ನಿಮಗೆ ಟ್ರಕ್ಕಿಂಗ್ ಅನ್ನು ಆನಂದಿಸಲು ಬಿಡುವುದಿಲ್ಲ. ನೀವು ಗುಹೆಗಳನ್ನು ನೋಡಿ ಆನಂದಿಸುತ್ತಿದ್ದರೆ ಈ ಟ್ರಕ್ಕಿಂಗ್ ವಿಶೇಷವಾಗಿ ಉತ್ತಮವಾಗಿರುತ್ತದೆ.


ಏಕೆಂದರೆ ಇದು ನಿಮಗೆ ಬೆಲಮ್ ಗುಹೆಯ ಒಳಭಾಗವನ್ನು ನೋಡಿ ಆನಂದಿಸಲು ಅವಕಾಶವನ್ನು ನೀಡುತ್ತದೆ. ಇದು USA ಯ ಅರಿಜೋನಾದ ಆಂಟೆಲೋಪ್ ಕಣಿವೆಗಳನ್ನು ಅದ್ಭುತವಾಗಿ ಹೋಲುತ್ತದೆ ಎನ್ನಲಾಗುತ್ತದೆ. ಅನುಭವಿ ಮಾರ್ಗದರ್ಶಕರ ಮಾರ್ಗದರ್ಶನದೊಂದಿಗೆ ಗಂಡಿಕೋಟಾ  ಟ್ರಕ್ಕಿಂಗ್ ಮಾಡುವುದು ಉತ್ತಮ.


ಇದನ್ನೂ ಓದಿ: ಈ ಜ್ಯೂಸ್​ಗಳನ್ನು ಕುಡಿಯೋದ್ರಿಂದ ಒಂದು ವಾರದಲ್ಲಿ ತೂಕ ಇಳಿಸಬಹುದು


ಅಂದರ್ಬನ್ ಮಹಾರಾಷ್ಟ್ರ


ಮಹಾರಾಷ್ಟ್ರದ ಡಾರ್ಕ್ ಫಾರೆಸ್ಟ್' ಎಂದೂ ಕರೆಯಲ್ಪಡುವ ಅಂದರ್ಬನ್,  ಮಳೆಯ ಅವಧಿಯಲ್ಲಿ ಸುಂದರವಾದ ಪಶ್ಚಿಮ ಘಟ್ಟಗಳು ಹಚ್ಚ ಹಸಿರಿನ ಭೂಮಿ ನಿಮಗೆ ಟ್ರಕ್ಕಿಂಗ್ ಎಂಜಾಯ್​ ಮಾಡಲು ಒಂದು ಕಾರಣವಾಗುತ್ತದೆ.  ಪುಣೆಯಿಂದ ಸರಿಸುಮಾರು 16 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ಪಿಂಪ್ರಿ ಪ್ರದೇಶದಲ್ಲಿ ನೆಲೆಗೊಂಡಿರುವ ಅಂಧರಬನ್ ಟ್ರಕ್ಕಿಂಗ್ ಪ್ರದೇಶ ಪ್ರತಿ ಟ್ರಕ್ಕಿಂಗ್ ಪ್ರಿಯರಿಗೆ ಚಿಲಿಪಿಲಿ ಹಕ್ಕಿಗಳು ಮತ್ತು ಧುಮ್ಮಿಕ್ಕುವ ಜಲಪಾತಗಳ ಶಬ್ದಗಳಿಂದ ಸುತ್ತುವರಿದ ಆಳವಾದ ಕಾಡಿನಲ್ಲಿ ಅಲೆದಾಡುವ ಆನಂದವನ್ನು ಅನುಭವಿಸಲು ಅವಕಾಶ ನೀಡುತ್ತದೆ.


ಮಳೆಯ ಸಮಯದಲ್ಲಿ, ಈ ಟ್ರಕ್ಕಿಂಗ್ ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ ಎನ್ನಲಾಗುತ್ತದೆ. ಮಂಜಿನಿಂದ ಆವೃತವಾಗಿರುವ ಕಾಡುಗಳ ಮೂಲಕ ನಡೆಯಲು ಮತ್ತು ಕುಂಡಲಿಕಾ ಕಣಿವೆ, ಭಿರಾ ಅಣೆಕಟ್ಟು ಮತ್ತು ತಮ್ಹಿನಿ ಘಾಟ್‌ನ ವಿವಿಧ ಪರ್ವತ ಶ್ರೇಣಿಗಳ ರಮಣೀಯ ದೃಶ್ಯಗಳನ್ನು ಸವಿಯುವ ಮಜಾವೇ ಬೇರೆ. ಕಣಿವೆಯ ಅದ್ಭುತ ನೋಟಗಳ ಹೊರತಾಗಿ, ನಿಮಗೆ ಸುಂದರವಾದ ಸಸ್ಯ ಮತ್ತು ಪ್ರಾಣಿಗಳು, ಹಲವಾರು ಜಾತಿಯ ಪಕ್ಷಿಗಳು ಮತ್ತು ಬೆರಗುಗೊಳಿಸುವ ನೈಸರ್ಗಿಕ ಅನುಭವ ಸಿಗುತ್ತದೆ.


ಮಡಿಕೇರಿ. ಕರ್ನಾಟಕ


ನೀವು ಟ್ರಕ್ಕಿಂಗ್ ಮಾಡುವ ಯೋಚನೆಯಲ್ಲಿದ್ರೆ ನಮ್ಮ ಮಡಿಕೇರಿ ಬೆಸ್ಟ್​ ಎನ್ನಬಹುದು. ಮಡಿಕೇರಿಯು ಪರ್ವತ ಶಿಖರಗಳು ಮತ್ತು ಹಚ್ಚ ಹಸಿರನ್ನು ಒಳಗೊಂಡಿರುವ ಅದ್ಭುತ  ಅನುಭವವನ್ನು ನೀಡುತ್ತದೆ. ಇಲ್ಲಿ ಸುಲಭವಾದ ಟ್ರಕ್ಕಿಂಗ್ ಮಾರ್ಗಗಳೂ ಇದ್ದು ಜೊತೆಗೆ ಅತ್ಯಂತ ಕಠಿಣ ಅಥವಾ ಸಾಹಸಮಯ ರಸ್ತೆಗಳು ಸಹ ಇದೆ. ತಡಿಯಂಡಮೋಲ್ ಮತ್ತು ಪುಷ್ಪಗಿರಿ ಕ್ರಮವಾಗಿ 5,729 ಅಡಿ ಮತ್ತು 5,626 ಅಡಿ ಎತ್ತರವಿದ್ದು, ಮಡಿಕೇರಿಯಲ್ಲಿರುವ ಎಲ್ಲಕ್ಕಿಂತ ಎತ್ತರದ ಶಿಖರಗಳಾಗಿವೆ.


ಕೋಟಗಿರಿ ತಮಿಳುನಾಡು


ಕೋಟಗಿರಿಯು ನೀಲಗಿರಿ ಬೆಟ್ಟಗಳಲ್ಲಿರುವ ಗಿರಿಧಾಮಗಳಲ್ಲಿ ಒಂದಾಗಿದೆ. ಮಳೆಗಾಲದ ಸಮಯದಲ್ಲಿ, ಈ ಪ್ರದೇಶವು ಹಸಿರಿನಿಂದ ಕೂಡಿರುತ್ತದೆ. ನೀಲಗಿರಿಯಲ್ಲಿನ ಟ್ರೆಕ್ಕಿಂಗ್ ನಿಮಗೆ ಆಹ್ಲಾದಕರ ವಾತಾವರಣವನ್ನು ನೀಡುತ್ತದೆ. ನೀವು ಹೋಗುತ್ತಿರುವಾಗ ಜಲಪಾತಗಳು ಮತ್ತು ಸರೋವರಗಳು ಸುಂದರವಾಗಿ ಕಾಣುತ್ತದೆ. ಇನ್ನು ಇಲ್ಲಿ ಟ್ರಕ್ಕಿಂಗ್ ಮಾಡುವುದಾದರೆ ಬೆಳಗ್ಗೆ ಆರಂಭಿಸಿ. ಯಾಕೆಂದರೆ ಹೆಚ್ಚು ದೂರದ ಪ್ರಯಾಣವಾಗಿರುತ್ತದೆ.


 ಚಿಟ್ಯಾಲ್ ತೆಲಂಗಾಣ


ಇದನ್ನೂ ಓದಿ: ಫ್ರೆಂಡ್​ ಮದುವೆ ಫಿಕ್ಸ್ ಆಯ್ತಾ? ಹಾಗಾದ್ರೆ Bachelorette Party ಮಾಡಲು ಈ ಸ್ಥಳಗಳಿಗೆ ಟ್ರಿಪ್ ಹೋಗಿ


ಹೈದರಾಬಾದ್ ನಗರದಿಂದ ಸರಿಸುಮಾರು 90 ಕಿಲೋಮೀಟರ್ ದೂರದಲ್ಲಿರುವ ಚಿಟ್ಯಾಲ್ ಬೆಟ್ಟಗಳು ವಾರಾಂತ್ಯದಲ್ಲಿ ಟ್ರಕ್ಕಿಂಗ್ ಮಾಡಲು ಉತ್ತಮ ಎನ್ನಲಾಗುತ್ತದೆ. ಇಲ್ಲಿನ ವ್ಯಾಪ್ತಿಯು ವಿಸ್ತಾರವಾಗಿದೆ ಮತ್ತು ಈ ಟ್ರಕ್ಕಿಂಗ್ ಪೂರ್ಣ ಮಾಡಲು ಎರಡರಿಂದ ಮೂರು ದಿನಗಳವರೆಗೆ ಬೇಕಾಗುತ್ತದೆ. ಅಲ್ಲಿನ ಸುಂದರ ಪ್ರಕೃತಿಯು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

Published by:Sandhya M
First published: