ಅತ್ಯುತ್ತಮ ಆರೋಗ್ಯಕ್ಕೆ ಈ ಐದು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ..!

ಬಿಳಿ ಗೆಣಸಿಗಿಂತ ಸಿಹಿ ಗೆಣಸು ಹೆಚ್ಚು ಆರೋಗ್ಯಕರ. ಇದನ್ನು ವಿಶ್ವದಾದ್ಯಂತ ಸ್ವೀಟ್ ಪೊಟಾಟೊ ಎಂದು ಕರೆಯಲಾಗುತ್ತದೆ. ಸಿಹಿ ಗೆಣಸನ್ನು ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅತ್ಯುತ್ತಮ ಮೂಲ.

news18-kannada
Updated:June 29, 2020, 3:03 PM IST
ಅತ್ಯುತ್ತಮ ಆರೋಗ್ಯಕ್ಕೆ ಈ ಐದು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ..!
Vegetables
  • Share this:
ತರಕಾರಿಗಳನ್ನು ಕೇವಲ ರುಚಿಗಾಗಿ ಆಹಾರದಲ್ಲಿ ಬಳಸುವ ಕಾಲ ದೂರವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನಾವು ತಿನ್ನುವ ಪ್ರತಿಯೊಂದು ಆಹಾರ ಕೂಡ ಆರೋಗ್ಯ ಪೂರ್ಣವಾಗಿರಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಕ್ರಮಗಳನ್ನು ಅಳವಡಿಸುವ ಮೂಲಕ ಕೊರೋನಾ ವೈರಾಣುವಿನಿಂದ ಪಾರಾಗಬೇಕಿದೆ.

ಮೈ ಹೆಲ್ತ್ ಡಾಟ್​ಕಾಮ್ ಮಾಹಿತಿ ಪ್ರಕಾರ, ತರಕಾರಿಗಳಲ್ಲಿ ಪೋಷಕಾಂಶಗಳು (Nutrients), ಉತ್ಕರ್ಷಣ ನಿರೋಧಕಗಳು (Antioxidents) ಮತ್ತು ಮಿನರಲ್ಸ್​ (Minerals) ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ವ್ಯಕ್ತಿಯ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಬಹುದು. ಹೀಗೆ ದೇಹದ ಆರೋಗ್ಯವನ್ನು ಹೆಚ್ಚಿಸುವ ಪೌಷ್ಠಿಕಾಂಶ ಹೊಂದಿರುವ ಐದು ತರಕಾರಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಬೆಳ್ಳುಳ್ಳಿ:
ನಾವು ಬೆಳ್ಳುಳ್ಳಿಯನ್ನು ಮಸಾಲೆಗಳಿಗಾಗಿ ಬಳಸುವುದು ಹೆಚ್ಚು. ಇದನ್ನು ಹೊರತುಪಡಿಸಿ ಆಹಾರದಲ್ಲಿ ಇದನ್ನು ಬಳಸುವುದು ವಿರಳ ಎನ್ನಬಹುದು. ಆದರೆ ಭಾರತೀಯ ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಬಹಳ ಮುಖ್ಯ ಔಷಧ ಎಂದು ಪರಿಗಣಿಸಲಾಗಿದೆ. ಬೆಳ್ಳುಳ್ಳಿಯಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಮುಖ ಆಲಿಸಿನ್ ಅಂಶವಿರುತ್ತದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಕಾರಣದಿಂದಲೇ ಇದನ್ನು ಜಗತ್ತಿನ ಎಲ್ಲ ದೇಶಗಳಲ್ಲಿ ತಿನ್ನುತ್ತಾರೆ. ಏಕೆಂದರೆ ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ, ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ತೆರವುಗೊಳಿಸುತ್ತದೆ. ರಕ್ತದಲ್ಲಿನ ಹಾನಿಕಾರಕ ಟ್ರೈಗ್ಲಿಸರೈಡ್‌ಗಳ ಪ್ರಮಾಣ ಕಡಿಮೆ ಮತ್ತು ಮಾರಕ ಮಹಾಮಾರಿ ಕ್ಯಾನ್ಸರ್​ನಿಂದ ರಕ್ಷಿಸುತ್ತದೆ.

ಪಾಲಕ್ ಸೊಪ್ಪು:
ಪಾಲಕ್ ವಿಶ್ವದ ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಇದರ ಎಲೆಗಳಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ನಂತಹ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಈ ಎರಡೂ ಉತ್ಕರ್ಷಣ ನಿರೋಧಕಗಳು (Antioxidents) ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಪಾಲಕ ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ ಪಾಲಕವನ್ನು ತಿನ್ನುವುದು ಕಣ್ಣುಗಳನ್ನು ಆರೋಗ್ಯಕ್ಕೆ ಉತ್ತಮ. ಕೇವಲ 30 ಗ್ರಾಂ ಪಾಲಕವನ್ನು ತಿನ್ನುವ ಮೂಲಕ, ನಿಮ್ಮ ದೈನಂದಿನ ವಿಟಮಿನ್ ಎ ಪ್ರಮಾಣವನ್ನು ಶೇ. 56 ರಷ್ಟು ಪಡೆಯಬಹುದು. ಇದಲ್ಲದೆ ಪಾಲಕದಲ್ಲಿ ವಿಟಮಿನ್ ಕೆ ಕೂಡ ಇದ್ದು, ಇದು ಹೃದಯ ಕಾಯಿಲೆಗಳು ಮತ್ತು ರಕ್ತದೊತ್ತಡದ ಅಪಾಯವೂ ಕಡಿಮೆಯಾಗುತ್ತದೆ.

ಬ್ರೊಕೊಲಿ ಅಥವಾ ಕೋಸುಗಡ್ಡೆ:ಆರೋಗ್ಯಕರ ತರಕಾರಿಗಳ ಪಟ್ಟಿಯಲ್ಲಿ ಕೋಸುಗಡ್ಡೆ ಕೂಡ ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣವೆಂದರೆ ಕೋಸುಗಡ್ಡೆ 2 ಪ್ರಮುಖ ಸಂಯುಕ್ತಗಳನ್ನು ಹೊಂದಿರುವುದು. ಅವುಗಳೆಂದರೆ ಗ್ಲುಕೋಸಿನೊಲೇಟ್ ಮತ್ತು ಸಲ್ಫೊರಾಫೇನ್. ಈ ಎರಡೂ ಸಂಯುಕ್ತಗಳು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಕೋಸುಗಡ್ಡೆ ತಿನ್ನುವುದರಿಂದ ದೀರ್ಘಕಾಲದ ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. ಬ್ರೊಕೊಲಿಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಒಂದು ಕಪ್ ಕೋಸುಗಡ್ಡೆ ತಿಂದರೆ, ನಿಮ್ಮ ದೇಹಕ್ಕೆ ಬೇಕಾದ ಶೇ.116 ರಷ್ಟು ವಿಟಮಿನ್ ಕೆ ಮತ್ತು ಶೇ.135 ರಷ್ಟು ವಿಟಮಿನ್ ಸಿ ಅನ್ನು ನೀವು ಪಡೆಯಬಹುದು. ಇದಲ್ಲದೆ, ಕೋಸುಗಡ್ಡೆ ಫೋಲೇಟ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಮುಂತಾದ ಅಂಶಗಳನ್ನು ಹೊಂದಿದ್ದು, ಇದು ನಿಮ್ಮನ್ನು ಹೃದ್ರೋಗಗಳಿಂದ ರಕ್ಷಿಸುತ್ತದೆ.

ಹಸಿರು ಬಟಾಣಿ (Green Peas)
ಬಟಾಣಿ ಕಾಲೋಚಿತ ತರಕಾರಿ. ಹಸಿರು ಬಟಾಣಿ ಹೆಚ್ಚು ಪಿಷ್ಟವನ್ನು ಹೊಂದಿರುತ್ತದೆ, ಆದ್ದರಿಂದ ಇದರಲ್ಲಿ ಕಾರ್ಬ್ಸ್ ಮತ್ತು ಕ್ಯಾಲೊರಿಗಳು ಸ್ವಲ್ಪ ಹೆಚ್ಚು. ಒಂದು ಕಪ್ ಬಟಾಣಿ ತಿನ್ನುವುದರಿಂದ, ನೀವು ಸುಮಾರು 9 ಗ್ರಾಂ ಫೈಬರ್ ಮತ್ತು 9 ಗ್ರಾಂ ಪ್ರೋಟೀನ್ ಪಡೆಯುತ್ತೀರಿ. ಇದಲ್ಲದೆ, ಬಟಾಣಿಗಳಲ್ಲಿ ವಿಟಮಿನ್ ಎ, ವಿಟಮಿನ್ ಕೆ, ವಿಟಮಿನ್ ಸಿ, ನಿಯಾಸಿನ್, ಫೋಲೇಟ್, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅಂಶಗಳಿವೆ. ಬಟಾಣಿ ಸೇವನೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ಕೋಶಗಳನ್ನು ಸಹ ಕೊಲ್ಲುತ್ತದೆ ಎಂದು ಸಂಶೋಧನೆ ತಿಳಿದು ಬಂದಿದೆ.

ಸಿಹಿ ಗೆಣಸು:
ಬಿಳಿ ಗೆಣಸಿಗಿಂತ ಸಿಹಿ ಗೆಣಸು ಹೆಚ್ಚು ಆರೋಗ್ಯಕರ. ಇದನ್ನು ವಿಶ್ವದಾದ್ಯಂತ ಸ್ವೀಟ್ ಪೊಟಾಟೊ ಎಂದು ಕರೆಯಲಾಗುತ್ತದೆ. ಸಿಹಿ ಗೆಣಸನ್ನು ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುವಲ್ಲಿ ಬೀಟಾ ಕ್ಯಾರೋಟಿನ್ ಬಹಳ ಮುಖ್ಯ. ಮಧ್ಯಮ ಗಾತ್ರದ ಸಿಹಿ ಆಲೂಗಡ್ಡೆ ತಿನ್ನುವುದರಿಂದ, ನೀವು 4 ಗ್ರಾಂ ಫೈಬರ್, 2 ಗ್ರಾಂ ಪ್ರೋಟೀನ್, ವಿಟಮಿನ್ ಬಿ 6, ಮ್ಯಾಂಗನೀಸ್, ಪೊಟ್ಯಾಸಿಯಮ್, ವಿಟಮಿನ್ ಸಿ ಇತ್ಯಾದಿಗಳನ್ನು ಪಡೆಯುತ್ತೀರಿ.
First published: June 29, 2020, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading