ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹಲವಾರು ಬಾರಿ ಸೋಪ್ (Soap) ಮತ್ತು ನೀರಿನಿಂದ ತಮ್ಮ ಕೈಗಳನ್ನು ತೊಳೆಯಬೇಕು. ಸಾಬೂನು ಲಭ್ಯವಿಲ್ಲದಿದ್ದರೆ, ಹ್ಯಾಂಡ್ ಸ್ಯಾನಿಟೈಸರ್ (Hand sanitizer) ಬಳಸಿ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಉತ್ತಮ ಆರೋಗ್ಯವನ್ನು (Health) ಕಾಪಾಡಿಕೊಳ್ಳಲು ಕೈಗಳ ಸ್ವಚ್ಛತೆ ಬಹಳ ಮುಖ್ಯ. ಕೊರೊನಾ (Corona) ಸಮಯದಲ್ಲಿ ಜನ ಕೈ ಸ್ವಚ್ಛತೆಯ ಮಹತ್ವವನ್ನು ತಿಳಿದುಕೊಂಡಿದ್ದಾರೆ. ಪ್ರತಿದಿನ ಕೈಗಳನ್ನು ಸರಿಯಾಗಿ ತೊಳೆಯುವುದರ ಮೂಲಕ ರೋಗಗಳನ್ನು ದೂರ ಮಾಡಬಹುದು. ಕೈ ನೈರ್ಮಲ್ಯದ (Hand Wash) ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮೇ 5 ರಂದು ವಿಶ್ವ ಕೈ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು.
ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಸೂಕ್ಷ್ಮಜೀವಿಗಳಿಂದ ಉಂಟಾಗುವ ಸೋಂಕನ್ನು ತಡೆಗಟ್ಟಲು, ಕೈಗಳನ್ನು ಪ್ರತಿದಿನ ಪದೇ, ಪದೇ ತೊಳೆಯಬೇಕು ಎಂದು ಹೇಳಲಾಗುತ್ತದೆ. ಕೊರೊನಾ ಸೋಂಕನ್ನು ತಪ್ಪಿಸಲು ತಜ್ಞರು ಹಲವಾರು ಬಾರಿ ಕೈಗಳನ್ನು ತೊಳೆಯಲು ಶಿಫಾರಸು ಮಾಡಿದ್ದರು. ಈಗ ದಿನಕ್ಕೆ ಎಷ್ಟು ಬಾರಿ ಕೈ ತೊಳೆಯುವುದು ಅಗತ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಕೆಲವರು ಪ್ರತಿದಿನ 10 ಬಾರಿ ಕೈ ತೊಳೆಯಬೇಕು ಎಂದು ಹೇಳಿದರೆ, ಮತ್ತೆ ಕೆಲವರು 20 ಬಾರಿ ಕೈ ತೊಳೆಯಬೇಕು ಎಂದು ಹೇಳುತ್ತಾರೆ. ಈ ವಿಚಾರದಲ್ಲಿ ಹೆಚ್ಚಿನ ಮಂದಿ ಗೊಂದಲದಲ್ಲಿದ್ದಾರೆ. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅನಾರೋಗ್ಯದಿಂದ ರಕ್ಷಿಸಲು ಕೈ ತೊಳೆಯುವುದು ಉತ್ತಮ ಮಾರ್ಗವಾಗಿದೆ. ಕೈಗಳನ್ನು ತೊಳೆಯುವುದು ನಿಮಗೆ ಆರೋಗ್ಯವಾಗಿರಲು ಮತ್ತು ಉಸಿರಾಟ, ಅತಿಸಾರದ ಸೋಂಕುಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಕೊಳಕು ಕೈಗಳ ಮೂಲಕ ಸೂಕ್ಷ್ಮಜೀವಿಗಳು ವೇಗವಾಗಿ ಹರಡಬಹುದು ಎಂದು ತಿಳಿಸಲಾಗಿದೆ.
ಪ್ರತಿದಿನ ಎಷ್ಟು ಬಾರಿ ಕೈಗಳನ್ನು ತೊಳೆಯಬೇಕು?
ಇದನ್ನೂ ಓದಿ: Global Handwashing Day 2022: ತೊಳಿತಾ ಇರಿ, ತೊಳಿತಾ ಇರಿ, ತೊಳಿತಾ ಇರಿ! ಕೈಗಳ ನೈರ್ಮಲ್ಯದ ಬಗ್ಗೆ ಇನ್ನಷ್ಟು ತಿಳ್ಕೊಳ್ಳಿ
ಸಿಡಿಸಿ ಪ್ರಕಾರ, ಸೋಪ್, ಹ್ಯಾಂಡ್‌ವಾಶ್ ಮತ್ತು ನೀರು ಲಭ್ಯವಿಲ್ಲದಿದ್ದರೆ, ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಲು ಕನಿಷ್ಠ 60% ಆಲ್ಕೋಹಾಲ್ ಅಂಶವಿರುವ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸಬೇಕು. ಕೊರೊನಾ ಸೋಂಕನ್ನು ತಡೆಗಟ್ಟಲು ಕೈಗಳ ಸ್ವಚ್ಛತೆ ಕೂಡ ಬಹಳ ಮುಖ್ಯ. ಕೈಗಳನ್ನು ತೊಳೆಯಲು ಅಥವಾ ಸ್ವಚ್ಛಗೊಳಿಸಲು ನಿಗದಿತ ಸಮಯವಿಲ್ಲ, ನಿಮ್ಮ ಕೈಗಳು ಕೊಳಕು ಆದಾಗ ಅಥವಾ ರೋಗಾಣುಗಳಿಗೆ ಗುರಿಯಾಗುವ ಯಾವುದನ್ನಾದರೂ ನೀವು ಸ್ಪರ್ಶಿಸಿದಾಗ, ಕೈಗಳನ್ನು ಸ್ವಚ್ಛಗೊಳಿಸಬೇಕು. ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಬಹುದು ಅಥವಾ ಸ್ಯಾನಿಟೈಸರ್ ಬಳಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ