World Heart Day 2021: ವಿವಿಧ ರೀತಿಯ ಹೃದಯ ಕಾಯಿಲೆ ಮತ್ತು ರೋಗಲಕ್ಷಣಗಳನ್ನು ತಿಳಿಯಿರಿ
ಹೃದಯ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಈ ರೋಗಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ(World Heart Day)ವನ್ನಾಗಿ ಆಚರಿಸಲಾಗುತ್ತದೆ.
ಹೃದಯರಕ್ತನಾಳದ ಕಾಯಿಲೆ (Cardiovascular disease-CVD) ಇದೀಗ ಹೆಚ್ಚು ಪ್ರಮಾಣದಲ್ಲಿಯೇ ಬಲಿ ಪಡೆದುಕೊಳ್ಳುತ್ತಿದ್ದು ಸದ್ದಿಲ್ಲದೆಯೇ ಪ್ರಾಣಕ್ಕೆ ಸಂಚು ತರುವ ಕೊಲೆಗಾರ ಎಂದೆನಿಸಿದೆ. ಅಧ್ಯಯನದಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪ್ರತಿ ವರ್ಷ ಈ ಕಾಯಿಲೆಗೆ ಬಲಿಯಾಗುವವರು 18.6 ಮಿಲಿಯನ್ಗೂ ಹೆಚ್ಚಿನವರು. ಹೃದಯರಕ್ತನಾಳದ ಕಾಯಿಲೆ ಅಥವಾ ಹೃದಯ ರೋಗಗಳು ಹೃದಯ ಹಾಗೂ ರಕ್ತನಾಳಗಳ ಸಮೂಹ ಆಕ್ರಮಿಸುವ ಕಾಯಿಲೆಯಾಗಿದೆ. ಹೃದಯ ಕಾಯಿಲೆ(Heart Disease)ಯಿಂದ ಉಂಟಾಗುವ ಹೃದಯಾಘಾತದಿಂದಲೇ ಸಾವನ್ನಪ್ಪುವವರು 80%ಕ್ಕಿಂತಲೂ ಅಧಿಕ ಜನರಾಗಿದ್ದರೆ, ಹೃದಯರಕ್ತನಾಳದ ಕಾಯಿಲೆ ಇರುವ ಮೂರನೇ ಒಂದು ಭಾಗದಷ್ಟು ಜನರು ಅಕಾಲಿಕವಾಗಿ ಮರಣ ಹೊಂದುತ್ತಾರೆ.
ಹೃದಯ ರೋಗಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಈ ರೋಗಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ(World Heart Day)ವನ್ನಾಗಿ ಆಚರಿಸಲಾಗುತ್ತದೆ. ಹೃದಯ ರೋಗದ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದರಿಂದ ಜೀವ ಉಳಿಸುವಲ್ಲಿ ನಿರ್ಣಾಯಕ ಎಂದೆನ್ನಿಸಬಹುದು.
ಹೃದಯರಕ್ತನಾಳದ ಕಾಯಿಲೆಗಳ ಲಕ್ಷಣಗಳು ವ್ಯಕ್ತಿಯು ಬಳಲುತ್ತಿರುವ ಹೃದಯ ಕಾಯಿಲೆಯ ಪ್ರಕಾರವನ್ನು ಅವಲಂಬಿಸಿರುತ್ತದೆ ಎಂಬುದು ಇಲ್ಲಿ ಗಮನಾರ್ಹವಾದುದಾಗಿದೆ. ಹಾಗಿದ್ದರೆ ಹೃದಯ ಕಾಯಿಲೆಗಳ ಪ್ರಕಾರಗಳನ್ನು ತಿಳಿದುಕೊಳ್ಳೋಣ ಬನ್ನಿ..