World Cancer Day 2022: ಕ್ಯಾನ್ಸರ್‌ನಿಂದ ದೂರವಿರಲು ಈ ಟಿಪ್ಸ್ ಫಾಲೋ ಮಾಡಿ

ಪ್ರತಿ ವರ್ಷ ವಿಶ್ವಾದ್ಯಂತ 10 ಮಿಲಿಯನ್‌ನಷ್ಟು ಜನರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂಬುದು ಆಘಾತಕಾರಿ. ಕ್ಯಾನ್ಸರ್ ಎಂಬುದು ಅದು ಬಾಧಿಸಲ್ಪಟ್ಟವರನ್ನು ಮಾತ್ರವಲ್ಲ ಅವರಿಗೆ ಸಂಬಂಧಿಸಿದ ಎಲ್ಲರನ್ನೂ ಪೀಡಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದು ವಿಶ್ವ ಕ್ಯಾನ್ಸರ್(Cancer) ದಿನ. ಒಂಚೂರು ಸುದ್ದಿ ಇಲ್ಲದೆ ಜೀವಕ್ಕೆ ಮಾರಕವಾಗೋ ಕ್ಯಾನ್ಸರ್ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಅಷ್ಟೇ. ವಕ್ಕರಿಸಿಕೊಂಡರೆ ಮತ್ತಿನದು ಸುದೀರ್ಘ ಹೋರಾಟ. ಆರೋಗ್ಯ ಕ್ಷೇತ್ರದಲ್ಲಿ(Health Sector) ಸವಾಲಾಗಿರೋ ಕ್ಯಾನ್ಸರ್ ಹೇಗೆ ಕಾಣಿಸಿಕೊಳ್ಳುತ್ತೆ ? ಸಿಗರೇಟು(Cigarette) ಸೇದಲ್ಲ, ಮದ್ಯ ವ್ಯಸನಿಯಲ್ಲ ಮತ್ಯಾಕೆ ಕ್ಯಾನ್ಸರ್(Cancer) ಆಯಿತು ಎಂದುಕೊಳ್ಳುವವರು ಅನೇಕರಿದ್ದಾರೆ. ನಿಮಗೆ ಗೊತ್ತೇ ? 90 ರಿಂದ 95 ಶೇಕಡಾ ಜನರಲ್ಲಿ ಕ್ಯಾನ್ಸರ್‌ಗೆ ಕಾರಣವಾಗೋದು ಅವರು ಅನುಸರಿಸುವ ಜೀವನ ಶೈಲಿ(Lifestyle) ಹಾಗೂ ನಮ್ಮ ಪರಿಸರದಲ್ಲೇ ಆಗುವ ಕೆಲವು ಪ್ರಾಕೃತಿಕ ಬದಲಾವಣೆಗಳು ಹಾಗೂ ಹವ್ಯಾಸಗಳು.

  ಇಡೀ ಜಗತ್ತಿನಲ್ಲಿ ಸಂಭವಿಸುವ ಸಾವುಗಳಿಗೆ ಕಾರಣವಾಗುವ ಪ್ರಮುಖ ವಿಚಾರಗಳಲ್ಲಿ ಕ್ಯಾನ್ಸರ್ ಕೂಡಾ ಒಂದು ಎಂಬುದು ಗಮನಾರ್ಹ ವಿಚಾರ. ಪ್ರತಿ ವರ್ಷ ವಿಶ್ವಾದ್ಯಂತ 10 ಮಿಲಿಯನ್‌ನಷ್ಟು ಜನರು ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂಬುದು ಆಘಾತಕಾರಿ. ಕ್ಯಾನ್ಸರ್ ಎಂಬುದು ಅದು ಬಾಧಿಸಲ್ಪಟ್ಟವರನ್ನು ಮಾತ್ರವಲ್ಲ ಅವರಿಗೆ ಸಂಬಂಧಿಸಿದ ಎಲ್ಲರನ್ನೂ ಪೀಡಿಸುತ್ತದೆ. ಬಾಧಿತರಷ್ಟೇ ಅಲ್ಲ ಅವರ ಕುಟುಂಬವೂ ಕ್ಯಾನ್ಸರ್ ಭೀಕರತೆಗೆ ನರಳುವಂತಾಗುತ್ತದೆ. ಕ್ಯಾನ್ಸರ್ ರೋಗಿಯ ಜೀವನ ಪ್ರಯಾಣದಲ್ಲಿ ಮಾನಸಿಕ ಹಾಗೂ ದೈಹಿಕ ಶಕ್ತಿ, ಸಾಮರ್ಥ್ಯಗಳು ಸೋರಿ ಹೋಗಿಬಿಡುತ್ತವೆ.

  ಇದನ್ನೂ ಓದಿ: Skin Care: ಚರ್ಮ ಎಣ್ಣೆ ಎಣ್ಣೆ ಆಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

  ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್‌ಫರ್ಮೇಶಷನ್(National Center for Biotechnology information) ಪ್ರಕಾರ ಬರೀ ಐದರಿಂದ 10 ಶೇಕಡಾ ಕ್ಯಾನ್ಸರ್ ರೋಗಿಗಳು ಮಾತ್ರ ಅನುವಂಶಿಕ ಕಾರಣಗಳಿಂದ ಈ ಮಾರಕ ರೋಗಕ್ಕೆ ತುತ್ತಾಗುತ್ತಾರೆ. ಆದರೆ ಅಚ್ಚರಿ ವಿಚಾರವೆಂದರೆ 90 ರಿಂದ 95 ರಷ್ಟು ರೋಗಿಗಳು ಅವರ ಜೀವನಶೈಲಿ(Lifestyle) ಹಾಗೂ ಇತರ ಹವ್ಯಾಸಗಳಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇಂದು ಎಲ್ಲೆಡೆ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುವ ಸಂದರ್ಭ ಕ್ಯಾನ್ಸರ್‌ನಿಂದ ದೂರವಿರಲು ನಾವು ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಕೆಲವು ಸರಳ ಟಿಪ್ಸ್‌ಗಳು ಇಲ್ಲಿವೆ.

  ತಂಬಾಕು ಹಾಗೂ ಕ್ಯಾನ್ಸರ್ ಬೆಸ್ಟ್ ಫ್ರೆಂಡ್ಸ್. ಒಂದಕ್ಕೊಂದು ದೊಡ್ಡ ಲಿಂಕ್ ಹೊಂದಿವೆ. ನೀವು ಈಗಾಗಲೇ ಸಾವಿರ ಸಲ ಈ ವಿಚಾರವನ್ನು ಕೇಳಿರುತ್ತೀರಿ, ಆದರೂ ಒಮ್ಮೆ ಇದನ್ನು ಮತ್ತೆ ನೆನಪಿಸಿಕೊಳ್ಳಿ. ಕ್ಯಾನ್ಸರ್ ವಕ್ಕರಿಸಿಕೊಳ್ಳುವ ಬಹಳಷ್ಟು ಪ್ರಕರಣಗಳಲ್ಲಿ ತಂಬಾಕುವಿನ ಪಾತ್ರ ದೊಡ್ಡದಿದೆ. ಕ್ಯಾನ್ಸರ್ನ ಪ್ರಮುಖ ಕಾರಣಗಳಲ್ಲಿ ತಂಬಾಕು ಮುಖ್ಯವಾಗಿದೆ. ಹಾಗಾಗಿ ಏನೇ ಆದರೂ ತಂಬಾಕು ಸೇವನೆ ಬಿಡಿ. ತಂಬಾಕು ಸೇದುವುದು ಹಾಗೂ ಅಗಿಯುವುದು ದೇಹದ ಮೇಲೆ ಬಹಳಷ್ಟು ಪರಿಣಾಮಗಳನ್ನು ಬೀರುತ್ತದೆ. ಇವುಗಳಲ್ಲಿ ಪ್ರಮುಖವಾಗಿದ್ದು ಕ್ಯಾನ್ಸರ್.

  ಆರೋಗ್ಯಕರ ಆಹಾರ ಪದ್ಧತಿ: ಉತ್ತಮವಾಗಿರುವ ಡಯೆಟ್(Diet) ಆರೋಗ್ಯಕ್ಕೆ ಸೂತ್ರ. ಬ್ಯಾಲೆನ್ಸ್ಡ್‌ ಆಗಿರುವಂತ ಆರೋಗ್ಯಕರ ದೇಹ ಬಹಳಷ್ಟು ಸಮಸ್ಯೆಗಳನ್ನು ತಾನಾಗಿಯೇ ಎದುರಿಸಬಲ್ಲದು. ಇದು ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ಬಹಳಷ್ಟು ಆಹಾರಗಳಲ್ಲಿ ಔಷಧೀಯ ಗುಣಗಳೂ ಇವೆ ಹಾಗೆಯೇ ಕಾರ್ಸಿನೋಜೆನಿಕ್ ಅಂಶಗಳಿದ್ದು ಇವು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ.

  ಉತ್ತಮ ವ್ಯಾಯಾಮ: ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಮ್ಮ ದೇಹದ ಬಿಎಂಐ(BMI)(ಬಾಡಿ ಮಾಸ್ ಇಂಡೆಕ್ಸ್)ನ್ನು ಸ್ಥಿರವಾಗಿ ಕಾಪಾಡಿಕೊಳ್ಳಬಹುದು. ಈ ರೀತಿಯ ದೇಹದ ಸ್ಥಿರತೆ ಕಾಯ್ದುಕೊಳ್ಳುವಿಕೆ ಕ್ಯಾನ್ಸರ್ ಸೇರಿ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ.

  ಇದನ್ನೂ ಓದಿ: Hypothyroidism: ಈ ರೀತಿಯ ಥೈರಾಯ್ಡ್ ಸಮಸ್ಯೆ ನಿಮಗಿದ್ದರೆ ಅಪ್ಪಿತಪ್ಪಿಯೂ Cabbage ತಿನ್ಬೇಡಿ!

  ಸೂರ್ಯನ ಬೆಳಕು ಒಳ್ಳೆಯದೇ, ಆದರೆ ಅತಿಯಾಗಿ ಅಲ್ಲ: ಸ್ವಲ್ಪ ಹೊತ್ತು ವಿಟಮಿನ್ ಡಿ ಗಾಗಿ ನಾವೆಲ್ಲರೂ ಮುಂಜಾವಿನ ಹಾಗೂ ಸಂಜೆಯ ಬಿಸಿಲಿಗೆ ಮೈ ಒಡ್ಡುತ್ತೇವೆ, ಇದು ಕಾಮನ್. ಆದರೆ ದೀರ್ಘ ಸಮಯ ಹೀಗೆ ಸೂರ್ಯನಿಗೆ ನೇರವಾಗಿ ಮೈಯೊಡ್ಡುವುದು ಆರೋಗ್ಯಕರ ಅಭ್ಯಾಸವಲ್ಲ. ಇದು ಸ್ಕಿನ್ ಕ್ಯಾನ್ಸರ್‌ಗೆ(Skin Cancer) ಕಾರಣವಾಗುತ್ತದೆ. ಬಿಸಿಲಿನಲ್ಲಿರುವ ಯುವಿ ಕಿರಣಗಳು ತ್ವಚೆಯಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಇದು ಕ್ಯಾನ್ಸರಸ್ ಸೆಲ್‌ಗಳ ದಾಳಿಗೆ ದಾರಿ ಮಾಡುತ್ತದೆ.

  ಸಂಸ್ಕರಿತ ಮಾಂಸಾಹಾರ(Processed Meat), ಸಕ್ಕರೆಯುಕ್ತ ಆಹಾರ ಅವಾಯ್ಡ್ ಮಾಡಿ: ಮಾಂಸಾಹಾರ ಓಕೆ, ಆದರೆ ಈ ಸಂಸ್ಕರಿತವಾಗಿ ಬರುವಂತಹ ಮಾಂಸ, ಆಹಾರ, ಸಕ್ಕರೆಯುಕ್ತ ಪದಾರ್ಥಗಳು\ ದೇಹದಲ್ಲಿ ಫೈಬರ್ ಪ್ರಮಾಣ ಕಡಿಮೆ ಮಾಡಿ ಸಕ್ಕರೆ ಅಂಶ ಹೆಚ್ಚಿಸುತ್ತದೆ. ಇಷ್ಟಲ್ಲದೆ ಇದು ದೇಹದ ತೂಕ ಹೆಚ್ಚಿಸಿ ಕ್ಯಾನ್ಸರ್‌ಗೆ ದಾರಿಯಾಗುತ್ತದೆ.
  Published by:Latha CG
  First published: