ವಿಶ್ವ ಸಸ್ಯಾಹಾರಿ ದಿನ: ಮಾಂಸಾಹಾರಕ್ಕಿಂತ ಸಸ್ಯಹಾರ ಸೇವನೆಯಿಂದ ಆರೋಗ್ಯ ವೃದ್ಧಿ

news18
Updated:October 1, 2018, 2:53 PM IST
ವಿಶ್ವ ಸಸ್ಯಾಹಾರಿ ದಿನ: ಮಾಂಸಾಹಾರಕ್ಕಿಂತ ಸಸ್ಯಹಾರ ಸೇವನೆಯಿಂದ ಆರೋಗ್ಯ ವೃದ್ಧಿ
  • Advertorial
  • Last Updated: October 1, 2018, 2:53 PM IST
  • Share this:
-ಡಾ. ಶ್ರೀಲತಾ ಪದ್ಯಾಣ

ಇಂದು 'ವಿಶ್ವ ಸಸ್ಯಾಹಾರಿ ದಿನ'. ಜೀವಿಸಲು ಎಲ್ಲರೂ ಏನನ್ನಾದರೂ ತಿನ್ನಲೇ ಬೇಕಾದದ್ದು ಪ್ರಕೃತಿಯ ನಿಯಮ. ಜೀವೋ ಜೀವಸ್ಯ ಜೀವನಂ. ಆಹಾರದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ವಿಧಗಳಿವೆ. ಇವುಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು ಹಾಗೂ ಅದು ತನ್ನ ಸ್ವಂತ ಇಚ್ಛೆ. ಕೆಲವರು ಹುಟ್ಟಿನಿಂದಲೇ ಸಸ್ಯಾಹಾರಿಗಳಾಗಿದ್ದಾರೆ ಇನ್ನೂ ಕೆಲವರು ಮಾಂಸಾಹಾರಿಗಳಾಗಿದ್ದರೂ ಯಾವುದೋ ಒಂದು ಕಾರಣಕ್ಕೆ ಶುದ್ಧ ಸಸ್ಯಾಹಾರಿಗಳಾಗಿ ಬದಲಾಗುತ್ತಾರೆ.ವಿಶೇಷ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರವೆಂದರೆ ಸಸ್ಯಾಹಾರ ಎಂದು ಹೇಳಬಹುದು. ಆರೋಗ್ಯದ ದೃಷ್ಟಿಯಿಂದ ಹಾಗೂ ಸೌಂದರ್ಯ ವರ್ಧನೆಗೆ ಇದು ಬಹಳ ಉತ್ತಮ ಆಹಾರವಾಗಿದೆ. ಇಂದು ಬಹಳಷ್ಟು ಜನರು ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಜನರು ಸ್ವತಃ ಸಸ್ಯಾಹಾರದತ್ತ ಪರಿವರ್ತನೆ ಆಗುವುದನ್ನು ಕಾಣುತ್ತಿದ್ದೇವೆ. ಸಸ್ಯಾಹಾರದಲ್ಲಿ ದೇಹಕ್ಕೆ ಬೇಕಾದ ಆಂಟಿ ಆಕ್ಸಿಡೆಂಟ್, ನಾರಿನಂಶ, ವಿಟಮಿನ್ ಗಳು,ರಕ್ಷಣಾತ್ಮಕ ಕೊಬ್ಬಿನ ಅಂಶ ಇರುವುದರಿಂದ ಅನೇಕ ಕಾಯಿಲೆಗಳಿಂದ ದೂರವಿರಲು ಸಾಧ್ಯವಿದ್ದು ದೀರ್ಘಾಯುಷ್ಯವನ್ನು ಹೊಂದಬಹುದು.ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅಂಶ ಸಿಗುವುದು ಮೀನು, ಮಾಂಸ ಮುಂತಾದ ಮಾಂಸಾಹಾರಗಳಲ್ಲಿ ಎಂದು ಹೇಳಲಾಗುತ್ತದೆ. ಆದರೆ ಮಾಂಸಾಹಾರದಲ್ಲಿ ಸಿಗುವಂತಹ ಪ್ರೋಟಿನ್ ಅಂಶವನ್ನು  ಸಸ್ಯಾಹಾರದಿಂದ ಕೂಡ  ಗಳಿಸಿಕೊಳ್ಳಬಹುದು. ಧಾನ್ಯಗಳು ಬೇಳೆ ಕಾಳುಗಳು, ಶೇಂಗಾ,ಹಾಲು, ಪನ್ನೀರ್, ಪೀನಟ್ ಬಟರ್,ಚೀಸ್,ಹಣ್ಣುಗಳಲ್ಲಿ ಹೆಚ್ಚಿನ ಪ್ರೋಟಿನ್ ಅಂಶ ಕಂಡು ಬರುತ್ತದೆ. ಹಾಲು, ಬಾದಾಮಿ, ಈರುಳ್ಳಿ, ಬೆಳ್ಳುಳ್ಳಿ, ಎಲೆಕೋಸು, ಬಸಳೆಸೊಪ್ಪು ಮುಂತಾದವುಗಳಿಂದ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಸಿಗುತ್ತದೆ.ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳು ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ದೂರವಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದ್ದು, ದೇಹದ ಕೊಬ್ಬಿನ ಅಂಶವನ್ನು ನಿಯಂತ್ರಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಕ್ಲಿನಿಕಲ್ ನ್ಯೂಟ್ರಿಷನ್ ಎಂಬ ಪತ್ರಿಕೆಯಲ್ಲಿ ಸಂಶೋಧನೆ ಪ್ರಕಟವಾಗಿದೆ.
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ