Yellow Fruits: ಹಳದಿ ಬಣ್ಣದ ಹಣ್ಣು ತರಕಾರಿಯಲ್ಲಿದೆ ಚರ್ಮದ ಆರೋಗ್ಯ

Benefits of yellow fruits :ಹಳದಿ ವರ್ಣದ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಹಾಗೂ ಕೆಲ ಬಗೆಯ ಕ್ಯಾನ್ಸರ್ ರೋಗಗಳನ್ನೂ ಕೂಡಾ ತಡೆಗಟ್ಟಬಹುದಾಗಿದೆ..

ಹಣ್ಣು

ಹಣ್ಣು

  • Share this:
    ನಮ್ಮ ಸೌಂದರ್ಯವನ್ನು(Beauty)ಹೆಚ್ಚಿಸುವಂತೆ ಹಾಗೂ ನಮ್ಮ ತ್ವಚೆಯನ್ನು(Skin)ಸದಾ ಕಂಗೊಳಿಸುವಂತೆ ಮಾಡುವುದಕ್ಕಾಗಿ ನಾವು ಹಲವಾರು ಕ್ರೀಮ್ (cream) ಮತ್ತಿತರ ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ಜೊತೆಗೆ ದೇಹದ ಆರೋಗ್ಯ (Health)ಕಾಪಾಡಿಕೊಳ್ಳಲು ಸಹ ವಿವಿಧ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇವೆ.. ಆದರೆ ಇವೆಲ್ಲವೂ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗದು. ಇವುಗಳಲ್ಲಿ ಹಲವು ತ್ವಚೆಯಲ್ಲಿ ಹಲವು ತೊಂದರೆಗಳನ್ನೂ ಉಂಟುಮಾಡಬಹುದು. ಆದರೆ ಇಂಥ ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ತ್ವಚೆಯನ್ನು ಸುಂದರವಾಗಿಸುವ ಉಪಾಯ ನಿಮ್ಮ ಮನೆಯಲ್ಲಿಯೇ ಇದೆ. ಒಂದು ಮನೆಯಲ್ಲಿ ಸಿಗುವ ವಿವಿಧ ಬಣ್ಣ ಬಣ್ಣದ ತರಕಾರಿ ಹಾಗೂ ಹಣ್ಣುಗಳಿಂದ ನಮ್ಮ ಚರ್ಮದ ಸಮಸ್ಯೆಯನ್ನು ಮುಕ್ತಿ ಕಾಣಿಸಬಹುದು. ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

    ಪೌಷ್ಟಿಕಾಂಶದಲ್ಲಿ ಎತ್ತಿದ ಕೈ ಹಳದಿ ಬಣ್ಣದ ಹಣ್ಣು ತರಕಾರಿ

    ಮೊದಲನೆಯದಾಗಿ, ಈ ಹಳದಿ ವರ್ಣದ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ, ನೀವು ತೆಗೆದುಕೊಳ್ಳುವ ಪೋಷಕಾ೦ಶಗಳ ಪ್ರಮಾಣವನ್ನು ಅಧಿಕಗೊಳಿಸಿಕೊಳ್ಳಬಹುದು. ಜೊತೆಗೆ, ಹಳದಿ ವರ್ಣದ ಆಹಾರವಸ್ತುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರ್ಪಡೆಗೊಳಿಸಿಕೊಳ್ಳುವುದರ ಮೂಲಕ ಹೃದ್ರೋಗಗಳು, ಅಧಿಕ ರಕ್ತದೊತ್ತಡ, ಹಾಗೂ ಕೆಲ ಬಗೆಯ ಕ್ಯಾನ್ಸರ್ ರೋಗಗಳನ್ನೂ ಕೂಡಾ ತಡೆಗಟ್ಟಬಹುದಾಗಿದೆ..

    ಹಳದಿ ಹಣ್ಣುಗಳು ಹಾಗೂ ತರಕಾರಿಗಳು ಆ೦ಟಿ ಆಕ್ಸಿಡೆ೦ಟ್ ಗಳನ್ನು ಒಳಗೊಂಡಿದ್ದು ಅವು ನಾನಾ ವಿಧಗಳಲ್ಲಿ ಆರೋಗ್ಯದಾಯಕವಾಗಿವೆ. ಅವುಗಳಲ್ಲಿ ನಾರಿನಂಶ ಕೂಡ ಇರುತ್ತವೆ. ನಮಗೆಲ್ಲಾ ತಿಳಿದಿರುವಂತೆ ಆಹಾರವಸ್ತುಗಳು ಒಳಗೊಂಡಿರುವ ನಾರಿನಂಶ ಆರೋಗ್ಯಕ್ಕೆ ಹಿತಕಾರಿ.

    ಆರೋಗ್ಯಕ್ಕೆ ಹಿತಕರವಾಗಿರುವ ಹಳದಿ ಹಣ್ಣುಗಳ ಮಾಹಿತಿ

    1) ಬಾಳೆಹಣ್ಣು

    ಬಾಳೆಹಣ್ಣುಗಳಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳ ಉಗ್ರಾಣವಾಗಿದೆ. ಇದು ಹಾನಿಕರವಲ್ಲದ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ, ಇದು ಅಲರ್ಜಿಯ ವಿರುದ್ಧ ರಕ್ಷಾಕವಚವಾಗಿ ನಿಲ್ಲುತ್ತದೆ. ಬಾಳೆಹಣ್ಣಿನಲ್ಲಿರುವ B6 ಇರುವಿಕೆಯ ಮೂಲಕ ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಂಡು ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ..ಅಲ್ಲದೆ ಬಾಳೆಹಣ್ಣು ನೈಸರ್ಗಿಕ ಮಾಯಿಶ್ಚರೈಸರ್ ಆಗಿರುವುದರಿಂದ ಚರ್ಮದ ಕಾಂತಿ ಹೆಚ್ಚಳಕ್ಕೆ ಸಹಕಾರಿ.

    ಇದನ್ನೂ ಓದಿ :ವಿಶ್ವದ ಅತ್ಯಂತ ದುಬಾರಿ ಹಣ್ಣುಗಳಿವು- ಬೆಲೆ ಗೊತ್ತಾದ್ರೆ ಶಾಕ್ ಆಗ್ತೀರ

    2) ಮಾವಿನ ಹಣ್ಣು

    ಮಾವಿನಹಣ್ಣುಗಳು ವಿಟಮಿನ್ A ನ ಉಗ್ರಾಣವಾಗಿದೆ ಮತ್ತು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಇದು ಪಾಲಿಫಿನಾಲ್‌ಗಳನ್ನು ಹೊಂದಿದ್ದು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ತಡೆಯುತ್ತದೆ..ಮಾವಿನ ಹಣ್ಣುಗಳು ಪೊಟಾಸಿಯಂ ಅಂಶದಲ್ಲಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಲ್ಲಿ ಮುಂಚೂಣಿ ಯಲ್ಲಿವೆ. ಇದರಿಂದ ರಕ್ತದ ಒತ್ತಡ ನಿರ್ವಹಣೆಯಾಗುತ್ತದೆ ಮತ್ತು ಮಧುಮೇಹ ಸಮಸ್ಯೆ ಕೂಡ ಸಹಜ ಸ್ಥಿತಿಯಲ್ಲಿ ಉಳಿಯುತ್ತದೆ.

    3)ನಿಂಬೆಹಣ್ಣು

    ನಿಂಬೆಹಣ್ಣು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿವೆ. ಅಲ್ಲದೆ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲದಲ್ಲಿ ಸಮೃದ್ಧವಾಗಿವೆ.. ಹೀಗಾಗಿ ನಿಯಮಿತವಾಗಿ ನಿಂಬೆಹಣ್ಣು ಬಳಕೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಳವಾಗಲಿದೆ..ನಿಂಬೆ ಹಣ್ಣಿನಲ್ಲಿ ಆಂಟಿ - ಇನ್ಫಾಮೇಟರಿ ಗುಣ - ಲಕ್ಷಣಗಳು ಸಾಕಷ್ಟು ಕಂಡು ಬರುತ್ತದೆ. ಇದು ಉಸಿರಾಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಕೆಲಸ ಮಾಡುತ್ತದೆ.

    ಇದನ್ನೂ ಓದಿ :ಚಳಿಗಾಲದಲ್ಲಿ ಮನೆಯಲ್ಲಿಯೇ ಆರೋಗ್ಯ ಕಾಪಾಡಿಕೊಳ್ಳಲು ಈ 5 ಹಣ್ಣು ತಿಂದ್ರೆ ಸಾಕಂತೆ

    4)ಜೋಳ

    ಜೋಳದಲ್ಲಿ ಇರುವಂತಹ ಪೈಥೋಕೆಮಿಕಲ್ ಬೇರೆಲ್ಲಾ ಧಾನ್ಯಗಳಿಗಿಂತಲೂ ಹೆಚ್ಚಿನ ಆಂಟಿಆಕ್ಸಿಡೆಂಟ್ ನ್ನು ಹೊಂದಲು ಕಾರಣ. ಗೋಧಿ, ಅಕ್ಕಿ ಮತ್ತು ಓಟ್ಸ್ ಗಿಂತಲೂ ಹೆಚ್ಚಿನ ಆಂಟಿಆಕ್ಸಿಡೆಂಟ್ ಜೋಳದಲ್ಲಿದೆ. ಜೋಳದಲ್ಲಿ ಅತ್ಯಧಿಕ ಪ್ರಮಾಣದ ಫಿನಾಲಿಕ್ ಅಂಶವಿದ್ದು, ಇದು ಕರುಳು, ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ್ನು ತಡೆಯಲು ಸಹಕಾರಿ.

    5)ಕುಂಬಳಕಾಯಿ

    ಕುಂಬಳಕಾಯಿ ಚರ್ಮದಲ್ಲಿ ಇರುವ ಪ್ರೊಟೀನ್ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಕುಂಬಳಕಾಯಿಗಳು ಮೃದುವಾದ ಮತ್ತು ನಯವಾದ ಚರ್ಮವನ್ನು ಪಡೆಯಲು ಸಹಾಯಕವಾಗಿದೆ.. ಕುಂಬಳಕಾಯಿಯಲ್ಲಿ ಮತ್ತು ಎಲ್ಲಾ ಹಳದಿ ತರಕಾರಿಗಳಂತೆ ವಿಟಮಿನ್ ಸಿ ಮತ್ತು ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ.
    Published by:ranjumbkgowda1 ranjumbkgowda1
    First published: