ಎಂಟು ತಲೆಮಾರಿನಷ್ಟು ಹಳೆಯ ವೈನ್ ಖರೀದಿಗೆ ಲಭ್ಯ

news18
Updated:May 24, 2018, 1:36 PM IST
ಎಂಟು ತಲೆಮಾರಿನಷ್ಟು ಹಳೆಯ ವೈನ್ ಖರೀದಿಗೆ ಲಭ್ಯ
news18
Updated: May 24, 2018, 1:36 PM IST
ನ್ಯೂಸ್ 18 ಕನ್ನಡ

ವೈನ್ ಹಳೆಯದಾದಷ್ಟು ಅದ್ಭುತ ರುಚಿ ಕೊಡುತ್ತದೆ. ಅಂತದರಲ್ಲಿ ಇನ್ನೂರು ವರ್ಷಗಳ  ಹಿಂದಿನ ವೈನ್ ಲಭ್ಯವಾದರೆ ಯಾರೂ ತಾನೇ ಬಿಡುತ್ತಾರೆ ಹೇಳಿ. ಇದೀಗ ಎಂಟು ತಲೆಮಾರಿನಷ್ಟು ಹಳೆಯದಾದ ಮೂರು ವೈನ್ ಬಾಟಲ್​ಗಳು ಖರೀದಿಗೆ ಲಭ್ಯವಿದೆ. 1774ರಲ್ಲಿ ಫ್ರಾನ್ಸ್​ನ ನೆಲಮಾಳಿಗೆಯಲ್ಲಿದ್ದ ವಿನ್ ಜಾನ್ (ಹಳದಿ ವೈನ್) ಅನ್ನು ಶನಿವಾರ ಸಾರ್ವಜನಿಕ ಖರೀದಿಗೆ ಇಡಲಾಗಿದೆ.

ಸ್ವಿಟ್ಜರ್ಲೆಂಡ್​ನ ಝೂರ ಪ್ರದೇಶದ ಅರ್ಬೊಯಿಸ್ ವಂಶಸ್ಥರು ಈ ಹಳೆಯ ವೈನನ್ನು ಕಾಪಾಡಿಕೊಂಡು ಬಂದಿದ್ದಾರೆ. ಈಗ ಹರಾಜಿಗೆ ಇಡಲಾಗಿರುವ ಮೂರು ವೈನ್ ಬಾಟಲಿಗಳು ಪ್ರಪಂಚದ ಅತ್ಯಂತ ಹಳೆಯ ವೈನ್​ಗಳಾಗಿವೆ ಎಂದು ಜುರಾ ಎನ್ಚೆರೆಸ್ ಹಾರಾಜು ಸಂಸ್ಥೆ ತಿಳಿಸಿದೆ.

ಈ ಹಿಂದೆ ಕೂಡ 1774ರ ಅಪರೂಪದ ವೈನನ್ನು ಹರಾಜಿಡಲಾಗಿತ್ತು. 2001ರಲ್ಲಿ ಒಂದು ಬಾಟಲ್ 57,000 ಯೂರೋಗಳಿಗೆ (45,79,785ರೂ.) ಮಾರಾಟವಾದರೆ, 2012 ರಲ್ಲಿ 46,000 ಡಾಲರ್ (31,44,330ರೂ.)​ ಗೆ ಮಾರಾಟವಾಗಿತ್ತು.

'1994 ರಲ್ಲಿ ಈ ವೈನನ್ನು ಪರೀಕ್ಷಿಸಿದ್ದು, ಮೂರು ವೈನ್ ಪಾನೀಯದ ಗುಣಮಟ್ಟವು ಅಸಾಧಾರಣವಾಗಿದೆ. ಅಲ್ಲದೆ ವಿಶ್ವ ಅತ್ತುತ್ಯಮ ವೈನ್ ಪಟ್ಟಿಯಲ್ಲಿ 10 ರಲ್ಲಿ 9.4 ರೇಟಿಂಗ್ ಪಡೆದಿದೆ' ಎಂದು ಜುರಾ ಎನ್ಚೆರೆಸ್​ನ ಫಿಲಿಪ್ ಎಟಿವಂಟ್ ತಿಳಿಸಿದ್ದಾರೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...