ದೀರ್ಘಾಯುಷ್ಯ (Longevity)… ಇದು ಎಲ್ಲರಿಗೂ ಬೇಕು. ತಾವು ದೀರ್ಘಾಯುಷಿಗಳಾಗಿ, ಆರೋಗ್ಯವಾಗಿ (Healthy) ಬದುಕಬೇಕು ಎಂಬುದು ಎಲ್ಲರ ಕನಸು (Dream). ತಮ್ಮ ಉತ್ತಮ ಆಯುಷ್ಯ ಹಾಗೂ ಭವಿಷ್ಯದ (Future) ಬದುಕಿಗಾಗಿ ಜನರು ಏನೆಲ್ಲಾ ತಂತ್ರ, ಉಪಾಯ, ವಿಧಾನ ಅನುಸರಿಸುತ್ತಾರೆ. ಅದೇ ಹೊತ್ತಿಗೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ. ದೀರ್ಘಾಯುಷ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳಲು, ಊಟದಲ್ಲಿ ನಿಯಂತ್ರಣ, ತರಕಾರಿ, ಹಣ್ಣು ಸೇವನೆ, ಜಾಗಿಂಗ್, ಯೋಗ, ಧ್ಯಾನ, ಜಿಮ್ ಹೀಗೆ ಹಲವು ವಿಧಾನ ಪಾಲಿಸುತ್ತಾರೆ. ತಮ್ಮ ನಿದ್ದೆಯಲ್ಲೂ ಸುಧಾರಣೆ ಮಾಡಿಕೊಳ್ಳುತ್ತಾರೆ. ತಜ್ಞರು ಕೂಡ ಆರೋಗ್ಯಕರ ಹಾಗೂ ದೀರ್ಘಾಯುಷ್ಯದ ಜೀವನಕ್ಕಾಗಿ ಹೆಲ್ದೀ ಲೈಫ್ ಸ್ಟೈಲ್ ಫಾಲೋ ಮಾಡಲು ಹೇಳ್ತಾರೆ.
ಇಲ್ಲಿ ಜಂಕ್ ಫುಡ್, ಮೈದಾ, ಪಿಜ್ಜಾ, ಸಕ್ಕರೆ, ಮಸಾಲೆಯುಕ್ತ ಆಹಾರ, ಆಲ್ಕೋಹಾಲ್ ಮಾಂಸವನ್ನು ಸೇವಿಸದಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಇಲ್ಲಿ ಒಬ್ಬ ವ್ಯಕ್ತಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದಾರೆ. ಈ ವ್ಯಕ್ತಿ ತಮ್ಮ ದೀರ್ಘಾಯುಷ್ಯಕ್ಕಾಗಿ ಏನು ಸೇವಿಸುತ್ತಿದ್ದರು ಎಂದು ನೀವು ಕೇಳಿದ್ರೆ ಶಾಕ್ ಆಗ್ತೀರ.
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾದ ಜುವಾನ್
ನಾವು ಹೇಳ್ತಿರುವ ವ್ಯಕ್ತಿಯ ಹೆಸರು ಜುವಾನ್ ವಿಸೆಂಟೆ ಪೆರೆಜ್ ಮೊರೇಸ್. ಇವರು ವೆನೆಜುವೆಲಾ ದೇಶದವರು. ಜುವಾನ್ ಕಳೆದ ವಾರ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೆಸರಿಸಲ್ಪಟ್ಟಿದ್ದಾರೆ. ಜುವಾನ್ ವಿಸೆಂಟೆ ಪೆರೆಜ್ ಮೊರೇಸ್, ಪ್ರಸ್ತುತ 113 ವರ್ಷ ವಯಸ್ಸು ಹೊಂದಿದ್ದಾರೆ. ಅವರು 27 ಮೇ 1909 ರಂದು ಜನಿಸಿದ್ದಾರೆ.
ಇದನ್ನೂ ಓದಿ: ಕಣ್ಣುಗಳ ಕೆಳಗೆ ಕಪ್ಪಾದ ಡಾರ್ಕ್ ಸರ್ಕಲ್ ಸಮಸ್ಯೆ ಇದ್ದರೆ ನಿವಾರಣೆಗೆ ಈ ವಿಧಾನ ಅನುಸರಿಸಿ
ಆರೋಗ್ಯಕರ ಆಹಾರ ಸೇವನೆಯು ದೀರ್ಘಾಯುಷ್ಯ ಹಾಗೂ ದೀರ್ಘ ಜೀವನಕ್ಕೆ ಬಹಳ ಮುಖ್ಯ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಪೆರೆಜ್ ಮೊರಾಜ್ ಅವರ ವಿಷಯದಲ್ಲಿ ದೀರ್ಘಾಯುಷ್ಯಕ್ಕಾಗಿ ಆರೋಗ್ಯಕರ ವಿಧಾನವನ್ನೇ ಅನುಸರಿಸಬೇಕು ಎಂದೇನು ಇಲ್ಲವಂತೆ.
ಪ್ರತಿದಿನ ಬಲವಾದ ಮದ್ಯ ಸೇವನೆ ಮಾಡುತ್ತಾರೆ ಪೆರೆಜ್
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪತ್ರಿಕಾ ಪ್ರಕಟಣೆಯಲ್ಲಿ 113 ವರ್ಷ ವಯಸ್ಸಿನ ಪೆರೆಜ್ ಅವರ ಬಗ್ಗೆ ಹೇಳಲಾಗಿದೆ. ಪೆರೆಜ್ ಆರೋಗ್ಯವಾಗಿದ್ದಾರೆ ಮತ್ತು ಪ್ರತಿದಿನ ಬಲವಾದ ಮದ್ಯ ಸೇವನೆ ಮಾಡುತ್ತಾರೆ ಎಂದು ವರದಿ ಮಾಡಿದೆ. ಪೆರೆಜ್ 41 ಮೊಮ್ಮಕ್ಕಳು, 18 ದೊಡ್ಡ ಮೊಮ್ಮಕ್ಕಳು ಮತ್ತು 12 ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ.
ವೆನೆಜುವೆಲಾದ ತಾಚಿರಾ ರಾಜ್ಯದ ಸ್ಯಾನ್ ಜೋಸ್ ಡಿ ಬೊಲಿವರ್‌ನಲ್ಲಿರುವ ಕ್ಲಿನಿಕ್‌ನ ವೈದ್ಯರಾದ ಎನ್ರಿಕ್ ಗುಜ್ಮಾನ್ ಅವರು, ಪೆರೆಜ್ ವಯಸ್ಸಾದ ಹಿನ್ನೆಲೆ ಅಧಿಕ ರಕ್ತದೊತ್ತಡ ಮತ್ತು ಸ್ವಲ್ಪ ಶ್ರವಣ ದೋಷ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಉಳಿದಂತೆ ಪೆರೆಜ್ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಮತ್ತು ಯಾವುದೇ ರೀತಿಯ ಔಷಧ ತೆಗೆದುಕೊಳ್ಳುವುದಿಲ್ಲ ಎಂದರು.
ಪೆರೆಜ್ ಮೊರೇಸ್ ಅವರ ಸುದೀರ್ಘ ಜೀವನದ ರಹಸ್ಯ
ಪೆರೆಜ್ ತನ್ನ ದೀರ್ಘಾಯುಷ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತನ್ನ ಸುದೀರ್ಘ ಜೀವನದ ರಹಸ್ಯದ ಬಗ್ಗೆ ಹೇಳಿದ್ದಾರೆ. "ಕಷ್ಟಪಟ್ಟು ಕೆಲಸ ಮಾಡಿ, ರಜಾ ದಿನಗಳಲ್ಲಿ ವಿಶ್ರಾಂತಿ ಪಡೆಯಬೇಕು. ಬೇಗ ಮಲಗಬೇಕು. ಪ್ರತಿದಿನ ಒಂದು ಲೋಟ ವೈನ್ ಕುಡಿಯುವುದು. ದೇವರನ್ನು ಪ್ರೀತಿಸಿ ಮತ್ತು ಯಾವಾಗಲೂ ದೇವರ ಸ್ಮರಣೆ ಮಾಡುತ್ತಾ ಇರಿ ಎಂದು ಪೆರೆಜ್ ತಮ್ಮ ದೀರ್ಘಾಯುಷ್ಯದ ಬಗ್ಗೆ ಹೇಳಿದ್ದಾರೆ.
ಪೆರೆಜ್ ತುಂಬಾ ಧಾರ್ಮಿಕ ಆಸಕ್ತಿ ಹೊಂದಿದ್ದಾರೆ. ದಿನಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡುತ್ತಾರೆ. ಸ್ಪೇನ್‌ನ ಸ್ಯಾಟರ್ನಿನೊ ಡೆ ಲಾ ಫ್ಯೂಯೆಂಟೆ ಗಾರ್ಸಿಯಾ ಅವರು 112 ವರ್ಷ ಮತ್ತು 341 ದಿನಗಳಲ್ಲಿ ಜನವರಿ 18, 2022 ರಂದು ನಿಧನರಾದ ನಂತರ ಜುವಾನ್ ಅವರನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಲ್ಪಟ್ಟಿದ್ದಾರೆ.
ಇದನ್ನೂ ಓದಿ: ಗಂಟೆಗಟ್ಟಲೆ ಟಿವಿ ಮುಂದೆ ಕೂರುತ್ತೀರಾ? ಹೃದಯಾಘಾತದ ಅಪಾಯ ಹೆಚ್ಚು
ಹಿರಿಯ ವ್ಯಕ್ತಿ ಪೆರೆಜ್ ಜೀವನ ಹೇಗಿದೆ?
ಪೆರೆಜ್ ಅವರ ವೈಯಕ್ತಿಕ ಜೀವನ. ಹೆಂಡತಿಯ ಹೆಸರು ಎಡೋಫಿನಾ ಡೆಲ್ ರೊಸಾರಿಯೊ ಗಾರ್ಸಿಯಾ. ಇಬ್ಬರೂ 60 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಪೆರೆಜ್ ಅವರ ಪತ್ನಿ 1997 ರಲ್ಲಿ ನಿಧನರಾದರು. ಪೆರೆಜ್ ಮತ್ತು ಅಡಿಯೋಫಿನಾ ಅವರಿಗೆ 11 ಮಕ್ಕಳು, 6 ಗಂಡು ಮತ್ತು 5 ಹೆಣ್ಣು ಮಕ್ಕಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ