• Home
  • »
  • News
  • »
  • lifestyle
  • »
  • World Radio Day 2022: ವಿಶ್ವ ರೇಡಿಯೋ ದಿನದ ಇತಿಹಾಸ, ಮಹತ್ವ ಇಲ್ಲಿದೆ

World Radio Day 2022: ವಿಶ್ವ ರೇಡಿಯೋ ದಿನದ ಇತಿಹಾಸ, ಮಹತ್ವ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Radio Day: ಅಲ್ಲದೇ, 2ನೇ ವಿಶ್ವಯುದ್ದದ ಸಮಯದಲ್ಲಿ, ರೇಡಿಯೋ ಮಿಲಿಟರಿ ಮತ್ತು ಸಾರ್ವಜನಿಕರಿಗೆ ಸಂವಹನದ ಪ್ರಮುಖ ಸಾಧನವಾಯಿತು ಎನ್ನಬಹುದು. ಇತ್ತೀಚಿನ ದಿನಗಳಲ್ಲಿ, ಸುದ್ದಿ, ಹಾಡುಗಳು ಮತ್ತು ಕ್ರೀಡಾ ಮಾಹಿತಿಯನ್ನು ಕೇಳಲು ಈ ಮಾಧ್ಯಮವನ್ನು ಬಳಸಲಾಗುತ್ತದೆ.

  • Share this:

ಸಮೂಹ ಮಾಧ್ಯಮವು (Mass Media) ಪ್ರಪಂಚದಲ್ಲಿ ಮುದ್ರಣ ಮಾಧ್ಯಮದಿಂದ (Print Media)  ಪ್ರಾರಂಭವಾಯಿತು. ಮಾಹಿತಿಯನ್ನು ಹಂಚಲು ಮಾಧ್ಯಮದ ಆರಂಭಿಕ ರೂಪವೆಂದರೆ ಪೆನ್ನು ಮತ್ತು ಕಾಗದದ ಎನ್ನಬಹುದು. ಆದರೆ ತಂತ್ರಜ್ಞಾನವು (Technology) ಬೆಳೆಯುತ್ತಿದ್ದಂತೆ, ವಿಜ್ಞಾನಿಗಳು ಪ್ರಸರಣ ಮತ್ತು ಧ್ವನಿ ತರಂಗಗಳ ಪ್ರಯೋಗವನ್ನು ಪ್ರಾರಂಭಿಸಿದರು. ಇದು ಜನಪ್ರಿಯ ಪ್ರಸಾರ ಮಾಧ್ಯಮಗಳಲ್ಲಿ ಒಂದಾದ ರೇಡಿಯೋ (Radio) ಜನನಕ್ಕೆ ಕಾರಣವಾಯಿತು. 


ರೇಡಿಯೋ ಇತಿಹಾಸ


ನಾವು ಇತಿಹಾಸವನ್ನು ಕೆದಕಿದರೆ, ರೇಡಿಯೋ 19 ನೇ ಶತಮಾನದ ಮಧ್ಯಭಾಗದಲ್ಲಿ ಆರಂಭವಾಗಿದೆ. ಇದು ನಿರ್ದಿಷ್ಟ ಬ್ಯಾಂಡ್‌ವಿಡ್ತ್‌ಗೆ ಸಂದೇಶಗಳನ್ನು ರವಾನಿಸುವ ಧ್ವನಿ ತರಂಗಗಳು ಮತ್ತು ಸಂಕೇತಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ, ರೇಡಿಯೋ 20 ನೇ ಶತಮಾನದ ಆರಂಭದಲ್ಲಿ ಪರಿಚಯವಾಗಿತ್ತು, ಆದರೂ, ಇದು ಸಮೂಹ ಮಾಧ್ಯಮದ ಜನಪ್ರಿಯ ಮಾಧ್ಯಮವಾಗಲು ಹಲವಾರು ವರ್ಷಗಳನ್ನು ತೆಗೆದುಕೊಂಡಿದ್ದು ಮಾತ್ರ ಸತ್ಯ.


ಶಿಕ್ಷಣ ವಂಚಿತ ಜನರಿಗೆ ಮಾಹಿತಿ ನೀಡುವುದನ್ನ ಗಮನದಲ್ಲಿಟ್ಟುಕೊಂಡು ರೇಡಿಯೋ ಬಳಕೆ ಹೆಚ್ಚಾಗಿದ್ದಲ್ಲದೇ ಅದರ ಅನಿವಾರ್ಯತೆ ತಿಳಿಯಿತು. ಜಾಹೀರಾತು ಮತ್ತು ಪತ್ರಿಕೆಗಳನ್ನು ಓದಲು ಸಾಧ್ಯವಾಗದ ಜನರು ರೇಡಿಯೋ ಬಂದ ನಂತರ ವಿಷಯಗಳನ್ನು ಚೆನ್ನಾಗಿ ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಮಾಧ್ಯಮದ ಜನಪ್ರಿಯತೆಯನ್ನು ಜೀವಂತವಾಗಿರಿಸಲು ಮತ್ತು ಎಲ್ಲರ ನಡುವೆ ಅದರ ಬಳಕೆಯನ್ನು ಉತ್ತೇಜಿಸಲು, ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.


ಇದನ್ನೂ ಓದಿ: ಬಂಧ ಬಿಗಿಗೊಳಿಸುವ ಮುತ್ತಿನ ದಿನ - ಪ್ರತಿ ಚುಂಬನದ ಅರ್ಥ ಇದು


ಯುನೆಸ್ಕೋ ತನ್ನ 36 ನೇ ಸಮ್ಮೇಳನದಲ್ಲಿ 2011 ರಲ್ಲಿ ದಿನದ ಆಚರಣೆಯನ್ನು ಘೋಷಿಸಿದ ನಂತರ 2012 ರಲ್ಲಿ ಮೊದಲ ಬಾರಿ ಈ ದಿನವನ್ನು ಆಚರಿಸಲಾಯಿತು.


ರೇಡಿಯೋ  ಮಹತ್ವ


ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಕೇಳಿಸಿಕೊಳ್ಳುವ ಮಾಧ್ಯಮದ ಇಂದಿನ ಮಹತ್ವವನ್ನು ಜನರು ಅರಿತುಕೊಳ್ಳುವುದು. ದೂರದರ್ಶನದ ಜನಪ್ರಿಯತೆಯ ವರ್ಷಗಳ ನಂತರವೂ, ರೇಡಿಯೋವು ಸಂಗೀತದ ಮಾಧ್ಯಮವಾಗಿದೆ, ಪ್ರಯಾಣದ ಒಡನಾಡಿಯಾಗಿದೆ ಮತ್ತು ಸಮುದಾಯ ರೇಡಿಯೋ ಮೂಲಕ ಸಮುದಾಯದ ಧ್ವನಿಯನ್ನು ಹೆಚ್ಚಿಸುವ ರೂಪದಲ್ಲಿ ವಿಶ್ವದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಹೊಂದಿದೆ ಎಂದರೆ ತಪ್ಪಾಗಲಾರದು.


ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಗಳಿಂದ ತುಂಬಿರುವ ಜಗತ್ತಿನಲ್ಲಿ, ರೇಡಿಯೋ ಇನ್ನೂ ನಂಬಲರ್ಹ ಸುದ್ದಿ ಮೂಲವಾಗಿ ಜನರನ್ನು ತಲುಪುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. COVID-19 ಸಾಂಕ್ರಾಮಿಕ ಸಮಯದಲ್ಲಿ, ರೇಡಿಯೋ ದ್ವೇಷ ಅಥವಾ ತಾರತಮ್ಯವನ್ನು ಸುದ್ದಿಗಳನ್ನು ಪ್ರಚೋದಿಸದೆ ಮಾಹಿತಿಯ ವಿಶ್ವಾಸಾರ್ಹ ಮೂಲವಾಗಿದೆ ಎಂದು ಸಾಬೀತಾಗಿದೆ.


ಹೆಚ್ಚು ವ್ಯಾಪಕವಾಗಿ ಬಳಸುವ ಮಾಧ್ಯಮವಾಗಿರುವುದರಿಂದ, ರೇಡಿಯೋ ಮಾಹಿತಿಯನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ ಎನ್ನಬಹುದು. ರೇಡಿಯೋ ಕೇಂದ್ರಗಳು ಪ್ರಪಂಚದಾದ್ಯಂತ ಸ್ಥಳೀಯ ಜನಸಂಖ್ಯೆಗೆ ಸೂಕ್ತವಾದ ಕಾರ್ಯಕ್ರಮಗಳ ವೈವಿಧ್ಯಮಯ ಆಯ್ಕೆಗಳನ್ನು ಜನರಿಗೆ ನೀಡುತ್ತದೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತುರ್ತು ಸಂವಹನದಲ್ಲಿ ಮಾಧ್ಯಮವು ನಿರ್ಣಾಯಕ ಪಾತ್ರ ವಹಿಸಿದೆ ಎಂಬುದನ್ನ ಮರೆಯಬಾರದು.


ರೇಡಿಯೋವನ್ನು ದೂರದರ್ಶನ ಮತ್ತು ಅಂತರ್ಜಾಲದ ಮೊದಲು ಪ್ರೇಕ್ಷಕರಿಗೆ ಸುದ್ದಿ ಮತ್ತು ಮಾಹಿತಿಯನ್ನು ಪ್ರಸಾರ ಮಾಡುವ ಸಾಧನವಾಗಿ ಕಂಡುಹಿಡಿಯಲಾಯಿತು, ಈಗಲೂ ಸಹ ರೇಡಿಯೋ ಜನರ ಒಂದು ಭಾಗವಾಗಿದೆ.  ಕೆಲ ಮಾಹಿತಿ ಪ್ರಕಾರ, ಡೆಟ್ರಾಯಿಟ್, ಮಿಚಿಗನ್‌ನಲ್ಲಿರುವ ಸ್ಟೇಷನ್ 8MK, ಮೊದಲ ರೇಡಿಯೋ ಸುದ್ದಿ ಕಾರ್ಯಕ್ರಮವನ್ನು 31 ಆಗಸ್ಟ್, 1920 ರಂದು ಪ್ರಸಾರ ಮಾಡಲಾಯಿತು.


ಇದನ್ನೂ ಓದಿ: ಕೇವಲ ಕಾರ್ಡ್​ಬೋರ್ಡ್​ ಬಳಸಿ ಗಾರ್ಡನ್​ ಅಲ್ಲಿ ಕಳೆ ತೆಗೆಯುವ ಸೂಪರ್ ಹ್ಯಾಕ್ಸ್


ಅಲ್ಲದೇ, 2ನೇ ವಿಶ್ವಯುದ್ದದ ಸಮಯದಲ್ಲಿ, ರೇಡಿಯೋ ಮಿಲಿಟರಿ ಮತ್ತು ಸಾರ್ವಜನಿಕರಿಗೆ ಸಂವಹನದ ಪ್ರಮುಖ ಸಾಧನವಾಯಿತು ಎನ್ನಬಹುದು. ಇತ್ತೀಚಿನ ದಿನಗಳಲ್ಲಿ, ಸುದ್ದಿ, ಹಾಡುಗಳು ಮತ್ತು ಕ್ರೀಡಾ ಮಾಹಿತಿಯನ್ನು ಕೇಳಲು ಈ ಮಾಧ್ಯಮವನ್ನು ಬಳಸಲಾಗುತ್ತದೆ.

Published by:Sandhya M
First published: