• Home
  • »
  • News
  • »
  • lifestyle
  • »
  • Gandhada Gudi: ಅಪ್ಪು ಮಾಡಿರುವ ಸ್ಕೂಬಾ ಡೈವಿಂಗ್ ನೀವೂ ಮಾಡ್ಬೇಕಾ? ಹಾಗಿದ್ರೆ ನೇರವಾಗಿ ಈ ಸ್ಥಳಕ್ಕೆ ಬನ್ನಿ! ರೋಚಕ ಸ್ಥಳದ ಕುತೂಹಲಕಾರಿ ಡಿಟೇಲ್ಸ್ ಇಲ್ಲಿದೆ

Gandhada Gudi: ಅಪ್ಪು ಮಾಡಿರುವ ಸ್ಕೂಬಾ ಡೈವಿಂಗ್ ನೀವೂ ಮಾಡ್ಬೇಕಾ? ಹಾಗಿದ್ರೆ ನೇರವಾಗಿ ಈ ಸ್ಥಳಕ್ಕೆ ಬನ್ನಿ! ರೋಚಕ ಸ್ಥಳದ ಕುತೂಹಲಕಾರಿ ಡಿಟೇಲ್ಸ್ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Netrani Island Scuba Diving: ಈ ಡಾಕ್ಯೂಮೆಂಟರಿಯಲ್ಲಿ ತೋರಿಸಿರುವ ಪ್ರತಿಯೊಂದು ಸ್ಥಳವೂ ಎಲ್ಲರ ಕಣ್ಣು ಸೆಳೆಯುವಂತಿವೆ. ಈ ಸ್ಥಳಗಳು ವಿದೇಶದಲ್ಲಿವೆ ಎನ್ನಲಾಗುತ್ತಿತ್ತು. ಆದರೆ ಈ ಎಲ್ಲಾ ಸ್ಥಳಗಳು ನಮ್ಮ ಕರ್ನಾಟಕದಲ್ಲಿದೆ. ಅದರಲ್ಲೂ ಈ ಸ್ಕೂಬಾ ಡೈವಿಂಗ್ ಮಾಡುವ ಸ್ಥಳ ಉತ್ತರ ಕನ್ನಡದಲ್ಲಿದೆ.

ಮುಂದೆ ಓದಿ ...
  • Share this:

ರಾಜರತ್ನ ಪುನೀತ್ ರಾಜಕುಮಾರ್ (Puneeth Rajkumar) ಅವರ ಬಹುನಿರೀಕ್ಷಿತ ಗಂಧದ ಗುಡಿ (Gandhada gudi) ಟ್ರೈಲರ್ ಇಂದು ರಿಲೀಸ್ ಆಗಿದೆ. ಧಾರ್ಮಿಕ ಹಾಗೂ ಪ್ರವಾಸೋದ್ಯಮದ ನಿಟ್ಟಿನಲ್ಲೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವಾರು ಸ್ಥಳಗಳನ್ನು ಈ ಡಾಕ್ಯೂಮೆಂಟರಿಯಲ್ಲಿ (Documentary)  ತೋರಿಸಲಾಗಿದ್ದು, ಇದರಲ್ಲಿ ಅರಣ್ಯದ ದೃಶ್ಯ ವೈಭವ ನೋಡಬಹುದು. ಧುಮ್ಮಿಕ್ಕುವ ಜಲಪಾತಗಳು, ಬೆಟ್ಟಗಳು, ನದಿಗಳು, ಬಾನೆತ್ತರ ಬೆಳೆದ ಹಸಿರುವ ವನದ ಅದ್ಭುತ ದೃಶ್ಯ ವೈಭವ ಟ್ರೈಲರ್​ನಲ್ಲಿ ಸಿಕ್ಕಿದೆ. ನೀವು ಈ ಟ್ರೈಲರ್​ನಲ್ಲಿ ಅಪ್ಪು ಸ್ಕೂಬಾ ಡ್ರೈವಿಂಗ್ ಮಾಡುವುದನ್ನ ನೋಡುತ್ತೀರಿ. ಅದೇ ರೀತಿ ನೀವು ಮಾಡಬೇಕು ಎಂದರೆ ಇಲ್ಲಿದೆ ಫುಲ್ ಡಿಟೇಲ್ಸ್.  


ಉತ್ತರ ಕನ್ನಡದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್


ಈ ಡಾಕ್ಯೂಮೆಂಟರಿಯಲ್ಲಿ ತೋರಿಸಿರುವ ಪ್ರತಿಯೊಂದು ಸ್ಥಳವೂ ಎಲ್ಲರ ಕಣ್ಣು ಸೆಳೆಯುವಂತಿವೆ. ಈ ಸ್ಥಳಗಳು ವಿದೇಶದಲ್ಲಿವೆ ಎನ್ನಲಾಗುತ್ತಿತ್ತು. ಆದರೆ ಈ ಎಲ್ಲಾ ಸ್ಥಳಗಳು ನಮ್ಮ ಕರ್ನಾಟಕದಲ್ಲಿದೆ. ಅದರಲ್ಲೂ ಈ ಸ್ಕೂಬಾ ಡೈವಿಂಗ್ ಮಾಡುವ ಸ್ಥಳ ಉತ್ತರ ಕನ್ನಡದಲ್ಲಿದೆ. ಹೌದು, ಉತ್ತರ ಕನ್ನಡದ ಮುರ್ಡೇಶ್ವರ ಯಾರಿಗೆ ತಾನೇ ಗೊತ್ತಿಲ್ಲ, ರಾಜ್ಯದಲ್ಲಿಯೇ ಅತೀ ಎತ್ತರದ ಶಿವನ ಮೂರ್ತಿಯನ್ನ ನೋಡಲು ಲಕ್ಷಾಂತರ ಮಂದಿ ಪ್ರವಾಸಿಗರು ದೇಶದ ವಿವಿಧೆಡೆಗಳಿಂದ ಬರುತ್ತಾರೆ. ಅದರಲ್ಲೂ ಸ್ಕೂಬಾ ಡೈವಿಂಗ್ ಮಾಡಲು ಪ್ರಶಸ್ತವಾದ ಸ್ಥಳಗಳಿರುವ ತಾಣಗಳಲ್ಲಿ ಮುರ್ಡೇಶ್ವರದ ನೇತ್ರಾಣಿ ದ್ವೀಪ (Netrani Island) ದೇಶದಲ್ಲಿಯೇ ಎರಡನೇಯ ಸ್ಥಾನವನ್ನ ಪಡೆದಿದೆ.
ನೀವು ಗಂಧದ ಗುಡಿ ಡಾಕ್ಯೂಮೆಂಟರಿಯಲ್ಲಿ ನೋಡುವ ಸ್ಕೂಬಾ ಡೈವಿಂಗ್ ನೇತ್ರಾಣಿ ದ್ವೀಪದ್ದು. ನೀವೂ ಸಹ ಇಲ್ಲಿಗೆ ಹೋಗಿ ಎಂಜಾಯ್ ಮಾಡಬಹುದು. ಮುರ್ಡೇಶ್ವರದಿಂದ ಸುಮಾರು 19 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ನೇತ್ರಾಣಿ ದ್ವೀಪವಿದೆ. ಕರ್ನಾಟಕದಲ್ಲಿಯೇ ಸ್ಕೂಬಾ ಡೈವಿಂಗ್ ಮಾಡುವ ಏಕೈಕ ಸ್ಥಳ ನೇತ್ರಾಣಿ ದ್ವೀಪವಾಗಿದ್ದು ಹಲವಾರು ಬಗೆಯ ಜಲಚರಗಳಿಗೆ ಸ್ಥಾನವನ್ನ ಒದಗಿಸುವ ಮೂಲಕ ಪ್ರಾಕೃತಿಕವಾಗಿ ಸಾಕಷ್ಟು ವೈವಿಧ್ಯತೆಗಳನ್ನ ಹೊಂದಿದೆ.
ಹವಳದಂಡೆಯನ್ನ ಹೊಂದಿರುವ ರಾಜ್ಯದ ಏಕೈಕ ಪ್ರದೇಶವಾಗಿರುವುದರ ಜೊತೆಗೆ ಅಪರೂಪದ ಕಡಲಜೀವಿಗಳ ಸುಮಾರು 35ಕ್ಕೂ ಅಧಿಕ ಪ್ರಬೇಧಗಳನ್ನ ಇಲ್ಲಿ ಗುರುತಿಸಲಾಗಿದೆ. ಸ್ವಚ್ಛವಾದ ನೀರನ್ನ ಈ ಪ್ರದೇಶ ಹೊಂದಿರುವುದರಿಂದ ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಇದು.
ವಿವಿಧ ಪ್ಯಾಕೇಜ್​ಗಳು ಇಲ್ಲಿ ಲಭ್ಯವಿದೆ


ನೇತ್ರಾಣಿ ಅರೇಬಿಯನ್ ಸಮುದ್ರದಲ್ಲಿರುವ ಭಾರತದ ಒಂದು ಸಣ್ಣ ದ್ವೀಪವಾಗಿದೆ. ದ್ವೀಪವನ್ನು  15 ಕಿಮೀ (9.3 ಮೈಲುಗಳು) ದೂರದಲ್ಲಿ ಕಾಣಬಹುದು. ನೀವು ಮೇಲಿನಿಂದ ನೋಡಿದರೆ ಈ ದ್ವೀಪ ಹೃದಯ ಆಕಾರದಲ್ಲಿ ಕಾಣುತ್ತದೆ. ಸ್ಕೂಬಾ ಡೈವಿಂಗ್ ಸೌಲಭ್ಯಗಳನ್ನು ಹೊಂದಿದೆ ಮತ್ತು ಭಟ್ಕಳ, ಮಂಗಳೂರು, ಗೋವಾ, ಮುಂಬೈ ಅಥವಾ ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದು.


ಇದನ್ನೂ ಓದಿ: ಮನೆಯಲ್ಲಿಯೇ ಮುಖದ ಕೂದಲನ್ನು ಸುಲಭವಾಗಿ ತೆಗೆಯಲು ಈ 4 ಫೇಸ್​ಮಾಸ್ಕ್​ ಬಳಸಿ ಸಾಕು


ಅಲ್ಲದೇ, ಇಲ್ಲಿ ಪ್ರಸಿದ್ಧ ಹಿಂದೂ ದೇವಾಲಯ ಜೈ ಬಜರಂಗಬಲಿ ದೇವಾಲಯ ಸಹ ಇದೆ.  ನೇತ್ರಾಣಿ ದ್ವೀಪವು 15 ರಿಂದ 20 ಮೀಟರ್ (49.2 ರಿಂದ 65.6 ಅಡಿ) ವರೆಗಿನ ಹಲವಾರು ಡೈವ್ ಸೈಟ್‌ಗಳನ್ನು ಹೊಂದಿದೆ. ದ್ವೀಪದ ಸುತ್ತಲೂ ಬೃಹತ್ ವೈವಿಧ್ಯಮಯ ರೀಫ್ ಮೀನುಗಳೊಂದಿಗೆ ಹವಳದ ಬಂಡೆಗಳಿವೆ.  ನಿಮಗೆ ಇಲ್ಲಿ ವಿವಿಧ ರೀತಿಯ ಪ್ಯಾಕೇಜ್​ಗಳು ಲಭ್ಯವಿದೆ. ಇಲ್ಲಿಗೆ ನೀವು ಒಬ್ಬರೇ ಹೋಗಲು ಸಾಧ್ಯವಿಲ್ಲ. ಪರಿಣಿತರ ಸಹಾಯದ ಮೂಲಕವೇ ಹೋಗಬೇಕು.


you can also do puneeth rajkumar Gandhada gudi type Scuba Diving in netrani island
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಇದೇ ಕಾರಣಕ್ಕೆ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನಬೇಕಂತೆ


ಅಲ್ಲದೇ, ಇಲ್ಲಿ ಸಮುದ್ರದ ಆಳಕ್ಕೆ ಕರೆದುಕೊಂಡು ಹೋಗುವ ಮುನ್ನ ಕಡಿಮೆ ಆಳದಲ್ಲಿ ನಿಮ್ಮನ್ನ ಇಳಿಸಿ, ನಿಮಗೆ ಉಸಿರಾಟದ ಸಮಸ್ಯೆಯಾಗುವುದಿಲ್ಲ ಎಂಬುದನ್ನ ತಿಳಿದುಕೊಂಡು ನಂತರ ಆಳಕ್ಕೆ ಇಳಿಸುತ್ತಾರೆ.  ಇಲ್ಲಿ ನಿಮಗೆ ವೆರೈಟಿ ಪ್ಯಾಕೇಜ್​ಗಳು ಲಭ್ಯವಿದೆ, 3999 ರೂನಿಂದ ಆರಂಭವಾಗುತ್ತದೆ. ಅಲ್ಲದೇ, ಈ ಪ್ಯಾಕೇಜ್​ನಲ್ಲಿ ನಿಮಗೆ ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ದೋಣಿ ವಿಹಾರ, ನೀರಿನ ಒಳಗೆ ಛಾಯಾಗ್ರಹಣ, ಗೇರ್ ಸಲಕರಣೆ, ಡೈವಿಂಗ್ ಪ್ರಮಾಣಪತ್ರ, ರಿಫ್ರೆಶ್‌ಮೆಂಟ್ ಮತ್ತು ಸ್ನ್ಯಾಕ್ಸ್ ಎಲ್ಲವೂ ಲಭ್ಯವಿರುತ್ತದೆ.

Published by:Sandhya M
First published: