• Home
  • »
  • News
  • »
  • lifestyle
  • »
  • Jog Falls: ಪುನೀತ್ ಕಂಡ ರೀತಿಯಲ್ಲೇ ಜೋಗ್ ಫಾಲ್ಸ್ ನೋಡ್ಕೊಂಡ್ ಬನ್ನಿ, ಫುಲ್ ಟ್ರಿಪ್ ಪ್ಲಾನ್ ಇಲ್ಲಿದೆ

Jog Falls: ಪುನೀತ್ ಕಂಡ ರೀತಿಯಲ್ಲೇ ಜೋಗ್ ಫಾಲ್ಸ್ ನೋಡ್ಕೊಂಡ್ ಬನ್ನಿ, ಫುಲ್ ಟ್ರಿಪ್ ಪ್ಲಾನ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Jog Falls Travel Guide: ಪುನೀತ್ ರಾಜ್​ಕುಮಾರ್ ಅವರ ಗಂಧದ ಗುಡಿ ಸಿನಿಮಾ ನೋಡಿದ್ದರೆ, ಅಪ್ಪು ಅದರಲ್ಲಿ ಜೋಗ ಜಲಪಾತಕ್ಕೆ ಹೋಗಿದ್ದಾರೆ. ಅಲ್ಲಿ, ಅವರು ಜೋಗವನ್ನು ನೋಡಿದ ರೀತಿಯಲ್ಲಿಯೇ ನೀವು ನೋಡಬಹುದು.

  • Share this:

ಜೋಗದ (Jog) ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಅದ್ಭುತ ಕವಿ ನಿಸಾರ್ ಅಹಮದ್ ಅವರ ಈ ಹಾಡನ್ನು ಯಾರು ತಾನೇ ಕೇಳಿಲ್ಲ. ಹಾಗೆಯೇ, ಈ ಹಾಡಿನ ಸಾಲಿನಲ್ಲಿ ವರ್ಣಿಸಿರುವ ಜೋಗದ (Jog Falls) ಬಗ್ಗೆ ಸಹ ಹಲವಾರು ಜನರು ಕೇಳಿರುತ್ತಾರೆ. ವಿಶ್ವ ವಿಖ್ಯಾತ ಈ ಜೋಗ ಜಲಪಾತವನ್ನು ವರ್ಣಿಸಲು ನಿಜಕ್ಕೂ ಅಸಾಧ್ಯ ಎನ್ನಬಹುದು. ಇದನ್ನು ನೋಡುವುದು ಒಂದು ಸುಂದರ ಅನುಭವ. ನೀವು ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್(Puneeth Rajkumar)  ಅವರ ಗಂಧದ ಗುಡಿ ಸಿನಿಮಾ ನೋಡಿದ್ದರೆ, ಅಪ್ಪು ಅದರಲ್ಲಿ ಜೋಗ ಜಲಪಾತಕ್ಕೆ ಹೋಗಿದ್ದಾರೆ. ಅಲ್ಲಿ, ಅವರು ಜೋಗವನ್ನು ನೋಡಿದ ರೀತಿಯಲ್ಲಿಯೇ ನೀವು ನೋಡಬಹುದು. ಸುಂದರ ಜೋಗವನ್ನು ಹೇಗೆ ನೋಡುವುದು ಎನ್ನುವ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.


ಜೋಗ್ ಜಲಪಾತವು ಭಾರತದ ಎರಡನೇ ಅತಿ ಎತ್ತರದ ಧುಮುಕುವ ಜಲಪಾತವಾಗಿದೆ (ಮೊದಲನೆಯದು ಮೇಘಾಲಯದ ಚಿರಾಪುಂಜಿಯಲ್ಲಿರುವ ನೋಹ್ಕಲಿಕೈ ಜಲಪಾತ), 830 ಅಡಿಗಳಷ್ಟು ಆಳದ ಜಲಪಾತ ಇದಾಗಿದೆ. ಇದು ನಾವು ಭೇಟಿ ನೀಡಿದ ಅತ್ಯುತ್ತಮ ಜಲಪಾತವಾಗಿದೆ.  ಜೋಗ್ ಜಲಪಾತವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಭಾರತದ ಪಶ್ಚಿಮ ಘಟ್ಟದ ಸಾಲುಗಳಲ್ಲಿದೆ.


ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜಲಪಾತವಾಗಿದ್ದು. ಜೋಗ ಜಲಪಾತವು ಕರ್ನಾಟಕ ರಾಜ್ಯದ ಅಂಬುತೀರ್ಥ ಎಂಬ ಸ್ಥಳದಲ್ಲಿ ಹುಟ್ಟುವ ಶರಾವತಿ ನದಿಯ ನೀರಿನಿಂದ ಹರಿಯುವ ಜಲಪಾತವಾಗಿದೆ. ಈ ಶರಾವತಿ ನದಿಯು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ.  ಮಳೆಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ಮಂಜಿನಿಂದ ಕೂಡಿರುವ ಈ ಅದ್ಭುತವನ್ನು ನೋಡುವುದು ಒಂದು ಸುಂದರ ಅನುಭವ ಎನ್ನಬಹುದು.


ಇದರ ಸೌಂದರ್ಯವನ್ನು ಸವಿಯುವುದು ನಿಜಕ್ಕೂ ಅದ್ಭುತ


ಅವ್ಯಾಹತವಾಗಿ ಧುಮ್ಮಿಕ್ಕುವ ರಾಜ, ಸುಂದರಿಯಂತೆ ಬಳುಕುತ್ತಾ ಹರಿಯುವ ರಾಣಿ,  ರೋರರ್ 0 ರಾಕೆಟ್ ಹೀಗೆ ನಾಲ್ಕು ಭಾಗವಾಗಿ ಹರಿದು, ಸಮುದ್ರ ಸೇರುತ್ತದೆ. ಮಳೆಗಾಲದಲ್ಲಿ ರುದ್ರ ರಮಣೀಯ ರೂಪ ನೋಡುವುದು ನೋಡುಗರ ಕಣ್ಣು ಹಾಗೂ ಮನಸ್ಸು ಎರಡನ್ನು ತಣಿಸುತ್ತದೆ.


ಇದನ್ನೂ ಓದಿ: ಪುನೀತ್ ಹೋಗಿದ್ದ ಕಾಳಿ ನದಿಯಲ್ಲಿ ನೀವೂ ಎಂಜಾಯ್ ಮಾಡ್ಬೇಕಾ? ಹೋಗೋದು ಹೇಗೆ, ಇಲ್ಲಿದೆ ಫುಲ್ ಡೀಟೇಲ್ಸ್


ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಆರಂಬವಾಗಿದ್ದು ಇಲ್ಲಿಯೇ. ಒಮ್ಮೆ ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗ ನೋಡಲು ಹೋಗುತ್ತಾರಂತೆ. ಆಗ ಅದನ್ನು ನೋಡಿ, ಎಷ್ಟು ನೀರು ವ್ಯರ್ಥವಾಗುತ್ತಿದೆ ಎಂದು ಹೇಳುತ್ತಾರಂತೆ. ನಂತರ ಸರಿಯಾಗಿ ಯೋಚಿಸಿದ ಅವರು, ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಆರಂಭಿಸಿ, ವಿದ್ಯುತ್ ಸ್ಥಾವರ ನಿರ್ಮಾಣ ಮಾಡಿಸುತ್ತಾರೆ.


ಇದರ ಮೊದಲ ಕೆಲಸ 1939ರಲ್ಲಿ ಜೋಗ ಜಲಪಾತದಿಂದ 24 ಕಿ. ಮಿ. ದೂರದಲ್ಲಿರುವ ಹಿರೇಭಾಸ್ಕರ ಎಂಬ ಸ್ಥಳದಲ್ಲಿ ಆರಂಭ ಮಾಡಲಾಯಿತಿ. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯನ್ನು ಕರೆಯಲಾಗುತ್ತಿತ್ತು,  ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೋಜನೆ ಎಂದು ನಾಮಕರಣ ಮಾಡಲಾಯಿತು.


ಜೋಗ್ ಫಾಲ್ಸ್​ಗೆ ಹೋಗುವುದು ಹೇಗೆ?


ಹುಬ್ಬಳ್ಳಿ ವಿಮಾನ ನಿಲ್ದಾಣವು ಕರ್ನಾಟಕದ ಜೋಗ್ ಫಾಲ್ಸ್‌ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಜೋಗ್ ಫಾಲ್ಸ್‌ನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ, ನೀವು ಜೋಗ್ ಫಾಲ್ಸ್‌ಗೆ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಅಥವಾ ಹುಬ್ಬಳ್ಳಿ ಬಸ್ ನಿಲ್ದಾಣದಿಂದ ಜೋಗ್ ಫಾಲ್ಸ್‌ಗೆ ಸರ್ಕಾರಿ ಬಸ್​ಗಳು ಬಹಳಷ್ಟಿದೆ.


ರೈಲು


ತಾಳಗುಪ್ಪಾ ರೈಲು ನಿಲ್ದಾಣವು ಕರ್ನಾಟಕದ ಜೋಗ್ ಫಾಲ್ಸ್‌ಗೆ ಹತ್ತಿರದ ರೈಲು ನಿಲ್ದಾಣವಾಗಿದೆ. ಜೋಗ್ ಫಾಲ್ಸ್‌ನಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿದೆ. ತಾಳಗುಪ್ಪ ರೈಲು ಮಾರ್ಗವು ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಸಾಗರಕ್ಕೆ ಸಂಪರ್ಕವನ್ನು ಹೊಂದಿದೆ. ಜೋಗ್ ಜಲಪಾತದಿಂದ 30 ಕಿಲೋಮೀಟರ್ ದೂರದಲ್ಲಿರುವ ಸಾಗರ ರೈಲು ನಿಲ್ದಾಣವು ಎರಡನೇ ಹತ್ತಿರದ ರೈಲು ನಿಲ್ದಾಣವಾಗಿದೆ.


ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಾಗ್ತಿದೆ ಆರೋಗ್ಯ ಸಮಸ್ಯೆಗಳು, ಹೀಗೆ ಮುಂಜಾಗ್ರತೆ ಕ್ರಮ ಅನುಸರಿಸಿ ಅಂತಿದ್ದಾರೆ ವೈದ್ಯರು


ರಸ್ತೆ


ಜೋಗ್ ಫಾಲ್ಸ್​ಗೆ ಹೊನ್ನಾವರ ಮತ್ತು ಶಿವಮೊಗ್ಗ, ಸಾಗರದ ಎರಡೂ ಬದಿಗಳಿಂದ ಸುಸಜ್ಜಿತವಾದ ರಸ್ತೆಗಳ ಸಂಪರ್ಕ ಹೊಂದಿದೆ. ಜೋಗ್ ಜಲಪಾತವು ಮುರುಡೇಶ್ವರದಿಂದ 85 ಕಿಲೋಮೀಟರ್ ದೂರದಲ್ಲಿದೆ ಮತ್ತು ಗೋಕರ್ಣದಿಂದ 111 ಕಿಲೋಮೀಟರ್ ದೂರದಲ್ಲಿದೆ. ಜೋಗ್ ಜಲಪಾತವು ಬೆಂಗಳೂರಿನಿಂದ ಸುಮಾರು 410 ಕಿಲೋಮೀಟರ್ ದೂರದಲ್ಲಿದೆ.

Published by:Sandhya M
First published: