ಮಾಲ್ಡೀವ್ಸ್​ನಲ್ಲಿದೆ ವಿಶ್ವದ ಮೊದಲ ಅಲೆಗಳ ನಡುವಿನ ಆರ್ಟ್​ ಗ್ಯಾಲರಿ

news18
Updated:August 1, 2018, 5:25 PM IST
ಮಾಲ್ಡೀವ್ಸ್​ನಲ್ಲಿದೆ ವಿಶ್ವದ ಮೊದಲ ಅಲೆಗಳ ನಡುವಿನ ಆರ್ಟ್​ ಗ್ಯಾಲರಿ
news18
Updated: August 1, 2018, 5:25 PM IST
-ನ್ಯೂಸ್ 18 ಕನ್ನಡ

ವಿಶ್ವದ ಮೊದಲ ಅಲೆಗಳ ನಡುವಿನ ಆರ್ಟ್​ ಗ್ಯಾಲರಿಯು ಮಾಲ್ಡೀವ್ಸ್​ ದ್ವೀಪದಲ್ಲಿ ನಿರ್ಮಿಸಲಾಗಿದೆ. ಸುಮಾರು 30 ವಿವಿಧ ಶಿಲ್ಪಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಫೇರ್​ಮೌಂಟ್​ ಮಾಲ್ಡೀವ್ಸ್​ ಸಿರ್ರು ಫೆನ್ ಫುಸಿ ರೆಸಾರ್ಟ್​ ಪ್ರದೇಶದಲ್ಲಿ 'ಕೊರಲಾರಿಯಮ್' ಹೆಸರಿನ ಸಂಸ್ಥೆ ಆರ್ಟ್​ ಗ್ಯಾಲರಿ ನಿರ್ಮಿಸಿದ್ದು, ಶೀಘ್ರದಲ್ಲೇ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.

ನೀರಿನ ಭಾಗದಿಂದ 3 ಮೀಟರ್ ಆಳದಲ್ಲಿ ಇಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ. ನೀರಿನ ಅಲೆಯ ನಡುವೆ ಕಲಾವಿದರ ಕೈಚಳಕ ಅರೆ ಮುಳುಗಿದಂತೆ ಗೋಚರಿಸಲಿದೆ. ಬ್ರಿಟಿಷ್ ಶಿಲ್ಪಿ ಜೇಸನ್ ಡೆಕೈರೆಸ್ ಟೇಲರ್ ವಿನ್ಯಾಸಗೊಳಿಸಿರುವ ಶಿಲ್ಪಾಕೃತಿಗಳು ಇಲ್ಲಿ ಕಾಣಸಿಗುತ್ತದೆ. ಕಳೆದ ಒಂಭತ್ತು ತಿಂಗಳಿಂದ ಈ ಅಧ್ಭುತ ಗ್ಯಾಲರಿ ಸ್ಥಾಪಿಸುವಲ್ಲಿ ಜೇಸನ್ ಮತ್ತು ತಂಡ ಶ್ರಮವಹಿಸಿದ್ದು, ಈಗಾಗಲೇ ಇದನ್ನು ಸಮುದ್ರದ ಸ್ಮಾರಕ ಎಂದು ಕರೆಯಲಾಗುತ್ತಿದೆ.

ವಿಲೋಮ ಮೃಗಾಯದಂತೆ ಕಾಣಿಸುತ್ತಿರುವ ಅಲೆಗಳ ನಡುವಿನ ಆರ್ಟ್​ ಗ್ಯಾಲರಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ. ಪಂಜರದೊಳಗೆ ಸೃಷ್ಟಿಸಿರುವ ಈ ಗ್ಯಾಲರಿ ಮರಿನ್ ಲೈಫ್ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ವಿನ್ಯಾಸಕ ಜೇಸನ್ ತಿಳಿಸಿದ್ದಾರೆ. ಗ್ಯಾಲರಿಯ ಸುತ್ತಲೂ ಉಕ್ಕಿನ ಚೌಕಟ್ಟನ್ನು ನಿರ್ಮಿಸಲಾಗಿದ್ದು, ಇದರೊಳಗೆ ಮತ್ತು ಹೊರಗೆ ಹಲವು ರೀತಿಯ ಕಲಾಕೃತಿಗಳನ್ನು ಸ್ಥಾಪಿಸಲಾಗಿದೆ.

ಈ ಗ್ಯಾಲರಿಯಲ್ಲಿ ನೀಡಲಾಗಿರುವ ಬೆಳಗಿನ ವ್ಯವಸ್ಥೆಯು ಕಡಲ ಕಲಾಕೃತಿಗಳನ್ನು ಮತ್ತಷ್ಟು ಆಕರ್ಷಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಳೆದ ಜನವರಿಯಲ್ಲಿ ಯುರೋಪ್​ನಲ್ಲಿ ಅಂಡರ್​ವಾಟರ್ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿತ್ತು. ಹಾಗೆಯೇ ಅಮೆರಿಕದಲ್ಲಿ ಡೈವಿಂಗ್ ಮೂಲಕ ವೀಕ್ಷಿಸುವ ವಿನೂತನ ಮ್ಯೂಸಿಯಂ ಅನ್ನು ಸೃಷ್ಟಿಸಿದ್ದರು. ಇದೀಗ ಪ್ರವಾಸಿಗರನ್ನು ಸೆಳೆಯಲು ಮಾಲ್ಡೀವ್ಸ್ ವಿಶ್ವದಲ್ಲೇ ಮೊದಲ ಬಾರಿ ಅಂತರ್ಜಲದಲ್ಲಿ ಆರ್ಟ್​ ಗ್ಯಾಲರಿ ಸ್ಥಾಪಿಸಿದೆ.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ