World Immunization Week 2022: ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ ಸಾಕು

Immunity Power: ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಬೇಕಿದ್ದರೆ ನಾವು ಸೇವಿಸುವ ಆಹಾರ ಕ್ರಮ ಸೂಕ್ತ ರೀತಿಯಲ್ಲಿರಬೇಕು. ಇಂದಿನ ದಿನಗಳಲ್ಲಿ ಜಂಕ್‌ಫುಡ್‌ಗಳ ಸೇವನೆ ಹೆಚ್ಚಳವಾಗುತ್ತಿದೆ. ಇದು ದೇಹದಲ್ಲಿ ಬೊಜ್ಜು ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಕಾಲಘಟ್ಟದಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳುವುದು ಅತಿ ಅವಶ್ಯಕ. ಅದಕ್ಕೆ ದೇಹದಲ್ಲಿ ರೋಗ ನಿರೋಧಕ ಶಕ್ತಿ (Immunity Power) ಉತ್ತಮವಾಗಿರಬೇಕು. ಬದಲಾಗುತ್ತಿರುವ ಹವಾಮಾನ, ಅಹಾರ ಪದ್ಧತಿ, ಜೀವನಶೈಲಿ, ಸಾಂಕ್ರಾಮಿಕ ರೋಗಗಳ ಅಬ್ಬರಕ್ಕೆ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕೋವಿಡ್‌ (covid) ಕಾಲಘಟ್ಟದಲ್ಲಿ ಎಲ್ಲರೂ ಸೋಂಕಿನಿಂದ ಪ್ರತಿಕಾಯ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಆಹಾರ ಕ್ರಮ (Food Style) ರೂಢಿಸಿಕೊಳ್ಳುವ ಜೊತೆಗೆ, ಮುಖಕ್ಕೆ ಮಾಸ್ಕ್‌ ಹಾಕಿ ಬದುಕುವ ಅನಿವಾರ್ಯತೆ ಎದುರಾಗಿದೆ. ಇದೆಲ್ಲದರಿಂದಲೂ ದೇಹವನ್ನು ಸ್ವಾಸ್ಥ್ಯಯುತವಾಗಿ ಇಟ್ಟುಕೊಳ್ಳಬೇಕೆಂದರೆ ದೇಹಕ್ಕೆ ಮುಖ್ಯವಾಗಿ ಬೇಕಾಗಿರುವುದು ರೋಗ ನಿರೋಧಕ ಶಕ್ತಿ. ಆರೋಗ್ಯ ಕಾಪಾಡಲು ರೋಗ ನಿರೋಧಕ ಶಕ್ತಿ ಎಷ್ಟು ಮುಖ್ಯ ಎನ್ನುವುದರ ಕುರಿತು ಅರಿವು ಮೂಡಿಸಲು ಹಾಗೂ ಆರೋಗ್ಯ ಕಾಪಾಡಲು ಲಸಿಕೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಪ್ರತೀ ವರ್ಷ ಏಪ್ರಿಲ್‌ ಕೊನೆಯ ವಾರವಾದ 24 ರಿಂದ 30ರವರೆಗೆ ವಿಶ್ವ ಆರೋಗ್ಯ ಸಂಸ್ಥೆಯು 'ವಿಶ್ವ ರೋಗನಿರೋಧಕ ವಾರ' (World Immunization Week 2022) ಎಂದು ಆಚರಿಸುತ್ತದೆ.

ಪ್ರತಿಯೊಬ್ಬರು ಆರೋಗ್ಯಕರ ಜೀವನ ನಡೆಸಲು ಹಾಗೂ ಕರೋನಾದಂತಹ ಸಾಂಕ್ರಾಮಿಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿ ಅಗತ್ಯವಾಗಿದೆ. ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನೆಲ್ಲಾ ಕ್ರಮ ವಹಿಸಬೇಕು ಎನ್ನುವುದನ್ನು ಫೊರ್ಟಿಸ್‌ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ಸಲಹೆಗಾರ ಡಾ. ಪೃತ್ತು ನರೇಂದ್ರ ಧೇಕ್ನೆ ಅವರು ನೀಡಿದ್ದಾರೆ.

ಕಾಲಕಾಲಕ್ಕೆ ಲಸಿಕೆಯನ್ನು ಪಡೆದುಕೊಳ್ಳಿ
ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೂವುದು ಅತ್ಯಂತ ಅವಶ್ಯಕ. ಈಗಂತೂ ಕರೋನಾ ರೋಗದ ವಿರುದ್ಧ ಹೋರಾಡಲು ಸಶಕ್ತರಾಗಬೇಕೆಂದು ಸರ್ಕಾರವೇ ಉಚಿತ ಲಸಿಕೆ ನೀಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವುದನ್ನು ತಪ್ಪಿಸಬಾರದು.

ಆಹಾರ ಕ್ರಮದ ಮೇಲಿರಲಿ ಎಚ್ಚರಿಕೆ:
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಬೇಕಿದ್ದರೆ ನಾವು ಸೇವಿಸುವ ಆಹಾರ ಕ್ರಮ ಸೂಕ್ತ ರೀತಿಯಲ್ಲಿರಬೇಕು. ಇಂದಿನ ದಿನಗಳಲ್ಲಿ ಜಂಕ್‌ಫುಡ್‌ಗಳ ಸೇವನೆ ಹೆಚ್ಚಳವಾಗುತ್ತಿದೆ. ಇದು ದೇಹದಲ್ಲಿ ಬೊಜ್ಜು ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಕುಗ್ಗಿಸಲು ಸಹ ಕಾರಣವಾಗುತ್ತಿದೆ. ಹೀಗಾಗಿ ಸೊಪ್ಪು, ತರಕಾರಿ, ವಿಟಮಿನ್‌ಗಳು ಇರುವ ಆಹಾರ ಸೇವನೆಗೆ ಆದ್ಯತೆ ನೀಡಿ. ಇದರ ಜೊತೆಗೆ ಸರಿಯಾದ ಸಮಯಕ್ಕೆ ಆಹಾರ ಸೇವನೆ ಕೂಡ ಮುಖ್ಯ. ಸಮಯವಲ್ಲ ಸಮಯದಲ್ಲಿ ಆಹಾರ ಸೇವನೆಯಿಂದ ದೇಹದ ಸ್ಪಂದನೆ ಹಾಗೂ ಜೀರ್ಣಕ್ರಿಯೆಯು ವ್ಯತಿರಿಕ್ತವಾಗುವುದರಿಂದ ರೋಗನಿರೋಧಕ ಶಕ್ತಿ ಉತ್ಪಾದನೆ ಮೇಲೆ ಪರಿಣಾಮ ಬೀರಬಹುದು.

ವ್ಯಾಯಾಮ
ದೇಹಕ್ಕೆ ವ್ಯಾಯಾಮ ಅತ್ಯಂತ ಅವಶ್ಯಕ. ನಮ್ಮ ದೇಹ ಚೈತನ್ಯದಿಂದಿರಲು ಯಾವುದಾದರೊಂದು ದೈಹಿಕ ಚಟುವಟಿಕೆಯನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಯೋಗ, ಧ್ಯಾನ, ಜಿಮ್‌ ಅಥವಾ ದಿನಕ್ಕೆ ಕನಿಷ್ಠ ೩೦ ನಿಮಿಷಗಳ ಸಾಧಾರಣ ವ್ಯಾಯಾಮ ಯಾವುದಾದರೊಂದು ಚಟುವಟಿಕೆ ಮಾಡುವುದರಿಂದ ದೇಹವು ಕ್ರಿಯಾಶೀಲವಾಗಿರುವ ಜೊತೆಗೆ ರೋಗನಿರೋಧಕ ಶಕ್ತಿ ವೃದ್ಧಿಗೆ ಕಾರಣವಾಗಿಡಲಿದೆ.

ಇದನ್ನೂ ಓದಿ: ಹಣೆಯಿಂದ ಮೇಲಕ್ಕೆ ತಲೆ ಬೋಳಾಗುತ್ತಿದೆಯಾ? ಇಲ್ಲಿವೆ ಉಪಯುಕ್ತ ಟಿಪ್ಸ್

ಮಕ್ಕಳಿಗೆ ಲಸಿಕೆ ಅನಿವಾರ್ಯ:
ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಲಸಿಕೆ ಅತ್ಯಂತ ಅವಶ್ಯಕತ. ಹುಟ್ಟಿದಾಗಿನಿಂದ ಮಕ್ಕಳಿಗೆ ಎಲ್ಲಾ ರೀತಿಯ ಲಸಿಕೆ ಕೊಡಿಸಬೇಕಾಗುತ್ತದೆ. ಜನಿಸಿದ ಮಗುವಿಗೆ ಕೆಲ ವಾರಗಳಲ್ಲಿ ಲಸಿಕೆ ಕೊಡಿಸುವುದರಿಂದ ಶಿಶುವಿನ ಸುತ್ತಲೂ ರಕ್ಷಣಾತ್ಮಕ ಕೋಕೂನ್ ಅನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯರು (27 ರಿಂದ 36 ವಾರಗಳ ಗರ್ಭಾವಸ್ಥೆಯ ನಡುವೆ) ಟೆಟನಸ್ ಟಾಕ್ಸಾಯ್ಡ್ ಮತ್ತು ಫ್ಲೂ ಲಸಿಕೆಗಳನ್ನು ಪಡೆಯಬೇಕು.

ಯಾವೆಲ್ಲಾ ಲಸಿಕೆ ಪಡೆಯಬೇಕು?
• ಆಸ್ತಮಾ, ಹೃದ್ರೋಗ, ಶ್ವಾಸಕೋಶದ ಕಾಯಿಲೆ, ಮಧುಮೇಹ ಇಂತಹ ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವ ಜನರ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತಿರುತ್ತದೆ. ಇಂತಹ ರೋಗಿಗಳು ನ್ಯುಮೋಕೊಕಲ್ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ. ಇದರಿಂದ ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ರಕ್ತದ ಸೋಂಕುಗಳಂತಹ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾದಿಂದ ಉಂಟಾಗುವ ಗಂಭೀರ ಸೋಂಕುಗಳಿಂದ ರಕ್ಷಣೆ ಪಡೆಯಬಹುದು.
* 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಪ್ರತಿ ವರ್ಷ ಫ್ಲೂ ಲಸಿಕೆಯನ್ನು ಪಡೆಯಬೇಕು ಎಂದು CDC ಸಲಹೆ ನೀಡುತ್ತದೆ. ಪ್ರತಿ ವರ್ಷ ಫ್ಲೂ ಲಸಿಕೆಯನ್ನು ಮೂರು ಅಥವಾ ನಾಲ್ಕು ಇನ್ಫ್ಲುಯೆನ್ಸ್‌ ವೈರಸ್‌ಗಳಿಂದ ರಕ್ಷಿಸುವ ಶಕ್ತಿ ಹೊಂದಿರುತ್ತದೆ.

ಇದನ್ನೂ ಓದಿ: ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಇರಲಿ

* ನ್ಯುಮೋಕೊಕಲ್ ಕಾಯಿಲೆ, ಜ್ವರ, HPV ಮತ್ತು ಹೆಪಟೈಟಿಸ್ ಬಿ ನಂತಹ ಸೋಂಕುಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಈ ಕಾಯಿಲೆಗಳಿಗೆ ಲಸಿಕೆ ಹಾಕಿಸಿಕೊಳ್ಳದೇ ಹೋದಲ್ಲಿ ಕ್ಯಾನ್ಸರ್‌ಗೂ ಕಾರಣವಾಗಬಹುದು.
* ವಯಸ್ಕರಿಗಾಗಿ ಇರುವ ಎಲ್ಲಾ ಲಸಿಕೆಗಳನ್ನು ಸಹ ಕಾಲಕಾಲಕ್ಕೆ ತೆಗೆದುಕೊಳ್ಳಬೇಕು
Published by:Sandhya M
First published: