ಜೂನ್​-5 : ವಿಶ್ವ ಪರಿಸರ ದಿನಾಚರಣೆ

news18
Updated:June 5, 2018, 11:52 AM IST
ಜೂನ್​-5 : ವಿಶ್ವ ಪರಿಸರ ದಿನಾಚರಣೆ
news18
Updated: June 5, 2018, 11:52 AM IST
ನ್ಯೂಸ್ 18 ಕನ್ನಡ

ಜೂನ್ 5ನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. 1972 ರಲ್ಲಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಜೂನ್ 5  ವಿಶ್ವ ಪರಿಸರ ದಿನವೆಂದು ಘೋಷಿಸಲಾಗಿದ್ದು, ಇದಕ್ಕನುಗುಣವಾಗಿ 1974 ರಲ್ಲಿಮೊದಲ ಬಾರಿ ಅಮೆರಿಕಾ ವಿಶ್ವ ಪರಿಸರ ದಿನದ ಆತಿಥ್ಯ ವಹಿಸಿತ್ತು.

ಭೂಮಿಯ ಸಂರಕ್ಷಣೆ, ಪರಿಸರದ ಕುರಿತಾದ ಜಾಗೃತಿಯನ್ನು ಮೂಡಿಸಲು ಪ್ರಪಂಚದಾದ್ಯಂತ ಈ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ.

2012ರ ಬಳಿಕ ಈ ಬಾರಿ ಮತ್ತೊಮ್ಮೆ ಭಾರತ ವಿಶ್ವ ಪರಿಸರ ದಿನಾಚರಣೆಯ ಆತಿಥ್ಯವನ್ನು ವಹಿಸಿಕೊಂಡಿದ್ದು ಒಟ್ಟು 143 ರಾಷ್ಟ್ರಗಳು ಇದರಲ್ಲಿ ಭಾಗವಹಿಸುತ್ತಿವೆ. ದೇಶದಲ್ಲಿ ಪರಿಸರ ದಿನದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಪ್ರತಿಯೊಂದು ಶಾಲೆಗಳಲ್ಲೂ ಆಚರಿಸಲೂ ಸೂಚಿಸಲಾಗಿದೆ.

ಈಗಾಗಲೇ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಅಲ್ಲದೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಮಾನವನ್ನು ಉತ್ತೇಜಿಸಲು ವಿಶ್ವ ಪರಿಸರ ದಿನ ವೇದಿಕೆಯಾಗಲಿದೆ.

ಸಿಎಂ ಕುಮಾರಸ್ವಾಮಿಯಿಂದ ಪರಿಸರ ದಿನಾಚರಣೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಪಿ ನಗರದ ತಮ್ಮ ನಿವಾಸದ ಎದುರಿರುವ ಪಾರ್ಕ್​​ನಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬರು ಗಿಡ ನೆಡುವ ಮೂಲಕ ಪರಿಸರ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದ್ದಾರೆ.
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...