World Kidney Day 2019: ವಿಶ್ವ ಕಿಡ್ನಿ ದಿನಾಚರಣೆ: ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ..!

ನಿಮ್ಮ ಹೊಟ್ಟೆಯ ಎಡಭಾಗದಲ್ಲಿ ಅಥವಾ ಬಲಕ್ಕೆ ನೀವು ಅಸಹನೀಯ ನೋವು ಕಾಣಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಯಿಂದ ಉಂಟಾಗಿರುವ ಹೊಟ್ಟೆ ನೋವು ಆಗಿರುವ ಸಾಧ್ಯತೆಯಿದೆ.

zahir | news18
Updated:March 14, 2019, 4:00 PM IST
World Kidney Day 2019: ವಿಶ್ವ ಕಿಡ್ನಿ ದಿನಾಚರಣೆ: ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ..!
ಸಾಂದರ್ಭಿಕ ಚಿತ್ರ
zahir | news18
Updated: March 14, 2019, 4:00 PM IST
ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವ ಕಿಡ್ನಿ ದಿನಾಚರಣೆ ಆಚರಿಸಲಾಗುತ್ತಿದೆ. ಕಿಡ್ನಿ ಸಂಬಂಧಿ ರೋಗಗಳ ಅರಿವು ಮೂಡಿಸುವ ಸಲುವಾಗಿ ಮತ್ತು ಕಿಡ್ನಿಗಳ ಕಾಳಜಿ ಬಗೆಗಿನ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಹಿಂದಿನ ಉದ್ದೇಶ. 2016 ರಲ್ಲಿ 66 ದೇಶಗಳು ಜಾರಿಗೆ ತಂದ ಈ ಸುದುದ್ದೇಶದ ಆಚರಣೆಯು ಇಂದು 150 ಕ್ಕೂ ಹೆಚ್ಚಿನ ದೇಶಗಳಲ್ಲಿ ಆಚರಿಸಲಾಗುತ್ತಿದೆ.

ಆಚರಣೆಯ ಉದ್ದೇಶಗಳೇನು?
ಇಂದಿನ ಜೀವನ ಶೈಲಿಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಇಂತಹ ರೋಗಿಗಳಲ್ಲಿ ಕಿಡ್ನಿ ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತದೆ. ಇದರ ಬಗ್ಗೆ ರೋಗಿಗಳಿಗೆ ಹೆಚ್ಚಿನ ತಿಳುವಳಿಕೆ ನೀಡುವುದು. ಮೂತ್ರಪಿಂಡಗಳಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟಲು ಮಾಡಬೇಕಾದ ಕೆಲಸಗಳ ಕುರಿತು ಅರಿವು ಮೂಡಿಸುವು ಈ ದಿನದ ಉದ್ದೇಶ. ಅನಗತ್ಯವಾಗಿ ಬಳಸುವ ನೋವು ನಿವಾರಕ ಮತ್ತು ರೋಗ ನಿರೋಧಕ ಔಷಧಿಗಳಿಂದ ಕಿಡ್ನಿಗಳಿಗೆ ತೊಂದರೆಯಾಗುತ್ತದೆ. ಈ ಬಗ್ಗೆಯು ಜನರಿಗೆ ಮಾಹಿತಿಯ ಕೊರತೆಯಿದ್ದು, ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಲಾಗುತ್ತದೆ.

ಕಿಡ್ನಿಯ ಕಾರ್ಯಗಳೇನು?
ಮೂತ್ರಪಿಂಡವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದ್ದು, ಇದು ದಿನವಡೀ ದೇಹದ ಸಮತೋಲನಕ್ಕಾಗಿ ಕಾರ್ಯ ನಿರ್ವಹಿಸುತ್ತದೆ. ಮನುಷ್ಯನಲ್ಲಿ ಎರಡು ಕಿಡ್ನಿಗಳಿದ್ದು, ಇದು ನಮ್ಮ ದೇಹದಲ್ಲಿ ಫಿಲ್ಟರ್ ಆಗಿ ಕೆಲಸ ಮಾಡುತ್ತದೆ. ನಮ್ಮ ಶರೀರದ ಕೆಲಸಗಳಿಗೆ ಪೂರಕವಾದ ರಾಸಾಯನಿಕಗಳನ್ನು ಬಳಸಿಕೊಂಡು, ಬೇಡವಾದ ವಸ್ತುಗಳನ್ನು ದೇಹದಿಂದ ಹೊರತಳ್ಳುವ ಕೆಲಸ ಕಿಡ್ನಿ ನಿರಂತರವಾಗಿ ಮಾಡುತ್ತಿರುತ್ತದೆ. ಕಿಡ್ನಿಯ ಕೆಲಸದಲ್ಲಿ ಸ್ವಲ್ಪ ಏರುಪೇರು ಉಂಟಾದರೂ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ದೇಹದಲ್ಲಿ ಕಲ್ಮಷಗಳು ಹೆಚ್ಚಾಗಿ ಮಾರಣಾಂತಿಕ ಕಾಯಿಲೆಗಳು ಸಹ ಬರಬಹುದು.

ಕಿಡ್ನಿಯ ಕುರಿತು ಎಚ್ಚರವಿರಲಿ:

ನಿಮ್ಮ ಹೊಟ್ಟೆಯ ಎಡಭಾಗದಲ್ಲಿ ಅಥವಾ ಬಲಕ್ಕೆ ನೀವು ಅಸಹನೀಯ ನೋವು ಕಾಣಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಯಿಂದ ಉಂಟಾಗಿರುವ ಹೊಟ್ಟೆ ನೋವು ಆಗಿರುವ ಸಾಧ್ಯತೆಯಿದೆ. ಹಾಗೆಯೇ ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಬಂದರೂ ಸಹ ಅದು ಕಿಡ್ನಿ ಸಮಸ್ಯೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗುವ ಮೂಲಕ ಪರಿಹಾರ ಕಾಣಬಹುದು. ನೀವು ಅನೇಕ ಬಾರಿ ಇದೇ ಮಾದರಿಯ ಸಮಸ್ಯೆಗಳು ಅನುಭವಿಸುತ್ತಿದ್ದರೆ, ಇದು ಮೂತ್ರಪಿಂಡದ ಹಲವು ರೀತಿಯ ರೋಗವನ್ನು ಸೂಚಿಸುತ್ತದೆ. ಅಂತಹ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಿಡ್ನಿ ಸ್ಟೋನ್ ಅಥವಾ ಮೂತ್ರದಲ್ಲಿನ ಕಲ್ಲು ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದರಿಂದ ಪರಿಹಾರ ಕಾಣಬಹುದು. ಇದೀಗ ಬೇಸಿಗೆ ಕಾಲ ಆಗಿರುವುದರಿಂದ ಹೆಚ್ಚು ನೀರು ಕುಡಿಯುವುದು ಸಹ ಕಿಡ್ನಿಯ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು.
First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...