World Samosa Day 2022: ವಿಶ್ವ ಸಮೋಸಾ ದಿನ! ತಿನ್ನುವ ಮೊದಲು ಇದರ ಇತಿಹಾಸ ತಿಳಿದುಕೊಳ್ಳಿ

ಸಮೋಸಾದ ಇತಿಹಾಸದ ಬಗ್ಗೆ ತಿಳಿಯಲು ಹೊರಟರೆ, 10ನೇ ಶತಮಾನದ ಸುಮಾರಿಗೆ ಮಧ್ಯ ಏಷ್ಯಾದಲ್ಲಿ ಕೇಳಿ ಬರುತ್ತದೆ. ಆದರೀಗ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ನ್ಯಾಕ್ಸ್​ ಇದಾಗಿದೆ. ಅಂದಹಾಗೆಯೇ ಇಂದು ವಿಶ್ವ ಸಮೋಸಾ ದಿನವನ್ನು ಆಚರಿಸಲಾಗುತ್ತದೆ.

ಸಮೋಸಾ

ಸಮೋಸಾ

  • Share this:
    ಇಂದು ವಿಶ್ವ ಸಮೋಸಾ ದಿನ (Samosa Day). ಸಮೋಸಾ ತಿಂದವರಿಗೆ ಮಾತ್ರ ಈ ವಿಶೇಷ ದಿನದ ಮಹತ್ವ ಗೊತ್ತಿರಲು ಸಾಧ್ಯ. ಏಕೆಂದರೆ ಸಮೋಸಾ ಟೇಸ್ಟ್​ (Taste) ಮಾಡಿದವರಿಗೆ ಅದನ್ನು ಮತ್ತೆ ಮತ್ತೆ ತಿನ್ನಬೇಕು ಎಂದು ಅನಿಸುವುದು ಸಹಜ. ಹಾಗಾಗಿ ಇಂತಹ ಒಂದು ಪಾಕ ಎಲ್ಲಿ ಪ್ರಾರಂಭವಾಯಿತು? ಭಾರತದಲ್ಲಿ (India) ಹೇಗೆ ಜನಪ್ರಿಯವಾಯಿತು? ಎಂದು ಸಮೋಸಾದ ಇತಿಹಾಸ ತಿಳಿದುಕೊಳ್ಳುತ್ತಾರೆ. ಆದರೆ ಸಮೋಸಾ ಭಾರತದಲ್ಲ. ಅದರ ಇತಿಹಾಸ (History) ಬೇರೆಯೇ ಇದೆ. ಅಂದಹಾಗೆಯೇ ರುಚಿಯಾದ ಸಮೋಸಾದ ಇತಿಹಾಸ ತಿಳಿಯೋಣ.

    ಸಮೋಸಾದ ಇತಿಹಾಸದ ಬಗ್ಗೆ ತಿಳಿಯಲು ಹೊರಟರೆ, 10ನೇ ಶತಮಾನದ ಸುಮಾರಿಗೆ ಮಧ್ಯ ಏಷ್ಯಾದಲ್ಲಿ ಕೇಳಿ ಬರುತ್ತದೆ. ಆದರೀಗ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ನ್ಯಾಕ್ಸ್​ ಇದಾಗಿದೆ. ಅಂದಹಾಗೆಯೇ ಇಂದು ವಿಶ್ವ ಸಮೋಸಾ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 05 ರಂದು ಸಮೋಸಾ ದಿನವಾಗಿ ಮೀಸಲಿಡಲಾಗಿದೆ. ಮತ್ತೊಂದು ಸಂಗತಿ ಎಂದರೆ ಇಂದು ಶಿಕ್ಷಕರ ದಿನಾಚರಣೆಯೂ ಕೂಡ ಹೌದು.

    ಬಹುತೇಕರು ಸಮೋಸಾ ತಿಂದಿದ್ದಾರೆ. ಅದರ ಟೇಸ್ಟ್​ ನೋಡಿದ್ದಾರೆ. ಆದರೆ ಇದರ ಇತಿಹಾಸದ ಬಗ್ಗೆ ಯಾರಿಗೂ ತಿಳಿದಿಲ್ಲ. ಅದರಲ್ಲೂ ಸಮೋಸಾ ಭಾರತದಲ್ಲಿ. ಆದರೆ ಸಮೋಸಾ ಸವಿಯುವಾದ ಅರೇಬಿಕ್ ವ್ಯಾಪಾರಿಗಳಿಗೆ ಧನ್ಯವಾದ ಹೇಳಬೇಕು. ಏಕೆಂದರೆ, 10ನೇ ಶತಮಾನದಲ್ಲಿ ಅರೇಬಿಕ್ ವ್ಯಾಪಾರಿಗಳು ತಮ್ಮ ದೇಶದ ಹಿಟ್ ಸ್ನ್ಯಾಕ್ಸ್ ಸಮೋಸಾವನ್ನು ಪರಿಚಯಿಸಿದರು.

    ಅದರ ರುಚಿ ಸವಿಯ ಭಾರತೀಯರು ಇಂದು ಮನೆ ಮನೆಯಲ್ಲಿ ಸಮೋಸಾ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ನೂರಾರು ವರ್ಷಗಳಿಂದ ಅದರ ರುಚಿ ಗೊತ್ತಾಗಿದೆ. ಆದ್ದರಿಂದ ಸಮೋಸಾ ಹೇಗೆ ನಮ್ಮ ಜೀವನದ ಒಂದು ಭಾಗವಾಯಿತು ಎಂದು ಹೇಳಬೇಕಾಗಿಲ್ಲ. ಆದರೂ ಭಾರತೋಯರು ಜಗತ್ತಿಗೆ ಆಲೂಗಡ್ಡೆ ಸಮೋಸ ಕೊಟ್ಟಿದ್ದೇವೆ ಎಂದು ಖಂಡಿತಾ ಹೇಳಬಹುದು.

    ಇದನ್ನೂ ಓದಿ: DIY Hacks: ಘಂ ಎನಿಸುವ ಅಗರಬತ್ತಿಯನ್ನು ಮನೆಯಲ್ಲಿ ನೀವೂ ಮಾಡ್ಬೋದು

    ಸಮೋಸಾವನ್ನು ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಅನೇಕ ಶತಮಾನಗಳ ಹಿಂದಿನ ಪುಸ್ತಕಗಳು ಮತ್ತು ದಾಖಲೆಗಳಲ್ಲಿ, ಇದನ್ನು ಸಂಬೋಸ್ಕಾ, ಸಾಂಬುಸಾ, ಸಂಬೋಸಾಜ್ ಎಂದು ಉಲ್ಲೇಖಿಸಲಾಗಿದೆ. ಈಗಲೂ ಅದಕ್ಕೆ ಸಿಂಘಡ, ಸಾಂಬಸ, ಚಮುಕ, ಸಾಂಬುಸಜ್ ಎಂದು ಹಲವು ಹೆಸರುಗಳಿವೆ.

    ಏಷ್ಯಾದಲೇ "ಸಮೋಸಾ" ಇರಾನ್‌ನಿಂದ ಹರಡಲು ಪ್ರಾರಂಭಿಸಿತು. ಅಲ್ಲಿ ಹತ್ತನೇ ಶತಮಾನದಲ್ಲಿ ಬರೆದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಇರಾನಿನ ಇತಿಹಾಸಕಾರ ಅಬೋಲ್ಫಾಜಿ ಬೆಹಕಿ ಇದನ್ನು "ತಾರಿಖ್ ಇ ಬೆಹಕಿ" ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಇನ್ನೂ ಕೆಲವು ವರ್ಷಗಳ ಹಿಂದೆ, ಪರ್ಷಿಯನ್ ಕವಿ ಇಶಾಕ್ ಅಲ್-ಮಾವ್ಸಿಲಿಕಿ ಅದರ ಮೇಲೆ ಒಂದು ಕವಿತೆಯನ್ನು ಬರೆದರು.

    ಇದನ್ನೂ ಓದಿ: Sugar Foods: ಹೆಚ್ಚು ಸಕ್ಕರೆ, ಸಿಹಿ ತಿಂಡಿ ತಿಂತೀರಾ? ಚರ್ಮದ ಆರೋಗ್ಯ ಹಾಳಾದ್ರೆ ಬೈಯ್ಕೋಬೇಡಿ

    ಆದರೆ ಸಮೋಸಾಗಳು ಈಜಿಪ್ಟ್‌ನಲ್ಲಿ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ. ಅಲ್ಲಿಂದ ಲಿಬಿಯಾ ತಲುಪಿತು. ನಂತರ ಮಧ್ಯಪ್ರಾಚ್ಯ ತಲುಪಿತು. ಇದು 16 ನೇ ಶತಮಾನದವರೆಗೆ ಇರಾನ್‌ನಲ್ಲಿ ಬಹಳ ಜನಪ್ರಿಯವಾಗಿತ್ತು.

    ಭಾರತದಲ್ಲಿ ಇಂದಿಗೂ ಸಮೋಸಾಗೆ ಬೇಡಿಕೆ ಇದೆ. ಬಹುತೇಕ ಭಾರತೀಯ ಜನರು ಸಮೋಸಾದ ಟೇಸ್ಟ್​ ನೋಡಿದ್ದಾರೆ. ಅದರಲ್ಲೂ ಮನೆಯಲ್ಲಿಯೇ ಮಾಡಲು ಕಲಿತುಕೊಂಡಿದ್ದಾರೆ. ಅದರಲ್ಲೂ ಮುಸ್ಲಿಂ ಹಬ್ಬದ ಸಮಯದಲ್ಲಿ ಸಮೋಸಾ ಮಾರಾಟ ಜೋರಾಗಿರುತ್ತದೆ. ವಿವಿಧ ಸಮೋಸಾಗಳನ್ನು ಇವರ ಹಬ್ಬಗಳ ಸಮಯದಲ್ಲಿ ಕಾಣಬಹುದು.

    ಹೈದರಾಬಾದ್​, ದೆಹಲಿ ಕಡೆಗೆ ಪ್ರಯಾಣಿಸಿದವರಿಗೆ ಸಮೋಸಾದ ಪರಿಚಯವಿರುತ್ತದೆ. ಅದರಲ್ಲೂ ರೈಲಿನಲ್ಲಿ ಪ್ರಯಾಣಿಸುವವರು ಸಮೋಸಾ ಸವಿದೇ ಸವಿದಿರುತ್ತಾರೆ. ಅಂದಹಾಗೆಯೇ ತರಕಾರಿ ಹಾಕಿ ಸಮೋಸಾ ಮಾಡುತ್ತಾರೆ. ಮಾಂಸ ಬೆರೆಸಿ ಸಮೋಸಾ ಮಾಡುತ್ತಾರೆ. ಒಟ್ಟಿನಲ್ಲಿ ಸಮೋಸಾವನ್ನು ಎರಡು ರೀತಿಯಲ್ಲಿ ಮಾಡುತ್ತಾರೆ.

    ಸಮೋಸಾ ರುಚಿ ತಿಳಿದವರಿಗೆ ಮತ್ತೆ ಮತ್ತೆ ತಿನ್ನಬೇಕು ಎಂದು ಅನಿಸುವುದು ಸಹಜ. ಅಂದಹಾಗೆಯೇ ತಿನ್ನದೇ ಇರುವವರು ಒಂದು ಬಾರಿ ಟೇಸ್ಟ್​ ನೋಡಿ
    Published by:Harshith AS
    First published: