World Environment Day 2020: ವಿಶ್ವ ಪರಿಸರ ದಿನದಂದು ಈ ಸಣ್ಣ ಬದಲಾವಣೆಯನ್ನಾದರೂ ಮಾಡಿಕೊಳ್ಳಿ

World Environment Day 2020: ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ ಹಿಂದೆಂದಿಗಿಂತಲೂ ಇಂದು ವ್ಯಾಪಕವಾಗಿದೆ.

World Environment Day 2020

World Environment Day 2020

 • Share this:
  ಕೈಗಾರಿಕೀಕರಣ, ನಗರೀಕರಣ ಮತ್ತು ಖನಿಜ ಸಂಪನ್ಮೂಲಗಳಿಗಾಗಿ ಭೂಮಿಯನ್ನು ಅಗೆದು...ಹೀಗೆ ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾ ಮನುಜನು ಪರಿಸರಕ್ಕೆ ಹಾನಿಯನ್ನುಂಟು ಮಾಡಿದ್ದಾನೆ. ಅದೇ ಸಮಯದಲ್ಲಿ ನಾವು ಉತ್ತಮ ಪ್ರಕೃತಿಯಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ ಹಿಂದೆಂದಿಗಿಂತಲೂ ಇಂದು ವ್ಯಾಪಕವಾಗಿದೆ.

  ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು 'ವಿಶ್ವ ಪರಿಸರ ದಿನ' ಎಂದು ಆಚರಿಸಲಾಗುತ್ತದೆ. ಪ್ರತಿವರ್ಷ ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ವರ್ಷ ಕಳೆದಂತೆ ಪ್ರಕೃತಿ ಮೇಲಿನ ಮಾನವನ ಹಾನಿ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿರುವುದು ಮಾತ್ರ ದುರಂತ. ಇದೀಗ ಹಲವೆಡೆ ಲಾಕ್​ಡೌನ್ ಇರುವುದರಿಂದ ಈ ಬಾರಿ ಪರಿಸರ ದಿನವನ್ನು ಮನೆಯಲ್ಲಿಯೇ ಆಚರಿಸಬೇಕಾಗುತ್ತದೆ. ಅದರಲ್ಲೂ ನಿಮ್ಮ ಸಣ್ಣದೊಂದು ಬದಲಾವಣೆಯಿಂದ ಪರಿಸರದ ಮೇಲಿನ ಹಾನಿಯನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂದು ತಿಳಿಯೋಣ.

  ಈ ಪರಿಸರ ದಿನದಂದು ನಿಮ್ಮ ಮನೆಯ ಅಂಗಳದಲ್ಲಿ ಒಂದು ಗಿಡವನ್ನಾದರೂ ನೆಡಿ. ಅದು ನಿಮಗೆ ಮುಂದೆ ನೆರಳು ಮತ್ತು ತಾಜಾ ಗಾಳಿಯನ್ನು ನೀಡಲಿದೆ. ನೀವು ಎಷ್ಟು ಸಸ್ಯಗಳನ್ನು ನೆಡುವುದರಿಂದ ಭೂಮಿಯಲ್ಲಿನ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಾವೆಲ್ಲರೂ ಆರೋಗ್ಯವಾಗಿರುತ್ತೇವೆ.

  ನಿಮ್ಮ ಮನೆಯ ವಸ್ತುಗಳನ್ನು ಮರುಬಳಕೆ ಮಾಡಲು ಮರೆಯದಿರಿ. ಮನೆಯಲ್ಲಿ ಬೇಡವಾದ ವಸ್ತುಗಳನ್ನು ಯಾರು ರೀತಿಯಲ್ಲಿ ರಿ ಸೈಕಲ್ ಮಾಡಬಹುದು, ಅಥವಾ ಇದರ ಅವಶ್ಯಕತೆ ಯಾರಿಗಿದೆ ಎಂದು ಯೋಚಿಸಿ. ಹೀಗೆ ಬ್ಯಾಗ್, ಮರದ ವಸ್ತುಗಳನ್ನು ನೀಡುವುದರಿಂದ ಕೂಡ ಒಂದಷ್ಟು ಪರಿಸರ ಮೇಲಿನ ಹಾನಿ ತಪ್ಪುತ್ತದೆ.

  ಪಾಲಿಥಿಲೀನ್ ಬಳಸಬೇಡಿ. ಇಂದಿನ ಪರಿಸರ ಮಾಲಿನ್ಯಕ್ಕೆ ಪ್ಲಾಸ್ಟಿಕ್ ಕೂಡ ಒಂದು ಕಾರಣ. ಸ್ಟಿಕ್​ ಬಳಕೆಯಿಂದಾಗಿ ಮಣ್ಣು ಹಾಗೂ ಸಮುದ್ರ ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಲದ ಮೇಲೂ ಕೂಡ ಹಾನಿಯನ್ನುಂಟಾಗುತ್ತಿದೆ. ಹೀಗಾಗಿ ಇನ್ಮುಂದೆ ತರಕಾರಿಗಳು ಮತ್ತು ಇನ್ನಿತರ ವಸ್ತುಗಳ ಶೇಖರಣೆಗಾಗಿ ಬಟ್ಟೆಯ ಚೀಲಗಳನ್ನು ಬಳಸಿ.

  ಪ್ರಕೃತಿ, ಪರಿಸರ, ನೀರು ಮತ್ತು ಸಸ್ಯಗಳ ಮಹತ್ವವನ್ನು ಹೊಸ ಪೀಳಿಗೆಗೆ ವಿವರಿಸಿ.

  ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಚಿಸಿ.

  ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಬದಲಾಯಿಸಿ ಮತ್ತು ಆರೋಗ್ಯವಾಗಿರಿ.

  ಸಾಧ್ಯವಾದಷ್ಟು ಹಳೆಯ ವಸ್ತುಗಳನ್ನು ಮರುಬಳಕೆಗೆ ಶ್ರಮಿಸಿ. ಹೀಗೆ ಎಲ್ಲರೂ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳುವುದರಿಂದ ಪರಿಸರದ ಮೇಲಿನ ಹಾನಿ ಸಣ್ಣ ಪ್ರಮಾಣದಲ್ಲಾದರೂ ತಪ್ಪುತ್ತದೆ.
  First published: