• Home
  • »
  • News
  • »
  • lifestyle
  • »
  • Kantara House on Rent: ಕಾಂತಾರ ಸಿನಿಮಾದ ಧಣಿಗಳ ಮನೆಯಲ್ಲಿ ನೀವೂ ಉಳ್ಕೋಬೋದು, ಬಾಡಿಗೆ ಎಷ್ಟು? ಬುಕಿಂಗ್ ಹೇಗೆ? ಫುಲ್ ಡೀಟೆಲ್ಸ್

Kantara House on Rent: ಕಾಂತಾರ ಸಿನಿಮಾದ ಧಣಿಗಳ ಮನೆಯಲ್ಲಿ ನೀವೂ ಉಳ್ಕೋಬೋದು, ಬಾಡಿಗೆ ಎಷ್ಟು? ಬುಕಿಂಗ್ ಹೇಗೆ? ಫುಲ್ ಡೀಟೆಲ್ಸ್

ಧಣಿಗಳ ಮನೆ

ಧಣಿಗಳ ಮನೆ

Kantara House on Rent: ಕಡಲ ತಟದಲ್ಲಿ ನಿಮ್ಮ ಒತ್ತಡದ ಜೀವನದಿಂದ ಮುಕ್ತಿ ಪಡೆಯಲು ಈ ಸ್ಥಳ ಬೆಸ್ಟ್ ಎನ್ನಬಹುದು.  ಈ ರೆಸಾರ್ಟ್ ಹೆಸರು ಸಾಯಿ ರಾಧಾ ಹೆರಿಟೇಜ್​ ಎಂದಾಗಿದ್ದು, ಸಾಯಿ ರಾಧಾ ಗ್ರೂಪ್​ನ ಒಂದು ಭಾಗವಾಗಿದೆ.

  • Share this:

ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ (Kantara) ಸಿನಿಮಾ (Cinema) ಸೂಪರ್ ಹಿಟ್ ಆಗಿದೆ. ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿರುವುದರ ಜೊತೆಗೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳ್ ಎಬ್ಬಿಸಿದೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು (Telugu), ಮಲಯಾಳಂ (Malayalam), ಹಿಂದಿ (Hindi) ಭಾಷೆಗಳಲ್ಲಿ ಸಹ ಈ ಸಿನಿಮಾ (Film) ಈಗ ಬಿಡುಗಡೆಯಾಗಿದ್ದು, ಎಲ್ಲೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್​, ಟಾಲಿವುಡ್​ ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ. ಈ ಸಿನಿಮಾ ಕತೆ, ಸಿನಿಮಾಟೋಗ್ರಾಫಿ, ಕಾಮಿಡಿ , ಹಾಡುಗಳು ಹೀಗೆ ಒಂದೊಂದು ಆಯಾಮದಲ್ಲಿ ಸಹ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಜನರಿಗೆ ಈ ಕರಾವಳಿ (Coastal) ಸಂಪ್ರದಾಯದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿದೆ. ಅದರ ಬಗ್ಗೆ ತಿಳಿಯಲು ಸಹ ಎಲ್ಲರೂ ಉತ್ಸುಕರಾಗಿದ್ದಾರೆ. ಈ ನಡುವೆ ಈ ಸಿನಿಮಾದಲ್ಲಿ ಎಲ್ಲರ ಕಣ್ಣು ಸೆಳೆದ ಜಾಗ ಎಂದರೆ ಆ ಒಂದು ಮನೆ.


ಧಣಿಗಳ ಮನೆ ಬಾಡಿಗೆಗೆ ಇದೆ


ಹೌದು, ಸಿನಿಮಾದಲ್ಲಿ ಧಣಿಗಳ ಮನೆಯನ್ನು ಎಲ್ಲರೂ ನೋಡಿರುತ್ತೀರಿ. ಆ ಮನೆ ಹೊರಗಿನಿಂದಲೇ ನೋಡಲು ಬಹಳ ಸುಂದರವಾಗಿದೆ. ಒಳಗೆ ಸಹ ಒಂದು ಝಲಕ್ ನೋಡಿದರೆ, ಆ ಮನೆಯನ್ನು ನಾವು ಊಹಿಸಿಕೊಳ್ಳಬಹುದು. ಈಗಾಗಲೇ ಕೆಲವರಿಗೆ ಆ ಮನೆಯನ್ನು ಒಮ್ಮೆ ನೋಡಬೇಕು ಅನಿಸಿರುತ್ತದೆ. ಕೆವಲ ಆ ಮನೆಯನ್ನು ನೋಡುವುದನ್ನ, ಆ ಮನೆಯಲ್ಲಿಯೇ ನೀವು ಒಂದು ದಿನ ಉಳಿದುಕೊಳ್ಳಬಹುದು ಸಹ. ಇದು ಆಶ್ಚರ್ಯವಾದ್ರೂ ಸತ್ಯ. ಹೇಗೆ, ಎಲ್ಲಿ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.


ಈ ಸುಂದರ ಮನೆ ಇರುವುದು ಉಡುಪಿಯಲ್ಲಿ. ಹೌದು, ಇದನ್ನು ಸರಿ ಸುಮಾರು 50 ವರ್ಷಗಳ ಹಿಂದೆಯೇ ಕಟ್ಟಲಾಗಿತ್ತು. ಆದರೆ, ಇದನ್ನು ಈಗ ಐಶಾರಾಮಿ ರೆಸಾರ್ಟ್ ​ ಆಗಿ ಮಾಡಲಾಗಿದ್ದು, ಟ್ರಿಪ್ ಹೋದವರು ಇಲ್ಲಿ ಹೋಗಬಹುದು. ನೀವು ಈ ಬಾರಿ ಉಡುಪಿಗೆ ಟ್ರಿಪ್ ಹೋದಾಗ ಈ ರೆಸಾರ್ಟ್​ ಹೋಗಿ ಉಳಿದುಕೊಳ್ಳಬಹುದು.




ಇದನ್ನೂ ಓದಿ: ಜಾಸ್ತಿ ಕಂಪ್ಯೂಟರ್ ನೋಡುವವರಾಗಿದ್ರೆ ಕಣ್ಣುಗಳ ಆರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ


ಈ ರೆಸಾರ್ಟ್ ಬೀಚ್​ಗೆ ಹತ್ತಿರವಿದ್ದು, ಸುತ್ತಲಿನ ಗಾರ್ಡನ್​ ನಿಮ್ಮಕ ಮನಸೋರೆಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮನೆಯ ಒಳಾಂಗಣ ಸಹ ಬಹಳ ಅದ್ಭುತವಾಗಿದ್ದು, ಫರ್ನಿಚರ್​ಗಳು, ಒಳಾಂಗಣ ವಿನ್ಯಾಸ ಎಲ್ಲವೂ ನಿಮ್ಮನ್ನ ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.  ಇನ್ನು ಈ ರೆಸಾರ್ಟ್ ​ನಲ್ಲಿ ನಿಮಗೆ ವಿಧ ವಿಧವಾದ ತಿಂಡಿಗಳು ಸಹ ಸಿಗುತ್ತದೆ. ಇಲ್ಲಿ ನಿಮಗೆ ಚಾರ್ಚ್​ಗಳು ಸಹ ವಿಭಿನ್ನವಾಗಿದ್ದು, ನೀವು ಪ್ಯಾಕೇಜ್​ ಆಧರಿಸಿ, ಆಯ್ಕೆ ಮಾಡಿಕೊಳ್ಳಬಹುದು.




ಸುಂದರ ಕಡಲ ತಟದಲ್ಲಿದೆ ಈ ರೆಸಾರ್ಟ್


ಕಡಲ ತಟದಲ್ಲಿ ನಿಮ್ಮ ಒತ್ತಡದ ಜೀವನದಿಂದ ಮುಕ್ತಿ ಪಡೆಯಲು ಈ ಸ್ಥಳ ಬೆಸ್ಟ್ ಎನ್ನಬಹುದು.  ಈ ರೆಸಾರ್ಟ್ ಹೆಸರು ಸಾಯಿ ರಾಧಾ ಹೆರಿಟೇಜ್​ ಎಂದಾಗಿದ್ದು, ಸಾಯಿ ರಾಧಾ ಗ್ರೂಪ್​ನ ಒಂದು ಭಾಗವಾಗಿದೆ. ನೀವು ಅವರ ವೆಬ್​ಸಯಟ್​​ ಮೂಲಕ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಇಲ್ಲಿ ರೂಂ ಬುಕ್ ಮಾಡಬಹುದು. ಅಲ್ಲದೇ, ಅವರನ್ನು 9243310505 ಮತ್ತು 9243350505 ಸಂಖ್ಯೆಯ ಮೂಲಕ ಸಹ ಸಂಪರ್ಕಿಸಬಹುದು.




ಇದನ್ನೂ ಓದಿ: ಹಣ್ಣು ಮಾತ್ರವಲ್ಲ, ಪಪ್ಪಾಯಿ ಎಲೆಯ ಜ್ಯೂಸ್​ ಕೂಡಾ ಬೆಸ್ಟ್​, ಪ್ರಯೋಜನಗಳು ಹಲವಾರು


ಈ ರೆಸಾರ್ಟ್​ ಇರುವ ವಿಳಾಸ: ಮೂಲೂರ್ ಪಂಚಾಯತ್ ಹಿಂಭಾಗ, ಬಿಕ್ರಿಗುತು ರೋಡ್​, ಮುಲೂರ್ ವಿಲೇಜ್​, ಕರ್ನಾಟಕ , ಉಡುಪಿ

Published by:Sandhya M
First published: