• Home
  • »
  • News
  • »
  • lifestyle
  • »
  • World Heart Day 2022: ವಾಲ್​ನಟ್​ ಹೀಗೆ ತಿಂದ್ರೆ ಹೃದಯದ ಸಮಸ್ಯೆಗಳು ಬರಲ್ಲ

World Heart Day 2022: ವಾಲ್​ನಟ್​ ಹೀಗೆ ತಿಂದ್ರೆ ಹೃದಯದ ಸಮಸ್ಯೆಗಳು ಬರಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

World Heart Day 2022: ನೀವು ವಾಲ್‌ನಟ್‌ಗಳನ್ನು ನಿಮ್ಮ ಅಡುಗೆಯಲ್ಲಿ ಬಳಸಬಹುದು. ಇದು ಸಸ್ಯ ಆಧಾರಿತ ಒಮೆಗಾ -3 ನ ಉತ್ತಮ ಮೂಲವಾಗಿದೆ. ಅವಲಕ್ಕಿ, ಉಪ್ಪಿಟ್ಟುಗಳಿಗೆ ವಾಲ್‌ನಟ್ಸ್​ ಸೇರಿಸುವುದು ಬಹಳ ಪ್ರಯೋಜನಕಾರಿ.

  • Share this:

World Heart Day 2022: 2016 ರಲ್ಲಿ, WHO ಪ್ರಕಾರ, ಇತರ ರೋಗಗಳಿಂದಾಗಿ ಒಟ್ಟು ಸಾವುಗಳಲ್ಲಿ 63 ಪ್ರತಿಶತ ಸಾವು ಭಾರತದಲ್ಲಿ (India) ವರದಿ ಆಗಿದೆ, ಅದರಲ್ಲಿ ಮುಖ್ಯವಾಗಿ 27 ಪ್ರತಿಶತ ಸಾವು ಹೃದಯರಕ್ತನಾಳದ ಕಾಯಿಲೆಯಿಂದ (CVD) ಎನ್ನುವ ಅಂಶ ಬಹಿರಂಗವಾಗಿದ್ದು, ಇದು ನಿಜಕ್ಕೂ ಆಘಾತಕಾರಿ ಸಂಗತಿ ಎನ್ನಬಹುದು. ಹಾಗೆಯೇ, ಅವುಗಳ ಜೊತೆ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು ನಮ್ಮ ದೇಶದಲ್ಲಿ ಸಾವಿಗೆ ಎರಡು ಸಾಮಾನ್ಯ ಕಾರಣಗಳಾಗಿವೆ. ಇದರಿಂದ ಸಾವಿಗೀಡಾಗುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.


ನಮ್ಮ ಕುಟುಂಬದ ವೈದ್ಯಕೀಯ ಇತಿಹಾಸ ಅಥವಾ ಹೆಚ್ಚಿನ ಕೊಲೆಸ್ಟ್ರಾಲ್‌ ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನಬಹುದು. ಹಾಗೆಯೆ, ಸದ್ಯ ಹಾಳಾಗಿರುವ ಜೀವನಶೈಲಿಯ ಕಾರಣದಿಂದ ನಾವೆಲ್ಲರೂ ಹೃದ್ರೋಗದ ಅಪಾಯವನ್ನು ಹೊಂದಿದ್ದೇವೆ. ಈ ವಿಶ್ವ ಹೃದಯ ದಿನದಂದು, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.


ಕ್ಯಾಲಿಫೋರ್ನಿಯಾ ವಾಲ್‌ನಟ್ಸ್ ನಿಮ್ಮ ಹೃದಯದ ಆರೋಗ್ಯಕ್ಕೆ ಹೇಗೆ ಸಹಾಯ ಮಾಡುತ್ತದೆ?


ಸಂಶೋಧನೆಯ ಪ್ರಕಾರ, ಆರೋಗ್ಯಕರ, ಪೌಷ್ಟಿಕ ಆಹಾರದ ಭಾಗವಾಗಿ ಸ್ವಲ್ಪ ಕ್ಯಾಲಿಫೋರ್ನಿಯಾ ವಾಲ್‌ನಟ್‌ಗಳನ್ನು ಸೇವನೆ ಮಾಡುವುದು ಮತ್ತು ದೈಹಿಕ ಚಟುವಟಿಕೆ ಮಾಡುವ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಇದನ್ನು ಬಳಸುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ, ಇದು ನಿಮ್ಮ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


ಈ ಅದ್ಭುತ ಬೀಜದಲ್ಲಿರುವ ಉತ್ತಮ ಕೊಬ್ಬುಗಳು, ಮತ್ತು ALA (ಆಲ್ಫಾ-ಲಿನೋಲೆನಿಕ್ ಆಮ್ಲ) ಕೊಲೆಸ್ಟರಾಲ್ ಮಟ್ಟವನ್ನು ಸುಧಾರಿಸಬಹುದು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಕಾಯಿಲೆಯ ಅಪಾಯವನ್ನು ಸಹ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.


ಈ ವಾಲ್​ನಟ್ಸ್​ ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಅಡ್ವಾನ್ಸ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಇತ್ತೀಚಿನ ವೈಜ್ಞಾನಿಕ ವಿಮರ್ಶೆಯ ಪ್ರಕಾರ ವಾಲ್‌ನಟ್ಸ್​ ಹೃದಯದ ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿರಬೇಕು.


ಇದನ್ನೂ ಓದಿ: ಕಡಲೆಕಾಳು ನೆನೆಸಿದ ನೀರು ವೇಸ್ಟ್​ ಅಂತ ಬಿಸಾಡಬೇಡಿ, ಇಷ್ಟೆಲ್ಲಾ ಪ್ರಯೋಜನವಿದೆ


ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​(AHA) ಪ್ರತಿ ವಾರ ವಾಲ್‌ನಟ್ಸ್ ಮತ್ತು ಇತರ ಆಹಾರಗಳನ್ನು ಒಳಗೊಂಡಂತೆ ನಾಲ್ಕು ಅಥವಾ ಹೆಚ್ಚಿನ ನಟ್ಸ್​ಗಳನ್ನು ಸೇರವಿಸುವುದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.4 ರಿಂದ 5 ಅಂದಾಜು 28 ಗ್ರಾಂ ವಾಲ್​ನಟ್ಸ್​ ಅನ್ನು ಪ್ರತಿದಿನ ಸೇವನೆ ಮಾಡುವುದು ಉತ್ತಮ. ಇದು 2.5g ಅಗತ್ಯ ಸಸ್ಯ-ಆಧಾರಿತ ಒಮೆಗಾ-3, 4g ಪ್ರೊಟೀನ್ ಮತ್ತು 2g ಫೈಬರ್ ಅನ್ನು ಒಳಗೊಂಡಿರುತ್ತದೆ, ಇದು ಕೇವಲ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲದೇ, ಒಟ್ಟಾರೆ ದೈಹಿಕ ಆರೋಗ್ಯಕ್ಕೆ ಸಹ ಉತ್ತಮ.


ವಾಲ್​ನಟ್ಸ್​ ತಿನ್ನಲು ಉತ್ತಮ ಸಮಯ ಯಾವುದು?


ವಾಲ್‌ನಟ್‌ಗಳನ್ನು ವರ್ಷದುದ್ದಕ್ಕೂ ತಿನ್ನಬಹುದಾದರೂ, ಅವುಗಳನ್ನು ತಿನ್ನಲು ಉತ್ತಮ ಸಮಯ ಸಂಜೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿದೆ. ಇವುಗಳು PICO ಮೆಲಟೋನಿನ್ ಅನ್ನು ಹೊಂದಿರುತ್ತವೆ, ಇದು ನಿಮ್ಮ ಮೆದುಳಿಗೆ ಹೋಗುವುದರಿಂದ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದರಿಂದ ನಿಮಗೆ ಉತ್ತಮ ನಿದ್ರೆ ಸಿಗುತ್ತದೆ.


ನಿಮ್ಮ ದೈನಂದಿನ ಆಹಾರದಲ್ಲಿ ವಾಲ್​ನಟ್ಸ್​ ಸೇರಿಸಲು  ಸರಳ ಮಾರ್ಗ ಇಲ್ಲಿದೆ


ನೀವು ನಿಮ್ಮ ಸಲಾಡ್​ ಅಥವಾ ಯಾವುದೇ ಸ್ವೀಟ್​ ಪದಾರ್ಥಗಳ ಜೊತೆ ಈ ವಾಲ್​ನಟ್ಸ್​ ಸೇವನೆ ಮಾಡಬಹುದು. ಅಲ್ಲದೇ, ರುಬ್ಬಿದ ವಾಲ್‌ನಟ್‌ಗಳನ್ನು ಮೊಸರಿನ ಜೊತೆ ಮಿಕ್ಸ್​ ಮಾಡಿ ಸವಿಯಬಹುದು.


ಇದನ್ನೂ ಓದಿ: ಚಪಾತಿ ಇಷ್ಟ ಅಂತ ಜಾಸ್ತಿ ತಿನ್ಬೇಡಿ, ಈ ಸಮಸ್ಯೆಗಳು ಶುರುವಾಗುತ್ತೆ


ನೀವು ವಾಲ್‌ನಟ್‌ಗಳನ್ನು ನಿಮ್ಮ ಅಡುಗೆಯಲ್ಲಿ ಬಳಸಬಹುದು. ಇದು ಸಸ್ಯ ಆಧಾರಿತ ಒಮೆಗಾ -3 ನ ಉತ್ತಮ ಮೂಲವಾಗಿದೆ. ಅವಲಕ್ಕಿ, ಉಪ್ಪಿಟ್ಟುಗಳಿಗೆ ವಾಲ್‌ನಟ್ಸ್​ ಸೇರಿಸುವುದು ಬಹಳ ಪ್ರಯೋಜನಕಾರಿ.

Published by:Sandhya M
First published: