• Home
  • »
  • News
  • »
  • lifestyle
  • »
  • World Lion Day 2022: ವಿಶ್ವ ಸಿಂಹ ದಿನ ಆಚರಣೆ ಮಾಡೋದು ಇದೇ ಕಾರಣಕ್ಕೆ, ಕಾಡಿನ ರಾಜನ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ

World Lion Day 2022: ವಿಶ್ವ ಸಿಂಹ ದಿನ ಆಚರಣೆ ಮಾಡೋದು ಇದೇ ಕಾರಣಕ್ಕೆ, ಕಾಡಿನ ರಾಜನ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ

ವಿಶ್ವ ಸಿಂಹ ದಿನ

ವಿಶ್ವ ಸಿಂಹ ದಿನ

World Lion Day 2022: ಐದು ದಶಕಗಳ ಅವಧಿಯಲ್ಲಿ, ಜಾಗತಿಕವಾಗಿ ಸಿಂಹಗಳ ಜನಸಂಖ್ಯೆಯು ಸುಮಾರು 95% ರಷ್ಟು ಕಡಿಮೆಯಾಗಿದೆ, ಅದರ ಸಂರಕ್ಷಣೆಗಾಗಿ ಕೆಲಸ ಮಾಡುವ ಅವಶ್ಯಕತೆಯಿದೆ.

  • Share this:

ಜಗತ್ತಿನಲ್ಲಿ ಹಲವಾರು ದಿನಗಳಲ್ಲಿ ಆಚರಣೆ ಮಾಡುತ್ತೇವೆ. ಹಾಗೆಯೆ ಆಗಸ್ಟ್​ 10ರಂದು ವಿಶ್ವ ಸಿಂಹ ದಿನ (World Lion Day 2022) ಎಂದು ಆಚರಿಸುತ್ತೇವೆ. ಕಾಡಿನ ರಾಜನಿಗಾಗಿ (King Of Forest) ಒಂದು ದಿನ ಮೀಸಲಿಡುವುದು ತಪ್ಪಲ್ಲ. ಈ ದಿನ ಸಿಂಹಗಳ ಜಾಗೃತಿಯನ್ನು ಹರಡುವ ಗುರಿಯನ್ನು ಹೊಂದಿದೆ ಮತ್ತು ಅವುಗಳ ಸಂರಕ್ಷಣೆಗೆ ಶ್ರಮಿಸುವ ತುರ್ತು ಅಗತ್ಯತೆಯ ಬಗ್ಗೆ ಅರಿವು ಮೂಡಿಸುತ್ತದೆ. ಸಿಂಹಗಳು ವಿಶ್ವಾದ್ಯಂತ ಸದ್ದಿಲ್ಲದೇ ಅಳಿವಿನ ಅಂಚಿನಲ್ಲಿದೆ. ಈ ಮೊದಲು ಇದರ ಬಗ್ಗೆ ಅರ್ಥವಾಗಿರಲಿಲ್ಲ. ಆದರೆ ಈಗ ಮಹತ್ವ ಅರಿವಾಗುತ್ತಿದೆ.


ಅಳಿವಿನಂಚಿನಲ್ಲಿದೆ ಸಿಂಹಗಳು


ಸಿಂಹಗಳು ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ ಆಫ್ರಿಕಾ, ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಸ್ವತಂತ್ರವಾಗಿ ಅಲೆದಾಡಿಕೊಂಡಿದ್ದವು. ಆದರೆ ಈಗ ಬಹಳಷ್ಟು ಬದಲಾಗಿದೆ, ಪರಿಣಾಮವಾಗಿ ಸಿಂಹಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಐದು ದಶಕಗಳ ಅವಧಿಯಲ್ಲಿ, ಜಾಗತಿಕವಾಗಿ ಸಿಂಹಗಳ ಜನಸಂಖ್ಯೆಯು ಸುಮಾರು 95% ರಷ್ಟು ಕಡಿಮೆಯಾಗಿದೆ, ಅದರ ಸಂರಕ್ಷಣೆಗಾಗಿ ಕೆಲಸ ಮಾಡುವ ಅವಶ್ಯಕತೆಯಿದೆ. ಸಿಂಹಗಳ ಸಂಖ್ಯೆ ಕಡಿಮೆಯಾದರೇ, ಕಾಡಿನ ಸಮತೋಲತೆ ತಪ್ಪುತ್ತದೆ. ಈ ಬಗ್ಗೆ ಹೆಚ್ಚು ತಿಳುವಳಿಕೆ ನೀಡುವ ದೃಷ್ಟಿಯಲ್ಲಿ ವಿಶ್ವ ಸಿಂಹ ದಿನವನ್ನು ಆಚರಣೆ ಮಾಡಲಾಗುತ್ತದೆ.




ವಿಶ್ವ ಸಿಂಹ ದಿನದ ಇತಿಹಾಸ


2013 ರಲ್ಲಿ, ಮೊದಲ ಬಾರಿಗೆ ವಿಶ್ವ ಸಿಂಹ ದಿನವನ್ನು ಆಚರಿಸಲಾಯಿತು. ಬಿಗ್ ಕ್ಯಾಟ್ ಇನಿಶಿಯೇಟಿವ್ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನಿಂದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಇದನ್ನು ಆರಂಭಿಸಿದ್ದು, ಸಿಂಹಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ರಕ್ಷಿಸುವುದು ಅವರ ಉದ್ದೇಶವಾಗಿತ್ತು.  ವಿಶ್ವ ಸಿಂಹ ದಿನದ ಉದ್ದೇಶ ಮೇಲೆ ಹೇಳಿದಂತೆ ಸಿಂಹಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನಿಂದ ಸಿಂಹಗಳನ್ನು ಅಪಾಯಕ್ಕೊಳಗಾದ ಪ್ರಭೇದಗಳ ರೆಡ್​ ಲಿಸ್ಟ್​ನಲ್ಲಿ ಸೇರಿಸಲಾಗಿದೆ. ಅಷ್ಟರ ಮಟ್ಟಿಗೆ ಜಗತ್ತಿನಲ್ಲಿ ಸಿಂಹಗಳ ಸಂಖ್ಯೆ ಕಡಿಮೆಯಾಗಿದೆ.









View this post on Instagram






A post shared by Dog Lover (@doglover_s)





ಇದನ್ನೂ ಓದಿ: ಮನೆಯಲ್ಲಿಯೇ ಮುಖದ ಕಾಂತಿ ಹೆಚ್ಚಿಸುವ ಸ್ಕ್ರಬ್​ ನೀವೂ ಮಾಡ್ಬೋದು, ಎಷ್ಟು ಸುಲಭ ನೋಡಿ


NewsOnAIR ಪ್ರಕಾರ, ಪ್ರಪಂಚದಲ್ಲಿ ಪ್ರಸ್ತುತ 30,000 ಮತ್ತು 100,000 ಮಧ್ಯೆ ಸಿಂಹಗಳು ಉಳಿದಿವೆ. ಸಿಂಹಗಳ ಸುರಕ್ಷತೆಯ ಸಲುವಾಗಿ, ಅವುಗಳಿಗೆ ಉಂಟಾಗುವ ತೊಂದರೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು, ಅವುಗಳ ನೈಸರ್ಗಿಕ ಸ್ಥಳವನ್ನು ರಕ್ಷಿಸುವುದು ಮತ್ತು ಅವುಗಳಿಗಾಗಿ ಸ್ಥಳಗಳನ್ನು ಮೀಸಲಿಡುವುದು ಮುಖ್ಯವಾಗುತ್ತದೆ.




ಆಫ್ರಿಕಾವನ್ನು ಹೊರತುಪಡಿಸಿ, ಪ್ರಪಂಚದಾದ್ಯಂತ ಕಾಡು ಸಿಂಹಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದೆ, ಆದರೆ ಸಿಂಹಗಳು ಭಾರತದಲ್ಲಿ ಸ್ವಾಭಾವಿಕವಾಗಿದೆ. ವಿಶೇಷವಾಗಿ ಆಫ್ರಿಕಾ ನಂತರ ಹೆಚ್ಚು ಸಿಂಹಗಳಿರುವ ಅರಣ್ಯ ಎಂದರೆ ಗುಜರಾತ್​ನ ಗಿರ್ ಅರಣ್ಯ ಪ್ರದೇಶ. ಭಾರತದಲ್ಲಿ ಸಿಂಹಗಳ ಸಂಖ್ಯೆ ಹೆಚ್ಚಿದೆ.  ಏಷಿಯಾಟಿಕ್ ಸಿಂಹಗಳ ಜನಸಂಖ್ಯೆಯು ಗುಜರಾತ್‌ನ ಗಿರ್ ಅರಣ್ಯ ಮತ್ತು ಸೌರಾಷ್ಟ್ರ ಸಂರಕ್ಷಿತ ಪ್ರದೇಶದಲ್ಲಿ ಸ್ವಲ್ಪ ಕಡಿಮೆಯಾಗಿದೆ. 2015 ಮತ್ತು 2020 ರ ನಡುವೆ, ಸಿಂಹಗಳ ಜನಸಂಖ್ಯೆಯು 523 ರಿಂದ 674 ಕ್ಕೆ ಏರಿತ್ತು.


ಇದನ್ನೂ ಓದಿ: ಪುರುಷರ ಬಳಿ ಈ ಶೂಗಳು ಇರಲೇಬೇಕಂತೆ, ಆಗ್ಲೇ ಒಂದ್ ಲುಕ್ ಅಂತಾರೆ ಸ್ಟೈಲಿಸ್ಟ್​ಗಳು


 ಸಿಂಹದ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ


ಸಿಂಹಗಳ ಘರ್ಜನೆ 7 ಮೈಲಿ ದೂರ ಕೇಳುತ್ತದೆ


ಅವು ರಾತ್ರಿ ಹೊತ್ತು ಬೇಟೆಯಾಡುತ್ತವೆ


ಸಿಂಹ ಜಗತ್ತಿನ ಅತಿ ಸೋಮಾರಿ ಪ್ರಾಣಿಗಳಲ್ಲಿ ಒಂದು


ಸಿಂಹಗಳ ಜೀವಿತಾವಧಿ 15 ರಿಂದ 16 ವರ್ಷ ಮಾತ್ರ

Published by:Sandhya M
First published: