• Home
  • »
  • News
  • »
  • lifestyle
  • »
  • Health Tips: ರಾತ್ರಿ ಸರಿಯಾಗಿ ನಿದ್ದೆ ಬರ್ತಿಲ್ವಾ? ಈ 3 ಯೋಗ ಟ್ರಿಕ್ಸ್ ಫಾಲೋ ಮಾಡಿ

Health Tips: ರಾತ್ರಿ ಸರಿಯಾಗಿ ನಿದ್ದೆ ಬರ್ತಿಲ್ವಾ? ಈ 3 ಯೋಗ ಟ್ರಿಕ್ಸ್ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಪ್ರತಿದಿನ ರಾತ್ರಿ ನಿದ್ರೆಗೆ ಹೋಗುವ ಮೊದಲು ಧ್ಯಾನ ಮತ್ತು ಪ್ರಾಣಾಯಾಮ ತಂತ್ರಗಳನ್ನು ಮೊದಲು ಸುಮಾರು 2 ರಿಂದ 3 ನಿಮಿಷಗಳ ಕಾಲ ಮಾಡಬಹುದು ಮತ್ತು ದಿನದಿಂದ ದಿನಕ್ಕೆ ಈ ಅಭ್ಯಾಸವನ್ನು ಹಂತ ಹಂತವಾಗಿ ಹೆಚ್ಚಿಸಿಕೊಳ್ಳಿ

  • Share this:

ನಿಯಮಿತ ಯೋಗಾಭ್ಯಾಸವು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸುವುದು ಮತ್ತು ಅನೇಕ ರೋಗಗಳನ್ನು ದೂರವಿಡುವುದು ಮಾತ್ರವಲ್ಲದೆ, ಮನಸ್ಸು ಅಥವಾ ದೇಹದಲ್ಲಿನ ಒತ್ತಡ,  (Stress) ಆತಂಕ ಅಥವಾ ಉದ್ವೇಗವನ್ನು ಹೊರ ಹಾಕಲು ಸಹ ಉತ್ತಮ ಮಾರ್ಗವಾಗಿದೆ. ನಮ್ಮಲ್ಲಿ ಎಷ್ಟೋ ಜನರಿಗೆ ರಾತ್ರಿ ಹೊತ್ತಿನಲ್ಲಿ ಹಾಸಿಗೆಯ ಮೇಲೆ ಹೋಗಿದ ತಕ್ಷಣ ಮಲಗಲು ಎಷ್ಟೇ ಪ್ರಯತ್ನಿಸಿದರೂ ಸಹ ಸರಿಯಾಗಿ ಮತ್ತು ಬೇಗನೆ ನಿದ್ರೆ (Sleep) ಬರುವುದಿಲ್ಲ. ದೀರ್ಘಕಾಲದ ಒತ್ತಡವನ್ನು ನಿವಾರಿಸುವುದರಿಂದ ಹಿಡಿದು ದೇಹದಲ್ಲಿನ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಮಾನಸಿಕ ಸ್ಪಷ್ಟತೆ ಹಾಗೂ ಶಾಂತತೆಯನ್ನು ಸೃಷ್ಟಿಸುವವರೆಗೆ, ಯೋಗವು (Yoga) ಆರೋಗ್ಯ ಪ್ರಯೋಜನಗಳಿಂದ (Health Benefits) ತುಂಬಿದೆ.


ಧ್ಯಾನ ಮತ್ತು ಉಸಿರಾಟದ ಭಂಗಿಗಳು ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತವೆ, ನಮ್ಮ ಮನಸ್ಥಿತಿಯನ್ನು ಉಜ್ವಲಗೊಳಿಸುತ್ತವೆ ಮತ್ತು ಉತ್ತಮವಾಗಿ ನಿದ್ರೆ ಮಾಡಲು ಸಹಾಯ ಮಾಡಲು ದೇಹವನ್ನು ವಿಶ್ರಾಂತಿಗೊಳಿಸುತ್ತದೆ ಎಂದು ಹೇಳಬಹುದು. ಯೋಗ ಗುರುಗಳು ಮತ್ತು ಆಧ್ಯಾತ್ಮಿಕ ಗುರುವಾದ ಅಕ್ಷರ್ ಅವರು ಒಂದು ಸಂದರ್ಶನದಲ್ಲಿ "ಯೋಗವು ಆಸನಗಳು ಅಥವಾ ದೈಹಿಕ ಭಂಗಿಗಳು, ಪ್ರಾಣಾಯಾಮ, ಧ್ಯಾನ, ಮುದ್ರೆ, ಪಠಣ ಮತ್ತು ಹೆಚ್ಚಿನವುಗಳಂತಹ ಯೋಗ ತಂತ್ರಗಳನ್ನು ಒಳಗೊಂಡಿದೆ. ಈ ಕೆಳಗಿನ ಯೋಗಗಳನ್ನು ಅಭ್ಯಾಸ ಮಾಡಲು ನೀವು ಪ್ರತಿದಿನ ರಾತ್ರಿ 5 ರಿಂದ 15 ನಿಮಿಷಗಳನ್ನು ಮೀಸಲಿಡಿ” ಎಂದು ಹೇಳಿದ್ದಾರೆ.


ನೀವು ಪ್ರತಿದಿನ ರಾತ್ರಿ ನಿದ್ರೆಗೆ ಹೋಗುವ ಮೊದಲು ಧ್ಯಾನ ಮತ್ತು ಪ್ರಾಣಾಯಾಮ ತಂತ್ರಗಳನ್ನು ಮೊದಲು ಸುಮಾರು 2 ರಿಂದ 3 ನಿಮಿಷಗಳ ಕಾಲ ಮಾಡಬಹುದು ಮತ್ತು ದಿನದಿಂದ ದಿನಕ್ಕೆ ಈ ಅಭ್ಯಾಸವನ್ನು ಹಂತ ಹಂತವಾಗಿ ಹೆಚ್ಚಿಸಿಕೊಳ್ಳಬಹುದು.


ನೀವು ವೇಗವಾಗಿ ನಿದ್ರೆಗೆ ಜಾರಲು ಸಹಾಯ ಮಾಡುವ 3 ತಂತ್ರಗಳು:
ನೀವು ಪ್ರತಿ ಯೋಗ ಭಂಗಿಯನ್ನು ಸುಮಾರು 30 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಬಹುದು ಮತ್ತು ಪ್ರತಿ ಭಂಗಿಯನ್ನು ಮೂರು ಬಾರಿ ಪುನರಾವರ್ತಿಸಬಹುದು. 3 ಯೋಗ ಭಂಗಿಗಳು ತುಂಬಾನೇ ಸರಳವಾಗಿದೆ ಮತ್ತು ಆರಂಭಿಕರಿಗೆ ಕಷ್ಟ ಎನಿಸುವುದಿಲ್ಲ. ಅವುಗಳನ್ನು ಯಾರು ಬೇಕಾದರೂ ಮಾಡಬಹುದು.


1. ಬಾಲಾಸನ ಅಥವಾ ಮಗುವಿನ ಭಂಗಿ


ನಿಮ್ಮ ಹಿಮ್ಮಡಿಗಳ ಮೇಲೆ ನೆಲದ ಮೇಲೆ ಅಥವಾ ಯೋಗ ಚಾಪೆಯ ಮೇಲೆ ಕುಳಿತುಕೊಳ್ಳಿ ಮತ್ತು ನಿಮ್ಮ ಮೊಣಕಾಲುಗಳನ್ನು ಒಟ್ಟಿಗೆ ಅಥವಾ ಅಗಲವಾಗಿ ಇರಿಸಿ. ನಿಧಾನವಾಗಿ, ಉಸಿರನ್ನು ಹೊರಬಿಟ್ಟು, ನಿಮ್ಮ ಹಣೆಯಿಂದ ನೆಲವನ್ನು ಸ್ಪರ್ಶಿಸಲು ಮುಂದಕ್ಕೆ ಬಾಗಿಸಿ ಅಥವಾ ನಿಮ್ಮ ತೋಳುಗಳನ್ನು ನಿಮ್ಮ ದೇಹದ ಪಕ್ಕದಲ್ಲಿ ಮತ್ತು ಅಂಗೈಗಳನ್ನು ಮೇಲಕ್ಕೆ ಅಭಿಮುಖವಾಗಿ ಇರಿಸಿ, ಒಂದು ಅಥವಾ ಎರಡು ಮುಷ್ಟಿಗಳ ಮೇಲೆ ಅದನ್ನು ಇರಿಸಿ.


ಪರ್ಯಾಯವಾಗಿ, ಯೋಗ ಚಾಪೆಯ ಮುಂಭಾಗದ ಕಡೆಗೆ ನಿಮ್ಮ ತೋಳುಗಳನ್ನು ಚಾಚುವ ಮೂಲಕ ನೀವು ನಿಮ್ಮ ಅಂಗೈಗಳನ್ನು ಚಾಪೆಯ ಮೇಲೆ ಕೆಳಕ್ಕೆ ಅಭಿಮುಖವಾಗಿ ಇಡಬಹುದು. ಈಗ, ನಿಮ್ಮ ಮೊಣಕಾಲುಗಳು ಒಟ್ಟಿಗೆ ಇದ್ದರೆ, ನಿಮ್ಮ ಎದೆಯನ್ನು ತೊಡೆಗಳ ಮೇಲೆ ನಿಧಾನವಾಗಿ ಒತ್ತಿರಿ.
ಭುಜಗಳು, ದವಡೆ ಮತ್ತು ಕಣ್ಣುಗಳಿಗೆ ವಿಶ್ರಾಂತಿ ನೀಡಿ ಹಾಗೂ ನಿಮ್ಮ ಹಣೆ ಆರಾಮದಾಯಕವಾದ ಸ್ಥಿತಿಯಲ್ಲಿರಿಸಿ. ಏಕೆಂದರೆ ಎರಡು ಕಣ್ಣುಗಳ ಹುಬ್ಬುಗಳ ನಡುವೆ ಒಂದು ಶಕ್ತಿ ಬಿಂದುವಿದೆ, ಅದು ವೇಗಸ್ ನರವನ್ನು ಉತ್ತೇಜಿಸುವ ಮೂಲಕ ವಿಶ್ರಾಂತಿ ಮತ್ತು ಜೀರ್ಣಿಸಿಕೊಳ್ಳುವ ಪ್ರತಿಕ್ರಿಯೆಯನ್ನು ಬೆಂಬಲಿಸುತ್ತದೆ. ಈ ಭಂಗಿಯಲ್ಲಿ ನೀವು ಬಯಸಿದಷ್ಟು ಕಾಲ ಇರಿ ಮತ್ತು ಉಸಿರನ್ನು ಹೊರ ಬಿಡುವಾಗ ನಿಮ್ಮ ದೇಹ ಮತ್ತು ತೋಳುಗಳನ್ನು ಮೃದುಗೊಳಿಸುವಾಗ ನಿಮ್ಮ ಹೊಕ್ಕಳನ್ನು ನಿಮ್ಮ ಬೆನ್ನೆಲುಬಿನ ಕಡೆಗೆ ಎಳೆಯಿರಿ. ಉಸಿರನ್ನು ಒಳಕ್ಕೆಳೆದುಕೊಳ್ಳುವಾಗ ಹಿಮ್ಮಡಿಗಳ ಮೇಲೆ ಕುಳಿತುಕೊಳ್ಳುವ ಭಂಗಿಗೆ ನಿಧಾನವಾಗಿ ಹಿಂದಿರುಗಿ.


ಇದನ್ನೂ ಓದಿ: Health Tips: ಈ ಆಹಾರಗಳನ್ನು ತಿಂದ್ರೆ ಕ್ಯಾಲ್ಸಿಯಂ ಕೊರತೆಯೇ ಉಂಟಾಗೋದಿಲ್ಲ; ಆಯುರ್ವೇದ ತಜ್ಞರ ಸಲಹೆ


ಇದರ ಪ್ರಯೋಜನಗಳು:


ಈ ಯೋಗ ಭಂಗಿಯು ಎದೆ, ಬೆನ್ನು ಮತ್ತು ಭುಜಗಳಲ್ಲಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೀವು ಹಗಲಿನಲ್ಲಿ ಅಥವಾ ನಿಮ್ಮ ವ್ಯಾಯಾಮದ ಸಮಯದಲ್ಲಿ ತಲೆ ತಿರುಗುವಿಕೆ ಅಥವಾ ಆಯಾಸವನ್ನು ಹೊಂದಿದ್ದರೆ ಇದು ತುಂಬಾನೇ ಸಹಾಯಕ್ಕೆ ಬರುತ್ತದೆ. ಇದು ಬೆನ್ನು ನೋವನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.ಗರ್ಭಿಣಿಯರಿಗೆ ಅಥವಾ ಅತಿಸಾರ ಅಥವಾ ಮೊಣಕಾಲಿನ ಗಾಯದಿಂದ ಬಳಲುತ್ತಿರುವವರಿಗೆ ಈ ವ್ಯಾಯಾಮವನ್ನು ಶಿಫಾರಸು ಮಾಡಲಾಗುವುದಿಲ್ಲ.


2. ಸುಖಾಸನ ಅಥವಾ ಸುಲಭವಾದ ಭಂಗಿ


ಯೋಗ ಚಾಪೆಯ ಮೇಲೆ ಅಥವಾ ನೆಲದ ಮೇಲೆ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ. ನಿಮ್ಮ ಒಂದು ಕಾಲನ್ನು ಬಾಗಿಸಿ ಅದನ್ನು ಎದುರಿನ ತೊಡೆಯ ಕೆಳಗೆ ಇರಿಸಿ ಮತ್ತು ಇನ್ನೊಂದು ಕಾಲಿನಿಂದ ಅದನ್ನು ಪುನರಾವರ್ತಿಸಿ. ನೇರವಾಗಿ ಕುಳಿತು, ನಿಮ್ಮ ತಲೆ, ಕುತ್ತಿಗೆ ಮತ್ತು ಮುಂಡವನ್ನು ನೇರ ರೇಖೆಯಲ್ಲಿ ಜೋಡಿಸಿ, ನಿಮ್ಮ ಕೈಗಳನ್ನು ನಿಮ್ಮ ಮೊಣಕಾಲುಗಳು ಅಥವಾ ತೊಡೆಗಳ ಮೇಲೆ ಜ್ಞಾನ ಮುದ್ರೆಯಲ್ಲಿ ಇರಿಸಿ.
ನಿಮ್ಮ ಅಂಗೈಗಳನ್ನು ಕೆಳಕ್ಕೆ ತಿರುಗಿಸಿ, ನಿಧಾನವಾಗಿ ಉಸಿರನ್ನು ಒಳಕ್ಕೆಳೆದುಕೊಳ್ಳುವಂತೆ ಮಾಡಿ, ಉಸಿರನ್ನು ಹೊರ ಬಿಡುವಾಗ ನಿಮ್ಮ ಬೆನ್ನೆಲುಬು ಉದ್ದವಾಗಿ ಹಿಗ್ಗುವುದನ್ನು ಅನುಭವಿಸಿ.


ಇದರ ಪ್ರಯೋಜನಗಳು:


ಈ ಆಸನವು ನಿಶ್ಚಲತೆ ಮತ್ತು ಪ್ರಶಾಂತತೆಯನ್ನು ಕಂಡುಕೊಳ್ಳುವುದರ ಜೊತೆಗೆ, ಸ್ನಾಯು ಮತ್ತು ಕೀಲು ನೋವುಗಳನ್ನು ನಿವಾರಿಸುತ್ತದೆ. ನಮ್ಯತೆಯನ್ನು ನೀಡುತ್ತದೆ, ಬೆನ್ನನ್ನು ನೇರವಾಗಿರಿಸುತ್ತದೆ ಮತ್ತು ಕಾಲುಗಳಿಗೆ ಬಲವನ್ನು ನೀಡುತ್ತದೆ. ಇದು ಬೆನ್ನಿನ ಸ್ನಾಯುಗಳು ಮತ್ತು ಬೆನ್ನು ಮೂಳೆಯನ್ನು ವಿಸ್ತರಿಸುತ್ತದೆ, ಎದೆಯನ್ನು ವಿಸ್ತರಿಸುತ್ತದೆ, ಮೊಣಕಾಲುಗಳ ಬಾಹ್ಯ ಭಾಗವನ್ನು ಹಿಗ್ಗಿಸುತ್ತದೆ ಮತ್ತು ಸೊಂಟವನ್ನು ಅನ್‌ಲಾಕ್ ಮಾಡುತ್ತದೆ.


3. ವಜ್ರಾಸನ ಅಥವಾ ವಜ್ರದ ಭಂಗಿ


ನೆಲದ ಮೇಲೆ ಮಂಡಿಯೂರಿ ಕುಳಿತು ನಿಮ್ಮ ಸೊಂಟವನ್ನು ನಿಮ್ಮ ಹಿಮ್ಮಡಿಗಳ ಮೇಲೆ ಊರಿ. ನಿಮ್ಮ ಮೊಣಕಾಲುಗಳು ಮತ್ತು ಪಾದಗಳನ್ನು ಒಟ್ಟಿಗೆ ಎಳೆಯುವ ಮೂಲಕ ನಿಮ್ಮ ಹಿಮ್ಮಡಿಗಳನ್ನು ಪರಸ್ಪರ ಹತ್ತಿರದಲ್ಲಿ ಇರಿಸಿ ಮತ್ತು ನಿಮ್ಮ ಪಾದಗಳನ್ನು ನಿಮ್ಮ ಕಾಲುಗಳಿಗೆ ಅನುಗುಣವಾಗಿ ಸೂಚಿಸಿ. ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಅಥವಾ ನಿಮ್ಮ ತೊಡೆಗಳ ಮೇಲೆ ಇರಿಸಿ ಮತ್ತು ನಿಮಗೆ ಆರಾಮದಾಯಕವಾಗುವವರೆಗೆ ನಿಮ್ಮ ಸೊಂಟವನ್ನು ಸ್ವಲ್ಪ ಹಿಂದಕ್ಕೆ ಮತ್ತು ಮುಂದಕ್ಕೆ ಸರಿ ಹೊಂದಿಸಿ. ನೀವು ನಿಮ್ಮ ಕಾಲುಗಳ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಉಸಿರನ್ನು ಹೊರಕ್ಕೆ ಬಿಡಿ.


ಇದನ್ನೂ ಓದಿ: Weight loss: ಮಿತವಾಗಿ ಕಲ್ಲಂಗಡಿ ತಿನ್ನುತ್ತಾ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು


ಇದರ ಪ್ರಯೋಜನಗಳು:


ವಜ್ರಾಸನವು ಮನಸ್ಸನ್ನು ಶಾಂತವಾಗಿ ಮತ್ತು ಸ್ಥಿರವಾಗಿರಿಸಲು ಸಹಾಯ ಮಾಡುವುದಲ್ಲದೆ, ಜೀರ್ಣಕಾರಿ ಆಮ್ಲೀಯತೆ ಮತ್ತು ಅನಿಲ ರಚನೆಯನ್ನು ಗುಣಪಡಿಸುತ್ತದೆ, ಮೊಣಕಾಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ, ತೊಡೆಯ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವ್ಯಾಯಾಮವು ಲೈಂಗಿಕ ಅಂಗಗಳನ್ನು ಬಲಪಡಿಸಲು ಮತ್ತು ಮೂತ್ರದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಗ್ರ್ಯಾಂಡ್ ಮಾಸ್ಟರ್ ಅಕ್ಷರ್ ಅವರು ಕೆಲವು ಧ್ಯಾನ ತಂತ್ರಗಳನ್ನು ಸಹ ಸೂಚಿಸಿದ್ದಾರೆ ನೋಡಿ.


1. ಪ್ರಾರ್ಥನೆ ಧ್ಯಾನ


ಯಾವುದೇ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ಪ್ರಾಣಾಯಾಮ ಮುದ್ರೆಯನ್ನು ರೂಪಿಸಲು ನಿಮ್ಮ ಅಂಗೈಗಳನ್ನು ನಿಮ್ಮ ಎದೆಯ ಮುಂದೆ ಜೋಡಿಸಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಿರಿ. ನಿಮ್ಮ ಕಣ್ಣುಗಳನ್ನು ಮುಚ್ಚಿ. ಧನಾತ್ಮಕ ದೃಢೀಕರಣಗಳನ್ನು ಗಟ್ಟಿಯಾಗಿ ಅಥವಾ ಮೌನವಾಗಿ ಫ್ರೇಮ್ ಮಾಡಿಕೊಳ್ಳಿರಿ ಮತ್ತು ಪುನರಾವರ್ತಿಸಿ.


ಇದರ ಪ್ರಯೋಜನಗಳು: ಈ ಧ್ಯಾನ ನಿಮಗೆ ಶಾಂತತೆಯ ಪ್ರಜ್ಞೆಯನ್ನು ಮೂಡಿಸುತ್ತದೆ, ಸಾಧಕರಲ್ಲಿ ಹೆಚ್ಚಿನ ಕೃತಜ್ಞತೆಯ ಪ್ರಜ್ಞೆಯನ್ನು ಬೆಳೆಸುತ್ತದೆ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ, ನಿಮ್ಮನ್ನು ಹೆಚ್ಚು ಸಕಾರಾತ್ಮಕ ಮತ್ತು ಆಶಾವಾದಿಯನ್ನಾಗಿ ಮಾಡುತ್ತದೆ ಮತ್ತು ಪ್ರಶಾಂತತೆಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.


2. ಪ್ರಾಣಾಯಾಮ ತಂತ್ರ


ಯಾವುದೇ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಿರಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ನಿಮ್ಮ ಅಂಗೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ. ಆಳವಾಗಿ ಉಸಿರನ್ನು ಒಳಕ್ಕೆಳೆದುಕೊಳ್ಳಿ ಮತ್ತು ಉಸಿರನ್ನು ಹೊರ ಬಿಡುವಾಗ, ನಿಮ್ಮ ತುಟಿಗಳಿಂದ ಮೆಲ್ಲಗೆ ನಿಮಗೆ ಸಾಧ್ಯವಾದಷ್ಟು ಸಮಯದವರೆಗೆ "ಓಂ" ಎಂದು ಹೇಳಿ. ನಿಮ್ಮ ದೇಹಾದ್ಯಂತ ಹರಡಿದ ಶಬ್ದದ ಕಂಪನವನ್ನು ಅನುಭವಿಸಿ.


ಯೋಗಾಭ್ಯಾಸವು ನಿಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಮತ್ತು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿದ್ರಾಹೀನತೆ, ತೊಂದರೆಗೀಡಾದ ನಿದ್ರೆ, ಸ್ಲೀಪ್ ಅಪ್ನಿಯಾ ಮತ್ತು ಇತರ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಯೋಗಾಭ್ಯಾಸ ಅದ್ಭುತವಾದ ಚಿಕಿತ್ಸೆ ನೀಡುತ್ತದೆ ಎಂದು ಹೇಳಬಹುದು.

Published by:ಪಾವನ ಎಚ್ ಎಸ್
First published: