• Home
  • »
  • News
  • »
  • lifestyle
  • »
  • Gandhadagudi: ಪುನೀತ್ ಹೋಗಿದ್ದ ಕಾಳಿ ನದಿಯಲ್ಲಿ ನೀವೂ ಎಂಜಾಯ್ ಮಾಡ್ಬೇಕಾ? ಹೋಗೋದು ಹೇಗೆ, ಇಲ್ಲಿದೆ ಫುಲ್ ಡೀಟೇಲ್ಸ್

Gandhadagudi: ಪುನೀತ್ ಹೋಗಿದ್ದ ಕಾಳಿ ನದಿಯಲ್ಲಿ ನೀವೂ ಎಂಜಾಯ್ ಮಾಡ್ಬೇಕಾ? ಹೋಗೋದು ಹೇಗೆ, ಇಲ್ಲಿದೆ ಫುಲ್ ಡೀಟೇಲ್ಸ್

ಕಾಳಿ ನದಿ

ಕಾಳಿ ನದಿ

Kali River: ದಾಂಡೇಲಿಯಲ್ಲಿರುವ ಕಾಳಿ ನದಿಯು ಕರ್ನಾಟಕದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದರೆ ತಪ್ಪಲ್ಲ.  ಏಕೆಂದರೆ ಪ್ರವಾಸಿಗರು ಈ ನದಿಯ ಬಳಿ ಆನಂದಿಸಬಹುದಾದ ಅಸಂಖ್ಯಾತ ಚಟುವಟಿಕೆಗಳಿದ್ದು, ಒಂದು ಸುಂದರ ಅನುಭವ ನೀಡುತ್ತದೆ ಎನ್ನಬಹುದು.

  • Share this:

ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ (Karnataka Ratna Puneeth Rajkumar) ಅಭಿಮಾನಿಗಳ (Fans) ಮನದಲ್ಲಿ ಎಂದಿಗೂ ಅಜರಾಮರ. ಅವರ ಕೊನೆಯ ಸಿನಿಮಾ ಗಂಧದ ಗುಡಿ (Gandhadagudi) ಬೆಳ್ಳಿತೆರೆಯಲ್ಲಿ ಭರ್ಜರಿ ರೆಸ್ಪಾನ್ಸ್​ ಪಡೆಯುತ್ತಿದೆ. ಕರ್ನಾಟದ ವಿಭಿನ್ನ ಹಾಗೂ ಅಪರಿಚಿತ ಪ್ರದೇಶಗಳನ್ನು, ಕಾಡುಮೇಡುಗಳನ್ನು ಸುತ್ತಿ ಜನರಿಗೆ ಅದ್ಭುತ ಕರ್ನಾಟವನ್ನು (Karnataka) ಈ ಸಿನಿಮಾದಲ್ಲಿ ತೋರಿಸಿದ್ದಾರೆ. ನೀವು ಈ ಸಿನಿಮಾದ ಒಂದು ನದಿ ಬರುತ್ತದೆ. ಕಾಳಿ ನದಿ (Kali River). ಆ ನದಿಯಲ್ಲಿ ಪುನೀತ್ ಹಾಗೂ ಅಮೋಘವರ್ಷ ತೆಪ್ಪದಲ್ಲಿ ಹೋಗುತ್ತಾರೆ. ಈ ಸ್ಥಳಕ್ಕೆ ನೀವು ಸಹ ಹೋಗಬಹುದು. ಹೇಗೆ ಹೋಗುವುದು ಮತ್ತು ಯಾವ ಸಮಯ ಉತ್ತಮ ಎಂಬುದು ಇಲ್ಲಿದೆ.


ದಾಂಡೇಲಿಯ ಬಳಿ ಇದೆ ಈ ಸುಂದರ ಸ್ಥಳ


ದಾಂಡೇಲಿಯಲ್ಲಿರುವ ಕಾಳಿ ನದಿಯು ಕರ್ನಾಟಕದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದರೆ ತಪ್ಪಲ್ಲ.  ಏಕೆಂದರೆ ಪ್ರವಾಸಿಗರು ಈ ನದಿಯ ಬಳಿ ಆನಂದಿಸಬಹುದಾದ ಅಸಂಖ್ಯಾತ ಚಟುವಟಿಕೆಗಳಿದ್ದು, ಒಂದು ಸುಂದರ ಅನುಭವ ನೀಡುತ್ತದೆ ಎನ್ನಬಹುದು. ನೀವು ಸಾಹಸ ಪ್ರಿಯರಾಗಿದ್ದಾರೆ, ಒಂದು ಅಡ್ವೆಂಚರ್ಸ್​ ವೀಕೆಂಡ್​ ಕಳೆಯಲು ಪರಿಪೂರ್ಣ ಸ್ಥಳವಾಗಿದೆ. ಹಾಗೆಯೇ, ಸುಂದರ ಪ್ರಕೃತಿಯನ್ನು ಸವಿಯಲು ಸಹ  ಬೆಸ್ಟ್ ಸ್ಥಳ.


ಇದು ನದಿಯ ದಡದ ಅಂಚಿನಲ್ಲಿರುವ ಹಚ್ಚ ಹಸಿರಿನ ಕಾಡುಗಳಿಗೆ ಹೆಸರುವಾಸಿಯಾಗಿದೆ, ಜೊತೆಗೆ ಕರ್ನಾಟಕದ ಪ್ರಸಿದ್ಧ ಹಿನ್ನೀರಿನ  ಅಣೆಕಟ್ಟುಗಳಿಗೆ ಹೆಸರುವಾಸಿಯಾಗಿದೆ. ಈ ನದಿಯು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳಲ್ಲಿ ಕುಶಾವಲಿ ಎಂಬ ಸಣ್ಣ ಹಳ್ಳಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಸುಪಾ ಅಣೆಕಟ್ಟಿಗೆ ಹರಿದು ಹೋಗಿ ಸೇರುತ್ತದೆ. ಮಧ್ಯೆ ಇನ್ನೊಂದು ನದಿಗೆ ಸಹ ಸೇರುತ್ತದೆ. ಕೊನೆಗೆ ಅರಬ್ಬಿ ಸಮುದ್ರವನ್ನು ಸೇರುತ್ತದೆ, ಆದರೆ ಅದಕ್ಕೆ ಮೊದಲು ನದಿಯು ಒಟ್ಟು 184 ಕಿಮೀ ದೂರದವರೆಗೆ ಹರಿಯುತ್ತದೆ.


ಕಾಳಿ ನದಿಯಲ್ಲಿ ರಾಫ್ಟಿಂಗ್‌ ಕ್ರೀಡೆ ಮಾಡುವುದು ಎಂದರೆ ಸಾಹಸಪ್ರಿಯರಿಗೆ ಬಹಳ ಇಷ್ಟ. ಈ ನದಿಯ ತಿಳಿ ಸುಳಿಗಳು, ತಂಪಾದ ಗಾಳಿ ನಿಮ್ಮನ್ನ ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನದಿಯ ಹರಿಯುವ ಸುತ್ತ ಜಾಗದಲ್ಲಿ ಹಲವಾರು ಅಣೆಕಟ್ಟುಗಳು, ಕೋಟೆಗಳು, ದೇವಾಲಯಗಳು ಮತ್ತು ಕಾಡುಗಳಿವೆ, ಆದರೆ ದಾಂಡೇಲಿಯಲ್ಲಿರುವ ಅಡ್ವಿಂಚರ್ಸ್​ ಕ್ಯಾಂಪ್ ಕಾಳಿ ನದಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.


ಈ ಕ್ಯಾಂಪ್ ಸಾಹಸ ಕ್ರೀಡೆಗಳು ಮತ್ತು ರಿವರ್ ರಾಫ್ಟಿಂಗ್, ಕ್ಯಾನೋಯಿಂಗ್, ಕಯಾಕಿಂಗ್, ಪಕ್ಷಿವೀಕ್ಷಣೆ, ಟ್ರೆಕ್ಕಿಂಗ್, ಹೈಕಿಂಗ್ ಸೇರಿದಂತೆ ವಿವಿಧ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತದೆ. ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸಿಗರಿಗೆ ರಜೆ ಕಳೆಯಲು ಸೂಕ್ತವಾದ ಸ್ಥಳ ಎನ್ನಬಹುದು.  ನೀವು ನದಿಯಲ್ಲಿ ಆನಂದಿಸುತ್ತಿರುವಾಗ ನದಿಯ ಅಂಚಿನಲ್ಲಿರುವ ನೈಸರ್ಗಿಕ ರಮಣೀಯ ಸೌಂದರ್ಯದಿಂದಾಗಿ ಸ್ವರ್ಗ ಎನಿಸುತ್ತದೆ. ಕಾಳಿ ನದಿಯ ನೀರಿನಲ್ಲಿ ನೀವು ಯಾವ ಆಟಗಳನ್ನು ಮಿಸ್​ ಮಾಡಬಾರದು ಎಂಬುದು ಇಲ್ಲಿದೆ. 


ರಿವರ್ ರಾಫ್ಟಿಂಗ್ : ಕಾಳಿ ನದಿಯ ಉದ್ದಕ್ಕೂ ಹಲವಾರು  ಸ್ಥಳಗಳಿವೆ. ಅವುಗಳಲ್ಲಿ ಒಂದು ಬೈಸನ್ ರಿವರ್ ರೆಸಾರ್ಟ್. ಈ ರೆಸಾರ್ಟ್‌ನ ಸಮೀಪದಲ್ಲಿಯೇ ನದಿಯ ಶಾಂತಿಯುತವಾಗಿ ಹರಿಯುತ್ತದ. ಸುಮಾರು 10-20 ಅಡಿಗಳಷ್ಟು ಆಳವಿದೆ. ಇಲ್ಲಿ ರಿವರ್ ರಾಫ್ಟಿಂಗ್‌ಗೆ ಸೂಕ್ತವಾದ ಸಣ್ಣ ಸುಳಿಗಳು ಸಹ ಇದೆ. ಇಲ್ಲಿ ರಿವರ್ ರಾಫ್ಟಿಂಗ್ ಮಿಸ್​ ಮಾಡಿಕೊಳ್ಳಬಾರದು.


gandhagudi celebrity premiere show was held at orain mall bengaluru


ಕ್ಯಾನೋಯಿಂಗ್ ಮತ್ತು ಕಯಾಕಿಂಗ್: ನೀವು ರಿವರ್ ರಾಫ್ಟಿಂಗ್​ಗಿಂತ ಹೆಚ್ಚು ಅಡ್ವಿಂಚರ್ಸ್​ ಆಗಿರುವ ಆಟ ಬೇಕು ಎಂದರೆ  ಕಯಾಕಿಂಗ್ ಮಾಡಬಹುದು. ನಿಮ್ಮ ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಮುಕ್ತವಾಗಿಸುವ ಶಕ್ತಿ ಈ ನದಿಗೆ ಇದೆ.


ಈ ಸ್ಥಳಕ್ಕೆ ಹೋಗುವುದು ಹೇಗೆ? 


ವಿಮಾನದ ಮೂಲಕ: ದಾಂಡೇಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣ, ಇದು 73 ಕಿಮೀ ದೂರದಲ್ಲಿದೆ. ವಿಮಾನ ನಿಲ್ದಾಣದಿಂದ, ದಾಂಡೇಲಿಯ ಕಾಳಿ ನದಿಗೆ ಹೋಗಲು ಹಲವಾರು ಟ್ಯಾಕ್ಸಿಗಳು ಮತ್ತು ಕಾರುಗಳನ್ನು ಬಾಡಿಗೆಗೆ ಪಡೆಯಬಹುದು. ಹುಬ್ಬಳ್ಳಿಯಿಂದ ದಾಂಡೇಲಿಗೆ ಸಂಪರ್ಕಿಸುವ KSRTC ಬಸ್‌ಗಳ ಮೂಲಕ ನೀವು ದಾಂಡೇಲಿಗೆ ಸಹ ಹೋಗಬಹುದು.


Gandhadagudi Puneeth Rajkumar s this One Dialogue Will Make you:


ರೈಲಿನಲ್ಲಿ: ದಾಂಡೇಲಿಯಲ್ಲಿ ಅಂಬೇವಾಡಿ ನಿಲ್ದಾಣ ಎಂದು ಕರೆಯಲಾಗುವ ರೈಲು ನಿಲ್ದಾಣವಿದೆ. ಬೆಂಗಳೂರು, ವಿಜಯಪುರ, ಕಾರವಾರ ಮತ್ತು ಹೈದರಾಬಾದ್‌ನಂತಹ ಹತ್ತಿರದ ನಗರಗಳಿಂದ ನಿಲ್ದಾಣಕ್ಕೆ ನಿಯಮಿತ ರೈಲುಗಳು ಇದೆ. ನಿಲ್ದಾಣದಿಂದ ಕಾಳಿ ನದಿಗೆ ಬಾಡಿಗೆ ಟ್ಯಾಕ್ಸಿ ಅಥವಾ ಸ್ಥಳೀಯ ಬಸ್‌ನಲ್ಲಿ ಆರಾಮದಾಯಕವಾಗಿ ಹೋಗಬಹುದು.


ಇದನ್ನೂ ಓದಿ: ಚಳಿಗಾಲದಲ್ಲಿ ರೋಸ್​ ವಾಟರ್​ ಬಳಸಿದ್ರೆ ಒಂದೆರೆಡಲ್ಲ ಹಲವು ಪ್ರಯೋಜನ ಸಿಗುತ್ತೆ


ರಸ್ತೆಯ ಮೂಲಕ: ಬೆಂಗಳೂರು ಮತ್ತು ದಾಂಡೇಲಿ ನಡುವೆ ಉತ್ತಮ ಬಸ್ ಸೇವೆ ಇದೆ. ಇದರಲ್ಲಿ ಬೆಂಗಳೂರಿನಿಂದ ದಾಂಡೇಲಿಯ ಕಾಳಿ ನದಿಗೆ 12 ಗಂಟೆಗಳಲ್ಲಿ ಸಹ ತಲುಪಬಹುದು. ಹಾಗೆಯೇ, ನೀವು ನಿಮ್ಮ ಸ್ವಂತ ವಾಹನದ ಮೂಲಕ ಸಹ ವಿಭಿನ್ನ ರಸ್ತೆಗಳ ಮೂಲಕ ಹೋಗಬಹುದು.
ಹೋಗಲು ಸೂಕ್ತವಾದ ಸಮಯ 


ಬೇಸಿಗೆಯಲ್ಲಿ: ದಾಂಡೇಲಿಗೆ ಮಾರ್ಚ್ ನಿಂದ ಮೇ ವರೆಗೆ ಹೋಗುವುದು ಸೂಕ್ತ. ಈ ಸಮಯದಲ್ಲಿ ನೀವು ಕಾಳಿಯ ನೀರಿನಲ್ಲಿ ರಿವರ್ ರಾಫ್ಟಿಂಗ್, ಕ್ಯಾನೋಯಿಂಗ್ ಮತ್ತು ಕಯಾಕಿಂಗ್ ಅನ್ನು ಆನಂದಿಸಬಹುದು.
ಇದನ್ನೂ ಓದಿ: ಅಪ್ಪು ಮಾಡಿರುವ ಸ್ಕೂಬಾ ಡೈವಿಂಗ್ ನೀವೂ ಮಾಡ್ಬೇಕಾ? ಹಾಗಿದ್ರೆ ನೇರವಾಗಿ ಈ ಸ್ಥಳಕ್ಕೆ ಬನ್ನಿ! ರೋಚಕ ಸ್ಥಳದ ಕುತೂಹಲಕಾರಿ ಡಿಟೇಲ್ಸ್ ಇಲ್ಲಿದೆ


ಮಾನ್ಸೂನ್: ನೀವು ರಿವರ್-ರಾಫ್ಟಿಂಗ್‌ಗಾಗಿ ದಾಂಡೇಲಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡುತ್ತಿದ್ದರೆ, ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಮಳೆಗಾಲದಲ್ಲಿ ಹೋಗಲೇಬೇಡಿ.  ಚಳಿಗಾಲ: ಅಕ್ಟೋಬರ್‌ನಿಂದ ಮಾರ್ಚ್-ಏಪ್ರಿಲ್ ಸಮಯದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡುವ ಅನೇಕ ವಲಸೆ ಹಕ್ಕಿಗಳನ್ನು ನೀವು ನೋಡಬಹುದು.ಇದು ದಾಂಡೇಲಿಯ ಕಾಳಿ ನದಿಗೆ ಭೇಟಿ ನೀಡಲು ಇದು ಉತ್ತಮ ಸಮಯ.

Published by:Sandhya M
First published: