• Home
  • »
  • News
  • »
  • lifestyle
  • »
  • Yellow Teeth: ಹಲ್ಲುಗಳು ಹಳದಿಯಾಗಿದ್ರೆ ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆಯ ಲಕ್ಷಣ ಇರಬಹುದು!

Yellow Teeth: ಹಲ್ಲುಗಳು ಹಳದಿಯಾಗಿದ್ರೆ ನಿರ್ಲಕ್ಷ್ಯ ಬೇಡ, ಇದು ಈ ಕಾಯಿಲೆಯ ಲಕ್ಷಣ ಇರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಳದಿ ಹಲ್ಲು ಸಮಸ್ಯೆ ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡ್ಬೇಡಿ. ಯಾಕಂದ್ರೆ ಈ ಹಳದಿ ಹಲ್ಲು ಸಮಸ್ಯೆ ಹಿಂದೆ ಹಲವು ಕಾಯಿಲೆಗಳು ಇರಬಹದು. ಕಾಯಿಲೆ ಸಂಕೇತವೂ ಆಗಿರಬಹುದು. ಇದು ಕ್ರಮೇಣ ನಿಮ್ಮ ಹಲ್ಲುಗಳನ್ನು ಟೊಳ್ಳಾಗಿಸುತ್ತದೆ.

  • Share this:

    ಸಾಮಾನ್ಯವಾಗಿ ಹಲ್ಲು ಹಳದಿ (Yellow Teeth) ಆದಾಗ ಹೆಚ್ಚು ಬಾಯಿ ದುರ್ವಾಸನೆ (Mouth Bad Smell) ಬರುತ್ತದೆ. ಹಳದಿ ಹಲ್ಲುಗಳ ಸಮಸ್ಯೆ (Problem) ಬಹುತೇಕ ಜನರನ್ನು ಕಾಡುತ್ತದೆ. ಹಳದಿ ಹಲ್ಲುಗಳು ಸಾಮಾನ್ಯ ಸಮಸ್ಯೆ ಎಂದು ನೀವು ಅಂದುಕೊಂಡಿರಬಹುದು. ಆದ್ರೆ ಇದರ ಬಗ್ಗೆ ನಿರ್ಲಕ್ಷ್ಯ ಮಾಡುವುದೇ ಒಂದು ಪ್ರಮುಖ ತಪ್ಪು ಆಗುತ್ತದೆ. ಹಾಗಾಗಿ ಹಳದಿ ಹಲ್ಲು ಸಮಸ್ಯೆ ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡ್ಬೇಡಿ. ಯಾಕಂದ್ರೆ ಈ ಹಳದಿ ಹಲ್ಲು ಸಮಸ್ಯೆ ಹಿಂದೆ ಹಲವು ಕಾಯಿಲೆಗಳು ಇರಬಹುದು. ಕಾಯಿಲೆ ಸಂಕೇತವೂ ಆಗಿರಬಹುದು. ಇದು ಕ್ರಮೇಣ ನಿಮ್ಮ ಹಲ್ಲುಗಳನ್ನು ಟೊಳ್ಳಾಗಿಸುತ್ತದೆ. ಆದರೆ ಸರಿಯಾದ ಕ್ರಮ ಮತ್ತು ಮುನ್ನೆಚ್ಚರಿಕೆ ವಹಿಸಿದರೆ ನಿಮ್ಮ ಹಲ್ಲುಗಳ ಬಿಳಿ ಮತ್ತು ಹೊಳಪನ್ನು ಕಾಪಾಡಬಹುದು.


    ಮತ್ತು ಕಾಯಿಲೆ ಕಂಡು ಹಿಡಿದು, ನಿಯಂತ್ರಿಸಬಹುದು. ಇಲ್ಲಿ ನಾವು ಹಳದಿ ಹಲ್ಲುಗಳನ್ನು ಬಿಳಿಯಾಗಿಸುವ ಮನೆಮದ್ದನ್ನು ನೋಡೋಣ.


    ಹಲ್ಲುಗಳು ಹಳದಿ ಆಗಲು ಕಾರಣವೇನು?


    ಕೆಲವು ಪದಾರ್ಥಗಳ ಸೇವನೆ ಮತ್ತು ರೋಗಗಳು ಹಲ್ಲುಗಳ ಹಳದಿ ಬಣ್ಣಕ್ಕೆ ಕಾರಣ ಆಗುತ್ತವೆ. ಇದು ಕಳಪೆ ಮೌಖಿಕ ಆರೋಗ್ಯದ ಎಚ್ಚರಿಕೆ ಸಂಕೇತ ಆಗಿದೆ. ಕೆಲವು ಕಾಯಿಲೆಗಳು ಹಲ್ಲುಗಳ ಹಳದಿ ಬಣ್ಣಕ್ಕೆ ಕಾರಣ ಆಗಿವೆ. ಆಗ ಕಾಯಿಲೆ ನಿಯಂತ್ರಿಸಿದಾಗ ಮಾತ್ರ ಹಲ್ಲುಗಳ ಸಮಸ್ಯೆ ದೂರವಾಗುತ್ತದೆ.




    ಡೆಂಟಿನೋಜೆನೆಸಿಸ್ ಇಂಪರ್ಫೆಕ್ಟಾ (DI)


    ಮೆಡ್‌ಲೈನ್‌ ಪ್ಲಸ್ ಪ್ರಕಾರ, ಡೆಂಟಿನೋಜೆನೆಸಿಸ್ ಇಂಪರ್ಫೆಕ್ಟಾ ಎಂಬುದು ಒಂದು ಹಲ್ಲುಗಳ ಅಸ್ವಸ್ಥತೆ ಆಗಿದೆ. ಇದರಲ್ಲಿ ನಿಮ್ಮ ಹಲ್ಲುಗಳ ಬಣ್ಣ ಬದಲಾಗುತ್ತದೆ. ಈ ಬಣ್ಣವು ಹಳದಿ, ಕಂದು, ನೀಲಿ, ಬೂದು ಬಣ್ಣ ಉಂಟಾಗುವಂತೆ ಮಾಡುತ್ತದೆ. ಈ ಕಾಯಿಲೆಯಿಂದ ಹಲ್ಲುಗಳು ದುರ್ಬಲ ಆಗುತ್ತವೆ ಮತ್ತು ಅವುಗಳ ಒಡೆಯುವಿಕೆ ಅಪಾಯ ಹೆಚ್ಚು.


    ಜಿಂಗೈವಿಟಿಸ್ ಕಾರಣ


    ಹಲ್ಲು ಹಳದಿ ಆಗಲು ಜಿಂಗೈವಿಟಿಸ್ ಸಾಮಾನ್ಯ ಕಾರಣ ಆಗಿದೆ. ಈ ಸಮಸ್ಯೆ ವಸಡು ಸೋಂಕು ಆಗಿದೆ. ಬಾಯಿಯ ಈ ಕಾಯಿಲೆಯು ಬ್ಯಾಕ್ಟೀರಿಯಾಗಳು ಹಲ್ಲುಗಳ ಮೇಲೆ ಸಂಗ್ರಹವಾಗಲು ಕಾರಣವಾಗುತ್ತದೆ. ಇದು ಒಸಡು ಊದಿಕೊಳ್ಳುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ರೋಗವನ್ನು ಮೌಖಿಕ ನೈರ್ಮಲ್ಯ ಸಲಹೆಗಳು ಮತ್ತು ನಂಜು ನಿರೋಧಕ ಮೌತ್ವಾಶ್ ಬಳಕೆಯಿಂದ ಕಡಿಮೆ ಮಾಡಬಹದು.


    ಕ್ಯಾಂಕರ್ ಹುಣ್ಣು


    ಕ್ಯಾಂಕರ್ ಹುಣ್ಣು ನಿಮ್ಮ ಬಾಯಿಯೊಳಗೆ ಬೆಳೆಯುವ ಸಣ್ಣ ಹುಣ್ಣು ಆಗಿದೆ. ಈ ಗುಳ್ಳೆಗಳು ಬಾಯಿಯ ಅಂಗುಳಿನ ಮೇಲೂ ಉಂಟಾಗುತ್ತವೆ. ಕ್ಯಾಂಕರ್ ಹುಣ್ಣುಗಳು ಕೆಂಪು ಮತ್ತು ಹಳದಿ ಬಣ್ಣದ್ದಾಗಿದೆ. ಈ ಸಮಸ್ಯೆಯು ನಿಮ್ಮ ಬಾಯಿ ಆರೋಗ್ಯ ಹಾಳು ಮಾಡುತ್ತದೆ. ಮತ್ತು ಹಲ್ಲುಗಳ ಬಣ್ಣ ಬದಲಾಯಿಸುತ್ತವೆ.


    ಯಕೃತ್ತಿನ ರೋಗ


    ಯಕೃತ್ತಿನ ಕಾಯಿಲೆ ಹೆಚ್ಚಳವು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಿದೆ. ರೋಗಿಯು ಕಾಮಾಲೆಯಂತಹ ಯಕೃತ್ತಿನ ಕಾಯಿಲೆಗೆ ತುತ್ತಾಗಿದ್ದರೆ ದೇಹದಲ್ಲಿ ಬಿಲಿರುಬಿನ್ ಹೆಚ್ಚಾಗಲು ಕಾರಣವಾಗಿದೆ ಎಂದು ಸಂಶೋಧನೆ ಹೇಳಿವೆ. ಚರ್ಮ, ಕಣ್ಣುಗಳು ಮತ್ತು ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.


    ಕ್ಯಾಲ್ಸಿಯಂ ಕೊರತೆ ಇದ್ದಾಗ


    ಕ್ಯಾಲ್ಸಿಯಂ ಕೊರತೆ ಇದ್ದಾಗಲೂ ಹಲ್ಲುಗಳು ಹಳದಿ ಆಗುತ್ತವೆ. ನಂತರ ಅವುಗಳನ್ನು ಬಿಳಿಯಾಗಿಸಲು ಯಾವುದೇ ಪರಿಹಾರ ಪರಿಣಾಮಕಾರಿಯಾಗಲ್ಲ. ನಿಮ್ಮ ಹಲ್ಲುಗಳನ್ನು ಬಲವಾಗಿ ಮತ್ತು ಬಿಳಿಯಾಗಿ ಮಾಡಲು ಕ್ಯಾಲ್ಸಿಯಂ ಬಹಳ ಮುಖ್ಯ. ಅದರ ಕೊರತೆ ಹಲ್ಲುಗಳು ತಮ್ಮ ಹೊಳಪನ್ನು ಕಳೆದುಕೊಳ್ಳಲು ಕಾರಣವಾಗಿದೆ. ಹಾಗಾಗಿ ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವಿಸಿ.


    ಹಳದಿ ಹಲ್ಲುಗಳ ಸಮಸ್ಯೆಗೆ ಇತರೆ ಕಾರಣ


    ಇತರ ಕೆಲವು ಸಮಸ್ಯೆ ಹಲ್ಲುಗಳನ್ನು ಹಳದಿಯಾಗಿಸುತ್ತವೆ. ಔಷಧಿ, ಗರ್ಭಾವಸ್ಥೆಯ ಸೋಂಕು, ಕೀಮೋಥೆರಪಿ, ಆಘಾತ, ಉದರ ಕಾಯಿಲೆ ಮತ್ತು ಎಟಿಕ್ ಅಸ್ವಸ್ಥತೆ ಕಾರಣವಾಗಬಹುದು.


    ಇದನ್ನೂ ಓದಿ: ಯಾವ ಪದಾರ್ಥದ ಜೊತೆಗೆ ಜೇನುತುಪ್ಪ ತಿನ್ನಬಾರದು?   


    ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ?


    ನಿಯಮಿತವಾಗಿ ಮೌಖಿಕ ತಪಾಸಣೆ ಮಾಡಿಸಿ. ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಿರಿ. ನಂಜುನಿರೋಧಕ ಮೌತ್ವಾಶ್ ಅನ್ನು ಬಳಸಿ.

    Published by:renukadariyannavar
    First published: