HOME » NEWS » Lifestyle » WORLD NO TOBACCO DAY ZP

World No Tobacco Day: ನೀವು ತಂಬಾಕನ್ನು ತ್ಯಜಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಪರಿಹಾರ

World No Tobacco Day: ನಿಕೋಟಿನ್ ತಂಬಾಕಿನಲ್ಲಿರುವ ಪ್ರಮುಖ ಸಕ್ರಿಯ ಸಂಯುಕ್ತವಾಗಿದೆ. ಈ ಕಾರಣದಿಂದಾಗಿ ವ್ಯಕ್ತಿಯು ತಂಬಾಕಿಗೆ ವ್ಯಸನಿಯಾಗುತ್ತಾನೆ. ಒಬ್ಬ ವ್ಯಕ್ತಿಯು ತಂಬಾಕು ಬಳಕೆ ಅಥವಾ ಧೂಮಪಾನವನ್ನು ಮಾಡಿದಾಗ, ನಿಕೋಟಿನ್ ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಮೆದುಳನ್ನು ವೇಗವಾಗಿ ತಲುಪುತ್ತದೆ.

news18-kannada
Updated:May 31, 2020, 2:58 PM IST
World No Tobacco Day: ನೀವು ತಂಬಾಕನ್ನು ತ್ಯಜಿಸಲು ಯೋಚಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
  • Share this:
ತಂಬಾಕು ಸೇವನೆ ಮರಣದ ಹಾದಿ...ಎಂದು ಪ್ರತಿಬಾರಿ ಎಚ್ಚರಿಸಿದರೂ ಇದರ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಇಂದು ತಂಬಾಕು ಜಗತ್ತಿನಲ್ಲಿ ಸಾವಿಗೆ ಎರಡನೇ ಅತಿ ದೊಡ್ಡ ಕಾರಣವಾಗಿ ನಿಂತಿದೆ ಎಂದರೆ ನಂಬಲೇಬೇಕು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದ ಅಂಕಿಅಂಶಗಳ ಪ್ರಕಾರ, ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ವಿಶ್ವದಲ್ಲಿ ಪ್ರತಿವರ್ಷ ಸುಮಾರು 8 ಮಿಲಿಯನ್ ಜನರು ಅಸುನೀಗುತ್ತಿದ್ದಾರೆ. ಈ ಬಗ್ಗೆ ಅರಿವು ಮೂಡಿಸಲೆಂದೇ ಮೇ 31 ಅನ್ನು ಪ್ರತಿವರ್ಷ 'ವಿಶ್ವ ತಂಬಾಕು ರಹಿತ ದಿನ' ಎಂದು ಆಚರಿಸಲಾಗುತ್ತದೆ.

ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಇದರಿಂದ ಹಾನಿಕಾರಕ ಉತ್ಪನ್ನದಿಂದ ದೂರವಿರುವಂತೆ ಮಾಡಲು ಶ್ರಮಿಸಲಾಗುತ್ತಿದೆ. ಅಂದಹಾಗೆ, ತಂಬಾಕು ತ್ಯಜಿಸಲು ಅನೇಕರು ಬಯಸುತ್ತಾರೆ. ಆದರೆ ಈ ಚಟದಿಂದ ಮುಕ್ತಿ ಹೊಂದುವುದು ಅಷ್ಟೇನು ಸುಲಭವಲ್ಲ ಎಂದು ಭಾವಿಸುತ್ತಾರೆ. ಇಂತಹ ಜನರಿಗೆ 'ನಿಕೋ ಟಿನ್ ರಿಪ್ಲೇಸ್ಮೆಂಟ್ ಥೆರಪಿ' ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ಈ ಚಿಕಿತ್ಸೆಯು ತಂಬಾಕನ್ನು ತ್ಯಜಿಸುವುದು ತುಂಬಾ ಸುಲಭ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಚಿಕಿತ್ಸೆ ಎಂದರೇನು?

ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ತಂಬಾಕು ಉತ್ಪನ್ನಗಳನ್ನು ತ್ಯಜಿಸುವ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಈ ಚಿಕಿತ್ಸೆಯ ಸಮಯದಲ್ಲಿ ತಂಬಾಕು ಉತ್ಪನ್ನಗಳನ್ನು ತ್ಯಜಿಸಲು ಸುಲಭವಾಗುವಂತೆ ತಂಬಾಕು ಉತ್ಪನ್ನಗಳಿಗೆ ಪರ್ಯಾಯವಾಗಿ ದೇಹಕ್ಕೆ ವಿವಿಧ ವಿಧಾನಗಳಿಂದ ಸೀಮಿತ ಪ್ರಮಾಣದ ನಿಕೋಟಿನ್ ನೀಡಲಾಗುತ್ತದೆ. ಈ ಚಿಕಿತ್ಸೆಯ ಸಮಯದಲ್ಲಿ ಈ ಕೆಳಗಿನ ವಿಧಾನಗಳನ್ನು ಬಳಸಲಾಗುತ್ತದೆ.

ನಿಕೋಟಿನ್ ಪ್ಯಾಚ್​ಗಳು: ಚರ್ಮದ ಮೇಲೆ ನಿಕೋಟಿನ್ ಪ್ಯಾಚ್​ಗಳನ್ನು ಅನ್ವಯಿಸಬೇಕಾಗುತ್ತದೆ. ಇದರ ಮೂಲಕ, ಒಂದು ನಿರ್ದಿಷ್ಟ ಪ್ರಮಾಣದ ನಿಕೋಟಿನ್ ದೇಹವನ್ನು ತಲುಪುತ್ತದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ನೀವು 16-ಗಂಟೆಗಳ (ಧೂಮಪಾನಿಗಳಿಗೆ) ಕಾಲ ಅಥವಾ 24-ಗಂಟೆಗಳ ಕಾಲ ಪ್ಯಾಚ್ ಅನ್ನು ಬಳಸಬಹುದು.

ಲಾಂಚೇಜಸ್: ಇದು ರಿಫ್ರೆಸ್ಸಿಂಗ್ ಕ್ಯೂಬ್​ ರೂಪದಲ್ಲಿರುತ್ತದೆ. ಇದನ್ನು ಬಾಯಿಯಲ್ಲಿ ಇರಿಸಿದ ಕೂಡಲೇ ಕರಗುತ್ತದೆ. ಅದು ಕರಗಿದಂತೆ, ಅದರಿಂದ ಒಂದು ನಿರ್ದಿಷ್ಟ ಪ್ರಮಾಣದ ನಿಕೋಟಿನ್ ಬಿಡುಗಡೆಯಾಗುತ್ತದೆ.

ಚೂಯಿಂಗ್ ಗಮ್: ಇದು ಸಾಮಾನ್ಯ ಚೂಯಿಂಗ್ ಗಮ್​ನ ರೀತಿಯಲ್ಲಿರುತ್ತದೆ. ಇದನ್ನು ಅಗಿಯುವಾಗ, ಅದರಿಂದ ನಿಕೋಟಿನ್ ಹೊರಬರುತ್ತವೆ. ತಂಬಾಕು ಸೇವನೆ ಅಥವಾ ಧೂಮಪಾನ ಮಾಡಬೇಕು ಎಂದು ನಿಮಗನಿಸಿದಾಗ ನೀವು ಇದನ್ನು ಅಗಿಯಬಹುದು. ನೀವು ನಿಕೋಟಿನ್ ಚೂಯಿಂಗ್ ಗಮ್ ಅನ್ನು ಅಗಿಯುವಾಗ, 15 ನಿಮಿಷಗಳ ಸಮಯದಲ್ಲಿ ಅಥವಾ ಮೊದಲು ಕಾಫಿ, ಬಿಯರ್, ಸೋಡಾ ಮುಂತಾದ ಯಾವುದೇ ಆಮ್ಲೀಯ ಪಾನೀಯಗಳನ್ನು ತೆಗೆದುಕೊಳ್ಳಬಾರದಯ ಎಂದು ತಜ್ಞರು ಹೇಳುತ್ತಾರೆ.ಮಾತ್ರೆಗಳು: ನಿಕೋಟಿನ್ ಮಾತ್ರೆಗಳನ್ನು ನಾಲಿಗೆ ಅಡಿಯಲ್ಲಿ ಇಡಬೇಕು. ಅದು ನಿಧಾನವಾಗಿ ಬಾಯಿಯಲ್ಲಿ ಕರಗುತ್ತದೆ ಮತ್ತು ದೇಹಕ್ಕೆ ನಿಗದಿತ ಪ್ರಮಾಣದ ನಿಕೋಟಿನ್ ಒದಗಿಸುತ್ತದೆ.

ನಿಕೋಟಿನ್ ಚಿಕಿತ್ಸೆಯ ಮೇಲೆ ತಿಳಿಸಲಾದ ಎಲ್ಲಾ ಆಯ್ಕೆಗಳು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿವೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯಕ. ಇವುಗಳಲ್ಲಿ ಯಾವುದನ್ನಾದರೂ ತೆಗೆದುಕೊಳ್ಳುವ ಮೊದಲು, ದಯವಿಟ್ಟು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವೈದ್ಯರನ್ನು ಸಂಪರ್ಕಿಸಿ.

ಪ್ರಿಸ್ಕ್ರಿಪ್ಷನ್ ಆಧಾರಿತ ಆಯ್ಕೆಗಳು:

ಇನ್ಹೇಲರ್‌ಗಳು: ಇನ್ಹೇಲರ್‌ಗಳಲ್ಲಿ ಕಾಟ್ರಡ್ಜ್​ ಇರುತ್ತದೆ. ಅದರ ಮೂಲಕ ಸೀಮಿತ ಪ್ರಮಾಣದ ನಿಕೋಟಿನ್ ಬಾಯಿಯನ್ನು ತಲುಪುತ್ತದೆ.

ನೆಜಲ್ ಸ್ಪ್ರೇ : ಇದು ಒಂದು ರೀತಿಯ ಪಂಪ್ ಬಾಟಲಿಯಾಗಿದ್ದು, ಮೂಗಿನಲ್ಲಿ ಸಿಂಪಡಿಸುವ ಮೂಲಕ ಸಮತೋಲಿತ ಪ್ರಮಾಣದ ನಿಕೋಟಿನ್ ಒದಗಿಸುತ್ತದೆ.

ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಏಕೆ ಬೇಕು?

ನಿಕೋಟಿನ್ ತಂಬಾಕಿನಲ್ಲಿರುವ ಪ್ರಮುಖ ಸಕ್ರಿಯ ಸಂಯುಕ್ತವಾಗಿದೆ. ಈ ಕಾರಣದಿಂದಾಗಿ ವ್ಯಕ್ತಿಯು ತಂಬಾಕಿಗೆ ವ್ಯಸನಿಯಾಗುತ್ತಾನೆ. ಒಬ್ಬ ವ್ಯಕ್ತಿಯು ತಂಬಾಕು ಬಳಕೆ ಅಥವಾ ಧೂಮಪಾನವನ್ನು ಮಾಡಿದಾಗ, ನಿಕೋಟಿನ್ ರಕ್ತಪರಿಚಲನಾ ವ್ಯವಸ್ಥೆಯ ಮೂಲಕ ಮೆದುಳನ್ನು ವೇಗವಾಗಿ ತಲುಪುತ್ತದೆ. ಇದು ಡೋಪಮೈನ್, ಗ್ಲುಟಮೇಟ್ ಮತ್ತು ಗಾಬಾ ಸೇರಿದಂತೆ ವಿವಿಧ ನ್ಯೂಟ್ರೋಟ್ರಾನ್ಸ್​ಮೀಟರ್​ಗಳನ್ನು ಬಿಡುಗಡೆ ಮಾಡುತ್ತದೆ. ಡೋಪಮೈನ್ ಒಂದು ಹಾರ್ಮೋನ್ ಆಗಿದ್ದು ಅದು ನಿಮಗೆ ಒಳ್ಳೆಯ ಅನುಭವ ನೀಡುತ್ತದೆ. ಹಾಗೆಯೇ ಗ್ಲುಟಮೇಟ್ ಡೋಪಮೈನ್ ಮತ್ತು ಜಿಎಬಿಎ ಹಾರ್ಮೋನುಗಳ ಬಿಡುಗಡೆಯನ್ನು ಪ್ರೇರೇಪಿಸುತ್ತದೆ.

ನೀವು ನಿಯಮಿತವಾಗಿ ತಂಬಾಕು ಉತ್ಪನ್ನಗಳನ್ನು ಸೇವಿಸಿದರೆ, ಅದು ದೇಹದಲ್ಲಿ ನಿಕೋಟಿನ್ ಪರಿಣಾಮವನ್ನು ಹೆಚ್ಚಿಸುತ್ತದೆ. ನೀವು ನಿಕೋಟಿನ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ, ಚಡಪಡಿಕೆಗೆ ಕಾರಣವಾಗುತ್ತದೆ. ಹೀಗಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆ ಪಡೆಯಲು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಚಿಕಿತ್ಸೆ ಮಾಡಲಾಗುತ್ತದೆ.
First published: May 31, 2020, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories