World Heart Day 2021: ಸಣ್ಣ ವಯಸ್ಸಿನ ಹೃದಯಾಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅರಿವಿನ ಪಾಠ!

ಕಳೆದೈದು ವರ್ಷದಲ್ಲಿ ಶೇ. 54 ಹೆಚ್ಚು ಹೃದಯಾಘಾತದ ಸಾವುಗಳಾಗಿವೆ. ಚಿಕಿತ್ಸೆಯೂ ಸುಲಭವೇ. ನಾವು ಗೋಜಲು ಮಾಡುತ್ತಿದ್ದೇವೆ! ಒತ್ತಡ, ಉದ್ವೇಗ ಮತ್ತು ಅಧಿಕ ದೇಹತೂಕ ಬೇಡ. ”ಹಿತ ಮಿತ”ವಾಗಿ ಎಲ್ಲಾ ತರಹದ ಊಟವಿರಲಿ! ಹೆಚ್ಚು ಬೇಕರಿ, ಎಣ್ಣೆ ಮತ್ತು ಫ್ರಿಡ್ಜ್ ತಿನಿಸು ಬೇಡ.

ಪ್ರಾತಿನಿಧಿಕ ಚಿತ್ರ Photo: Google

ಪ್ರಾತಿನಿಧಿಕ ಚಿತ್ರ Photo: Google

 • Share this:
  ಬೆಂಗಳೂರು: ಇಂದು ವಿಶ್ವ ಹೃದಯ ದಿನ (World Heart Day 2021). ಹೃದಯದ ಆರೋಗ್ಯದ ಬಗ್ಗೆ ಇಂದು ಪ್ರತಿಯೊಬ್ಬರು ಹೆಚ್ಚು ಗಮನಹರಿಸಬೇಕಾದ ಅವಶ್ಯಕತೆ ಜೊತೆಗೆ ಅನಿವಾರ್ಯತೆ ಇದೆ. ಏಕೆಂದರೆ ಇಂದಿನ ದಿನಗಳಲ್ಲಿ ಮೂವತ್ತು- ನಲವತ್ತು ವಯಸ್ಸಿಗೆ ಹೃದಯಾಘಾತಕ್ಕೆ (Heart Attack) ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿಶ್ವ ಹೃದಯ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಶೈಲಿಯ (Life style) ಬಗ್ಗೆ ಅನೇಕರು ಅರಿವಿನ ಕಿವಿಮಾತು ಹೇಳಿದ್ದಾರೆ. ಇತೀಚೆಗಷ್ಟೇ ಬಿಗ್​ ಬಾಸ್​ ವಿನ್ನರ್ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ​ದ ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಚಿಕ್ಕ ವಯಸ್ಸಿಗೆ ಹೃದಯದ ತೊಂದರೆಯಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಕೂ ಆ್ಯಪ್​ನಲ್ಲೂ (Koo App) ಸಾಮಾನ್ಯ ಜನರು, ಫಿಟ್ನೆಸ್ ತಜ್ಞರು, ವೈದ್ಯರು ತಮ್ಮ ಅರಿವಿನ ಮಾತುಗಳನ್ನು #ಇದುಹೃದಯಗಳವಿಷಯ ಹಾಗು #ವಿಶ್ವಹೃದಯದಿನ ಹ್ಯಾಷ್ ಟ್ಯಾಗ್ ಅಡಿ ಹಂಚಿಕೊಂಡಿದ್ದಾರೆ.

  ಭಾರತ ಹೃದ್ರೋಗದ ರಾಜಧಾನಿ!

  ಇದು ತೀರಾ ಗಂಭೀರ ವಿಷಯ, ಕಳೆದೈದು ವರ್ಷದಲ್ಲಿ ಶೇ. 54 ಹೆಚ್ಚು ಹೃದಯಾಘಾತದ ಸಾವುಗಳಾಗಿವೆ. ಚಿಕಿತ್ಸೆಯೂ ಸುಲಭವೇ. ನಾವು ಗೋಜಲು ಮಾಡುತ್ತಿದ್ದೇವೆ! ಒತ್ತಡ, ಉದ್ವೇಗ ಮತ್ತು ಅಧಿಕ ದೇಹತೂಕ ಬೇಡ. ”ಹಿತ ಮಿತ”ವಾಗಿ ಎಲ್ಲಾ ತರಹದ ಊಟವಿರಲಿ! ಹೆಚ್ಚು ಬೇಕರಿ, ಎಣ್ಣೆ ಮತ್ತು ಫ್ರಿಡ್ಜ್ ತಿನಿಸು ಬೇಡ. ವಾರಕ್ಕೆ ನಾಲ್ಕೈದು ದಿನ ವ್ಯಾಯಾಮ/ನಡುಗೆ. ಉತ್ತಮ ನಿದ್ರೆ, ಆದರೆ ಆಟ' ಎಂದು ಮಂಜುನಾಥ್ ಎನ್ನುವವರು ಕೂ ಮಾಡಿದ್ದಾರೆ.  ಹೃದಯದ ಆರೋಗ್ಯಕ್ಕೆ ನಿತ್ಯ ನೀವು ಸೇವಿಸುವ ಆಹಾರದ ಪ್ರಭಾವ ಹೆಚ್ಚು. ಬಾದಾಮಿ ಹೃದಯ ರಕ್ಷಕ ಆಹಾರ. ಆದರೆ ಕೇವಲ ಬಾದಾಮಿ ಮಾತ್ರವಲ್ಲ. ಇನ್ನೂ ಹಲವು ಆಹಾರಕ್ಕೆ ಆರೋಗ್ಯವನ್ನು ಕಾಪಾಡುವ ಶಕ್ತಿ ಇದೆ. ಕೆಲವು ಹೃದಯ ರೋಗ ಬಾರದಂತೆ ತಡೆದರೆ ಇನ್ನೂ ಹಲವು ಅಪಾಯದ ಹಂತ ತಲುಪುವುದನ್ನು ತಡೆಯುತ್ತವೆ. ಬಟರ್‌ಫ್ರೂಟ್‌ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ' ಎಂದು ಅಜಯ್ ಹೇಳಿದ್ದಾರೆ.

  ಇದನ್ನು ಓದಿ:   ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರು ಮತ್ತು ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮದ ಕೊರತೆ, ವಾಯು ಮಾಲಿನ್ಯ ಮುಂತಾದವು ಇದಕ್ಕೆ ಕಾರಣವಾಗಿದೆ. ಕೋವಿಡ್​ನಂತಹ ಮಹಾಮಾರಿಯ ಭಯದಲ್ಲಿಯೇ ಬದುಕು ಕಟ್ಟಿಕೊಂಡಿರುವ ನಾವು, ಸಾಂಕ್ರಾಮಿಕ ರೋಗವಲ್ಲದ ಹೃದಯ ಸಂಬಂಧಿ ರೋಗದೊಂದಿಗೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ' ಎಂದು ತನುಷಾ ಕೂ ಮಾಡಿದ್ದಾರೆ.

  ಇದನ್ನು ಓದಿ: World Heart Day 2021: ಕೋವಿಡ್​ ಗುಣವಾಯ್ತಾ? ಹಾರ್ಟ್ ಚೆಕಪ್ ಮಾಡಿಸದಿದ್ರೆ ಅಪಾಯ ಇನ್ನೂ ಇದೆ!

  ಹೃದಯರಕ್ತನಾಳದ ಕಾಯಿಲೆ (Cardiovascular disease-CVD) ಇದೀಗ ಹೆಚ್ಚು ಪ್ರಮಾಣದಲ್ಲಿಯೇ ಬಲಿ ಪಡೆದುಕೊಳ್ಳುತ್ತಿದ್ದು ಸದ್ದಿಲ್ಲದೆಯೇ ಪ್ರಾಣಕ್ಕೆ ಸಂಚು ತರುವ ಕೊಲೆಗಾರ ಎಂದೆನಿಸಿದೆ. ಅಧ್ಯಯನದಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪ್ರತಿ ವರ್ಷ ಈ ಕಾಯಿಲೆಗೆ ಬಲಿಯಾಗುವವರು 18.6 ಮಿಲಿಯನ್‌ಗೂ ಹೆಚ್ಚಿನವರು. ಹೃದಯ ರಕ್ತನಾಳದ ಕಾಯಿಲೆ ಅಥವಾ ಹೃದಯ ರೋಗಗಳು ಹೃದಯ ಹಾಗೂ ರಕ್ತನಾಳಗಳ ಸಮೂಹ ಆಕ್ರಮಿಸುವ ಕಾಯಿಲೆಯಾಗಿದೆ. ಹೃದಯ ಕಾಯಿಲೆ (Heart Disease)ಯಿಂದ ಉಂಟಾಗುವ ಹೃದಯಾಘಾತದಿಂದಲೇ ಸಾವನ್ನಪ್ಪುವವರು ಶೇ. 80 ಕ್ಕಿಂತಲೂ ಅಧಿಕ ಜನರಾಗಿದ್ದರೆ, ಹೃದಯ ರಕ್ತನಾಳದ ಕಾಯಿಲೆ ಇರುವ ಮೂರನೇ ಒಂದು ಭಾಗದಷ್ಟು ಜನರು ಅಕಾಲಿಕವಾಗಿ ಮರಣ ಹೊಂದುತ್ತಾರೆ.

  ಕೋವಿಡ್ ನಂತರದ ಹೃದ್ರೋಗ ಸಣ್ಣ ವಯಸ್ಸಿನವರನ್ನು ಕಾಡುತ್ತಿರುವುದು ಆತಂಕಕಾರಿ ವಿಚಾರ. ಅದರಲ್ಲೂ 50 ವರ್ಷದೊಳಗಿನವರಾದರೆ ಹೃದ್ರೋಗ ಇರಲಿ, ಇಲ್ಲದಿರಲಿ ಒಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಫೋರ್ಟಿಸ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ಆರ್ ಕೇಶವ.
  Published by:HR Ramesh
  First published: