ಪೋಸ್ಟ್​​​ ಆಫೀಸ್​​ನಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು?

Passport- post office: ನಿಮ್ಮ ಬೆರಳಚ್ಚು ಹಾಗೂ ಕಣ್ಣಿನ ರೆಟಿನಾ ಸ್ಕ್ಯಾನ್ ಅನ್ನು  ಮಾಡುತ್ತಾರೆ. ದಾಖಲೆಗಳ ಪರಿಶೀಲನೆ ಒಮ್ಮೆ ಪೂರ್ಣಗೊಂಡ ಬಳಿಕ ನಿಮ್ಮ ಪಾಸ್‌ಪೋರ್ಟ್ ಅನ್ನು ನಿಮ್ಮ ಮನೆಗೆ 15 ದಿನಗಳ ಒಳಗಾಗಿ ತಲುಪಿಸಲಾಗುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ವಿದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್ ಕಡ್ಡಾಯವಾಗಿರುವುದರಿಂದ ವಿದೇಶಾಂಗ ಸಚಿವಾಲಯ (MEA) ದೇಶಾದ್ಯಂತ ವಿವಿಧ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪಾಸ್‌ಪೋರ್ಟ್ ಸೇವೆಯನ್ನು ನಡೆಸುತ್ತಿದೆ. ಪಾಸ್‌ಪೋರ್ಟ್‌ಗಾಗಿ ನೋಂದಾಯಿಸಲು ಅಥವಾ ಅರ್ಜಿ ಸಲ್ಲಿಸುವವರಿಗಾಗಿ ಶುಭ ಸುದ್ದಿಯೊಂದಿದ್ದು ಇನ್ನು ಮುಂದೆ ಪೋಸ್ಟ್ ಆಫೀಸ್‌ಗಳಲ್ಲಿ ಕೂಡ ನೀವು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ಅಂಚೆ ಇಲಾಖೆಯು ಹೊಸದಾಗಿ ಪಾಸ್‌ಪೋರ್ಟ್ ಅಪ್ಲೈ ಮಾಡುವವರ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನಿಮ್ಮ ಸಮೀಪದ ಅಂಚೆ ಕಚೇರಿಯಲ್ಲಿ ನೀವಿನ್ನು ಪಾಸ್‌ಪೋರ್ಟ್ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ.


ಅರ್ಜಿದಾರರು ಹತ್ತಿರದ ಅಂಚೆ ಕಚೇರಿಯ ಕಾಮನ್ ಸರ್ವೀಸ್ ಸೆಂಟರ್ (ಸಾಮಾನ್ಯ ಸೇವಾ ಕೇಂದ್ರ) ಅಥವಾ ಸಿಎಸ್‌ಎಸ್ (CSS) ಕೌಂಟರ್‌ಗಳಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.


ಭಾರತೀಯ ಅಂಚೆ ಇಲಾಖೆ ಟ್ವೀಟ್:


ಭಾರತೀಯ ಅಂಚೆ ಇಲಾಖೆಯು ಯು ಟ್ವೀಟ್ ಮಾಡುವ ಮೂಲಕ ಈ ಘೋಷಣೆಯನ್ನು ಅಧಿಕೃತಗೊಳಿಸಿದ್ದು ನಿಮ್ಮ ಹತ್ತಿರದ ಅಂಚೆ ಕಚೇರಿಯ ಸಿಎಸ್‌ಸಿ ಕೌಂಟರ್‌ನಲ್ಲಿ ಪಾಸ್‌ಪೋರ್ಟ್‌ಗಾಗಿ ನೋಂದಾಯಿಸುವುದು ಮತ್ತು ಅರ್ಜಿ ಸಲ್ಲಿಸುವುದು ಸುಲಭವಾದ ಪ್ರಕ್ರಿಯೆಯಾಗಿದೆ, ಇದನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ಎಂದು ತಿಳಿಸಿದೆ.


ಈಗಾಗಲೇ ಹೆಚ್ಚಿನ ಅಂಚೆ ಕಚೇರಿಗಳಲ್ಲಿ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಸೇವಾ ಸೆಂಟರ್ ಅಥವಾ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಹತ್ತಿರದ ಅಂಚೆ ಕಚೇರಿಯಲ್ಲಿ ಅನುಮತಿ ನೀಡಿರುವುದರಿಂದ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಬಳಕೆ ಗರಿಷ್ಠಗೊಳ್ಳಲಿದೆ.


ಇದನ್ನೂ ಓದಿ: ನಿಮ್ಮ ಹಳೆಯ ಫೋನ್‌ ಎಸೆಯಬೇಡಿ; ಅದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ?

passportindia.gov.in ಪ್ರಕಾರ “ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಪಾಸ್‌ಪೋರ್ಟ್ ಕಚೇರಿಗಳ ಪ್ರಮುಖ ಶಕ್ತಿಯಾಗಿದ್ದು ಪಾಸ್‌ಪೋರ್ಟ್ ವಿತರಣೆಗೆ ಸಂಬಂಧಿಸಿದಂತೆ ಪ್ರಮುಖ ಸೇವೆಗಳನ್ನು ಒದಗಿಸುತ್ತವೆ. ಈ ಕೇಂದ್ರಗಳು ಟೋಕನ್ ವಿತರಣೆಯಿಂದ ಹಿಡಿದು ಪಾಸ್‌ಪೋರ್ಟ್ ಸಂಚಿಕೆ / ಮರು-ವಿತರಣೆ ಮತ್ತು ಇತರ ಸೇವೆಗಳಿಗೆ ಅರ್ಜಿ ನೀಡುವವರೆಗಿನ ಕಾರ್ಯಗಳನ್ನು ಒಳಗೊಂಡಿರುತ್ತವೆ". ಎಂದು ತಿಳಿಸಿದೆ.


ಪಾಸ್‌ಪೋರ್ಟ್‌ಗಾಗಿ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?


ಈ ಹೊಸ ವ್ಯವಸ್ಥೆಯ ಪ್ರಕಾರ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸಲ್ಲಿಸಿದ ನಂತರ ಅಪ್ಲಿಕೇಶನ್‌ನ ಪ್ರಿಂಟ್ ರಶೀದಿ ಮತ್ತು ಮೂಲ ದಾಖಲೆಗಳೊಂದಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ದೈಹಿಕವಾಗಿ ಹಾಜರಾಗುವುದು ಕಡ್ಡಾಯವಾಗಿದೆ ಎಂದು passportindia.gov.in ತಿಳಿಸಿದೆ.


ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್ ಮೂಲಕ ನೋಂದಾಯಿಸಿದ ಮತ್ತು ಅರ್ಜಿ ಸಲ್ಲಿಸಿದ ಅರ್ಜಿದಾರರು ಇದೀಗ ತಮ್ಮ ಹತ್ತಿರದ ಅಂಚೆ ಕಚೇರಿಗೆ ಅಪ್ಲಿಕೇಶನ್‌ನ ಪ್ರಿಂಟ್ ರಶೀದಿ ಮತ್ತು ಮೂಲ ಡಾಕ್ಯುಮೆಂಟ್‌ಗಳನ್ನು ತೆಗೆದುಕೊಂಡು ಹೋಗಬಹುದು. ಪಾಸ್‌ಪೋರ್ಟ್ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಅನ್ನು ಸಲ್ಲಿಸಲು  ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.


ಪಾಸ್‌ಪೋರ್ಟ್‌ಗಾಗಿ ಅಗತ್ಯವಿರುವ ದಾಖಲೆಗಳು


ನಿಮ್ಮ ಜನನ ಪ್ರಮಾಣಪತ್ರ, ಹೈಸ್ಕೂಲ್ ಅಂಕಪಟ್ಟಿ, ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಇಲ್ಲವೇ ರೇಷನ್ ಕಾರ್ಡ್ ಅನ್ನು ಪರಿಶೀಲನೆ ಉದ್ದೇಶಕ್ಕಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಪ್ರತ್ಯೇಕವಾಗಿ ನೀವು ನೋಟರಿಯಿಂದ ಅಫಿದಾವಿತ್ ಅನ್ನು ಕೂಡ ಸಲ್ಲಿಸಬೇಕಾಗುತ್ತದೆ. ಡಾಕ್ಯುಮೆಂಟೇಶನ್ ಪ್ರಕ್ರಿಯೆಯ ಸಮಯದಲ್ಲಿ ಅಧಿಕಾರಿಗಳು ನಿಮ್ಮ ಬೆರಳಚ್ಚು ಹಾಗೂ ಕಣ್ಣಿನ ರೆಟಿನಾ ಸ್ಕ್ಯಾನ್ ಅನ್ನು  ಮಾಡುತ್ತಾರೆ. ದಾಖಲೆಗಳ ಪರಿಶೀಲನೆ ಒಮ್ಮೆ ಪೂರ್ಣಗೊಂಡ ಬಳಿಕ ನಿಮ್ಮ ಪಾಸ್‌ಪೋರ್ಟ್ ಅನ್ನು ನಿಮ್ಮ ಮನೆಗೆ 15 ದಿನಗಳ ಒಳಗಾಗಿ ತಲುಪಿಸಲಾಗುತ್ತದೆ.

Published by:Kavya V
First published: