ವಿಶ್ವದ ಅತಿ ಸುಂದರವಾದ ನಾಯಿ ಬೂ ಇನ್ನಿಲ್ಲ

ಇದಕ್ಕೂ ಮುನ್ನ ಬುಡಿ ಎಂಬ ಹೆಸರಿನ ನಾಯಿ ಸಾವನಪ್ಪಿದ ಬಳಿಕ ಬೂ ನಾಯಿಗೆ ಹೃದಯ ಸಂಭಂದಿ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಮಾಲೀಕ ತಿಳಿಸಿದ್ದಾರೆ. ಬುಡಿ ಹಾಗೂ ಬೂ ಕಳೆದ 11 ವರ್ಷಗಳಿಂದ ಒಟ್ಟಿಗಿದ್ದರು. 2017ರಲ್ಲಿ ಬುಡಿ ಸಾವನಪ್ಪಿತ್ತು. ಸ್ನೇಹಿತನ ಸಾವಿನ ನೋವೇ ಇದಕ್ಕೆ ಕಾರಣ ಎಂದು ಮಾಲೀಕ ಹೇಳಿದ್ದಾರೆ.

Harshith AS | news18
Updated:January 21, 2019, 5:20 PM IST
ವಿಶ್ವದ ಅತಿ ಸುಂದರವಾದ ನಾಯಿ ಬೂ ಇನ್ನಿಲ್ಲ
ಬೂ
  • News18
  • Last Updated: January 21, 2019, 5:20 PM IST
  • Share this:
ವಿಶ್ವದ ಅತಿ ಸುಂದರವಾದ ನಾಯಿ ಎಂದು ಹೆಸರು ಪಡೆದಿದ್ದ 'ಬೂ' ಶನಿವಾರದಂದು ಸಾವನಪ್ಪಿದೆ. ಬೂ ಹೃದಯ ಸಂಭಂದಿ ಕಾಯಿಲೆಯಿಂದ ಬಳಲುತ್ತಿದ್ದು ನಿದ್ರೆ ಮಾಡುತ್ತಲೇ ಸಾವನಪ್ಪಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ಇದಕ್ಕೂ ಮುನ್ನ 'ಬುಡಿ' ಎಂಬ ಹೆಸರಿನ ನಾಯಿ ಸಾವನಪ್ಪಿದ ಬಳಿಕ 'ಬೂ' ನಾಯಿಗೆ ಹೃದಯ ಸಂಭಂದಿ ಕಾಯಿಲೆಯಿಂದ ಬಳಲುತ್ತಿತ್ತು ಎಂದು ಮಾಲೀಕ ತಿಳಿಸಿದ್ದಾರೆ. 'ಬುಡಿ' ಹಾಗೂ 'ಬೂ' ಕಳೆದ 11 ವರ್ಷಗಳಿಂದ ಒಟ್ಟಿಗಿದ್ದರು. 2017ರಲ್ಲಿ 'ಬುಡಿ' ಸಾವನಪ್ಪಿತ್ತು. ಸ್ನೇಹಿತನ ಸಾವಿನ ನೋವೇ ಇದಕ್ಕೆ ಕಾರಣ ಎಂದು ಮಾಲೀಕ ಹೇಳಿದ್ದಾರೆ.
ಇದನ್ನೂಓದಿ

2006ರಲ್ಲಿ ಮಾಲೀಕನ ಮನೆಗೆ ಬಂದ 'ಬೂ' ವಿಶ್ವದಾದ್ಯಂತ ಫೇಮಸ್ ಆಗಿತ್ತು. ಅದರಲ್ಲು ಸಾಮಾಜಿಕ ತಾಣಗಳಲ್ಲಿ ಅನೇಕ ಫಾಲೋವರ್ಸ್​ಗಳನ್ನು ಹೊಂದಿತ್ತು. ಫೇಸ್ಬುಕ್​ನಲ್ಲಿ 1 ಕೋಟಿಗೂ ಅಧಿಕ ಜನರು 'ಬೂ'ವನ್ನು ಫಾಲೋ ಮಾಡುತ್ತಿದ್ದರು. 'ಬೂ' ಹೆಸರಿನಲ್ಲಿ ‘ಬೂ ದಿ ವಲ್ಡ್​ ಆಫ್​ ಕ್ಯೂಟೆಸ್ಟ್​​ ಡಾಗ್​’ ಎಂಬ ಪುಸ್ತಕವು ಬಿಡುಗಡೆಗೊಳಿಸಲಾಗಿತ್ತು.

ಮಾಲೀಕ ಮುದ್ದಿನ ನಾಯಿ 'ಬೂ' ಸಾವಿನ ಸುದ್ದಿಯನ್ನು ಜಾಲತಾಣದಲ್ಲಿ ತಿಳಿಸುತ್ತಿದ್ದಂತೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಮಾಲೀಕ ತನ್ನ ಪ್ರೀತಿಯ ನಾಯಿಯನ್ನು ಕಳೆದುಕೊಂಡ ದುಃಖದಲ್ಲಿದ್ದು, 'ಬೂ' ತನ್ನ ಸ್ನೇಹಿತನ ಭೇಟಿಗೆ ಹೋಗಿದ್ದಾನೆ ಎಂದು ಹೆಳಿದ್ದಾರೆ.

First published:January 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading