• Home
  • »
  • News
  • »
  • lifestyle
  • »
  • World Kidney Cancer Day 2022: ಕಿಡ್ನಿ ಕ್ಯಾನ್ಸರ್‌ ಬಗ್ಗೆ ಬೇಡ ನಿರ್ಲಕ್ಷ್ಯ, ಈ ಲಕ್ಷಣಗಳು ಕಂಡ್ರೆ ತಕ್ಷಣ ಪರೀಕ್ಷೆ ಮಾಡಿಸಿ

World Kidney Cancer Day 2022: ಕಿಡ್ನಿ ಕ್ಯಾನ್ಸರ್‌ ಬಗ್ಗೆ ಬೇಡ ನಿರ್ಲಕ್ಷ್ಯ, ಈ ಲಕ್ಷಣಗಳು ಕಂಡ್ರೆ ತಕ್ಷಣ ಪರೀಕ್ಷೆ ಮಾಡಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

World Kidney Cancer Day 2022: ಬದಲಾದ ಜೀವನ ಶೈಲಿಯಿಂದ ಪ್ರತಿಯೊಬ್ಬರ ಆಹಾರ ಸೇವನೆ ವ್ಯತ್ಯಾಸವಾಗಿದೆ. ಜಂಕ್‌ ಫುಡ್‌ ಹಾಗೂ ಪ್ರಿಸರ್ವೇಟಿನಂಥ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

  • Share this:

ಇಂದು ವಿಶ್ವ ಕಿಡ್ನಿ ಕ್ಯಾನ್ಸರ್‌ (World Kidney Cancer Day) ಜಾಗೃತಿ ದಿನ. ಇತ್ತೀಚಿನ ವೈದ್ಯಕೀಯ ಸಂಶೋಧನೆಯ ಪ್ರಕಾರ, ಕಿಡ್ನಿ ಕ್ಯಾನ್ಸರ್ (Kidney Cancer) ವಿಶ್ವದ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಈ ಕ್ಯಾನ್ಸರ್‌ಗೆ ಹೆಚ್ಚಾಗಿ ಪುರುಷರೇ ಹೆಚ್ಚು ಒಳಗಾಗುತ್ತಿದ್ದು, ಒಂದು ಲಕ್ಷ ಜನರಲ್ಲಿ ಶೇ.2ರಷ್ಟು ಪುರುಷಕರಿಗೆ ಕಿಡ್ನಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿದೆ. ಕಿಡ್ನಿ ಕ್ಯಾನ್ಸರ್‌ ಪ್ರಾರಂಭದಲ್ಲಿ ಅಂತಹ ಲಕ್ಷಣಗಳು ಕಂಡು ಬರದೇ ಇರುವ ಕಾರಣ ಸಾಕಷ್ಟು ಜನರು ಇದನ್ನ ನಿರ್ಲಕ್ಷಿಸುತ್ತಾರೆ, ಜೊತೆಗೆ ಈ ಕ್ಯಾನ್ಸರ್‌ ಚಿಕಿತ್ಸೆ ಬಗ್ಗೆ ಜಾಗೃತಿಯೂ ಇರುವುದಿಲ್ಲ. ವಿಶ್ವ ಕಿಡ್ನಿ ಕ್ಯಾನ್ಸರ್‌ ಜಾಗೃತಿ ಅಂಗವಾಗಿ ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯೂರೋ ಆಂಕೋಲಾಜಿ ಸಲಹೆಗಾರ ಡಾ. ಶಾಕಿರ್‌ ತಬ್ರೇಜ್‌ ಕಿಡ್ನಿ ಕ್ಯಾನ್ಸರ್‌ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.


ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳೇನು?
ಕಿಡ್ನಿ ಕ್ಯಾನ್ಸರ್‌ನ ಲಕ್ಷಣಗಳು ವಿಶೇಷವಾಗಿ ಗೋಚರಿಸದೇ ಇದ್ದರು, ಕೆಲವು ಲಕ್ಷಣಗಳು ನಿಮ್ಮನ್ನು ಚಿಂತೆಗೀಡು ಮಾಡಬಹುದು, ಅದರಲ್ಲಿ ಪ್ರಮುಖವಾಗಿ ಅತಿಯಾದ ತೂಕ ಕಡಿಮೆಯಾಗುವುದು, ಹಸಿವು ಆಗದೇ ಇರುವುದು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಆಯಾಸ, ರಕ್ತಹೀನತೆ, ಬೆನ್ನಿನ ಕೆಳಭಾಗದಲ್ಲಿ ಅತಿಯಾದ ನೋವು ಕಾಣಿಸಿಕೊಳ್ಳುವುದು ಈ ಲಕ್ಷಣಗಳು ಕಂಡು ಬಂದರೆ ತಡ ಮಾಡದೇ ವೈದ್ಯರನ್ನು ಕಾಣಿ. ಇದು ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗಿರಬಹುದು,


ಕಿಡ್ನಿ ಕ್ಯಾನ್ಸರ್‌ಗೆ ಕಾರಣವೇನು?
ಕಿಡ್ನಿ ಕ್ಯಾನ್ಸರ್‌ಗೆ ಹಲವು ಕಾರಣಳಿವೆ. ಸಾಮಾನ್ಯವಾಗಿ ಕುಟುಂಬದಲ್ಲಿ ಈಗಾಗಲೇ ಕಿಡ್ನಿ ಕ್ಯಾನ್ಸರ್‌ನ ಇತಿಹಾಸ ಇದ್ದರೆ ಆ ಕುಟುಂಬದವರು ಜಾಗರೂಕರಾಗಿರುವುದು ಉತ್ತಮ. ಆಗಾಗ್ಗೇ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ  ನಿಮಗೆ ಕಿಡ್ನಿ ಕ್ಯಾನ್ಸರ್‌ ಬರುತ್ತಿರುವುದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬಹುದು. ಉಳಿದಂತೆ, ಧೂಮಪಾನ ಮಾಡುವುದು, ಅಧಿಕ ರಕ್ತದೊತ್ತಡ, ಸ್ಥೂಲಕಾಯ ಸೇರಿದಂತೆ ಇತರೆ ಕಾರಣಗಳು ಸಹ ಕಿಡ್ನಿ ಕ್ಯಾನ್ಸರ್‌ಗೆ ಕಾರಣವಾಗಬಹುದು.


ಇದರ ಚಿಕಿತ್ಸಾ ವಿಧಾನಗಳೇನು?
ಶಸ್ತ್ರಚಿಕಿತ್ಸೆ: ಸಾಮಾನ್ಯವಾಗಿ, ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಯು ಕ್ಯಾನ್ಸರ್ ಗುಣಪಡಿಸಲು ಸಹಕಾರಿಯಾಗುತ್ತದೆ., ಅದರಲ್ಲೂ ಆರಂಭದಲ್ಲಿಯೇ ಕ್ಯಾನ್ಸರ್‌ ಪತ್ತೆ ಮಾಡಿದರೆ, ಯಾವುದೇ ಅತ್ಯಾಧುನಿಕ ಚಿಕಿತ್ಸೆಯ ಅಗತ್ಯವಿರುವುದಿಲ್ಲ.


ಇದನ್ನೂ ಓದಿ: ಸ್ವಿಮ್ಮಿಂಗ್ ಫೂಲ್​ನಲ್ಲಿ ಕೃತಿ ಕರಬಂಧ ಹಾಟ್​ ಫೋಟೋಶೂಟ್​, ಗೂಗ್ಲಿ ಬೆಡಗಿ ಅಂದ ನೋಡಿ ಫ್ಯಾನ್ಸ್ ಫಿದಾ


ಮ್ಯುನೊಥೆರಪಿ: ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹದ ಪ್ರತಿಕಾಯವನ್ನು ವೃದ್ಧಿಸಲು ಬಳಸುವ ಪ್ರಕ್ರಿಯೆಯಾಗಿದೆ. ದೇಹದ ಪ್ರತಿಕಾಯ ವ್ಯವಸ್ಥೆಯು ಕ್ಯಾನ್ಸರ್ ಮೇಲೆ ದಾಳಿ ಮಾಡದಿರಬಹುದು ಏಕೆಂದರೆ ಕ್ಯಾನ್ಸರ್ ಕೋಶಗಳು ಪ್ರೋಟೀನ್‌ಗಳನ್ನು ಉತ್ಪತ್ತಿ ಮಾಡುತ್ತವೆ, ಅದು ಅವುಗಳನ್ನು ಪತ್ತೆಹಚ್ಚದಂತೆ ಮರೆಮಾಡಲು ಸಹಾಯ ಮಾಡುತ್ತದೆ. ಹೀಗಾಗಿ, ಇಮ್ಯುನೊಥೆರಪಿ ಕ್ಯಾನ್ಸರ್‌ ಕೋಶಗಳನ್ನು ಪತ್ತೆಹಚ್ಚಲು ಸಹಕಾರಿಯಾಗಿದೆ.


ವಿಕಿರಣ ಚಿಕಿತ್ಸೆ: ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ವಿಕಿರಣಗಳನ್ನು (ಎಕ್ಸ್-ಕಿರಣಗಳು) ಬಳಸಲಾಗುತ್ತದೆ. ಜೊತೆಗೆ, ತೆರೆದ ಶಸ್ತ್ರಚಿಕಿತ್ಸೆ, ಲ್ಯಾಪರೊಸ್ಕೋಪಿ ಅಥವಾ ರೋಬೋಟಿಕ್ ಶಸ್ತ್ರಚಿಕಿತ್ಸೆಯೂ ಸಹ ಪ್ರಮುಖವಾಗಿದೆ.


ಇದನ್ನೂ ಓದಿ: ರಾಕಿಂಗ್ ಮಕ್ಕಳ ಜೊತೆ ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಬ್ಯುಸಿ! ಕ್ಯೂಟ್ ಫೋಟೋಸ್ ಶೇರ್ ಮಾಡಿದ ರಾಧಿಕಾ ಪಂಡಿತ್


ಜಾಗೃತಿ ಇರಲಿ
ಬದಲಾದ ಜೀವನ ಶೈಲಿಯಿಂದ ಪ್ರತಿಯೊಬ್ಬರ ಆಹಾರ ಸೇವನೆ ವ್ಯತ್ಯಾಸವಾಗಿದೆ. ಜಂಕ್‌ ಫುಡ್‌ ಹಾಗೂ ಪ್ರಿಸರ್ವೇಟಿನಂಥ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಇದು ಕಿಡ್ನಿ ಕ್ಯಾನ್ಸರ್‌ಗೂ ಕಾರಣವಾಗುತ್ತಿದೆ. ಹೀಗಾಗಿ ಕಿಡ್ನಿ ಕ್ಯಾನ್ಸರ್ನ ಲಕ್ಷಣಗಳು ಕಂಡು ಬಂದರೆ, ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡಿ. ಸಾಮಾನ್ಯವಾಗಿ ಈ ಕ್ಯಾನ್ಸರ್‌ 50 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಪೋಷಕರ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸುವುದು ಹಾಗೂ ಜಾಗೃತಿ ಹೊಂದಿರುವುದು ಅತಿ ಅವಶ್ಯಕ.

Published by:Sandhya M
First published: