ವಿಶ್ವ ಕ್ಯಾನ್ಸರ್ ದಿನ: ಮಾರಕ ಕಾಯಿಲೆಗೆ ಮುಕ್ತಿ ನೀಡುವುದಾಗಿ ಭರವಸೆ ನೀಡಿದ ಇಸ್ರೇಲ್​ ಸಂಶೋಧಕರು

ವೈದ್ಯಲೋಕದ ಹೊಸ ಆವಿಷ್ಕಾರದ ಕುರಿತಾದ ವರದಿಯನ್ನು ಫೋರ್ಬ್ಸ್​ ಪ್ರಕಟಿಸಿದ್ದು, ಡಬ್ಬಡ್​ ಮುಟಾಟೋ ಔಷಧಿಯು ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್​ನ ಮಿಶ್ರಣ ಎಂದು ತಿಳಿಸಿದೆ.

zahir | news18
Updated:February 4, 2019, 1:07 PM IST
ವಿಶ್ವ ಕ್ಯಾನ್ಸರ್ ದಿನ: ಮಾರಕ ಕಾಯಿಲೆಗೆ ಮುಕ್ತಿ ನೀಡುವುದಾಗಿ ಭರವಸೆ ನೀಡಿದ ಇಸ್ರೇಲ್​ ಸಂಶೋಧಕರು
ಸಾಂದರ್ಭಿಕ ಚಿತ್ರ
zahir | news18
Updated: February 4, 2019, 1:07 PM IST
ಇಂದು ವಿಶ್ವ ಕ್ಯಾನ್ಸರ್‌ ದಿನ. ಮನುಷ್ಯ ಕುಲದ ಮಾರಕ ಕಾಯಿಲೆಗೆ ಔಷಧಿ ಕಂಡು ಹಿಡಿಯಲು ಹಲವು ವರ್ಷಗಳಿಂದ ಪ್ರಯತ್ನಿಸಲಾಗುತ್ತಿದೆ. ಈ ಬಾರಿಯ ಕ್ಯಾನ್ಸರ್​ ದಿನಾಚರಣೆಯ ವೇಳೆ ಇಸ್ರೇಲ್​ನ ವಿಜ್ಞಾನಿಗಳು ಹೊಸ ಭರವಸೆಯನ್ನು ನೀಡಿದ್ದಾರೆ. ವೈದ್ಯಕೀಯ ಲೋಕದ ದೊಡ್ಡ ಸವಾಲಾಗಿದ್ದ ಕ್ಯಾನ್ಸರ್​ ರೋಗಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇಸ್ರೇಲ್​ನ ಸಂಶೋಧಕರು ಕ್ಯಾನ್ಸರ್​ ಅನ್ನು ಗುಣಪಡಿಸುವಂತಹ ಔಷಧಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ . ಈಗಾಗಲೇ ಮಾರಕ ಕಾಯಿಲೆಗೆ ಔಷಧಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದರ ಪರೀಕ್ಷೆಯು ಕೊನೆಯ ಹಂತದಲ್ಲಿದೆ. ತಮ್ಮ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ 2020 ರೊಳಗೆ ಕ್ಯಾನ್ಸರ್​ ರೋಗಿಗಳಿಗೆ ಮಾರಣಾಂತಿಕ ನೋವಿನಿಂದ ಮುಕ್ತಿ ಸಿಗಲಿದೆ.

ಎನಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಯ ವಿಜ್ಞಾನಿಗಳು ಡಬ್ಬಡ್​ ಮುಟಾಟೋ ಹೆಸರಿನ ಔಷಧಿಯನ್ನು ಕಂಡು ಹಿಡಿದಿದ್ದು, ಇದರ ಪ್ರಯೋಗ ನಡೆಯುತ್ತಿದೆ. ಈಗಾಗಲೇ ಪ್ರಮುಖ ಘಟ್ಟದಲ್ಲಿ ಯಶಸ್ವಿಯಾಗಿರುವ ಸಂಶೋಧಕರು ಔಷಧಿಯ ಪೂರ್ಣ ರೂಪದ ಹಂತದಲ್ಲಿದೆ. ಈ ಹಂತದಲ್ಲಿ ವಿಜ್ಞಾನಿಗಳು ಯಶಸ್ಸು ಕಂಡರೆ ಖಂಡಿತವಾಗಿಯು ಕ್ಯಾನ್ಸರ್ ಪೀಡಿತರು ತಮ್ಮ ನೋವಿನಿಂದ ಮುಕ್ತಿ ಹೊಂದಲಿದ್ದಾರೆ ಎಂದು ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ.

ಈಗಾಗಲೇ ಹಲವು ಹಂತದಲ್ಲಿ ನಾವು ಯಶಸ್ವಿಯಾಗಿದ್ದು, ನಾವು ಕಂಡು ಹಿಡಿದಿರುವ ಔಷಧಿಯು ಕ್ಯಾನ್ಸರ್​ ಕಾಯಿಲೆ ಮೇಲೆ ಮೊದಲ ದಿನದಿಂದಲೇ ಪ್ರಭಾವ ಬೀರುತ್ತದೆ. ಅಲ್ಲದೆ ಈ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳೂ ಉಂಟಾಗುವುದಿಲ್ಲ. ಈಗಾಗಲೇ ಕ್ಯಾನ್ಸರ್​ ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ ಇದರ ಬೆಲೆಯು ಕಡಿಮೆ ಇರಲಿದೆ. ಇದರಿಂದ ಔಷಧಿ ಪ್ರತಿ ಕ್ಯಾನ್ಸರ್ ರೋಗಿಗಳ ಕೈಗೆಟುಕಲಿದೆ ಎಂದು ದಿ ಜೆರುಸಲೆಂ ಕಂಪೆನಿಯ ಚೇರ್​ಮನ್ ಡೆನ್ ಎರಿಡೋರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಾಜಿ ಯೋಧನ ನೆರವಿಗೆ ನಿಂತ ಕ್ರಿಕೆಟಿಗ ಗೌತಮ್ ಗಂಭೀರ್

ವೈದ್ಯಲೋಕದ ಹೊಸ ಆವಿಷ್ಕಾರದ ಕುರಿತಾದ ವರದಿಯನ್ನು ಫೋರ್ಬ್ಸ್​ ಪ್ರಕಟಿಸಿದ್ದು, ಡಬ್ಬಡ್​ ಮುಟಾಟೋ ಔಷಧಿಯು ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್​ನ ಮಿಶ್ರಣ ಎಂದು ತಿಳಿಸಿದೆ. ಈ ಔಷಧವನ್ನು ತೆಗೆದುಕೊಂಡರೆ ಕ್ಯಾನ್ಸರ್ ಪೀಡಿತ ಜೀವಕೋಶಗಳಷ್ಟೇ ನಾಶವಾಗುತ್ತದೆ. ಆದರೆ ಕಿಮೋ ಅಥವಾ ಇತರೆ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿ ಕ್ಯಾನ್ಸರ್​ ಪೀಡಿತರ ಆರೋಗ್ಯಯುತ ಜೀವಕೋಶಗಳನ್ನು ನಾಶಪಡಿಸುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆಗಳು ಉಲ್ಭಣವಾಗುತ್ತದೆ. ಹೀಗಾಗಿ ಹೊಸ ಔಷಧಿಯಿಂದ ಕ್ಯಾನ್ಸರ್​ ಸಮಸ್ಯೆ ಪರಿಹಾರ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: VIDEO: ಬಾಬರ್ ಆರ್ಭಟ, ಮಿಲ್ಲರ್ ಮಿಂಚು: ಒಂದೇ ಓವರ್​ನಲ್ಲಿ ಸಿಡಿಯಿತು 29 ರನ್ಸ್​!

ಈ ಹೊಸ ಔಷಧಿಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಇದರಲ್ಲಿ ವಿಜ್ಞಾನಿಗಳು ಉತ್ತಮ ಫಲಿತಾಂಶ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಔಷಧವನ್ನು ಇದೇ ವರ್ಷ ಮನುಷ್ಯರ ಮೇಲೆ ಪ್ರಯೋಗ ನಡೆಸುವುದಾಗಿ ತಿಳಿಸಿದ್ದಾರೆ. ಈ ವೇಳೆ ಸಕರಾತ್ಮಕ ಪರಿಣಾಮ ಕಂಡುಬಂದರೆ 2020 ರ ಒಳಗೆ ಕ್ಯಾನ್ಸರ್​ ಔಷಧಿಯನ್ನು ಬಿಡುಗಡೆಗೊಳಿಸುವುದಾಗಿ ಇಸ್ರೇಲ್​ ಸಂಶೋಧಕರು ತಿಳಿಸಿದ್ದಾರೆ.
Loading...

ಇದನ್ನೂ ಓದಿ: ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...