Yogasana: ದೇಹದ ಬೊಜ್ಜು ಕರಗಿಸಲು ಸಹಾಯಕ ಈ ಯೋಗಾಸನ, ಸ್ಥೂಲಕಾಯತೆಗೂ ಈ ಆಸನ ರಾಮಬಾಣ

ಯೋಗದಲ್ಲಿ ಕಠಿಣ ಪಥ್ಯವನ್ನು ತಿಳಿಸಲಾಗುತ್ತದೆ. ವ್ಯಾಯಾಮದೊಂದಿಗೆ ಪಥ್ಯವನ್ನು ಅನುಸರಿಸುವುದು ದೇಹವನ್ನು ಶುದ್ಧೀಕರಿಸುತ್ತದೆ ಅಂತೆಯೇ ಹೆಚ್ಚುವರಿ ಕೊಬ್ಬನ್ನು ತೊಡೆದು ಹಾಕುತ್ತದೆ. ದೇಹದ ಶುದ್ಧೀಕರಣವನ್ನು ಶಂಕಪ್ರಕ್ಷಾಲನ್ ಎಂದೂ ಕರೆಯುತ್ತಾರೆ. ಮೊದಲಿಗೆ ಕುಳಿತು ಮಾಡುವ ಆಸನಗಳನ್ನು ಅಭ್ಯಸಿಸಿ. ನಂತರ ಬೆನ್ನ ಮೇಲೆ ಮಲಗಿ ಮಾಡುವ ಆಸನ ಅಭ್ಯಸಿಸಿ ನಂತರ ನಿಂತು ಮಾಡುವ ಆಸನಗಳನ್ನು ಅಭ್ಯಸಿಸಿ ಇದಾದ ಮೇಲೆ ಸೂರ್ಯನಮಸ್ಕಾರ, ಶವಾಸನ, ಕೊನೆಗೆ ಪ್ರಾಣಾಯಾಮ ಮಾಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಯುವಪೀಳಿಗೆಯನ್ನು ಹೆಚ್ಚು ಕಾಡುತ್ತಿರುವ ಕಾಯಿಲೆಯೆಂದರೆ ಸ್ಥೂಲಕಾಯತೆ (Obesity) ಹಾಗೂ ಸಂಧಿವಾತ. ಇದರಿಂದಾಗಿಯೇ ಹೆಚ್ಚಿನ ಯುವಜನಾಂಗ ಇಂದು ಚಟುವಟಿಕೆಯಿಂದಿಲ್ಲ ಹಾಗೂ ಆಟಪಾಠಗಳಲ್ಲಿ ಮುಂದಿಲ್ಲ. ಒಮ್ಮೊಮ್ಮೆ ಯಾವುದೇ ಚಟುವಟಿಕೆಗಳನ್ನು ನಡೆಸದೆಯೇ ಕೂತಲ್ಲಿಯೇ ಕೂರುವುದರಿಂದ ಕೂಡ ಬೊಜ್ಜಿನ ಸಮಸ್ಯೆಗಳು ಅತಿಯಾಗಿ ಕಾಡಬಹುದು. ನಡೆದಾಡಲು ಕಷ್ಟಪಡುವುದು, ಉಸಿರಾಟ ಸಮಸ್ಯೆ (Breathing problem), ಹೃದಯ ಕಾಯಿಲೆ, ಮಧುಮೇಹ ಹೀಗೆ ಬೊಜ್ಜಿನ ಸಮಸ್ಯೆಗಳಿಂದಾಗಿ ಬೇರೆ ಬೇರೆ ಕಾಯಿಲೆಗಳು ಕಾಡಬಹುದು. ಯುವಜನರನ್ನು (Youths) ಇಂದು ಅತಿಯಾದ ಸ್ಥೂಲಕಾಯ ಕಾಡುತ್ತಿದೆ ಎಂದರೆ ಇದಕ್ಕೆ ಕಾರಣ ಜೀವನ ಶೈಲಿಯಾಗಿದೆ. ಕರಿದ ಜಂಕ್ ಫುಡ್‌ಗಳ (Junk Food) ಸೇವನೆ, ಮನೆಯ ಊಟ ತಿಂಡಿಗಳ ಅಸಡ್ಡೆ, ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದೇ ಇರುವುದು ಇತ್ಯಾದಿಯಾಗಿದೆ.

ಸರಳ ವ್ಯಾಯಾಮಗಳಿಂದ ಬೇಗನೆ ಬೊಜ್ಜು ಕರಗಿಸಬಹುದು 
ಯೋಗದಂತಹ ಸರಳ ವ್ಯಾಯಾಮ ಕ್ರಮಗಳನ್ನು ಅಭ್ಯಸಿಸುವ ಮೂಲಕ ಬಿಡುವಿಲ್ಲದ ಯಾರೇ ಆಗಿರಲಿ ಅತಿಯಾಗಿ ಕಾಡುವ ಸ್ಥೂಲಕಾಯ ಸಮಸ್ಯೆಗಳಿಂದ ಹೊರಬಹುದಾಗಿದೆ. ದೇಹದ ಕೊಬ್ಬು ಕರಗಿಸಲು ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಯೋಗ ಅಭ್ಯಾಸ ನಡೆಸುವಾಗ ಆರಾಮವಾಗಿ ಹಗುರ ಮನಸ್ಥಿತಿಯಿಂದ ಮಾಡುವುದು ಅತಿಮುಖ್ಯವಾದುದು. ಉಸಿರಾಟದ ಏರಿಳಿತಗಳನ್ನು ಯೋಗದಲ್ಲಿ ಅಭ್ಯಸಿಸಲಾಗುತ್ತದೆ. ಕೆಲವೊಂದು ಆಸನಗಳನ್ನು ಮಾಡುವಾಗ ದೇಹವು ಅದೇ ಭಂಗಿಯಲ್ಲಿ ಚಲಿಸುತ್ತದೆ ಹೀಗಾಗಿ ಬೇರೆ ಬೇರೆ ಆಸನಗಳಿಗೆ ತಕ್ಕಂತೆ ದೇಹವನ್ನು ವ್ಯವಸ್ಥಿತಗೊಳಿಸುವ ಕಲೆ ಯೋಗದಲ್ಲಿದೆ. ಯೋಗವು ಹೊಟ್ಟೆ, ಸೊಂಟ, ತೊಡೆ, ಹೀಗೆ ಸಂಪೂರ್ಣ ದೇಹದ ಕೊಬ್ಬನ್ನು ತೊಡೆದು ಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಆರೋಗ್ಯದ ಮೇಲೂ ಯೋಗ ಹೆಚ್ಚು ಪರಿಣಾಮಕಾರಿಯಾಗಿದೆ.

ಯೋಗದಲ್ಲಿ ಕಠಿಣ ಪಥ್ಯವನ್ನು ತಿಳಿಸಲಾಗುತ್ತದೆ. ವ್ಯಾಯಾಮದೊಂದಿಗೆ ಪಥ್ಯವನ್ನು ಅನುಸರಿಸುವುದು ದೇಹವನ್ನು ಶುದ್ಧೀಕರಿಸುತ್ತದೆ ಅಂತೆಯೇ ಹೆಚ್ಚುವರಿ ಕೊಬ್ಬನ್ನು ತೊಡೆದು ಹಾಕುತ್ತದೆ. ದೇಹದ ಶುದ್ಧೀಕರಣವನ್ನು ಶಂಕಪ್ರಕ್ಷಾಲನ್ ಎಂದೂ ಕರೆಯುತ್ತಾರೆ. ಮೊದಲಿಗೆ ಕುಳಿತು ಮಾಡುವ ಆಸನಗಳನ್ನು ಅಭ್ಯಸಿಸಿ. ನಂತರ ಬೆನ್ನ ಮೇಲೆ ಮಲಗಿ ಮಾಡುವ ಆಸನ ಅಭ್ಯಸಿಸಿ ನಂತರ ನಿಂತು ಮಾಡುವ ಆಸನಗಳನ್ನು ಅಭ್ಯಸಿಸಿ ಇದಾದ ಮೇಲೆ ಸೂರ್ಯನಮಸ್ಕಾರ, ಶವಾಸನ, ಕೊನೆಗೆ ಪ್ರಾಣಾಯಾಮ ಮಾಡಿ.

ಕುಳಿತು ಮಾಡುವ ಆಸನಗಳು
ಚಕ್ಕಿಚಾಲಾಸನ
ಹಿಂದಿನ ಕಾಲದಲ್ಲಿ ಗೋಧಿ, ಅಕ್ಕಿ, ರಾಗಿಯನ್ನು ಕಲ್ಲಿನಿಂದ ಅರೆದು ಹುಡಿ ಮಾಡುತ್ತಿದ್ದರು. ಪ್ರತಿ ಮನೆಗಳಲ್ಲಿ ಕೂಡ ಈ ಹಿಟ್ಟು ಬೀಸುವ ಕಲ್ಲಿತ್ತು ಹಾಗೂ ಗೃಹಿಣಿಯರು ಅದನ್ನು ಬಳಸುತ್ತಿದ್ದರು. ಚಕ್ಕಿಚಾಲಾಸನ ಸೊಂಟ ಹಾಗೂ ಹೊಟ್ಟೆಗೆ ಉತ್ತಮ ವ್ಯಾಯಾಮವನ್ನು ನೀಡುತ್ತದೆ. ಮೊದಲಿಗೆ ಬೆರಳುಗಳನ್ನು ಪರಸ್ಪರ ಹೆಣೆದುಕೊಳ್ಳಿ ಎರಡೂ ಕಾಲುಗಳನ್ನು ಅಂತರದಲ್ಲಿರಿಸಿಕೊಳ್ಳಿ ಅಂದರೆ ನಡುವೆ ಹಿಟ್ಟು ಬೀಸುವ ಕಲ್ಲಿದೆ ಎಂಬ ಭಾವನೆ ಮನಸ್ಸಿನಲ್ಲಿರಲಿ. ನಿಮ್ಮ ಮೊಣಕೈಯನ್ನು ನೇರವಾಗಿಟ್ಟುಕೊಳ್ಳಿ ಹಾಗೂ ಭುಜಕ್ಕೆ ಸಮನಾಗಿ ತೋಳುಗಳನ್ನು ನಿಮ್ಮ ಮುಂಭಾಗದಲ್ಲಿರಿಸಿ. ದೀರ್ಘ ಉಸಿರನ್ನು ತೆಗೆದುಕೊಂಡು ನಿಯಂತ್ರಣ ಕಳೆದುಕೊಳ್ಳದೆಯೇ ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಿ.

ಇದನ್ನೂ ಓದಿ:  Weight Loss: ವೇಗವಾಗಿ ತೂಕ ಇಳಿಸುವ ಭರದಲ್ಲಿ ಅಪಾಯವನ್ನು ಅಪ್ಪಿಕೊಳ್ಳದಿರಿ, ಡಯಟ್​ ಪ್ಲಾನ್​ ಹೀಗಿರಲಿ

ತೋಳುಗಳನ್ನು ನೇರವಾಗಿರಿಸಿಕೊಂಡು ಬಲಕ್ಕೆ ಚಲಿಸುತ್ತಾ ಮುಂದಕ್ಕೆ ಬಾಗಿ ಈ ಸಮಯದಲ್ಲಿ ನಿಮ್ಮ ತೋಳು ಬಲ ಕಾಲಿನ ಹೆಬ್ಬೆರಳಿನ ಮೇಲೆ ಚಲಿಸಲಿ ಹೀಗೆಯೇ ಎಡಗಾಲಿನ ಹೆಬ್ಬರಳಿನ ಮೇಲೆ ಚಲಾಯಿಸಿ ನಂತರ ಹಿಂದಕ್ಕೆ ಬಾಗಿ ಸಮಸ್ಥಿತಿಗೆ ಬನ್ನಿ. ನಿಮ್ಮ ಕಾಲುಗಳ ಮಧ್ಯೆ ಹಿಟ್ಟು ಬೀಸುವ ಕಲ್ಲಿದೆ ಎಂಬ ಭಾವನೆಯಿಂದ ಆಸನಗಳನ್ನು ವಿರಾಮ ತೆಗೆದುಕೊಳ್ಳದೆಯೇ ಪುನರಾವರ್ತಿಸಿ. ಪ್ರದಕ್ಷಿಣಾಕಾರವಾಗಿ ಐದು ಸುತ್ತು ಅಂತೆಯೇ ಅಪ್ರದಕ್ಷಿಣಾಕಾರವಾಗಿ ಐದು ಸುತ್ತು ಮಾಡಿ. ಉಸಿರಾಟದ ಲಯದ ಮೇಲೆ ಗಮನಹರಿಸಿ. ಸೊಂಟ ಹಾಗೂ ಹೊಟ್ಟೆಯ ಮೇಲೆ ಚಲನೆಯ ಪರಿಣಾಮದ ಬಗ್ಗೆ ಜಾಗೃತಿ ಇರಲಿ. ಸೊಂಟ ಹಾಗೂ ಹೊಟ್ಟೆಯನ್ನು ಆಕಾರದಲ್ಲಿರಿಸಲು ಈ ಆಸನ ಸಹಕಾರಿ.

ನೌಕಾಸನ
ಕಾಲುಗಳನ್ನು ಅಂತದಲ್ಲಿರಿಸಿಕೊಂಡು ನೌಕೆಯ ಸ್ಥಿತಿಯಲ್ಲಿ ಹಿಂಭಾಗವನ್ನು ಬಾಗಿಸಿ ಪೃಷ್ಠದಲ್ಲಿ ಕುಳಿತುಕೊಳ್ಳುವುದು ನೌಕೆಯ ಸ್ಥಿತಿಯಲ್ಲಿ ಆಳವಾಗಿ ಉಸಿರನ್ನು ಒಳಕ್ಕೆ ಎಳೆದುಕೊಂಡು ಕುಳಿತುಕೊಳ್ಳಿ. ಸೊಂಟದ ಭಾಗದಿಂದ ಮುಂದಕ್ಕೆ ಬಾಗಿ ಈ ಸಮಯದಲ್ಲಿ ತೋಳುಗಳನ್ನು ವಿಸ್ತಾರವಾಗಿ ಇರಿಸಿಕೊಳ್ಳಿ ಉಸಿರು ಒಳಕ್ಕೆ ತೆಗೆದುಕೊಂಡಂತೆ ಸಾಧ್ಯವಾದಷ್ಟು ಹಿಂದಕ್ಕೆ ಬಾಗಿ ಈ ಸಮಯದಲ್ಲಿ ತೋಳುಗಳನ್ನು ಹಿಂದಕ್ಕೆ ಎಳೆದುಕೊಳ್ಳಿ. ಐದು ಬಾರಿ ಆಸನವನ್ನು ಪುನರಾವರ್ತಿಸಿ. ಈ ಆಸನ ಸೊಂಟ ಹಾಗೂ ಹೊಟ್ಟೆಗೆ ಪರಿಣಾಮಕಾರಿಯಾಗಿದೆ. ಮಲಬದ್ಧತೆ ಸಮಸ್ಯೆಗೂ ಉತ್ತಮವಾಗಿದೆ.

ಗತ್ಯಾತ್ಮಕಮೇರು ವಕ್ರಾಸನ
ಕಾಲುಗಳನ್ನು ಉದ್ದಕ್ಕೆ ಚಾಚಿ ಆರಾಮವಾಗಿ ಸಾಧ್ಯವಾದಷ್ಟು ಬೇರ್ಪಡಿಸಿಕೊಂಡು ಕುಳಿತುಕೊಳ್ಳಿ. ನಿಮ್ಮ ತೋಳುಗಳನ್ನು ಭುಜಗಳಿಗೆ ಅನುಗುಣವಾಗಿ ಬದಿಯಲ್ಲಿ ಚಾಚಿ. ದೀರ್ಘವಾಗಿ ಉಸಿರಾಡಿ ಮತ್ತು ಉಸಿರಾಟದ ಸಮಯದಲ್ಲಿ ಸೊಂಟವನ್ನು ತಿರುಗಿಸಿ, ಇದರಿಂದ ಬಲಗೈ ಎಡಗಾಲಿನ ಹೆಬ್ಬರಳನ್ನು ತಲುಪುತ್ತದೆ. ಎಡಗೈಯನ್ನು ನಿಮ್ಮ ಹಿಂಭಾಗದಲ್ಲಿ ಚಾಚಿ ಹಾಗೂ ಈ ಸಮಯದಲ್ಲಿ ನಿಮ್ಮ ಎಡಗೈಯ ಬೆರಳುಗಳನ್ನು ನೋಡಿ. ಹೀಗೆ ನಿಮ್ಮ ದೇಹವು ಒಂದು ಸರಳ ರೇಖೆಯಲ್ಲಿರುತ್ತದೆ. ಒಂದು ರೀತಿಯ ದೇಹದ ವಕ್ರತೆಯನ್ನು ಅನ್ನು ಇದು ಪ್ರತಿನಿಧಿಸುತ್ತದೆ. ಇದೇ ರೀತಿ ಬಲ ಬದಿಗೂ ಮಾಡಿ ಹೀಗೆ ಐದು ಸುತ್ತುಗಳನ್ನು ಪೂರ್ಣಗೊಳಿಸಿ.

ಬೆನ್ನಮೇಲೆ ಮಲಗಿ ಮಾಡುವ ಆಸನಗಳು
ನಿಮ್ಮ ಬೆನ್ನ ಮೇಲೆ ಮಲಗಿ ಕಾಲುಗಳನ್ನು ಸುಮಾರು ಒಂದು ಅಡಿ ಅಂತರದಲ್ಲಿ ಇರಿಸಿ, ಕೈಗಳನ್ನು ದೇಹದ ಪಕ್ಕದಲ್ಲಿ ಇರಿಸಿ ಮತ್ತು ನಿಮ್ಮ ಇಡೀ ದೇಹವನ್ನು ವಿಶ್ರಾಂತಿ ಸ್ಥಿತಿಯಲ್ಲಿರಿಸಿ. ಉಸಿರಾಟ ಪರಿಚಲನೆಯ ಮೇಲೆ ಗಮನಹರಿಸಿ. ಅಂಗೈ ಅಥವಾ ತೋಳುಗಳ ಸಹಾಯವಿಲ್ಲದೆಯೇ ಸಾಧ್ಯವಾದಷ್ಟು ಬಲಗಾಲನ್ನು ಮೇಲಕ್ಕೆತ್ತಿ ಮೊಣಕಾಲನ್ನು ಮಡಚದಿರಿ. ನಿಧಾನವಾಗಿ ಅಭ್ಯಾಸ ಮಾಡುತ್ತಲೇ 90 ಡಿಗ್ರಿಯವರೆಗೆ ಕಾಲುಗಳನ್ನು ಮೇಲಕ್ಕೆತ್ತಿ. ಉಸಿರನ್ನು ತೆಗೆದುಕೊಳ್ಳುತ್ತಾ ಕಾಲನ್ನು ಕೆಳಕ್ಕೆ ಬಿಡಿ ಹೀಗೆ ಎಡಗಾಲನ್ನೂ ಮಾಡಿ ನಂತರ ಎರಡೂ ಕಾಲುಗಳನ್ನು ಜೊತೆಯಾಗಿ ಮೇಲಕ್ಕೆತ್ತಿ.

ಹೊಟ್ಟೆಯ ಸ್ನಾಯುಗಳಿಗೆ ಈ ಆಸನ ಹೆಚ್ಚು ಸಹಕಾರಿಯಾಗಿದೆ. ಸ್ನಾಯುಗಳ ಆಕಾರವನ್ನು ಸುಂದರವಾಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಬೆನ್ನುಮೂಳೆಯ ಸಮಸ್ಯೆ ಇರುವವರು ಮೊದಲು ಬೆನ್ನಿನ ಕೆಳಭಾಗದಲ್ಲಿ ಅಭ್ಯಾಸಗಳನ್ನು ಮಾಡಬೇಕು.

ಪಾದಚಕ್ರಾಸನ
ರಾಮ್‌ದೇವ್ ಬಾಬಾರವರಿಂದ ಈ ಆಸನ ತೂಕ ಇಳಿಕೆಯಲ್ಲಿ ಕೂಡ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬೆನ್ನಿನ ಮೇಲೆ ಮಲಗಿಕೊಂಡೇ ಬಲಕಾಲನ್ನು ಸ್ವಲ್ಪ ಮೇಲಕ್ಕೆತ್ತಿ ನಂತರ ಕಾಲನ್ನು ಪೂರ್ಣವಾಗಿ ವೃತ್ತಾಕಾರವಾಗಿ ಸುತ್ತಿ, 5-10 ಸುತ್ತುಗಳು ಪ್ರದಕ್ಷಿಣಾಕಾರವಾಗಿ ನಂತರ 5-10 ಸುತ್ತುಗಳು ಅಪ್ರದಕ್ಷಿಣಾಕಾರವಾಗಿ ಸುತ್ತಿ. ಇದೇ ಆಸನವನ್ನು ಎಡಗಾಲಿನಲ್ಲಿ ಪುನರಾವರ್ತಿಸಿ. ನಂತರ ಎರಡು ಕಾಲುಗಳನ್ನು ಜೊತೆಯಾಗಿರಿಸಿಕೊಂಡು ಆಸನಗಳನ್ನು ಮಾಡಿ. ನೀವು ಕೈ ಹಾಗೂ ತೋಳಿನ ಸಹಾಯವಿಲ್ಲದೆಯೇ ಈ ಆಸನ ಮಾಡುವುದರಿಂದ ಹೊಟ್ಟೆಯ ಸ್ನಾಯುಗಳೇ ಎಲ್ಲಾ ಕೆಲಸವನ್ನು ಮಾಡುತ್ತವೆ.

ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ಈ ಆಸನ ಪರಿಣಾಮಕಾರಿಯಾಗಿದೆ. ಆಸನದಿಂದ ನಿಧಾನವಾಗಿ ಫಲಿತಾಂಶ ದೊರೆಯುತ್ತದೆ ಆದರೆ ತಾಳ್ಮೆ ಅಗತ್ಯವಾಗಿದೆ.

ಇದನ್ನೂ ಓದಿ:   Insomnia: ಮಧುಮೇಹ ನಿಮಗಿದ್ಯಾ? ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಎಚ್ಚರ!

ನಿಂತು ಮಾಡುವ ಆಸನಗಳು
ತಾಡಾಸನ
ಕೊಂಚ ಅಂತದಲ್ಲಿ ನಿಂತುಕೊಳ್ಳಿ. ಬೆರಳುಗಳನ್ನು ಜೋಡಿಸಿ ಅಂಗೈಗಳನ್ನು ಮೇಲಕ್ಕೆ ತಿರುಗಿಸಿ ತಲೆಯ ಮೇಲ್ಭಾಗದಿಂದ ತೋಳುಗಳನ್ನು ಮೇಲಕ್ಕೆತ್ತಿ. ಈ ಆಸನದಲ್ಲಿಯೇ ಉತ್ತಮ ನಿಯಂತ್ರಣ ಸಾಧಿಸಲು ಕಣ್ಣಿನ ಮಟ್ಟವನ್ನು ಒಂದೇ ಕಡೆ ಗುರಿಯಾಗಿರಿಸಿಕೊಳ್ಳಿ. ನಿಮ್ಮ ಕಾಲ್ಬೆರಳಿನ ಮೇಲೆ ನಿಂತುಕೊಳ್ಳಿ ಉಸಿರಾಟ ಪ್ರಕ್ರಿಯೆಯನ್ನು ಮಾಡಿ. ಸಾಧ್ಯಾವಾದಷ್ಟು ಕೈಗಳನ್ನು ಮೇಲಕ್ಕೆ ಚಾಚಿ ದೇಹವನ್ನು ಕಾಲ್ಬೆರಳು, ಬೆನ್ನುಮೂಳೆ ಹಾಗೂ ತೋಳುಗಳ ಸಹಾಯದಿಂದ ಸಂಪೂರ್ಣವಾಗಿ ಹಿಗ್ಗಿಸಿ.

ಸೂರ್ಯನಮಸ್ಕಾರ
12 ಭಂಗಿಗಳನ್ನೊಳಗೊಂಡ ಈ ಆಸನದ ಅಭ್ಯಾಸವನ್ನು ನೀವು ವಿಡಿಯೋಗಳ ಮೂಲಕ ಅರಿತುಕೊಳ್ಳಬಹುದಾಗಿದೆ. ಇದನ್ನು ಎಲ್ಲಿ ಬೇಕಾದರೂ ಮಾಡಬಹುದಾಗಿದೆ. ಮೊದಲಿಗೆ ಕೆಲವು ಸುತ್ತುಗಳಿಂದ ಆರಂಭಿಸಿ ನಂತರ ಕನಿಷ್ಠ 10 ಸುತ್ತಿನವರೆಗೆ ಅಭ್ಯಸಿಸಿ.

ಶವಾಸನ
ಸೂರ್ಯನಮಸ್ಕಾರದ ನಂತರ ಶವಾಸನವನ್ನು ನೀವು ಮಾಡಲೇಬೇಕು. ಈ ಆಸನದಲ್ಲಿ ಪೂರ್ಣ ದೇಹವು 3-5 ನಿಮಿಷಗಳ ಕಾಲ ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ಪ್ರಾಣಾಯಾಮವನ್ನು ಕೂಡ ಮರೆಯದೆಯೇ ಅಭ್ಯಸಿಸಿ.

ಇದನ್ನೂ ಓದಿ:  Weight loss: ಹೀಗೆ ವಾಕಿಂಗ್ ಮಾಡಿ, ಕೊಬ್ಬು ಕರಗುತ್ತೆ ನೋಡಿ

ತೂಕ ಇಳಿಕೆಯಲ್ಲಿ ತ್ವರಿತ ಫಲಿತಾಂಶಗಳನ್ನು ಪಡೆಯಬೇಕು ಎಂದಾದಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್‌ಗಳು, ಸಕ್ಕರೆ, ಸಂಸ್ಕರಿಸಿದ ಆಹಾರ, ಹುರಿದ ತಿನಿಸುಗಳು, ಖಾರಯುಕ್ತ ಆಹಾರಗಳನ್ನು ತ್ಯಜಿಸಿ. ನಿಮ್ಮ ಆಹಾರದಲ್ಲಿ ಪ್ರೋಟೀನ್ ಹಾಗೂ ಫೈಬರ್ ಅಂಶಗಳನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಹೊಟ್ಟೆಯ ಮೂರನೇ ಒಂದು ಭಾಗವನ್ನು ಖಾಲಿಯಾಗಿರಿಸಿ. ದಿನಪೂರ್ತಿ ಸಾಕಷ್ಟು ನೀರು ಸೇವಿಸಿ.
Published by:Ashwini Prabhu
First published: