HOME » NEWS » Lifestyle » YOU CAN LOWER YOUR RISK OF TYPE 2 DIABETES BY EATING TWO FRUIT PER DAY STG AE

Health Tips: ದಿನಕ್ಕೆರಡು ಹಣ್ಣು ಸೇವಿಸಿ ಸಕ್ಕರೆ ಕಾಯಿಲೆಯನ್ನು ದೂರವಿಡಿ..!

ದಿನಕ್ಕೆ ಎರಡು ಬಾರಿ ಹಣ್ಣುಗಳನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್‌ನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

Trending Desk
Updated:June 17, 2021, 3:15 PM IST
Health Tips: ದಿನಕ್ಕೆರಡು ಹಣ್ಣು ಸೇವಿಸಿ ಸಕ್ಕರೆ ಕಾಯಿಲೆಯನ್ನು ದೂರವಿಡಿ..!
ಪ್ರಾತಿನಿಧಿಕ ಚಿತ್ರ
  • Share this:
ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗವು ತೀವ್ರತರವಾಗಿ ಎಲ್ಲಾ ವಯೋಮಾನದವರಲ್ಲೂ ಕಾಣಿಸಿಕೊಳ್ಳುತ್ತಿದ್ದು, ಔಷಧವೇ ಇಲ್ಲದ ರೋಗ ಎಂಬ ಖ್ಯಾತಿಗೆ ಪಾತ್ರವಾಗಿದೆ. ಡಯಾಬಿಟಿಸ್ ಹೆಸರೇ ಹೇಳುವಂತೆ ಡೈ ಇನ್ ಬಿಟ್ಸ್ ಅಂದರೆ ಇಂಚು ಇಂಚಾಗಿ ಸಾಯುವುದು ಎಂಬುದು ವೈದ್ಯ ಲೋಕದ ಭಾಷೆಯಾಗಿದೆ. ಇಂದಿನ ಒತ್ತಡದ ಬದುಕು ಮತ್ತು ಶಿಸ್ತಿಲ್ಲದ ಜೀವನ ಶೈಲಿಯೇ ಮಧುಮೇಹಕ್ಕೆ ಮುಖ್ಯ ಕಾರಣ ಎಂದೆನಿಸಿದೆ. ಮೊದಲೆಲ್ಲ ಬರಿ ಸಿಹಿ ತಿನ್ನುವವರಿಗೆ ಮಾತ್ರವೇ ಈ ಕಾಯಿಲೆ ಇಲ್ಲವೇ ಶ್ರೀಮಂತರಿಗೆ ಬರುವ ಮಾತ್ರ ಕಾಯಿಲೆ ಎಂದೆಲ್ಲ ಕರೆಯಿಸಿಕೊಳ್ಳುತ್ತಿದ್ದ ಈ ಕಾಯಿಲೆಗೆ ಹಾಲುಗಲ್ಲದ ಹಸುಳೆ ಕೂಡ ಹೈರಾಣಾಗುತ್ತದೆ ಎಂಬುದು ವೈದ್ಯಲೋಕಕ್ಕೆ ಸವಾಲೊಡ್ಡಿದೆ.

ಇಂದಿನ ಲೇಖನದಲ್ಲಿ ನಾವು ಅತ್ಯಂತ ಮಹತ್ವವಾಗಿರುವ ಅಂಶವೊಂದನ್ನು ತಿಳಿಸಿಕೊಡಲಾಗುತ್ತಿದೆ. ಈ ನಿಯಮವನ್ನು ಜೀವನದುದ್ದಕ್ಕೂ ನೀವು ಪಾಲಿಸುವ ಮೂಲಕ ಸಕ್ಕರೆಕಾಯಿಲೆ ನಿಮ್ಮ ಹತ್ತಿರ ಕೂಡ ಸುಳಿಯದಂತೆ ಮಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ ದಿನಕ್ಕೆ ಎರಡು ಬಾರಿ ಹಣ್ಣುಗಳನ್ನು ಸೇವಿಸುವುದಾಗಿದೆ. ಹೌದು, ದಿನಕ್ಕೆ ಎರಡು ಬಾರಿ ಹಣ್ಣುಗಳನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್‌ನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಹೆಚ್ಚು ಹಣ್ಣು ತಿನ್ನುವ ಜನರಲ್ಲಿ ಹೆಚ್ಚು ಇನ್ಸುಲಿನ್ ಉತ್ಪಾದಿಸದೇ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಬಹುದು. ಅದರಲ್ಲೂ ಹಣ್ಣಿನ ರಸ ಸೇವಿಸುವುದಕ್ಕಿಂತ ಸಂಪೂರ್ಣ ಹಣ್ಣನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಎಡಿತ್ ಕೊವಾನ್ ಯೂನಿವರ್ಸಿಟಿಯಲ್ಲಿರುವ ಸಂಶೋಧಕರು ದಿನದಲ್ಲಿ ಎರಡು ಬಾರಿ ಹಣ್ಣು ಸೇವಿಸುವವರು ಟೈಪ್ 2 ಮಧುಮೇಹಕ್ಕೆ ಒಳಗಾಗುವ ಅವಕಾಶ ತುಂಬಾ ಕಡಿಮೆ ಅಂದರೆ ಶೇಕಡಾ 36 ರಷ್ಟಿದೆ ಎಂದು ತಿಳಿಸಿದ್ದಾರೆ.

ಹಣ್ಣಿನ ಸೇವನೆ ಮತ್ತು ಇನ್ಸುಲಿನ್ ಸಂವೇದನೆಗಳ ಗುರುತುಗಳ ನಡುವಿನ ಜತೆಗಾರಿಕೆಯನ್ನು ನಾವು ಅನ್ವೇಷಿಸಿದ್ದೇವೆ. ಹೆಚ್ಚು ಹಣ್ಣುಗಳನ್ನು ಸೇವಿಸುವ ಜನರು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಕಡಿಮೆ ಇನ್ಸುಲಿನ್ ಉತ್ಪಾದಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ಇಸಿಯು ಇನ್ಸಿಟ್ಯೂಟ್​ ಫಾರ್ ಸಂಶೋಧಕರಾದ ಪಿಎಚ್‌ಡಿ ನಿಕೋಲಾ ಬೊಂಡೊನ್ನೊ ನ್ಯೂಟ್ರಿಷನ್ ರಿಸರ್ಚ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ಸುಲಿನ್‌ನ ಹೆಚ್ಚಿನ ಪ್ರಮಾಣದ ಪರಿಚಲನೆಯು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ಇದು ಮಧುಮೇಹಕ್ಕೆ ಮಾತ್ರ ಕಾರಣವಾಗುವುದಲ್ಲದೆ ಇದರಿಂದ ಅಧಿಕ ರಕ್ತದೊತ್ತಡ, ಬೊಜ್ಜು, ಹೃದಯ ಕಾಯಿಲೆ ಬರುವ ಅಪಾಯವಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ತಜ್ಞರ ಅಭಿಪ್ರಾಯ

ಸಂಶೋಧನೆಗಳು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಯ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಮತ್ತು ನಿರ್ವಹಿಸುವಲ್ಲಿ ಪೋಷಣೆ ಮತ್ತು ಆಹಾರದ ಶಕ್ತಿಯನ್ನು ಬಲಪಡಿಸುತ್ತದೆ. ಮಧುಮೇಹ ಇರುವವರು ಹಣ್ಣುಗಳನ್ನು ಸೇವಿಸಬಾರದು ಎಂದು ಅನೇಕ ಜನರು ತಪ್ಪಾಗಿ ನಂಬುತ್ತಾರೆ. ಇದರಿಂದ ಫಲಿತಾಂಶಗಳು ದೊರೆಯುವುದಿಲ್ಲ. ಮಧುಮೇಹದ ಅಪಾಯವನ್ನು ಹಣ್ಣುಗಳು ತಗ್ಗಿಸುತ್ತವೆ. ಅದರಲ್ಲೂ ಡ್ರೈ ಫ್ರೂಟ್ಸ್‌ ಮತ್ತು ಹಣ್ಣಿನ ರಸ ಸಕ್ಕರೆಯ ಹೆಚ್ಚು ಕೇಂದ್ರಿತ ಭಾಗಗಳು ಎಂದೆನಿಸಿವೆ. ಆದರೆ, ತಿನ್ನುವ ಪ್ರಮಾಣವನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ವ್ಯಾಯಾಮವು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ ಹಣ್ಣುಗಳು ಇನ್ಸುಲಿನ್ ಚಟುವಟಿಕೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದ್ದಾರೆ. ನೀವು ತೆಗೆದುಕೊಳ್ಳುವ ಆಹಾರದಲ್ಲಿ ಧಾನ್ಯಗಳು ಮತ್ತು ಹಣ್ಣು, ತರಕಾರಿಗಳಿಗೆ ಹೆಚ್ಚಿನ ಒತ್ತು ನೀಡಿ. ಮೀನು ಮತ್ತು ಡೈರಿ ಆಹಾರಗಳನ್ನೊಳಗೊಂಡ ಆರೋಗ್ಯಕರ ಆಹಾರಕ್ಕೆ ಒತ್ತು ನೀಡಿ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Anitha E
First published: June 17, 2021, 3:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories