• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Baby Care: ಫಸ್ಟ್ ಟೈಮ್ ನಿಮ್ಮ ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಅಂತ ಚಿಂತೆನಾ? ತಾಯಂದಿರಿಗೆ ಇಲ್ಲಿದೆ ಸೂಪರ್ ಟಿಪ್ಸ್

Baby Care: ಫಸ್ಟ್ ಟೈಮ್ ನಿಮ್ಮ ಮಗುವಿಗೆ ಸ್ನಾನ ಮಾಡಿಸುವುದು ಹೇಗೆ ಅಂತ ಚಿಂತೆನಾ? ತಾಯಂದಿರಿಗೆ ಇಲ್ಲಿದೆ ಸೂಪರ್ ಟಿಪ್ಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಚಿಕ್ಕ ಮಕ್ಕಳಿಗೆ ನಮ್ಮ ಮನೆಯಲ್ಲಿ ಇರುವ ವಯಸ್ಸಾದ ಅಜ್ಜಿಯರು ಅಥವಾ ಪಕ್ಕದ ಮನೆ ಮಹಿಳೆಯರು ಸ್ನಾನ ಮಾಡಿಸುವ ರೂಢಿ ಇನ್ನು ಎಲ್ಲ ಕಡೆ ಇದೆ. ಇದಕ್ಕೆ ಬೇರೆ ಏನು ಕಾರಣವಿಲ್ಲ. ವಯಸ್ಸಾದ ಮಹಿಳೆಯರಿಗೆ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಅನುಭವ ಇರುತ್ತದೆ. ಕೆಲವು ಸಲ ಯಾರು ಸಿಗದೇ ಇದ್ದಾಗ ಪೋಷಕರೇ ಸ್ನಾನ ಮಾಡಿಸುವ ಪರಿಸ್ಥಿತಿ ಬಂದು ಬಿಡುತ್ತೆ. ಆಗ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಾವಿಲ್ಲಿ ತಿಳಿಸುತ್ತೆವೆ.

ಮುಂದೆ ಓದಿ ...
  • Share this:

ಮೊದಲ ಬಾರಿಗೆ ಮಗು (Baby) ಆದಾಗ ಪ್ರತಿ ಪೋಷಕರಿಗೂ (Parents) ಕಾಡುವ ಪ್ರಶ್ನೆ. ಈ ಮಗುವಿಗೆ ಹೇಗೆ ಸ್ನಾನ ಮಾಡಿಸುವುದು. ಸ್ನಾನ (Bath) ಮಾಡಿಸಬೇಕಾದರೆ ಏನಾದರೂ ತೊಂದರೆ ಆಗಿಬಿಟ್ಟರೆ ಎಂದೂ ಯೋಚನೆ ಮಾಡ್ತಾನೆ ಇರುತ್ತಾರೆ. ಮಕ್ಕಳು ಕೂಡ ಕೆಲವೊಮ್ಮೆ ಸ್ನಾನ ಮಾಡುವುದಕ್ಕೂ ಅಳುತ್ತಲೇ ಇರುತ್ತವೆ. ಅಂತಹ ಸಮಯದಲ್ಲಿ (Time) ಏನು ಮಾಡಬೇಕು ಎಂದು ಗೊತ್ತಾಗುವುದೇ ಇಲ್ಲ. ಅವರನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿಗೆ ಸ್ನಾನ (Baby Bathing) ಮಾಡಿಸುವುದು ಪೋಷಕರಿಗೆ ಅತ್ಯಂತ ಕಷ್ಟಕರವಾದ ಕೆಲಸವಾಗಿರುತ್ತದೆ. ಆದ್ದರಿಂದ ಸ್ನಾನಕ್ಕೆ ಎಲ್ಲವನ್ನು ವ್ಯವಸ್ಥಿತವಾಗಿ ಸಿದ್ಧಪಡಿಸುವುದು ಮುಖ್ಯವಾಗಿರುತ್ತದೆ.


ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸಲು ವಿಶೇಷ ಅನುಭವದ ಅಗತ್ಯವಿರುತ್ತದೆ. ಏಕೆಂದರೆ ನಾವು ಎಲ್ಲ ಕಡೆ ನೋಡಿಯೇ ನೋಡಿರುತ್ತೇವೆ. ಚಿಕ್ಕ ಮಕ್ಕಳಿಗೆ ನಮ್ಮ ಮನೆಯಲ್ಲಿ ಇರುವ ವಯಸ್ಸಾದ ಅಜ್ಜಿಯರು ಅಥವಾ ಪಕ್ಕದ ಮನೆ ಮಹಿಳೆಯರು ಸ್ನಾನ ಮಾಡಿಸುವ ರೂಢಿ ಇನ್ನು ಎಲ್ಲ ಕಡೆ ಇದೆ. ಇದಕ್ಕೆ ಬೇರೆ ಏನು ಕಾರಣವಿಲ್ಲ. ವಯಸ್ಸಾದ ಮಹಿಳೆಯರಿಗೆ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಅನುಭವ ಇರುತ್ತದೆ. ಕೆಲವು ಸಲ ಯಾರು ಸಿಗದೇ ಇದ್ದಾಗ ಪೋಷಕರೇ ಸ್ನಾನ ಮಾಡಿಸುವ ಪರಿಸ್ಥಿತಿ ಬಂದು ಬಿಡುತ್ತೆ. ಆಗ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಾವಿಲ್ಲಿ ತಿಳಿಸುತ್ತೆವೆ.


ಇದನ್ನೂ ಓದಿ:  Parents and Children: ಪೋಷಕರು ಯಾವ ಹಂತದಲ್ಲಿ ಮಕ್ಕಳೊಂದಿಗೆ ಮಲಗುವುದನ್ನು ನಿಲ್ಲಿಸಬೇಕು?


ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು/ ಸಲಹೆಗಳು:


  1. ಸ್ನಾನದ ಸಾಮಾನುಗಳನ್ನು ತೆಗೆದುಕೊಂಡು ಹೋಗಿರಿ
    ಮಕ್ಕಳಿಗೆ ಸ್ನಾನ ಮಾಡುವ ಮೊದಲು, ಸ್ನಾನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಒಂದೇ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಿ. ಎಲ್ಲವನ್ನು ಒಂದೇ ಕಡೆ ಇರಿಸಿ. ಇದರಿಂದ ಸೋಪ್ ಬೇಕು ಎಂದು ಓಡುವ ಅಗತ್ಯ ಇರುವುದಿಲ್ಲ. ಮಗುವನ್ನು ಸ್ನಾನಕ್ಕೆ ಕರೆದೊಯ್ಯುವ ಮೊದಲು ಸೋಪ್, ಟವೆಲ್, ಕ್ರೀಮ್, ಡೈಪರ್ ಮತ್ತು ಬಟ್ಟೆಗಳನ್ನು ಜೋಡಿಸಿ ಕೊಂಡು ಬಿಟ್ಟರೆ ಯಾವುದೇ ಆತಂಕವಿಲ್ಲದೇ ಮಗುವಿಗೆ ಸ್ನಾನ ಮಾಡಿಸಬಹುದು.

  2. ಸ್ನಾನದ ನೀರಿನ ಬಿಸಿಯನ್ನು ಪರೀಕ್ಷಿಸಿ
    ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವ ಮೊದಲು ನೀರಿನ ತಾಪಮಾನವನ್ನು ಪರೀಕ್ಷಿಸುವುದು ಬಹಳ ಮುಖ್ಯ. ತಣ್ಣೀರಿನಿಂದ ಸ್ನಾನ ಮಾಡಿಸಿದರೆ ಮಕ್ಕಳ ಸೂಕ್ಷ್ಮ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಾಮಾನ್ಯ ವಿಚಾರ. ಅದೇ ರೀತಿ ಬೇಸಿಗೆಯ ಸಮಯದಲ್ಲಿ ಕೂಡ ತಣ್ಣನೆ ನೀರಿನ ಬದಲು ಉಗುರು ಬೆಚ್ಚಗಿನ ನೀರಿನಿಂದ ಮಕ್ಕಳನ್ನು ಸ್ನಾನ ಮಾಡಿಸುವುದೂ ಉತ್ತಮ.

  3. ಚಿಕ್ಕ ಮಗುವಿನ ಮನಸ್ಸನ್ನು ಬೇರೆಡೆಗೆ ಸೆಳೆಯಿರಿ
    ಸ್ನಾನ ಮಾಡಿಸುವಾಗ ಚಿಕ್ಕ ಮಕ್ಕಳು ಆಗಾಗ ಅಳಲು ಪ್ರಾರಂಭಿಸುತ್ತಾರೆ ಮತ್ತು ಆದ್ದರಿಂದ ಸ್ನಾನ ಮಾಡಿಸಲು ತುಂಬಾ ಕಷ್ಟವಾಗಬಹುದು. ಸ್ನಾನ ಮಾಡಿಸುವಾಗ ಮಗುವಿನೊಂದಿಗೆ ಮಾತನಾಡುತ್ತಿರಿ. ಇದು ಅವರನ್ನು ಸ್ಮಾನದ ಕಡೆ ಗಮನ ಕೊಡುವುದು ಕಡಿಮೆಯಾಗಿ ನಿಮ್ಮ ಮಾತಿನ ಕಡೆ ಗಮನ ಕೊಡುವ ಹಾಗೆ ಆಗುತ್ತದೆ. ಇನ್ನು ಸ್ನಾನ ಮಾಡಿಸುವಾಗ ಆಟಿಕೆ ಸಾಮಾನುಗಳನ್ನು ನೀಡಿ ಆರಾಮ ಆಗಿ ಸ್ನಾನ ಮಾಡಿಸಬಹುದು.

  4. ಮೃದುವಾದ ಬಟ್ಟೆಯನ್ನು ಬಳಸಿ
    ಮಗುವಿಗೆ ಸ್ನಾನ ಮಾಡಿಸುವಾಗ ಮೃದುವಾದ ಬಟ್ಟೆಯನ್ನು ಬಳಸಿ ಮಗುವಿನ ಮುಖವನ್ನು ನಿಧಾನವಾಗಿ ಸ್ವಚ್ಛಗೊಳಿಸಿ, ನಂತರ ಅವರ ಕುತ್ತಿಗೆ ಮತ್ತು ದೇಹವನ್ನು, ಜನನಾಂಗಗಳು ಮತ್ತು ಹೀಗೆ ಒಂದೊಂದೆ ಭಾಗಗಳನ್ನು ಸೂಕ್ಷ್ಮವಾಗಿ ಸ್ವಚ್ಛಗೊಳಿಸಿ. ಮಗುವಿನ ಸ್ನಾನದ ನಂತರ ಅವರನ್ನು ಎತ್ತಿಕೊಂಡು ಮೃದುವಾದ ಒಣ ಟವೆಲ್ ನಲ್ಲಿ ಬೆಚ್ಚಗೆ ಇರಿಸಿ.

  5. ಸ್ನಾನದ ನಂತರ ಮಕ್ಕಳ ಅಗತ್ಯ ಪೂರೈಸಿ
    ಸ್ನಾನದ ನಂತರ, ಮಾಯಿಶ್ಚರೈಸರ್ ಅನ್ನು ಅನ್ವಯಿಸಿ ಮತ್ತು ಹಗುರವಾಗಿ ಮಸಾಜ್ ಮಾಡಿ. ನಂತರ ಅವರ ಬಟ್ಟೆ ತೊಡಿಸಿ.


ಇದನ್ನೂ ಓದಿ:  Child Health Care: ಮಂಕಿಪಾಕ್ಸ್, ಕೊರೋನಾದಿಂದ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ


ಅಂತಿಮವಾಗಿ ಚಿಕ್ಕ ಮಕ್ಕಳಿಗೆ ಸ್ನಾನ ಮಾಡಿಸುವುದು ನಿಜಕ್ಕೂ ಸವಾಲಿನ ಕೆಲಸವೇ ಆಗಿರುತ್ತದೆ. ಅದನ್ನು ತುಂಬಾ ಎಚ್ಚರಿಕೆಯಿಂದ ಮಾಡುವುದು ಒಳಿತು.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು