• Home
  • »
  • News
  • »
  • lifestyle
  • »
  • World Sleep Day 2021: ಉತ್ತಮ ಆರೋಗ್ಯಕ್ಕೆ ದಿನಕ್ಕೆ ಎಷ್ಟು ಗಂಟೆ ನಿದ್ರೆ ಅಗತ್ಯ?

World Sleep Day 2021: ಉತ್ತಮ ಆರೋಗ್ಯಕ್ಕೆ ದಿನಕ್ಕೆ ಎಷ್ಟು ಗಂಟೆ ನಿದ್ರೆ ಅಗತ್ಯ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಿಶ್ವ ನಿದ್ರಾ ದಿನ 2021: ಪ್ರತಿಯೊಂದು ಜೀವಿಗೂ ನಿದ್ರೆ ಅತ್ಯವಶ್ಯವಾಗಿದ್ದು, ದೇಹದ ಸ್ನಾಯುಗಳು ಹಗಲಿನಲ್ಲಿ ಕಾರ್ಯವಹಿಸುವುದರ ಜೊತೆಗೆ ಮೆದುಳನ್ನು ಪುನರ್ಭರ್ತಿ ಮಾಡುತ್ತವೆ. ಸರಿಯಾಗಿ ನಿದ್ರೆ ಮಾಡದಿದ್ದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು.

  • Share this:

ಪ್ರತಿಯೊಬ್ಬರಿಗೂ ನಿದ್ರೆ ಅವಶ್ಯ. ಉತ್ತಮ ಆರೋಗ್ಯಕ್ಕೆ ಎಂಟು ಗಂಟೆಗಳ ಕಾಲ ನಿದ್ರೆ ಬೇಕು ಎಂದು ಹೇಳಲಾಗುತ್ತದೆ. ಆದರೆ ವ್ಯಕ್ತಿಗಣುಸಾರ ನಿದ್ರೆಯ ಕಾಲವಧಿ ವ್ಯತ್ಯಾಸವಿರುತ್ತದೆ. ವಯಸ್ಸು, ದೇಹದ ತೂಕ, ಚಟುವಟಿಕೆಗಳ ಆಧಾರದ ಮೇಲೆ ನಿದ್ರೆಯ ಅವಶ್ಯವಿರುತ್ತದೆ. ಸ್ಲೀಪ್ ಫೌಂಡೇಶನ್ ನ ಪ್ರಕಾರ ವಯಸ್ಕರು 7-9 ಗಂಟೆಗಳು, 65 ವರ್ಷಕ್ಕಿಂತ ಮೆಲ್ಪಟ್ಟವರಿಗೆ 7-8 ಗಂಟೆಗಳು, ಹದಿಹರೆಯದ ಮಕ್ಕಳಿಗೆ 9-11 ಗಂಟೆಗಳು, 7 ವರ್ಷ ಮೆಲ್ಪಟ್ಟ ಮಕ್ಕಳಿಗೆ 10-13 ಗಂಟೆಗಳು ಮತ್ತು ಮಗುವಿಗೆ 17 ಗಂಟೆಗಳ ನಿದ್ರೆಯ ಅವಶ್ಯವಿದೆ.


ಆದಾಗ್ಯೂ, ಆರೋಗ್ಯವಂತ ವ್ಯಕ್ತಿಗಳಿಗೆ ಇದು ಒಂದು ಮೂಲ ಚೌಕಟ್ಟಾಗಿದ್ದು, ಸ್ಲೀಪ್ ಫೌಂಡೇಶನ್ ಯಾವುದೇ ರೀತಿಯ ವ್ಯಕ್ತಿಯ ಚಟುವಟಿಕೆ, ಆರೋಗ್ಯ ಪರಿಸ್ಥಿತಿಗಳ ಮತ್ತು ಮುಂತಾದವುಗಳನ್ನು ಅವಲಂಬಿಸಿ ನಿದ್ರಿಸುವ ಕಾಲಾವಧಿಯನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂದು ಉಲ್ಲೇಖಿಸಿದೆ.


ನಿದ್ರೆಯ ಸಮಯವನ್ನು ಲೆಕ್ಕಾಚಾರ ಮಾಡುವಾಗ ಈ ಅಂಶಗಳನ್ನು ನೆನಪಿಡಿ:


ನೀವು ನಿದ್ರಿಸುವ ಗಂಟೆಗಳ ನಿದ್ರೆಯಿಂದ ನೀವು ಉತ್ತಮ ಆರೋಗ್ಯವಂತರಾಗಿ ಮತ್ತು ಸಂತೋಷವಾಗಿದ್ದೀರಾ? ನಿದ್ರೆಯಿಂದ ಅಸ್ತಿತ್ವದಲ್ಲಿರುವ ಕಾಯಿಲೆಯ ಮೇಲೆ ಯಾವ ಪರಿಣಾಮ ಬೀರಿದೆ? ನಿದ್ರೆಯ ಹೊರತಾಗಿ ಆಲಸ್ಯಕ್ಕೆ ಕಾರಣವಾಗುವ ಯಾವುದಾದರೂ ಚಟುವಟಿಕೆ ಮಾಡುತ್ತಿರುವಿರಾ? ಶ್ರಮದಾಯಕ ಕೆಲಸ ಅಥವಾ ಕ್ರೀಡೆಗಳಲ್ಲಿ ನೀವು ಹೆಚ್ಚು ಶಕ್ತಿಯನ್ನು ಹೊರಹಾಕುತ್ತೀರಾ? ಉದ್ಯೋಗದ ಸಮಯದಲ್ಲಿ ನಿದ್ರೆಗೆ ಜಾರುವಿರಾ? ರಜಾ ದಿನಗಳಲ್ಲಿ ನೀವು ನಿದ್ರೆ ಮಾಡುವ ಅಭ್ಯಾಸವಿದೆಯೇ?


ಇದನ್ನೂ ಓದಿ: World sleep day 2021: ಯುವಕ-ಯುವತಿಯರಲ್ಲಿ ಅತಿ ಹೆಚ್ಚು ನಿದ್ದೆ ಮಾಡೋದು ಯಾರು ಗೊತ್ತಾ?


ಕೆಲವರು ಕಡಿಮೆ ನಿದ್ರೆ ಮಾಡುವಂತೆ ತಮ್ಮನ್ನು ತಾವು ತರಬೇತಿ ಮಾಡಿಕೊಂಡಿದ್ದಾರೆ. "ಕೆಲವರು ಹೆಚ್ಚು ಸಮಯ ಎಚ್ಚರದಿಂದ ಇರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಕಡಿಮೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಏಕೆಂದರೆ ಕ್ರಿಯಾತ್ಮಕ ಚಟುವಟಿಕೆಯು ಕ್ರಮೇಣವಾಗಿ ಕ್ಷಿಣಿಸುವುದರಿಂದ ಹೆಚ್ಚು ಕಾಲಾವಧಿಯವರೆಗೆ ಎಚ್ಚರದಿಂದ ಇರುವ ವ್ಯಕ್ತಿಗಳು ಇದರ ಬಗ್ಗೆ ಅರಿತುಕೊಳ್ಳುವುದಿಲ್ಲ." ಎಂದು ತಜ್ಞರಾದ ಸ್ಲೀಪ್ ಎಕ್ಸ್‌ಪರ್ಟ್ ಸಿಂಥಿಯಾ ಲಾಜಾಂಬೆ ರವರು ಹೇಳುತ್ತಾರೆ.


ಪ್ರತಿಯೊಂದು ಜೀವಿಗೂ ನಿದ್ರೆ ಅತ್ಯವಶ್ಯವಾಗಿದ್ದು, ದೇಹದ ಸ್ನಾಯುಗಳು ಹಗಲಿನಲ್ಲಿ ಕಾರ್ಯವಹಿಸುವುದರ ಜೊತೆಗೆ ಮೆದುಳನ್ನು ಪುನರ್ಭರ್ತಿ ಮಾಡುತ್ತವೆ. ಸರಿಯಾದ ಅರಿವಿನ ಮತ್ತು ನಡವಳಿಕೆಯ ಕೆಲಸಗಳಿಗೆ ಸರಿಯಾದ ನಿದ್ರೆ ಅವಶ್ಯವಾಗಿದೆ.


ಸರಿಯಾಗಿ ನಿದ್ರೆ ಮಾಡದಿದ್ದರೆ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಇವುಗಳಲ್ಲಿ ಮಧುಮೇಹ, ಹೃದಯ ಮತ್ತು ನರವೈಜ್ಞಾನಿಕ ಕಾಯಿಲೆಗಳು, ಭಯ, ಚರ್ಮದ ಸುಕ್ಕುಗಳು, ಕಪ್ಪು ಕಲೆಗಳು, ಮಾನಸಿಕ ಒತ್ತಡಗಳಂತಹ ಅಡ್ಡ ಪರಿಣಾಮಗಳು ಮನುಷ್ಯನ ಮೇಲೆ ಬೀರುವ ಅಪಾಯವಿದೆ. ಆದ್ದರಿಂದ ಮನುಷ್ಯನ ಉತ್ತಮ ಆರೋಗ್ಯಕ್ಕೆ ಅವನ ವಯಸ್ಸು, ಚಟುವಟಿಕೆಗಳ ಅನುಸಾರ ಆರೋಗ್ಯವಂತ ನಿದ್ರೆ ಅಗತ್ಯ.


ನಿದ್ರೆಯಿಂದ ಮೆದುಳಿಗೆ ಮತ್ತು ದೇಹಕ್ಕೆ ವಿಶ್ರಾಂತಿ ದೊರಕುತ್ತದೆ. ಇದರಿಂದ ಉತ್ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯವಾಗಲಿದೆ. ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ನಿದ್ರೆಯ ಅವಶ್ಯ ಎಂಬುದು ತಜ್ಞರ ಅಭಿಪ್ರಾಯ.

Published by:Sushma Chakre
First published: