• Home
  • »
  • News
  • »
  • lifestyle
  • »
  • Lungs Health: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ

Lungs Health: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೋಗ ಮಾಡುವುದರಿಂದ ನೀವು ಉಸಿರಾಟ ಸಮಸ್ಯೆಯಿಂದ ದೂರವಿರಲು ಮತ್ತು ಅದನ್ನು ತಪ್ಪಿಸಲು ಮತ್ತು ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತದೆ. ಯೋಗ ಮಾಡುವುದರಿಂದ ರೋಗದ ಪ್ರಗತಿ ಕಡಿಮೆ ಆಗುತ್ತದೆ. ಶ್ವಾಸಕೋಶದ ಕಾರ್ಯದಲ್ಲಿ ದೀರ್ಘಕಾಲೀನ ಸುಧಾರಣೆ ತರಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಇತ್ತೀಚಿನ ದಿನಗಳಲ್ಲಿ ಉಸಿರಾಟದ ಸಮಸ್ಯೆ (Breathing Problem) ಬಹಳ ವೇಗವಾಗಿ ಹೆಚ್ಚಾಗುತ್ತಿವೆ. ಮಾಲಿನ್ಯದ (Pollution) ಜೊತೆಗೆ ಬದಲಾಗುತ್ತಿರುವ ಹವಾಮಾನವೂ ಈ ಸಮಸ್ಯೆ (Problem) ಹೆಚ್ಚಳಕ್ಕೆ ಕಾರಣವಾಗಿದೆ. ಶ್ವಾಸಕೋಶ (Lungs) ಮತ್ತು ಅದರಿಂದಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಾತ್ರ ನವೆಂಬರ್ 16 ರಂದು ಸಿಒಪಿಡಿ ದಿನ ಆಚರಿಸಲಾಗುತ್ತದೆ. ಆಧುನಿಕ ಔಷಧವು ಬ್ರಾಂಕೋಡಿಲೇಟರ್‌ ಮತ್ತು ಸ್ಟೀರಾಯ್ಡ್‌ ಬಳಸಿಕೊಂಡು COPD ಚಿಕಿತ್ಸೆ ನೀಡುತ್ತದೆ. ಪ್ರಕೃತಿ ಚಿಕಿತ್ಸೆಯು ಶ್ವಾಸಕೋಶ ಸಂಬಂಧಿ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದರಲ್ಲಿ ನೀವು ಯೋಗ ಮಾಡುವ ಮೂಲಕ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ದೂರವಿರಬಹುದು.


    ಪಲ್ಮನರಿ ಕಾಯಿಲೆ ಚಿಕಿತ್ಸೆಗೆ ಯೋಗ ಪರಿಣಾಮಕಾರಿ


    ಯೋಗ ಮಾಡುವುದರಿಂದ ನೀವು ಉಸಿರಾಟ ಸಮಸ್ಯೆಯಿಂದ ದೂರವಿರಲು ಮತ್ತು ಅದನ್ನು ತಪ್ಪಿಸಲು ಮತ್ತು ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡಲು ಇದು ಸಹಾಯ ಮಾಡುತ್ತದೆ.


    ಜಿಂದಾಲ್ ನೇಚರ್‌ ಕ್ಯೂರ್ ಇನ್‌ ಸ್ಟಿಟ್ಯೂ ಟ್‌ ಮುಖ್ಯ ಯೋಗಾಧಿಕಾರಿ ಡಾ.ರಾಜೀವ್ ರಾಜೇಶ್ ಹೇಳುವ ಪ್ರಕಾರ, ಪಲ್ಮನರಿ ಕಾಯಿಲೆ ಚಿಕಿತ್ಸೆಗೆ ಯೋಗ ಪರಿಣಾಮಕಾರಿಯಾಗಿದೆ ಅಂತಾರೆ.




    ಯೋಗ ಮಾಡುವುದರಿಂದ ರೋಗದ ಪ್ರಗತಿ ಕಡಿಮೆ ಆಗುತ್ತದೆ. ಔಷಧಿಗಳು ರೋಗ ಲಕ್ಷಣಗಳನ್ನು ಮಾತ್ರ ನಿರ್ವಹಿಸುತ್ತವೆ. ಯೋಗ ಶ್ವಾಸಕೋಶದ ಕಾರ್ಯದಲ್ಲಿ ದೀರ್ಘಕಾಲೀನ ಸುಧಾರಣೆ ತರಲು ಸಹಾಯ ಮಾಡುತ್ತದೆ.


    ಪ್ರಕೃತಿ ಚಿಕಿತ್ಸೆ ಆಧಾರಿತ ವಿಧಾನ ಫಾಲೋ ಮಾಡಿದರೆ ರೋಗಿಗಳಿಗೆ ಔಷಧ ಪ್ರಮಾಣ ಕಡಿಮೆ ಮಾಡಲು ಸಹಕಾರಿ. ಹಾಗಾಗಿ ರೋಗವನ್ನು ತಡೆಗಟ್ಟಲು ಪ್ರಕೃತಿ ಚಿಕಿತ್ಸೆ ಮತ್ತು ಯೋಗದ ಮಹತ್ವ ಪ್ರೋತ್ಸಾಹಿಸಬೇಕು ಎಂದಿದ್ದಾರೆ.


    ಯೋಗವು ಸಿಒಪಿಡಿ ರೋಗಿಗಳಲ್ಲಿ ಶ್ವಾಸಕೋಶ ಕಾರ್ಯ ಹೆಚ್ಚಿಸುತ್ತದೆ


    ಯೋಗವು ಸಿಒಪಿಡಿಗೆ ಉತ್ತಮ ಪರಿಹಾರ. ಇದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಒತ್ತಡ ಕಡಿಮೆ ಮಾಡುತ್ತದೆ. ಫಿಟ್‌ನೆಸ್ ಸುಧಾರಿಸುತ್ತದೆ. ಲೋಳೆಯ ಸಡಿಲಗೊಳಿಸಲು ಮತ್ತು ಅಡೆತಡೆ ನಿವಾರಿಸುತ್ತದೆ.


    ವಾಯುಮಾರ್ಗ ಸುಗಮಗೊಳಿಸುತ್ತದೆ. ಇದು ಉಸಿರಾಟ ನಿಯಂತ್ರಿಸುತ್ತದೆ. ಶ್ವಾಸಕೋಶದ ಸುಗಮ ಕಾರ್ಯ ನಿರ್ವಹಣೆಗೆ ಯೋಗ ಸಹಕಾರಿ. ಜಾಗತಿಕವಾಗಿ, ಶ್ವಾಸಕೋಶದ ಕಾರ್ಯ ಸುಧಾರಿಸಲು ಯೋಗ ಸಹಕಾರಿ.


    ಯುಎಸ್‌ನ ವರ್ಮೊಂಟ್ ವಿಶ್ವವಿದ್ಯಾನಿಲಯದ ವರ್ಮೊಂಟ್ ಲಂಗ್ ಸೆಂಟರ್‌ನಲ್ಲಿ ನಡೆಸಿದ ಅಧ್ಯಯನವು ಸಿಒಪಿಡಿ ರೋಗಿಗಳಲ್ಲಿ ಶ್ವಾಸಕೋಶದ ಕಾರ್ಯ ಮತ್ತು ಉಸಿರಾಟ ಸಾಮರ್ಥ್ಯ ಸುಧಾರಿಸಲು ಯೋಗ ಸಹಕಾರಿ ಎಂದಿದೆ.


    ಸಿಒಪಿಡಿ ರೋಗಿಗಳಿಗೆ ಎರಡು ಅತ್ಯುತ್ತಮ ಯೋಗಾಸನಗಳು ಹೀಗಿವೆ


    ತಾಡಾಸನ (ಪರ್ವತ ಭಂಗಿ)


    ಯೋಗದ ಮೂಲ ಆಸನಗಳಲ್ಲಿ ಒಂದು ತಾಡಾಸನ ಅಥವಾ ಪರ್ವತ ಭಂಗಿ ಆಗಿದೆ. ಇದರಲ್ಲಿ ಮೊದಲು ಪಾದಗಳನ್ನು ಜೋಡಿಸುವ ಮೂಲಕ ನೇರವಾಗಿ ನಿಂತುಕೊಳ್ಳಿ. ಕಣ್ಣಿನ ಮಟ್ಟದಲ್ಲಿ ನೇರವಾಗಿ ನೋಡಿ ಮತ್ತು ನಿಮ್ಮ ಬೆರಳುಗಳನ್ನು ಇಂಟರ್ಲಾಕ್ ಮಾಡಿ.


    ಉಸಿರಾಡುತ್ತಾ ಕೈ ಮತ್ತು ಕಣಕಾಲುಗಳನ್ನು ಮೇಲಕ್ಕೆತ್ತಿ. ಅಂಗೈಗಳನ್ನು ಮೇಲಕ್ಕೆ ತಿರುಗಿಸಿ. ಸಾಮಾನ್ಯ ಉಸಿರಾಟದ ಜೊತೆ 20 ಸೆಕೆಂಡು ಇದೇ ಭಂಗಿಯಲ್ಲಿದ್ದು ನಂತರ ಉಸಿರಾಡುತ್ತಾ ಕೈಗಳನ್ನು ಕೆಳಕ್ಕಿಳಿಸಿ.


    ಅನುವಿತ್ತಾಸನ


    ತಾಡಾಸನ ಮಾಡಿದ ನಂತರ ಅನುವಿತ್ತಾಸನ ಮಾಡಬೇಕು. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ನೇರವಾಗಿ ನಿಂತು ಪಾದಗಳನ್ನು ಒಟ್ಟಿಗೆ ಇರಿಸಿ. ಮತ್ತು ನಿಮ್ಮ ಅಂಗೈಗಳನ್ನು ನಿಮ್ಮ ಕೆಳಗಿನ ಬೆನ್ನಿನಲ್ಲಿ ಇರಿಸಿ. ನಿಮ್ಮ ಬೆರಳುಗಳು ಕೆಳಮುಖವಾಗಿರಲಿ. ನಿಮ್ಮ ಪಾದಗಳಿಗೆ ಒತ್ತಿರಿ.


    ಇದನ್ನೂ ಓದಿ: ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತಡೆಗೆ ವಿಟಮಿನ್ ಸಿ ಸೀರಮ್ ಹೇಗೆ ಪ್ರಯೋಜನಕಾರಿ?


    ನಿಮ್ಮ ಮೊಣಕಾಲುಗಳನ್ನು ಮೇಲಕ್ಕೆತ್ತಿ. ನಂತರ ನಿಮ್ಮ ಸೊಂಟ ಮತ್ತು ತೊಡೆ ಹಿಗ್ಗಿಸಿ. ಸೊಂಟವನ್ನು ಮುಂದಕ್ಕೆ ಒತ್ತಿ ಮತ್ತು ಮುಂಡವನ್ನು ಹಿಂದಕ್ಕೆ ಬಾಗಿಸಿ. ಐದು ಉಸಿರಾಟ ಮಾಡುವವರೆಗೆ ಇದೇ ಭಂಗಿಯಲ್ಲಿದ್ದು, ನಂತರ ಮೊದಲಿನ ಸ್ಥಾನಕ್ಕೆ ಮರಳಿ.

    Published by:renukadariyannavar
    First published: