Synthetic Embryo: ವೀರ್ಯ, ಅಂಡಾಣು ಇಲ್ಲದೇ ಭ್ರೂಣ ಸೃಷ್ಟಿ! ಪ್ರಯೋಗ ಯಶಸ್ವಿ

ಈಗಾಗಲೇ ನಾವು ಐವಿಎಫ್ ತಂತ್ರಜ್ಞಾನದ (IVF Technology) ಮೂಲಕ ಪ್ರಣಾಳ ಶಿಶುವಿನ ಜನನದ ಬಗ್ಗೆ ತಿಳಿದುಕೊಂಡಿದ್ದೇವೆ. ಇದೊಂದು ಅದ್ಭುತ ವೈದ್ಯಕೀಯ ತಂತ್ರಜ್ಞಾನ ಅಂತಾನೂ ಹೇಳಬಹುದು. ಇದಲ್ಲದೆ, ಈಗ ಆ ಕ್ಷೇತ್ರದಲ್ಲಿ ಈಗಲೂ ಇನ್ನಷ್ಟು ಪರಿಣಾಮಕಾರಿಯಾದ ಅನ್ವೇಷಣೆಗಳ ಬಗ್ಗೆ ಕೆಲಸ ನಡೆಯುತ್ತಲೇ ಇದೆ. ಈ ರೀತಿಯಾಗಿ ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿ (Assisted Reproduction Technology)(ART) ಬೆಳವಣಿಗೆಗಳು ಪ್ರತಿದಿನ ಹೊಸ ದಾಪುಗಾಲುಗಳನ್ನು ಮಾಡುತ್ತಿದ್ದು, ಈಗ ವಿಜ್ಞಾನಿಗಳು ಹೊಸ ವೈಜ್ಞಾನಿಕ ಅದ್ಭುತ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಾಗಲೇ ನಾವು ಐವಿಎಫ್ ತಂತ್ರಜ್ಞಾನದ (IVF Technology) ಮೂಲಕ ಪ್ರಣಾಳ ಶಿಶುವಿನ ಜನನದ ಬಗ್ಗೆ ತಿಳಿದುಕೊಂಡಿದ್ದೇವೆ. ಇದೊಂದು ಅದ್ಭುತ ವೈದ್ಯಕೀಯ ತಂತ್ರಜ್ಞಾನ ಅಂತಾನೂ ಹೇಳಬಹುದು. ಇದಲ್ಲದೆ, ಈಗ ಆ ಕ್ಷೇತ್ರದಲ್ಲಿ ಈಗಲೂ ಇನ್ನಷ್ಟು ಪರಿಣಾಮಕಾರಿಯಾದ ಅನ್ವೇಷಣೆಗಳ ಬಗ್ಗೆ ಕೆಲಸ ನಡೆಯುತ್ತಲೇ ಇದೆ. ಈ ರೀತಿಯಾಗಿ ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿ (Assisted Reproduction Technology)(ART) ಬೆಳವಣಿಗೆಗಳು ಪ್ರತಿದಿನ ಹೊಸ ದಾಪುಗಾಲುಗಳನ್ನು ಮಾಡುತ್ತಿದ್ದು, ಈಗ ವಿಜ್ಞಾನಿಗಳು ಹೊಸ ವೈಜ್ಞಾನಿಕ ಅದ್ಭುತ (Scientific Miracle) ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಪ್ರಮುಖವಾದ ವೈದ್ಯಕೀಯ ಅದ್ಭುತವೆಂದೇ ಪರಿಗಣಿಸಬಹುದಾಗಿದೆ - ಏನಪ್ಪಾ ವಿಷಯ ಅಂದರೆ, ಯಾವುದೇ ವೀರ್ಯ (Sperm) ಅಥವಾ ಮೊಟ್ಟೆ/ಅಂಡಾಣುಗಳನ್ನು ಬಳಸದೆ ಸಂಶ್ಲೇಷಿತ ಭ್ರೂಣ ಸೃಷ್ಟಿಸಿರುವುದೇ ಒಂದು ಅದ್ಭುತ ವಿಷಯವಾಗಿದೆ.

ಇದು ಜಗತ್ತಿನ ಅಂತಹ ಪ್ರಥಮ ಸಾಧನೆಯೆಂದು ವರದಿಯಾಗಿದೆ. ಜೀವಶಾಸ್ತ್ರಜ್ಞರು ಫಲವತ್ತಾದ ಮೊಟ್ಟೆಗಳು, ಭ್ರೂಣಗಳು ಅಥವಾ ಇಲಿಯ ಅಗತ್ಯವಿಲ್ಲದೆಯೇ ಪ್ರಯೋಗಾಲಯದಲ್ಲಿ ಕೇವಲ ಕಾಂಡಕೋಶಗಳು ಮತ್ತು ವಿಶೇಷ ಇನ್ಕ್ಯುಬೇಟರ್ ಅನ್ನು ಬಳಸಿ ಇಲಿಯ ಭ್ರೂಣದ ಮಾದರಿಗಳನ್ನು ಬೆಳೆಸಿದ್ದಾರೆ ಎನ್ನಲಾಗಿದೆ.

ಇಲಿಯ ಭ್ರೂಣದ ಮಾದರಿಗಳನ್ನು ಬೆಳೆಸಿ ಪ್ರಯೋಗ 
ಇಸ್ರೇಲ್‌ ದೇಶದ ವೈಜ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರ ನೇತೃತ್ವದ ತಂಡವು ಜರ್ನಲ್ ಸೆಲ್‌ನಲ್ಲಿ ಈ ಬಗ್ಗೆ ವರದಿ ಪ್ರಕಟಿಸಿದೆ. ಈ ಸಾಧನೆಯು ಆರಂಭಿಕ ಇಲಿಯ ಭ್ರೂಣದ ಬೆಳವಣಿಗೆಯ ಸಮಯದಲ್ಲಿ - ಅಳವಡಿಕೆಯ ನಂತರದ ಹಂತದಲ್ಲಿ ಏನಾಗುತ್ತದೆ ಎಂಬುದರ ಅತ್ಯಂತ ಅತ್ಯಾಧುನಿಕ ಮಾದರಿಯಾಗಿದೆ ಎಂದು ಬರೆಯಲಾಗಿದೆ.

ಸಾಮಾನ್ಯವಾಗಿ ಭ್ರೂಣ ಎನ್ನುವುದು ಇದು ಗರ್ಭಾವಸ್ಥೆಯ ನಿರ್ಣಾಯಕ ಹಂತವಾಗಿದೆ, ಏಕೆಂದರೆ ಈ ಹಂತದಲ್ಲಿ, ಬಹಳಷ್ಟು ಮಾನವ ಗರ್ಭಧಾರಣೆಗಳು ಕಳೆದುಹೋಗುತ್ತವೆ ಎಂದು ವಿಶ್ಲೇಷಿಸಲಾಗುತ್ತದೆ. ಇನ್ನು ಭವಿಷ್ಯದಲ್ಲಿ ಯಾವುದೇ ವೀರ್ಯ ಅಥವಾ ಅಂಡಾಣುಗಳನ್ನು ಬಳಸದೆಯೇ ಮಾನವ ಭ್ರೂಣವನ್ನು ಅಭಿವೃದ್ಧಿಪಡಿಸುವ ಪ್ರಯೋಗಗಳು ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿಗಳಿಗೆ ವೀರ್ಯ ಅಥವಾ ಅಂಡಾಣು ದಾನಿಗಳ ಅಗತ್ಯವೇ ಬರದಂತೆ ಮಾಡಬಹುದು ಮತ್ತು ವೈದ್ಯಕೀಯ ಸಂತಾನೋತ್ಪತ್ತಿ ಅಭ್ಯಾಸಗಳಲ್ಲಿ ಇದು ದೊಡ್ಡ ಮೈಲಿಗಲ್ಲನ್ನೇ ನೆಡಬಹುದು.

ಮಾನವ ಭ್ರೂಣಗಳಿಗೆ ಇದು ಸಾಧ್ಯವೇ?
ಈಗಾಗಲೇ ಇಲಿಯ ಭ್ರೂಣದ ಮಾದರಿಯೊಂದಿಗೆ ಇದನ್ನು ಸಾಧಿಸಲಾಗಿದ್ದು ಮುಂದೆ ಅದೇ ಸಂಕೀರ್ಣತೆಯೊಂದಿಗೆ ಕ್ರಮಬದ್ಧವಾಗಿ ಕೆಲಸ ಮಾಡುತ್ತ ಮಾನವ ಭ್ರೂಣದ ಮಾದರಿಗಳನ್ನು ಬೆಳೆಸುವುದು ಸದ್ಯದ ಮುಂದಿರುವ ಗುರಿಯಾಗಿ ವಿಜ್ಞಾನಿಗಳಿಗೆ ಉಳಿದಿದೆ.

ಇದನ್ನೂ ಓದಿ: Cancer Treatment: ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಏನೆಲ್ಲ ಸೌಲಭ್ಯವಿದೆ? ಇಲ್ಲಿದೆ ನೋಡಿ ಮಾಹಿತಿ

ಈ ನಿಟ್ಟಿನಲ್ಲಿ ಮುಖ್ಯವಾಗಿ, ಸೃಷ್ಟಿಸಬಹುದಾದ ಮಾನವ ಮಾದರಿಯು ಹೇಗೆ ಪ್ರತಿನಿಧಿಸುತ್ತದೆ ಎಂಬುದರ ಬಗ್ಗೆ ಸಾಕಷ್ಟು ಕೆಲಸ ಮಾಡಬೇಕಾಗಿದೆ, ಹೀಗೆ ಸೃಷ್ಟಿ ಮಾಡಬಹುದಾದ ಮಾನವ ಸಿಂಥೆಟಿಕ್ ಭ್ರೂಣ ಯಾವುದಾದರೂ ಇತಿ-ಮಿತಿಗಳನ್ನು ಹೊಂದಿರುತ್ತದೆಯೇ ಎಂಬುದರ ಬಗ್ಗೆ ಸಾಕಷ್ಟು ಜಾಗೃತಿವಹಿಸಿ ಕೆಲಸ ಮಾಡಬೇಕಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ಇದು ನೈತಿಕ ವಿವಾದವನ್ನು ಏಕೆ ಹುಟ್ಟುಹಾಕಿದೆ?
ಇದು ಅದ್ಭುತ ಎಂದೆನಿಸಿದರೂ ಇದರಲ್ಲಿ ಹಲವು ತೊಡಕುಗಳು ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಸಲಿಗೆ ಕಾಂಡಕೋಶಗಳ ಮೂಲವಿಲ್ಲದೆ ಯಾವುದೇ ಭ್ರೂಣದ ಮಾಡೆಲಿಂಗ್ ಸಂಭವಿಸುವುದಿಲ್ಲ, ಆದ್ದರಿಂದ ಈ ತಂತ್ರಜ್ಞಾನವು ಭವಿಷ್ಯದಲ್ಲಿ ಇದರ ಬಳಕೆಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ ಎಂದರೂ ತಪ್ಪಾಗಲಿಕ್ಕಿಲ್ಲ - ಈ ಜೀವಕೋಶಗಳು ಎಲ್ಲಿಂದ ಬರುತ್ತವೆ? ಅವು ಮಾನವನ ಭ್ರೂಣದ ಕಾಂಡಕೋಶಗಳೇ (ಬ್ಲಾಸ್ಟೊಸಿಸ್ಟ್‌ನಿಂದ ಪಡೆಯಲಾಗಿದೆ) ಅಥವಾ ಅವು ಪ್ರೇರಿತ ಪ್ಲುರಿಪೊಟೆಂಟ್ ಕಾಂಡಕೋಶಗಳಾಗಿವೆಯೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ, ಏಕೆಂದರೆ ಎರಡನೆಯದನ್ನು ಪ್ರಯೋಗಾಲಯದಲ್ಲಿ ಚರ್ಮದಿಂದ ಅಥವಾ ರಕ್ತ ಕಣಗಳಿಂದ ತಯಾರಿಸಬಹುದು, ಉದಾಹರಣೆಗೆ, ಹೆಪ್ಪುಗಟ್ಟಿದ ಮಾದರಿಗಳಿಂದ ಕೂಡ ಇದನ್ನು ಪಡೆಯಬಹುದು.

ಈ ನಿರ್ದಿಷ್ಟ ರೀತಿಯ ಸಂಶೋಧನೆಗಾಗಿ ಕೋಶಗಳನ್ನು ಬಳಸುವುದು - ಭ್ರೂಣವನ್ನು ಅನುಕರಿಸಲು ಪ್ರಯತ್ನಿಸುವುದು ಈ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಒಪ್ಪಿಗೆ ಅಗತ್ಯವಿದೆಯೇ ಎಂಬುದು ಒಂದು ಪ್ರಮುಖ ಮಾನದಂಡವಾಗಬಹುದು.

ಮಾನವ ಸಂತಾನೋತ್ಪತ್ತಿಗೆ ಇದು ಹೇಗೆ ಪರಿಣಾಮ ಬೀರುತ್ತದೆ
ಸದ್ಯ ಭ್ರೂಣಗಳನ್ನು ಇಲಿಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆಯಾದರೂ, ಇದು ಮಾನವ ಸಂತಾನೋತ್ಪತ್ತಿಗೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಇದೀಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ವಿವಿಧ ದೇಶದ ಕಾನೂನುಗಳ ವಿಚಾರ ಬಂದಾಗ ಮಾನವ ಭ್ರೂಣಗಳ ಅಬೀಜ ಸಂತಾನೋತ್ಪತ್ತಿಯು ಹಲವಾರು ನೈತಿಕ ಕಾಳಜಿಗಳನ್ನು ಹೊಂದಿದೆ, ಆದರೆ ವಿಜ್ಞಾನಿಗಳು ಇನ್ನೂ ಮಾನವ ಪ್ರಯೋಗದ ಹಂತವನ್ನು ತಲುಪುವ ಬಗ್ಗೆ ಯಾವುದೇ ಪ್ರಕಟಣೆಗಳನ್ನು ಮಾಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

ಇದನ್ನೂ ಓದಿ:  Foods For Postpartum: ಹೆರಿಗೆಯ ನಂತರ ಈ ಆಹಾರಗಳನ್ನು ಸೇವಿಸಿದ್ರೆ ಬಹಳ ಒಳ್ಳೆಯದಂತೆ

ಒಟ್ಟಿನಲ್ಲಿ ವೈದ್ಯಕೀಯ ವಿಜ್ಞಾನ ಮತ್ತಷ್ಟು ಪ್ರಗತಿಯಾಗುತ್ತಿರುವಂತೆ, ಹೊಸ ಹೊಸ ಅನ್ವೇಷಣೆಗಳು, ಅಭಿವೃದ್ಧಿಗಳು ಹೊರಬರುತ್ತಿರುವಂತೆ ಅವುಗಳ ಜೊತೆ ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತವೆ ಎಂಬುದು ಸತ್ಯವಾಗುತ್ತ ಹೋಗುತ್ತಿದೆ.
Published by:Ashwini Prabhu
First published: