World Day for Safety and Health at Work: ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಇರಲಿ

ಕೆಲಸದ ವಾತಾವರಣವು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಉದ್ಯೋಗದಾತರ ಕರ್ತವ್ಯವಾಗಿದೆ. ಇನ್ನೊಂದೆಡೆ, ಸುರಕ್ಷಿತವಾಗಿ ಕೆಲಸ ಮಾಡುವ ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡುವ ಜವಾಬ್ದಾರಿ ನೌಕರರ ಮೇಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಸುರಕ್ಷಿತವಾಗಿರಲು ಎಷ್ಟು ಶ್ರಮ ವಹಿಸುತ್ತೇವೆಯೋ, ಅದೇ ರೀತಿ ನಾವು ಕೆಲಸ ಮಾಡುವ ಸ್ಥಳದಲ್ಲೂ ಸುರಕ್ಷಿತವಾಗಿರುವುದು ಮುಖ್ಯ.  ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ಹಿರಿಯರಿಂದ ಕಿರುಕುಳ, ಆರೋಗ್ಯ ತೊಂದರೆ, ಸಾಂಕ್ರಾಮಿಕ ರೋಗಗಳ ಹರಡುವಿಕೆ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪ್ರಾಣ ಹಾನಿ, ಅಪಘಾತಗಳು, ಕನಿಷ್ಠ ಸೌಲಭ್ಯಗಳ ಕೊರತೆ, ಬಾಲ ಕಾರ್ಮಿಕರ ಬಳಕೆ ನಾನಾ ತೊಂದರೆಗಳು ಸಂಭವಿಸಬಹುದು. ಪ್ರಮುಖವಾಗಿ ಮಹಿಳೆಯರಿಗೆ ಈ ತೊಂದರೆಗಳು (Woman's Problem)  ಹೆಚ್ಚು. ಇಂತಹ ತೊಂದರೆಗಳನ್ನು ತಪ್ಪಿಸಲೆಂದೇ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ಏಪ್ರಿಲ್ 28 ರಂದು ಅಂದರೆ ಇಂದು, ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಾರ್ಷಿಕ ವಿಶ್ವ ದಿನವಾಗಿ (World Day For Safety And Health at Work 2022) ಆಚರಿಸಲಾಗುತ್ತದೆ.  

ಈ ಆಚರಣೆಯು ಜಾಗತಿಕ ಮಟ್ಟದಲ್ಲಿ ಆಯೋಜಿಸಲಾದ ಮೃತಪಟ್ಟ ಮತ್ತು ಗಾಯಗೊಂಡ ಕಾರ್ಮಿಕರ ಅಂತಾರಾಷ್ಟ್ರೀಯ ಸ್ಮರಣಾರ್ಥ ದಿನದೊಂದಿಗೆ ಹೊಂದಿಕೆಯಾಗುತ್ತದೆ.

ಮೊದಲಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆದಿದೆ
ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವು ವಿಶ್ವಾದ್ಯಂತ ಔದ್ಯೋಗಿಕ ರೋಗಗಳು ಮತ್ತು ಅಪಘಾತಗಳನ್ನು ತಡೆಗಟ್ಟಲು ಸಹಾಯ ಮಾಡುವ ವಿಧಾನಗಳ ಜಾಗೃತಿ ಮತ್ತು ಪ್ರಚಾರವನ್ನು ಪ್ರತಿನಿಧಿಸುತ್ತದೆ. ಇದು ದೃಢವಾದ ಆಕ್ಯುಪೇಷನಲ್ ಸೇಫ್ಟಿ ಮತ್ತು ಹೆಲ್ತ್ (OSH) ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಪ್ರತಿನಿಧಿಸುತ್ತದೆ. ಮತ್ತು ಸಾಂಕ್ರಾಮಿಕ ರೋಗದ ನಂತರ, OSH ನಿರ್ವಹಣಾ ವ್ಯವಸ್ಥೆಯು ಮೊದಲಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ವರ್ಲ್ಡ್ ಡೇ ಫಾರ್ ಸೇಫ್ಟಿ ಅಂಡ್ ಹೆಲ್ತ್ ಅಟ್ ವರ್ಕ್: ಇತಿಹಾಸ
ಕೆಲಸದಲ್ಲಿ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಾರ್ಷಿಕ ವಿಶ್ವ ದಿನವನ್ನು ಮೊದಲು 2003 ರಲ್ಲಿ ಇಂಟರ್‌ನ್ಯಾಷನಲ್‌ ಲೇಬರ್ ಆರ್ಗನೈಸೇಶನ್ (ILO) ಆಚರಿಸಿತು. ಇದು ಕೆಲಸದಲ್ಲಿ ಅಪಘಾತಗಳು ಮತ್ತು ರೋಗಗಳ ತಡೆಗಟ್ಟುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಪ್ರಮುಖವಾಗಿದ್ದು, ಈ ಹಿನ್ನೆಲೆ ಈ ದಿನವನ್ನು ಅಚರಿಸಲಾಗುತ್ತಿದೆ.

ಕಾರ್ಯ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ: ಮಹತ್ವ
ಕೆಲಸದ ಸ್ಥಳದಲ್ಲಿ ಸುರಕ್ಷತೆಯು ಪ್ರಪಂಚದ ಅನೇಕ ಭಾಗಗಳಲ್ಲಿ ಇನ್ನೂ ಕೇವಲ ಪರಿಕಲ್ಪನೆಯಾಗಿದೆಯೇ ಹೊರತು ಜಾರಿಯಲ್ಲಿಲ್ಲ. ಏಕೆಂದರೆ, ಕೆಲವು ಸ್ಥಳಗಳಲ್ಲಿ, ಪ್ರಮುಖವಾಗಿ ಕೈಗಾರಿಕಾ, ಬೃಹತ್ ಉತ್ಪಾದನೆಯ ಜಗತ್ತಿನಲ್ಲಿ ಮಾನವ ಜೀವನದ ಮೌಲ್ಯಕ್ಕಿಂತ ಆಯಾಯ ಕಂಪನಿಯ ಉತ್ಪನ್ನಗಳ ಬೇಡಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Ration Card New Alert: ಹುಷಾರ್! ನಿಮ್ಮ ರೇಷನ್ ಕಾರ್ಡ್ ರದ್ದಾಗಬಹುದು ಎಚ್ಚರ!

ಆದ್ದರಿಂದ, ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಾರ್ಷಿಕ ವಿಶ್ವ ದಿನವು ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.

ನೀತಿ ನಿರೂಪಕರ ಜವಾಬ್ದಾರಿ
ಇನ್ನು ಸುರಕ್ಷತೆ ಮತ್ತು ಆರೋಗ್ಯದ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ಪ್ರಚೋದನೆಯು ಸಮಾಜದ ಎಲ್ಲಾ ವಲಯಗಳಲ್ಲಿ ಸಮಾನವಾಗಿ ಹರಡಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಅಂದರೆ ಉದ್ಯೋಗವನ್ನು ಖಾತ್ರಿಪಡಿಸುವ ಕಾನೂನುಗಳು ಮತ್ತು ನಿಬಂಧನೆಗಳನ್ನು ರೂಪಿಸುವುದು ನೀತಿ ನಿರೂಪಕರ ಜವಾಬ್ದಾರಿಯಾಗಿದೆ.

ಇದನ್ನೂ ಓದಿ: Elon Musk: ಪಾಕಿಸ್ತಾನವನ್ನೂ ಖರೀದಿಸಿ! ಎಲಾನ್ ಮಸ್ಕ್​ಗೆ ಆಫರ್

ಹಾಗೂ ಕೆಲಸದ ವಾತಾವರಣವು ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಉದ್ಯೋಗದಾತರ ಕರ್ತವ್ಯವಾಗಿದೆ. ಇನ್ನೊಂದೆಡೆ, ಸುರಕ್ಷಿತವಾಗಿ ಕೆಲಸ ಮಾಡುವ ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡುವ ಜವಾಬ್ದಾರಿ ನೌಕರರ ಮೇಲಿದೆ.

ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ: ಥೀಮ್
ಸಾಮಾಜಿಕ ಸಂವಾದ ಮತ್ತು ಸಕಾರಾತ್ಮಕ ಸುರಕ್ಷತೆ ಹಾಗೂ ಆರೋಗ್ಯ ಸಂಸ್ಕೃತಿಯನ್ನು ರಚಿಸುವಲ್ಲಿ ಭಾಗವಹಿಸುವಿಕೆಯ ವಿಷಯವನ್ನು ಅನ್ವೇಷಿಸಲು ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವನ್ನು ಸ್ಮರಿಸುವುದು ಈ ವರ್ಷದ ಅಂದರೆ, ಕಾರ್ಯಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ 2022 ರ ಥೀಮ್‌ ಆಗಿದೆ.
Published by:guruganesh bhat
First published: